ಅಣಬೆ ಯಾರಿಗೆ ಇಷ್ಟವಿಲ್ಲ ಹೇಳಿ !


Team Udayavani, Oct 12, 2020, 10:30 AM IST

Mushroom-Manchurian-in-1

ಅಣಬೆ/ಮಶ್ರೂಮ್‌ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಳೆಗಾಲದಲ್ಲಿ ಒಂದು ಗುಡುಗು ಬಂದ್ರೆ ಸಾಕು ತೋಟ-ಗುಡzಗಳಲ್ಲಿ ಅಣಬೆ ಹುಡುಕಲು ಹೋಗುತ್ತಾರೆ.ಆದರೆ ಈಗ ಅಷ್ಟೊಂದು ಕಷ್ಟಪಡುವ ಅವಶ್ಯಕತೆವಿಲ್ಲ. ಯಾಕೆಂದರೆ ಈಗ ವ್ಯಾಪಕವಾಗಿ ಅಣಬೆ ಕೃಷಿ ಮಾಡುತ್ತಿರುವುದರಿಂದ ಎಲ್ಲಾ ಋತುಗಳಲ್ಲೂ ವಿವಿಧ ರೀತಿ ಅಣಬೆಗಳು ಮಾರುಕಟ್ಟೆಗಳಲ್ಲಿ ದೊರೆಯುತ್ತದೆ.

ಆರೋಗ್ಯಕ್ಕೆ ಒಳ್ಳೆಯದು :
– ಅಣಬೆಯಲ್ಲಿ ಪ್ರೊಟೀನ್‌ ಅಂಶ ಜಾಸ್ತಿ ಇರುತ್ತದೆ ಹಾಗೂ ನಾರಿನಾಂಶ ಜಾಸ್ತಿ ಇರುವುದರಿಂದ ಅಣಬೆ ಸೇವಿಸುವವರ ಕೊಲೆಸ್ಟರಾಲ್‌ ಹತೋಟಿಗೆ ಬರುತ್ತದೆ.
– ಇದರಲ್ಲಿ ಕ್ಯಾಲೋರಿ ಕಡಿಮೆಯಿದ್ದು ನಾರಿನಾಂಶ ಹೆಚ್ಚಾಗಿರುವುದರಿಂದ ದೇಹವನ್ನು ರೋಗ ಮುಕ್ತವಾಗಿಡುವ ಸಾಮರ್ಥ್ಯವಿದೆ.
– ಅಣಬೆಯಲ್ಲಿ ವಿಟಮಿನ್‌ ಎ,ಬಿ ಮತ್ತು ಡಿ ಹೊಂದಿರುವುದಲ್ಲದೇ ದೇಹದ ಜೀವಕೋಶ ರಕ್ಷಿಸಲು ಇದು ಸಹಕಾರಿ.
– ಕ್ಯಾನ್ಸರ್‌ ಮತ್ತಿತರ ರೋಗಗಳನ್ನು ತಡೆಗಟ್ಟಲು ಬೇಕಾಗುವ ಆ್ಯಂಟಿ ಆಕ್ಸಿಡಾಂಟ್‌ಗಳು ಅಣಬೆಯಲ್ಲಿವೆ.
– ಅಣಬೆಯಲ್ಲಿ ಪೊಟ್ಯಾಶಿಯಂ ಇರುವ ಕಾರಣ ಇದು ರಕ್ತದೊತ್ತಡದ ರೋಗಗಳಿಗೆ ಉತ್ತಮ ಆಹಾರವಾಗಿದೆ.

ಮಶ್ರೂಮ್‌ ಮಂಚೂರಿಯನ್‌ :
ಮಶ್ರೂಮ್‌ ಮಂಚೂರಿ ಆಹಾರ ಪ್ರಿಯರ ಮೆಚ್ಚಿನ ತಿಂಡಿಯೂ ಹೌದು.ಸಮಪಾಕದಲ್ಲಿ ತಯಾರಿಸಿದ ಮಶ್ರೂಮ್‌ ಮಂಚೂರಿಯನ್ನು ಸವಿಯುವುದೇ ನಾಲಗೆಗೆ ಒಂದು ಹಬ್ಬ. ಕೆಲವೊಂದು ಹೊಟೇಲ್‌ಗ‌ಳು ಮಶ್ರೂಮ್‌ ಮಂಚೂರಿಗೆ ಬ್ರಾಂಡ್‌ ಆಗಿರುವುದು ಇದೆ.ಸರಿಯಾದ ಕ್ರಮ ಗೊತ್ತಿದ್ದಲ್ಲಿ ಮಶ್ರೂಮ್‌ ಮಂಚೂರಿಯನ್ನು ನೀವು ಮನೆಯಲ್ಲೇ ಸಿದ್ಧ ಪಡಿಸಿ ತಿನ್ನಬಹುದು.ಸಸ್ಯಾಹಾರಿಗಳೂ ಇಷ್ಟಪಡುವ ಮತ್ತು ಆರೋಗ್ಯಕಾರಕ ಮಶ್ರೂಮ್‌ ಮಂಚೂರಿಯನ್ನು ನೀವೂ ಒಮ್ಮೆ ಸವಿದು ನೋಡಿ.

