Non Veg:ಈ ಗ್ರಾಮದಲ್ಲಿರುವ ಮನುಷ್ಯರಷ್ಟೇ ಅಲ್ಲ ಸಾಕು ಪ್ರಾಣಿಗಳೂ ಮಾಂಸಾಹಾರ ಮುಟ್ಟಲ್ವಂತೆ

ಒಂದು ವೇಳೆ ತಿಂದರೆ...

ಸುಧೀರ್, Sep 9, 2024, 5:28 PM IST

ಈ ಗ್ರಾಮದಲ್ಲಿರುವ ಮನುಷ್ಯರಷ್ಟೇ ಅಲ್ಲ ಸಾಕು ಪ್ರಾಣಿಗಳೂ ಮಾಂಸಾಹಾರ ಮುಟ್ಟಲ್ವಂತೆ

ನಮ್ಮ ದೇಶದಲ್ಲಿ ಅನೇಕ ರೀತಿಯ ಆಚಾರ ವಿಚಾರಗಳು ಚಾಲ್ತಿಯಲ್ಲಿವೆ, ಅದಕ್ಕಾಗಿಯೇ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದು. ಅದರಂತೆ ಆಹಾರ ಪದ್ದತಿಯಯಲ್ಲೂ ಹಾಗೆ, ಜನರು ತಮಗೆ ಬೇಕಾದ ಆಹಾರವನ್ನು ಆಯ್ಕೆ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಕೆಲವು ಮನೆಯಲ್ಲಿ ಕೆಲವರು ಸಸ್ಯಾಹಾರ ಇಷ್ಟಪಟ್ಟರೆ ಇನ್ನೂ ಕೆಲವರು ಮಾಂಸಾಹಾರವನ್ನು ಇಷ್ಟಪಡುತ್ತಾರೆ. ಆದರೆ ಇಲ್ಲೊಂದು ಅರುವತ್ತು ಕುಟುಂಬ ವಾಸವಾಗಿರುವ ಗ್ರಾಮವಿದೆ ಈ ಗ್ರಾಮದಲ್ಲಿರುವ ಎಲ್ಲರೂ ಸಸ್ಯಾಹಾರಿಗಳಂತೆ. ಹೌದು ಈ ಗ್ರಾಮದಲ್ಲಿರುವ ಎಲ್ಲರೂ ಸಸ್ಯಾಹಾರವನ್ನೇ ಸೇವನೆ ಮಾಡುತ್ತಾರಂತೆ, ಬನ್ನಿ ಹಾಗಾದರೆ ಈ ಗ್ರಾಮ ಎಲ್ಲಿದೆ, ಯಾಕಾಗಿ ಇಲ್ಲಿಯ ಜನ ಸಹ್ಯಹಾರಿಗಳಾಗಿದ್ದಾರೆ ಎಂಬುದನ್ನು ತಿಳಿಯೋಣ.

ಎಲ್ಲಿದೆ ಈ ಹಳ್ಳಿ :
ಈ ಗ್ರಾಮ ಇರುವುದು ಒಡಿಶಾದ ಧೆಂಕನಲ್ ಜಿಲ್ಲೆಯ ಬೆಂಟಸಾಲಿಯಾ ಗ್ರಾಮದಲ್ಲಿ ಇಲ್ಲಿ ಸುಮಾರು ಅರುವತ್ತು ಮನೆಗಳಿದ್ದು ಯಾರೊಬ್ಬರೂ ಮಾಂಸಾಹಾರ ಸೇವನೆ ಮಾಡುವುದಿಲ್ಲ. ಮನೆಮಂದಿ ಎಲ್ಲರೂ ಕಟ್ಟುನಿಟ್ಟಾಗಿ ಸಸ್ಯಾಹಾರವನ್ನೇ ಸೇವನೆ ಮಾಡುತ್ತಾರೆ.

