75 ವರ್ಷಗಳಿಂದ ಮರದಡಿಯಲ್ಲಿ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿರುವ 104 ರ ಅಜ್ಜ.!
ಸರ್ಕಾರದ ಸೌಲಭ್ಯ ಪಡೆಯದೆ, ಊರ ನೆರವನ್ನು ಪಡೆಯದೆ ಬೋಧಿಸುವ ಉತ್ಸಾಹ ಇವರದು
Team Udayavani, Sep 30, 2020, 8:38 PM IST
ಜಗತ್ತಿನ ಎಲ್ಲಾ ದಾನಗಳಲ್ಲಿ ಶ್ರೇಷ್ಠ ದಾನ ವಿದ್ಯಾದಾನ. ನಾವು ಕಲಿತ್ತದ್ದನ್ನು ಇನ್ನೊಬ್ಬರಿಗೆ ಒಂದು ಹಿಡಿಯನ್ನಾಷ್ಟದರೂ ಹೇಳಿ ಕೊಟ್ಟರೆ ಅಥವಾ ಬೋಧಿಸಿದಾಗ ಸಿಗುವ ನೆಮ್ಮದಿ ಅಕ್ಷರ ರೂಪದಲ್ಲಿ ದಾಖಲಾಗದ ಅದ್ಭುತ ಅನುಭವ.!
ಈಗಿನ ಕಾಲದಲ್ಲಿ ವಿದ್ಯೆ ಎನ್ನುವುದು ಎಲ್ಲರ ಹಕ್ಕು ಹೌದು. ಆದರೆ ಅದು ಬಡತನದ ಕಾರಣದಿಂದಲೋ ಅಥವಾ ಕೀಳೆಂಬ ಮನೋಭಾವ ದಿಂದಲೋ ವಿದ್ಯೆಯೆನ್ನುವುದು ಸಮಾಜದ ಎಲ್ಲಾ ವರ್ಗದವರಿಗೆ ದಕ್ಕದೆ ಅದು ಕೆಲವರ ಸ್ವತ್ತಾಗಿ ಇರುವುದು ದುರಂತವೇ ಸರಿ. ಸರ್ಕಾರ ಶಿಕ್ಷಣಕ್ಕಾಗಿ ಎಲ್ಲಾ ಬಗೆ ಅನುಕೂಲವನ್ನು ಕೈಗೆಟಕುವ ರೀತಿಯಲ್ಲಿ ಅನುಷ್ಠಾನಗೊಳಿಸಿದ್ದರೂ ಅದು ಯಾವುದೋ ಒಂದು ಕಾರಣದಿಂದ ದೇಶದ ಎಲ್ಲಾ ಮನೆಯ ಬಾಗಿಲಿಗೆ ದಕ್ಕುವಲ್ಲಿ ವಿಫಲವಾಗಿಯೇ ಇದೆ. ಕಡ್ಡಾಯ ಶಿಕ್ಷಣ ಪದ್ಧತಿ ಇದ್ದರು ಕೆಲ ಮಕ್ಕಳು ಕಡ್ಡಾಯವಾಗಿ ಶಾಲೆಯ ದಾರಿಗೆ ದಾಪುಗಾಲು ಇಡುವ ಬದಲು ಶಿಕ್ಷಣದಿಂದ ವಂಚಿತರಾಗಿರುವುದು ವಿಪರ್ಯಾಸ.
ಬಾಲ್ಯದಲ್ಲಿ ಅಮ್ಮನಿಂದ ಕಲಿತ ಮೌಲ್ಯ, ಯೌವನದಲ್ಲಿ ಅಪ್ಪನಿಂದ ಕಲಿತುಕೊಂಡ ನೀತಿ ಹಾಗೂ ಹದಿಹರೆಯದಲ್ಲಿ ವಿದ್ಯೆ ಕಲಿತು ಬದುಕಿನ ಗುರಿ ನಿಗದಿ ಮಾಡಿಕೊಟ್ಟ ಶಿಕ್ಷಕರು ಇವರನ್ನು ಯಾವತ್ತೂ ಮರೆಯಬಾರದು. ಒಡಿಶ್ಸಾದ ಗ್ರಾಮೀಣ ಭಾಗದಲ್ಲಿರುವ 104 ವರ್ಷದ ಹಿರಿಯ ಅಜ್ಜ ಶಿಕ್ಷಣದ ಮೌಲ್ಯವನ್ನು ಕಳೆದ 75 ವರ್ಷಗಳಿಂದ ನಿರಂತರವಾಗಿ ಕಲಿಸಿಕೊಂಡು ಬರುತ್ತಿರುವ ಸ್ಪೂರ್ತಿದಾಯಕ ಕಥೆಯಿದು.