ಬೇಕಾಗುವ ಸಾಮಾಗ್ರಿಗಳು:
ಮಶ್ರೂಮ್‌ 4 ಕಪ್‌,ಬೆಳ್ಳುಳ್ಳಿ-ಶುಂಠಿ ಪೇಸ್ಟ್‌ 2 ಚಮಚ,ಮೆಣಸಿನ ಪುಡಿ 2 ಚಮಚ,ಕರಿಯಲು ಎಣ್ಣೆ,ರುಚಿಗೆ ಉಪ್ಪು.
ಹಿಟ್ಟು ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
ಮೈದಾ ಅರ್ಧ ಕಪ್‌,ಕಾನ್‌ ಫ್ಲೋರ್‌ 1/4 ಕಪ್‌,ಅಕ್ಕಿ ಹಿಟ್ಟು 3 ಚಮಚ,ಮೆಣಸಿನ ಪುಡಿ 1 ಚಮಚ,ರುಚಿಗೆ ಉಪ್ಪು.
ಸಾಸ್‌ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
ಬೆಳ್ಳುಳ್ಳಿ 8 ಎಳಸು,ಚಿಲ್ಲಿ ಸಾಸ್‌ 3 ಚಮಚ ,ಶುಂಠಿ 1 ಚಮಚ,ಈರುಳ್ಳಿ 2 ,ಎಣ್ಣೆ 2 ಚಮಚ ,ಮೆಣಸಿನ ಪುಡಿ ಸ್ವಲ್ಪ, ಟೊಮೆಟೋ ಸಾಸ್‌ 4 ಚಮಚ,ಸೋಯಾ ಸಾಸ್‌ 1 ದೊ.ಚಮಚ
ಗ್ರೇವಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
ಕಾನ್‌ ಫ್ಲೋರ್‌ 2 ದೊ.ಚಮಚ,ನೀರು 2ಕಪ್‌,ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ
ಬೆಳ್ಳುಳ್ಳಿ,ಶುಂಠಿ ಪೇಸ್ಟ್‌ ,ಉಪ್ಪು,ಮೆಣಸಿನ ಪುಡಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಮಶ್ರೂಮ್‌ ನೆನೆಸಿ 10 ರಿಂದ 15 ನಿಮಿಷ ಇಡಿ.
ಗ್ರೇವಿ ತಯಾರಿಸಲು : ಮೈದಾ, ಕಾನ್‌ ಫ್ಲೋರ್‌,ಅಕ್ಕಿ ಹಿಟ್ಟು,ಮೆಣಸಿನ ಪುಡಿ,ಉಪ್ಪು,ಸ್ವಲ್ಪ ನೀರನ್ನು ಹಾಕಿ ತಳ್ಳಗೆ ಮಾಡಿ. ನೆನೆಸಿಟ್ಟ ಮಶ್ರೂಮ್‌ ಅನ್ನು ಇದರಲ್ಲಿ ಒಂದೊಂದೇ ಮುಳುಗಿಸಿ ತೆಗೆದು ಎಣ್ಣೆಯಲ್ಲಿ ಕರಿದು ಬದಿಗಿಡಿ.
ಸಾಸ್‌ ತಯಾರಿಸಲು : ಎಣ್ಣೆ, ಬಿಸಿ ಮಾಡಿ ಮೊದಲು ಬೆಳ್ಳುಳ್ಳಿ ಹಾಕಿ ಕೆಂಪಗೆ ಹುರಿಯಿರಿ.ನಂತರ ಮೆಣಸಿನ ಕಾಯಿ,ಶುಂಠಿ,ಈರುಳ್ಳಿ ಸೇರಿಸಿ 2 ನಿಮಿಷ ಹುರಿಯಿರಿ.ತದನಂತರ ಚಿಲ್ಲಿ ಸಾಸ್‌,ಟೊಮೆಟೋ ಸಾಸ್‌,ಸೋಯಾ ಸಾಸ್‌,ರುಚಿಗೆ ಬೇಕಾಗುವಷ್ಟು ಉಪ್ಪು ಸೇರಿಸಿ. ಕರಿದಿಟ್ಟ ಮಶ್ರೂಮ್‌ ಸೇರಿಸಿ ಚೆನ್ನಾಗಿ ಬೆರೆಸಿ ಇಳಿಸಿ.ಮೇಲಿನಿಂದ ಆಲಂಕಾರಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿ-ರುಚಿಯಾದ ಮಶ್ರೂಮ್‌ ಮಂಚೂರಿಯನ್‌ ಸವಿಯಲು ಸಿದ್ಧ.

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.