ಜನರ ನಂಬಿಕೆ ಏನು:
ಈ ಗ್ರಾಮದ ಜನರು ಪ್ರತಿಯೊಬ್ಬರೂ ಸಸ್ಯಾಹಾರಿಗಳು ಒಂದು ವೇಳೆ ಅಪ್ಪಿ ತಪ್ಪಿ ಯಾವುದೇ ಮನೆಯಲ್ಲಿ ಮಾಂಸಾಹಾರ ಮಾಡಿದರು ಎಂದಾದರೆ ಆ ಮನೆಯಲ್ಲಿ ಏನಾದರೂ ತೊಂದರೆ ಎದುರಾಗುತ್ತದೆ ಅಥವಾ ಮನೆಯ ಯಾವುದೇ ಒಬ್ಬ ಸದಸ್ಯ ಹಾವಿನ ಕಡಿತಕ್ಕೆ ಒಳಗಾಗುತ್ತಾನೆ, ಇಲ್ಲದಿದ್ದರೆ ಮನೆಮಂದಿ ಯಾವುದಾದರು ಅಪವಾದಕ್ಕೆ ಒಳಗಾಗುತ್ತಾರೆ ಎಂಬುದು ಈ ಗ್ರಾಮದ ಜನರ ನಂಬಿಕೆ. ಹಾಗಾಗಿ ಗ್ರಾಮದಲ್ಲಿ ಮದುವೆ ಸೇರಿದಂತೆ ಇನ್ನಿತರ ಯಾವುದೇ ಸಮಾರಂಭಗಳು ನಡೆದರೂ ಮಾಂಸಾಹಾರ ಮಾಡುವುದಿಲ್ಲ.

ಅಂಗನವಾಗಿಯಲ್ಲೂ ಮಕ್ಕಳಿಗೆ ಮೊಟ್ಟೆ ಕೊಡಲ್ಲ:
ಈ ಗ್ರಾಮದಲ್ಲಿರುವ ಜನರ ನಂಬಿಕೆಯಿಂದಾಗಿ ಇಲ್ಲಿನ ಅಂಗನವಾಡಿ ಕೇಂದ್ರದಲ್ಲೂ ಮಕ್ಕಳಿಗೆ ಮೊಟ್ಟೆ ಕೊಡುವ ಬದಲಿಗೆ ಬಾಳೆಹಣ್ಣು ನೀಡಲಾಗುತ್ತದೆ, ಮೊಟ್ಟೆ ಕೊಟ್ಟರೆ ಅದರಿಂದ ಕೆಡುಕಾಗುತ್ತದೆ ಎಂಬುದು ಜನರ ನಂಬಿಕೆ.

ಸಾಕು ಪ್ರಾಣಿಗಳು ಕೂಡ:
ಈ ಗ್ರಾಮದಲ್ಲಿರುವ ನಾಯಿ, ಬೆಕ್ಕು ಸೇರಿದಂತೆ ಸಾಕು ಪ್ರಾಣಿಗಳು ಕೂಡ ಸಸ್ಯಾಹಾರವನ್ನೇ ಸೇವನೆ ಮಾಡುತ್ತವೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಇಲ್ಲಿನ ಗ್ರಾಮದ ಜನರ ಮುಖ್ಯ ಉದ್ಯೋಗ ಕೃಷಿಯೇ ಹೊರತು ಬೇರೇನೂ ಇಲ್ಲ.

ನಂಬಿಕೊಂಡು ಬಂದ ನಂಬಿಕೆ:
ಈ ಕುರಿತು ಇದೇ ಗ್ರಾಮದ ನಿವಾಸಿಯಾಗಿರುವ ತಾರಾಬತಿ ದಾಶ್ ಅವರು ನಮ್ಮ ಪೂರ್ವಜರು ಈ ನಂಬಿಕೆಯನ್ನು ನಂಬಿಕೊಂಡು ಬಂದಿದ್ದಾರೆ, ನಾವು ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಅಷ್ಟು ಮಾತ್ರವಲ್ಲದೆ ಉದ್ಯೋಗ ಹಾಗೂ ಉನ್ನತ ಶಿಕ್ಷಣ ಪಡೆಯಲು ಪರ ಊರಿಗೆ ಹೋದ ಮಂದಿ ಈ ಸಂಪ್ರದಾಯವನ್ನು ಅಳವಡಿಸಲು ಪ್ರಯತ್ನಿಸುತ್ತಾರೆ ಎಂದು ಹೇಳುತ್ತಾರೆ.