ಒಡಿಶ್ಸಾದ ಜಾಜ್ ಪುರ್ ಎನ್ನುವ ಗ್ರಾಮದಲ್ಲಿ 104 ವರ್ಷದ ಹಿರಿ ಜೀವ ನಂದಾ ಪ್ರಸ್ಥಿ, ಆ ಕಾಲದಲ್ಲಿ ಕಲಿತ ಒಂದಿಷ್ಟು ಅಕ್ಷರ ಜ್ಞಾನವನ್ನು ಪಡೆದ ನಂದಾ ಪ್ರಸ್ಥಿ ತಮ್ಮ ಗ್ರಾಮದಲ್ಲಿ ಮರದ ನೆರಳಿನ ಅಡಿಯಲ್ಲಿ ಪುಟ್ಟ ಮಕ್ಕಳಿಗೆ ಒಬ್ಬ ಸಮರ್ಥ ಶಿಕ್ಷಕ ಹೇಗೆ ಅಕ್ಷರ ಹೇಳಿಕೊಡುತ್ತಾರೋ ಹಾಗೆಯೇ ಸ್ಲೇಟ್ ಹಿಡಿದು ಅಕ್ಷರವನ್ನು ಬರೆದು ಅದನ್ನು ಗುರುತಿಸಿ ಮಕ್ಕಳಿಗೆ ಹೇಳಿಕೊಡುವ ರೀತಿಯನ್ನು ನೋಡಿದರೆ ಎಂಥವರಿಗೂ ಒಮ್ಮೆ ವಾ..! ಗ್ರೇಟ್ ಅನ್ನಿಸಬಹುದು.
ನಂದಾ ಅಜ್ಜ ವಿದ್ಯೆಯನ್ನು ಬೋಧಿಸುವುದು ನಿನ್ನೆ ಮೊನ್ನೆಯಿಂದಲ್ಲ. ಈ ಕ್ರಾಂತಿ ಆರಂಭವಾಗಿ 75 ವರ್ಷಗಳೇ ಸಂದಿವೆ. ಕಳೆದ 75 ವರ್ಷಗಳಿಂದ ತಮ್ಮ ಗ್ರಾಮದ ಮಕ್ಕಳಿಗೆ ವಿದ್ಯೆ ಬೋಧಿಸುತ್ತಾ ಎಷ್ಟೋ ಮಕ್ಕಳ ಪಾಲಿಗೆ ಗ್ರೇಟ್ ಟೀಚರ್ ಅನ್ನಿಸಿಕೊಂಡಿದ್ದಾರೆ. ವಿಶೇಷ ಅಂದರೆ ಕಳೆದ 15 ವರ್ಷಗಳಿಂದ ಮಕ್ಕಳಿಂದ ಆಗಲಿ, ಸರ್ಕಾರದ ಯೋಜನೆಯ ಲಾಭವಾಗಲಿ,ಸೌಕರ್ಯದ ಆಸರೆಯನ್ನಾಗಲಿ ಯಾವುದನ್ನು ಸಂದಾ ಅಜ್ಜ ಪಡೆದುಕೊಂಡಿಲ್ಲ. ಸದ್ಯ ನಂದಾ ಅವರು ತನ್ನ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳ ಮೊಮ್ಮಕ್ಕಳಿಗೆ ವಿದ್ಯೆ ಕಲಿಸಿ ಕೊಡುತ್ತಿದ್ದಾರೆ. ಪ್ರಾಯ 104 ದಾಟಿದರೂ ಕಣ್ಣಿಗೆ ಕನ್ನಡಕ ಇಲ್ಲ. ಪ್ರತಿ ನಿತ್ಯ 30-40 ಮಕ್ಕಳು ಮರದಡಿ ಕೂತು ತಮ್ಮ ಮೆಚ್ಚಿನ ನಂದಾ ಅಜ್ಜನ ಪಾಠ ಕೇಳುತ್ತಾರೆ. ಇಷ್ಟು ಮಾತ್ರವಲ್ಲದೆ ರಾತ್ರಿಯ ವೇಳೆ ಶಿಕ್ಷಣದಿಂದ ವಂಚಿತರಾದ ಹಿರಿಯರಿಗೂ ನಂದಾ ಅವರು ಪಾಠ ಹೇಳಿ ಕೊಡುತ್ತಾರೆ.
ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ನಂದಾ ತಮ್ಮ ಹಳ್ಳಿಯಲ್ಲಿ ಅನೇಕ ಅನಕ್ಷರಸ್ಥರನ್ನು ಇರುವುದನ್ನು ಕಾಣುತ್ತಾರೆ.ಸರಿಯಾಗಿ ಹೆಸರು ