ಅಡುಗೆ ಮಾತ್ರವಲ್ಲ…ಕಬ್ಬಿಣಾಂಶ ಹೊಂದಿರುವ ಜೀರಿಗೆ ಹಲವು ಔಷಧೀಯ ಗುಣ ಹೊಂದಿದೆ!
Team Udayavani, Nov 4, 2020, 5:35 PM IST
ಪ್ರತಿಯೊಂದು ಸಾಂಬಾರ ಪದಾರ್ಥಗಳಲ್ಲಿ ನಮ್ಮ ದೇಹಕ್ಕೆ ಬೇಕಾಗುವ ರೋಗನಿರೋಧಕ ಶಕ್ತಿ ಹಾಗೂ ಕಾಯಿಲೆಗಳನ್ನು ಬರದಂತೆ ತಡೆಗಟ್ಟುವ ಶಕ್ತಿಯಿದೆ. ಇದರಿಂದಾಗಿ ಹಿಂದಿನಿಂದಲೂ ಭಾರತೀಯರ ಅಡುಗೆ ತುಂಬಾ ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಪ್ರತಿಯೊಂದು ಸಾಂಬಾರ ಪದಾರ್ಥಗಳನ್ನು ಒಂದಲ್ಲಾ ಒಂದು ರೀತಿಯಿಂದ ದಿನನಿತ್ಯ ಸೇವಿಸುವ ಕಾರಣದಿಂದಾಗಿ ನಾವು ಕಾಯಿಲೆಗಳಿಂದ ದೂರ ಉಳಿಯುವುದು ಖಚಿತ. ಅಡುಗೆ ಮನೆಯಲ್ಲಿ ಹೆಚ್ಚಿನ ಎಲ್ಲಾ ಖಾದ್ಯಗಳಿಗೆ ಬಳಸುವಂತಹ ಜೀರಿಗೆಯು ತುಂಬಾ ಬಹುಪಯೋಗಿ. ಮನುಷ್ಯ ಬಳಸತೊಡಗಿದ ಅತ್ಯ೦ತ ಹಳೆಯ ಮಸಾಲೆ ವಸ್ತುಗಳಲ್ಲಿ ಜೀರಿಗೆಯೂ ಒಂದು. ಜೀರಿಗೆ ಅತೀ ಹೆಚ್ಚಿನ ಮಟ್ಟದಲ್ಲಿ ಕಬ್ಬಿಣಾಂಶ ಮತ್ತು ನಾರಿನಾಂಶವನ್ನು ಹೊಂದಿದೆ. ಇದು ಕೇವಲ ಅಡುಗೆಗೆ ಸುವಾಸನೆಗೆ ಮಾತ್ರವಲ್ಲ ಇದರಿಂದ ಹಲವಾರು ಆರೋಗ್ಯಕರ ಲಾಭಗಳಿವೆ.
ಜೀರಿಗೆ ಸೇವನೆಯ ಆರೋಗ್ಯಕರ ಪ್ರಯೋಜನಗಳು:
ಜೀರಿಗೆಯಲ್ಲಿ ಹಲವಾರು ಪ್ರಬಲ ರೋಗ ನಿರೋಧಕ ಇದ್ದು ದೇಹದಿಂದ ಕಲ್ಮಶಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
* ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ
ಜೀರ್ಣಶಕ್ತಿಯನ್ನು ಹೆಚ್ಚಿಸುವಲ್ಲಿ ಜೀರಿಗೆ ಮಹತ್ವದ ಸ್ಥಾನವನ್ನು ಹೊಂದಿದೆ. ಅತೀ ಹೆಚ್ಚಿನ ಮಟ್ಟದಲ್ಲಿ ಕಬ್ಬಿಣಾಂಶ ಮತ್ತು ನಾರಿನಂಶವನ್ನು ಹೊಂದಿರುವ ಜೀರಿಗೆ ಇಮ್ಮ್ಯುನಿಟ್(ಉಷ್ಣಾಂಶ) ಸಿಸ್ಟೆಮ್ ಸರಿಯಾದ ಮಟ್ಟದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಅಜೀರ್ಣದಿಂದಾಗುವ ಹೊಟ್ಟೆ ನೋವನ್ನು ಸಹ ಇದು ಕಡಿಮೆ ಮಾಡುತ್ತದೆ.
* ದೇಹದ ತೂಕವನ್ನು ಇಳಿಸುತ್ತದೆ
ದೇಹದ ತೂಕ ಹೆಚ್ಚಾಗಿದ್ದಲ್ಲಿ ಪ್ರತಿದಿನ ಜೀರಿಗೆ ನೀರಿನ ಸೇವನೆ ಮಾಡಬೇಕು. ಜೀರಿಗೆ ದೇಹದಲ್ಲಿ ಮೆಟಾಬಾಲಿಸಂ ಅನ್ನು ಹೆಚ್ಚಿಸಿ. ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ದೇಹದ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಹೆಚ್ಚು ಹೆಚ್ಚು ಕ್ಯಾಲೋರಿಗಳು ಬಳಸಲ್ಪಡುತ್ತವೆ. ಅಲ್ಲದೇ ಇದರಲ್ಲಿರುವ ಕರಗದ ನಾರು ಹಸಿವನ್ನು ಕಡಿಮೆಗೊಳಿಸುತ್ತದೆ.