ಇದೇ ಗ್ರಾಮದ ಅರ್ಚಕರೊಬ್ಬರು ಹೇಳುವಂತೆ ಅನಾದಿಕಾಲದಿಂದಲೂ ನಮ್ಮ ಗ್ರಾಮದಲ್ಲಿ ಜನ ಸಸ್ಯಾಹಾರ ಸೇವನೆ ಮಾಡಿಕೊಂಡು ಬರುತ್ತಿದ್ದಾರೆ, ಒಂದು ವೇಳೆ ಬೇರೆ ಗ್ರಾಮದ ಹೆಣ್ಣು ಮಗಳು ನಮ್ಮ ಗ್ರಾಮಕ್ಕೆ ಮದುವೆಯಾಗಿ ಬಂದರೆ ನಮ್ಮದೇ ಗ್ರಾಮದ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು, ನಾವೆಲ್ಲರೂ ಈ ಸಂಪ್ರದಾಯವನ್ನು ಹಿಂದಿನಿಂದಲೂ ಅಳವಡಿಸಿಕೊಂಡು ಬಂದಿದ್ದೇವೆ ಹಾಗಾಗಿ ಮುಂದೆ ಬರುವ ಪೀಳಿಗೆಯು ಇದನ್ನು ಅನುಸರಿಸಿಕೊಂಡು ಹೋಗಬೇಕು ಎಂದು ಹೇಳುತ್ತಾರೆ.

ಈ ಗ್ರಾಮದ ಇನ್ನೋರ್ವ ನಿವಾಸಿಯಾಗಿರುವ ಶಶಿ ಪ್ರವ ದಾಸ್ ಹೇಳುವಂತೆ “ನಾವು ಗೋಪಾಲ್ ವೈಷ್ಣವ್ ವಂಶಕ್ಕೆ ಸೇರಿದವರು. ನಾವು ಮಾಂಸಾಹಾರ ಸೇವನೆ ಮಾಡಿದರೆ ನಮ್ಮ ಕಣ್ಣು ಮತ್ತು ಕಿವಿಗಳು ನಿಷ್ಕ್ರಿಯವಾಗುತ್ತದೆ. ಅಲ್ಲದೆ ಯಾರಾದರೂ ಗ್ರಾಮಕ್ಕೆ ಮಾಂಸಾಹಾರ ತಂದರೆ ಹಾವುಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಗ್ರಾಮದಲ್ಲಿ ಏನೋ ಅನಾಚಾರವಾಗಿದೆ ಎಂಬ ಮುನ್ಸೂಚನೆ ಸಿಗುತ್ತದೆ, ಇದು ನಾವು ಕಣ್ಣಾರೆ ಕಂಡಿದ್ದೇವೆ ಎಂದು ಹೇಳುತ್ತಾರೆ.

ವೈಷ್ಣವ್ ಸಮುದಾಯದವರೇ ಹೆಚ್ಚು:
ಬೆಂಟಸಾಲಿಯಾ ಗ್ರಾಮದಲ್ಲಿ ೪೦೦ ಮಂದಿಯನ್ನು ಹೊಂದಿದ ಅರುವತ್ತು ಕುಟುಂಬಗಳಿದ್ದು ಇಲ್ಲಿ ಇರುವ ಹೆಚ್ಚಿನ ಕುಟುಂಬಗಳು ವೈಷ್ಣವ್ ಸಮುದಾಯಕ್ಕೆ ಸೇರಿದಾಗಿದ್ದು ಇವರು ಮೊದಲಿನಿಂದಲೂ ಸಸ್ಯಾಹಾರವನ್ನೇ ಸೇವನೆ ಮಾಡುವವರಾಗಿದ್ದಾರೆ. ಅಲ್ಲದೆ ಹೋಮ, ಹವನ ಮಾಡಿಕೊಂಡು ಬಂದಿರುವ ಕುಟುಂಬ ಆಗಿರುವುದರಿಂದ ಸಸ್ಯಾಹಾರವನ್ನೇ ಅವಲಂಬಿತರಾಗಿದ್ದಾರೆ. ಅಲ್ಲದೆ ವಿದ್ಯಾಭ್ಯಾಸ, ಕೆಲಸಕ್ಕಾಗಿ ಹೊರ ದೇಶಗಳಿಗೆ ಹೋದ ಮಂದಿ ಅಲ್ಲೂ ಸಸ್ಯಾಹಾರವನ್ನೇ ಸೇವನೆ ಮಾಡುತ್ತಾರೆ.

