ಹುಳು ಹುಪ್ಪಟೆಗಳೆಂಬ ಕೌತುಕ

ನೂರಾರು ಮಿಲಿಯನ್‌ ವರ್ಷಗಳ ಹಿಂದಿನಿಂದಲೇ ಇವುಗಳಿವೆ ಎಂಬುದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.

Team Udayavani, Jul 10, 2021, 2:20 PM IST

ಹುಳು ಹುಪ್ಪಟೆಗಳೆಂಬ ಕೌತುಕ

ಮಳೆಗಾಲದಲ್ಲಿ ಮಲೆನಾಡು ಭಾಗದಲ್ಲಿ ಹಲವಾರು ಅದ್ಭುತಗಳು ಗೋಚರಿಸುತ್ತವೆ. ಇದಲ್ಲದೇ ಎಷ್ಟೋ ದಿನಗಳಿಂದ ಕಣ್ಣಿಗೆ ಕಾಣಿಸದ ಹುಳ ಹಪ್ಪಟೆಗಳು ಮಳೆಗಾಲಕ್ಕೆ ಸರಿಯಾಗಿ ಮಲೆನಾಡಿಗರಿಗೆ ಕಣ್ಮುಂದೆ ಬರುತ್ತವೆ. ಆದರೂ ನಾವು ಆ ವಿಶೇಷ ಅತಿಥಿಗಳತ್ತ ಗಮನ ಕೊಡುವುದು ಬಹಳ ವಿರಳ. ಕೆಲವೊಮ್ಮೆ ಅವುಗಳಿಂದ ಏನಾದರೂ ತೊಂದರೆಯಾದಾಗ ಮಾತ್ರ ಅವುಗಳನ್ನು ನಾಶ ಮಾಡಲು ಮುಂದಾಗುತ್ತೆವೆ.
ನಾವು ಪ್ರಾಣಿ, ಪಕ್ಷಿ ಹಾಗೂ ಚಿಟ್ಟೆಗಳಂತಹ ಆಕರ್ಷಕ ಕೀಟಗಳಿಗೆ ಗಮನ ಕೊಡುವಷ್ಟು ಕಿಂಚಿತ್ತಾದರೂ ಇವುಗಳ ಬಗ್ಗೆ ನೀಡಿದ್ದರೆ ಇಷ್ಟು ಹೊತ್ತಿಗಾಗಲೇ ಈ ಪುಟ್ಟಪುಟ್ಟ ಹುಳ ಹು‌ಪ್ಪಟೆಗಳ ಅದ್ಭುತ ಲೋಕದ ವಿಸ್ಮಯವನ್ನು ಅರಿತುಕೊಳ್ಳಬಹುದಿತ್ತೇನೋ ! ಆದರೆ ನಾವು ಅವುಗಳ ನೋಡಿದರೂ ನೋಡದಂತೆ ಮಾಡುತ್ತಿರುವುದು ಬೇಸರದ ಸಂಗತಿ.

ಮಳೆಗಾಲದಲ್ಲಿ ನಮ್ಮ ಮಲೆನಾಡ ಮಲೆಗಳಲ್ಲಿ ಕೀಟಗಳನ್ನು ನೋಡಬೇಕೆಂದರೆ ಎಲ್ಲಿಯೂ ಹೋಗಲೇಬೇಕಿಲ್ಲ. ಮನೆಯೊಳಗೆ, ತೋಟದಲ್ಲಿನ ಗಿಡಮರಗಳ ಸಂಧಿಯಲ್ಲಿ, ಬೀಸುವ ಗಾಳಿಯಲ್ಲಿ, ದಟ್ಟ ಅಡವಿಗಳಲ್ಲಿ, ಅಕ್ಕಪಕ್ಕದ ಹಳ್ಳಕೊಳ್ಳಗಳಲ್ಲಿ ಹೀಗೆ ಈ ವಿಶೇಷ ಅತಿಥಿಗಳು ಇಲ್ಲದ ಜಾಗವೇ ಇಲ್ಲ.ಆದರೆ ನಮ್ಮ ಪ್ರತೀತಿಯನ್ವಯ ಅವುಗಳನ್ನು ಕಂಡಕೂಡಲೇ ಕೊಲ್ಲುವುದು ಅರ್ಥಾತ್‌ ನಾಶ ಮಾಡಬೇಕು ಎಂದು ಅನಿಸುವುದು ಸಾಮಾನ್ಯ. ಏಕೆಂದರೆ ಹುಳುಹುಪ್ಪಟೆಗಳು, ಬೆಳೆದ ಫ‌ಸಲನ್ನು ತಿಂದು ನಾಶ ಮಾಡುತ್ತವೆ ಎಂದು ನಾವು ಹೋಲ್‌ ಸೇಲ್‌ ಆಗಿ ಇಡೀ ಕೀಟಗಳ ಸಮುದಾಯವನ್ನೇ ದ್ವೇಷಮಾಡುವುದು ಹೊಸತೇನಲ್ಲ, ಮತ್ತದು ಸಹಜ ಕೂಡ.