* ಗರ್ಭಿಣಿಯರಿಗೆ ಒಳ್ಳೆಯದು
ಜೀರಿಗೆ ನೀರಿನಲ್ಲಿರುವ ಗುಣಗಳು ಗರ್ಭಿಣಿಯರಲ್ಲಿನ ಮಲಬದ್ಧತೆ ಸಮಸ್ಯೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ವಾಕರಿಕೆ ಮತ್ತು ಮಲಬದ್ಧತೆ ಮುಂತಾದ ಗರ್ಭಾವಸ್ಥೆಯ ಲಕ್ಷಣಗಳನ್ನು ಪರಿಹರಿಸಲು ಜೀರಿಗೆ ಬೀಜಗಳು ಸಹಾಯ ಮಾಡುತ್ತವೆ. ಗರ್ಭಾವಸ್ಥೆಯಲ್ಲಿ ಇದರ ಸೇವನೆ ಮಾಡುವುದರಿಂದ ಗರ್ಭಿಣಿ ಮತ್ತು ಮಗು ಉತ್ತಮ ಆರೋಗ್ಯವನ್ನು ಪಡೆಯಬಹುದು.
* ಆಸ್ತಮಾ ಮತ್ತು ಶೀತವನ್ನು ನಿವಾರಿಸುತ್ತದೆ
ಜೀರಿಗೆಯ ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿ ಇಂಫ್ಲಾಮೇಟರಿ ಗುಣಲಕ್ಷಣಗಳ ಕಾರಣ, ಜೀರಿಗೆ ಬೀಜಗಳು ಶೀತ ಮತ್ತು ಕೆಮ್ಮಿನ ಸಮಸ್ಯೆಗೆ ಅದ್ಭುತ ಮನೆಮದ್ದಾಗಿದೆ. ಇದು ಕೆಮ್ಮು, ಜ್ವರ, ಶೀತವನ್ನು ಬೇಗನೇ ಕಡಿಮೆ ಮಾಡುತ್ತದೆ.
*ರೋಗನಿರೋಧಕ ಶಕ್ತಿ ಹೆಚ್ಚಳ:
ಜೀರಿಗೆಯಲ್ಲಿ ಕಬ್ಬಿಣಾಂಶವು ಸಮೃದ್ಧವಾಗಿದೆ. ಇದರಿಂದಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ವಿಟಮಿನ್ ಎ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣ ಇದು ರೋಗ ನಿರೋಧಕವಾಗಿ ಕೆಲಸ ಮಾಡುವುದು. ನಿಯಮಿತವಾಗಿ ಜೀರಿಗೆ ನೀರಿನ ಸೇವನೆಯಿಂದ ಹಲವಾರು ರೀತಿಯ ಕಾಯಿಲೆಗಳು ದೂರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
*ರಕ್ತಹೀನತೆ ನಿವಾರಣೆ:
ಜೀರಿಗೆಯಲ್ಲಿ ಇರುವಂತಹ ಕಬ್ಬಿಣಾಂಶವು ರಕ್ತಹೀನತೆಯ ನಿವಾರಣೆ ಮಾಡುವುದು. ಕಬ್ಬಿಣಾಂಶವು ದೇಹದಲ್ಲಿ ಹಲವಾರು ರೀತಿಯ ಕೆಲಸಗಳನ್ನು ನಿರ್ವಹಿಸುವುದು. ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವುದು ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುವುದು. ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಿದ್ದರೆ ನಿವಾರಣೆ ಮಾಡಿ ರಕ್ತಹೀನತೆ ಸಮಸ್ಯೆ ಬಗೆಹರಿಸಬಹುದು.
*ನೆನಪಿನ ಶಕ್ತಿ ಹೆಚ್ಚಳ:
ಜೀರಿಗೆ ನೀರು ಮೆದುಳಿನ ಆರೋಗ್ಯ ವೃದ್ಧಿಸಿ ನೆನಪಿನ ಶಕ್ತಿ ಹೆಚ್ಚಿಸುವುದು. ಬಾಲ್ಯದಿಂದಲೇ ಮಕ್ಕಳಿಗೆ ಜೀರಿಗೆ ನೀರು ಕುಡಿಸುತ್ತಾ ಬಂದರೆ ಅವರ ಜ್ಞಾಪಕ ಶಕ್ತಿಯು ಹೆಚ್ಚುವುದನ್ನು ಕಾಣಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.