ಮೀನು ತರಲು ಹೋದ ವ್ಯಕ್ತಿಗೆ ಕಚ್ಚಿದ ಹಾವು:
ಹಳ್ಳಿಯಲ್ಲಿ ಈ ಪದ್ಧತಿ ಯಾವಾಗ ಮತ್ತು ಹೇಗೆ ಪ್ರಾರಂಭವಾಯಿತು ಎಂಬುದು ಯಾರಿಗೂ ಗೊತ್ತಿಲ್ಲ ಆದರೆ ದಂತಕಥೆಯ ಪ್ರಕಾರ ಹಿಂದೆ ದಲಿತ ವ್ಯಕ್ತಿಯೊಬ್ಬ ತಮ್ಮ ಕುಟುಂಬದ ಸದಸ್ಯರೊಬ್ಬರ ಮದುವೆ ಸಮಾರಂಭಕ್ಕೆ ಮಾಂಸಾಹಾರ ಅಡುಗೆ ಮಾಡಲು ಮೀನು ತರಲು ಹೋಗಿದ್ದ ಹಾಗೆ ಮೀನು ತರುತ್ತಿದ್ದ ವೇಳೆ ಆ ವ್ಯಕ್ತಿಗೆ ಹಾವು ಕಚ್ಚಿ ಮೃತಪಟ್ಟಿದ್ದರು, ಅಂದಿನಿಂದ ಈ ಗ್ರಾಮದ ಜನರಲ್ಲಿ ಮಾಂಸಾಹಾರ ತಂದಿದ್ದೆ ವ್ಯಕ್ತಿಯ ಸಾವಿಗೆ ಕಾರಣ ಎಂದು ಜನ ನಂಬಲು ಶುರು ಮಾಡಿದ್ದಾರೆ, ಅಂದಿನಿಂದ ಗ್ರಾಮಕ್ಕೆ ಯಾರಾದರೂ ಮಾಂಸಾಹಾರ ತಂದರೆ ಕೆಡುಕಾಗುತ್ತದೆ, ಅಥವಾ ಹಾವಿನ ಕಡಿತಕ್ಕೆ ಒಳಗಾಗುತ್ತಾರೆ ಎಂಬ ನಂಬಿಕೆ ಮನಸ್ಸಿನಲ್ಲಿ ಬೇರೂರಿದೆ.

– ಸುಧೀರ್ ಪರ್ಕಳ

ಟಾಪ್ ನ್ಯೂಸ್

train-track

Maha Kumbh Mela 2025;ಮಂಗಳೂರು-ವಾರಾಣಸಿ ವಿಶೇಷ ರೈಲು ಸೇವೆ

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

Bidar-Contracter-Sis

Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್‌ ಸಹೋದರಿ ಸುರೇಖಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

1-deee

Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್

BY-Vijayendra

Contracter Case: ಸಚಿನ್‌ ಪಾಂಚಾಳ್‌ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnatakaದಿಂದ ಕಕ್ಷೆಗೆ: ISRO ಸ್ಪೇಡೆಕ್ಸ್ ಜೊತೆ ನಭಕ್ಕೆ ಚಿಮ್ಮಲಿವೆ ಆದಿಚುಂಚನಗಿರಿ SJC

Explainer: Karnatakaದಿಂದ ಕಕ್ಷೆಗೆ-ಬಾಹ್ಯಾಕಾಶದಲ್ಲಿ ಡಾಕಿಂಗ್‌ ಕಸರತ್ತು…ISRO ಸಾಹಸ

1-man-mohan

Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

train-track

Maha Kumbh Mela 2025;ಮಂಗಳೂರು-ವಾರಾಣಸಿ ವಿಶೇಷ ರೈಲು ಸೇವೆ

1-kalla

Karkala: ಚಿನ್ನದಂಗಡಿ ಕಳ್ಳತನ: ಕುಖ್ಯಾತ ಸರಗಳ್ಳ ಅರೆಸ್ಟ್

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

Bidar-Contracter-Sis

Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್‌ ಸಹೋದರಿ ಸುರೇಖಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.