ಅಂತೆಯೇ ಕತ್ತಲಲ್ಲೂ ಸ್ವಯಂ ಪ್ರಕಾಶದ ಬೆಳಕನ್ನು ಸೂಸುವ ಮಿಂಚು ಹುಳುಗಳ ಜಗವೇ ಬಲು ಸೋಜಿಗ.ಭೂಮಂಡಲದಲ್ಲಿ ಜೈವಿಕ ಸ್ವಯಂ ಪ್ರಭೆಯನ್ನು ಹೊರಹೊಮ್ಮಿಸಬಲ್ಲ ಕೆಲವೇ ಕೆಲವು ಹುಳು ಅಥವಾ ಜೀವಿಗಳಲ್ಲಿ ಮಿಂಚು ಹುಳುವಿನ ಜಾತಿಯೂ ಒಂದು. ಜೈವಿಕ ಪ್ರಭೆ ಎಂದರೆ ಪರಿಸರದಲ್ಲಿನ ಯಾವುದೇ ಇಂಧನವನ್ನೂ ಬಳಸದೆಯೇ,ತಮ್ಮ ದೇಹದಲ್ಲೇ ಉತ್ಪತ್ತಿಯಾಗುವ ರಾಸಾಯನಿಕಗಳಿಂದ ಬೆಳಕನ್ನು ಸ್ವಯಂ ಉತ್ಪಾದನೆ ಮಾಡುವುದು ಎಂದರ್ಥ. ಇಷ್ಟೊಂದು ವಿಶೇಷಗಳನ್ನು ಹೊಂದಿರುವ ಈ ಹುಳುವು ನಿಶಚಾರಿ ಕೀಟ ಎಂದೆನ್ನಬಹುದು.

ಮಲೆನಾಡಿಗರಿಗೆ ಮಳೆಗಾಲದಲ್ಲಿ “ರಕ್ತ’ ಸಂಬಂಧಿಯಂತೆ ಕಾಡುವ ಮತ್ತು ಕಾಣುವ ಹುಳವೇ ಇಂಬಳ. ವಿಜ್ಞಾನಿಗಳ ಭಾಷೆಯಲ್ಲಿ ಹಿರಿಡೋ ಮೆಡಿಸಿನಾಲಿಸ್‌ ಎಂದು ಕರೆಸಿಕೊಳ್ಳಲ್ಪಡುವ ಇದರ ರಕ್ತ ಹೀರುವ ಗುಣವನ್ನು ಮಾತ್ರ ನಾವು ಕಂಡಿದ್ದೇವೆ. ಆದರೆ ಇದು ಕೇವಲ ರಕ್ತ ಹೀರುವುದಷ್ಟೇಯಲ್ಲದೆ ರಕ್ತಸ್ರಾವ, ಗಾಯವನ್ನು ಗುಣಪಡಿಸುವುದು ಮತ್ತು ಶಸ್ತ್ರಚಿಕಿತ್ಸೆಯ ಅನಂತರದ ಸ್ಥಳಗಳಲ್ಲಿ ರಕ್ತದ ಹರಿವನ್ನು ಉತ್ತೇಜಿಸಲು ಈ ಜಿಗಣೆಯಲ್ಲಿನ ಅಂಶಗಳನ್ನು ಔಷಧಗಳಲ್ಲಿ ಬಳಸಬಹುದು ಎಂಬುದನ್ನು ವೈದ್ಯಕೀಯ ಕ್ಷೇತ್ರದಲ್ಲಿ ಕಂಡುಕೊಂಡಿದ್ದಾರೆ. ಇನ್ನು ಪ್ರಕೃತಿಯೇ ಕೆಲವು ಕೀಟಗಳ ಜೀವ ಸಂರಕ್ಷಣೆಗಾಗಿ ಒಂದಿಷ್ಟು ವಿಶೇಷ ಜೈವಿಕ ಸಂರಚನೆಯನ್ನು ನೀಡಿದೆ. ಕೆಲವು ಕೀಟಗಳು ಜೀವ ರಕ್ಷಣೆಗಾಗಿ ಎಲೆಯ ಮೇಲೆ ವಾಸಿಸುವಾಗ ಅದರ ಬಣ್ಣ ತಳೆದರೆ, ಮಣ್ಣಿನಲ್ಲಿ ವಾಸಿಸುವ ಕೆಲ ಹುಳಹಪ್ಪಟೆಗಳು ಮಣ್ಣಿನ ಬಣ್ಣವನ್ನೇ ತಳೆದಿರುತ್ತವೆ.

ಇನ್ನು ಕೆಲ ಹುಳುಗಳಂತೂ ಚಿತ್ತಾಕರ್ಷಕ ಬಣ್ಣಗಳನ್ನು ಹೊಂದಿದ್ದು, ಬಣ್ಣದಿಂದಲೇ ಸರ್ವರ ಗಮನವನ್ನು ತಮ್ಮೆಡೆ ಸೆಳೆಯುತ್ತವೆ.ಇವುಗಳಲ್ಲಿ ಚಿತ್ತಾಕರ್ಷಕ ಬಣ್ಣದಲ್ಲಿ ಎದ್ದು ಕಾಣುವ ಒಂದು ಹುಳು ಎಂದರೆ ಅದು ಕೆಂಪು ವೆಲ್ವೆಟ್‌ ಬಟ್ಟೆಯಂತೆ ದೇಹದಲ್ಲಿ ಮೃದುತ್ವವನ್ನು ಹೊಂದಿರುವ ಹುಳು. ವೆಲ್ವಟ್‌ ಕೋಟಿಂಗ್‌ ಅನ್ನು ಹೊಂದಿರುವ ಈ ರೀತಿಯ ಹುಳುವನ್ನು ಮಲೆನಾಡು ಭಾಗದಲ್ಲಿ ದೇವರ ಹುಳು ಎಂದೂ, ಕರಾವಳಿಯಲ್ಲಿ ಸೂರ್ಯನ ಎಂಜಲು ಎಂದು ಕರೆಯಲಾಗುತ್ತದೆ. ರೈನ್‌ ಬಗ್‌ ಎಂದು ಆಂಗ್ಲ ಭಾಷೆಯಲ್ಲಿ ಕರೆವ ಇದರ ವೈಜ್ಞಾನಿಕ ಹೆಸರು ಟ್ರೊಂಬಿಡಿಯಂ ಹೋಲೋಸೆರಿಸಂ.ಇದು ಉಣುಗಿನ ಜಾತಿಗೆ ಸೇರಿದ್ದು, ಮುಂಗಾರಿನ ಮಳೆಯ ಸಿಂಚನದೊಂದಿಗೆ ಕೇವಲ ಒಂದೆರಡು ವಾರಗಳು ಮಾತ್ರ ಕಾಣಿಸಿಕೊಂಡು ಅನಂತರ ಮತ್ತೆ ಮರಳಿ ಮಣ್ಣಿನಲ್ಲಿ ಅಡಗಿಬಿಡುತ್ತವೆ. ನೋಡಲು ಅತ್ಯಾಕರ್ಷಕವಾದ ಈ ಪುಟ್ಟ ಜೀವಿಯೇ ಪುಟ್ಟ ಜೀವಿಗಳ ಜಗದಲ್ಲಿ ಅಗ್ರಜ ಎಂದೆನ್ನಬಹುದು!

ಇಂದಿನ ತಲೆಮಾರಿಗೆ ಕೌತುಕದ ಲೋಕವನ್ನೇ ತೆರೆ‌ದಿಡುವ ಅಪರೂಪದ ಈ ಎಲ್ಲ ಜೀವಿಗಳನ್ನೂ ಆಯಾಯ ಋತುಮಾನಗಳಿನುಗುಣವಾಗಿ ಅವುಗಳ ದರ್ಶನವಾದಾಗ ಪರಿಚಯಿಸಿ, ಪ್ರಕೃತಿಯ ವಿಸ್ಮಯವನ್ನು ಅನಾವರಣಗೊಳಿಸಬೇಕಿದೆ. ವಿನಾಶದ ಅಂಚಿನಲ್ಲಿರುವ ಹಲವು ಪ್ರಬೇಧಗಳನ್ನು ಉಳಿಸುವತ್ತ ಚಿತ್ತ ಬೆಳೆಸಬೇಕಿದೆ. ಸೃಷ್ಟಿಯ ಸಮತೋಲನವನ್ನು ಕಾಪಾಡುವಲ್ಲಿ ಪ್ರತೀ ಜೀವಿಗೂ ಅದರದ್ದೇ ಆದ ಸ್ಥಾನಮಾನವಿದೆ ಎಂಬುದನ್ನು ನಾವೆಲ್ಲರೂ ಮನಗಾಣಬೇಕಿದೆ.

ಇನ್ನು ಹುಳುಗಳ ಸಾಲಿನಲ್ಲಿ ಗುರುತಿಸಲ್ಪಡುವ ಒಬ್ಬ ಅದ್ಭುತ ನಟನಿದ್ದಾನೆ. ಅವನೇ ಚರಟೆ ಹುಳು ಅಥವಾ ಚಕ್ಕುಲಿ ಹುಳು. ಮುಟ್ಟಿದರೆ ಸುರುಳಿಯಾಕಾರದಲ್ಲಿ ಸುತ್ತಿಕೊಂಡು, ಸತ್ತಂತೆ ನಟಿಸಿ,ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ಮಲೆನಾಡು ಪ್ರದೇಶದಲ್ಲಿ ಮಳೆಗಾಲದಲ್ಲಿ ಕಂಡುಬರುವ ಚಿತ್ರವಿಚಿತ್ರ ಜೀವಿಗಳಲ್ಲಿ ಇದೂ ಒಂದು .ತೋಟ, ಮನೆಯಂಗಳ,ರಸ್ತೆ, ಕೌಂಪೌಂಡ್‌ ಹೀಗೆ ಎಲ್ಲೆಂದರಲ್ಲಿ ನೂರೆಂಟು ಕಾಲುಗಳಿಂದ ಓಡಾಡುತ್ತಿರುತ್ತವೆ. ಉದ್ದವಾದ ಮತ್ತು ಕೊಳವೆಯಾಕಾರದ ದೇಹ ರಚನೆ ಹೊಂದಿವೆ. ತಲೆ ಮತ್ತು ಹಿಂಭಾಗದ ತುದಿಯನ್ನು ಹೊರತುಪಡಿಸಿ ದೇಹದ ಒಂದೊಂದು ಭಾಗಕ್ಕೂ ಎರಡು ಜತೆ ಕಾಲುಗಳಿರುತ್ತವೆ. ಕಾಲುಗಳ ಸಂಖ್ಯೆ ಜಾಸ್ತಿ ಇರುವುದರಿಂದ ನಡಿಗೆ ನಿಧಾನ. ಸಹಸ್ರಪದಿಗಳಲ್ಲಿ ಜಗತ್ತಿನಾದ್ಯಂತ ಸುಮಾರು 10 ಸಾವಿರಕ್ಕೂ ಅಧಿಕ ಜಾತಿಗಳಿವೆ. ಅವುಗಳಲ್ಲಿ ಈ ಚಕ್ಕುಲಿ ಹುಳವೂ ಒಂದು. ಭೂಮಿಯ ಮೇಲೆ ಮಾನವರಿಗಿಂತ ನೂರಾರು ಮಿಲಿಯನ್‌ ವರ್ಷಗಳ ಹಿಂದಿನಿಂದಲೇ ಇವುಗಳಿವೆ ಎಂಬುದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.

 

ಅನೀಶ್‌ ಬಿ.
ಬಿ.ಜಿ.ಎಸ್‌ ಶ್ರೀ ವೆಂಕಟೇಶ್ವರ ವಿದ್ಯಾಮಂದಿರ, ಕೊಪ್ಪ,

ಚಿಕ್ಕಮಗಳೂರು

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

nucchinunde

Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…

International: New Orleans-ದಾಳಿ ನಡೆಸಿದಾತ ಅಮೆರಿಕದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ

International: New Orleans-ದಾಳಿ ನಡೆಸಿದಾತ ಅಮೆರಿಕದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ

1-wwewqe

2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.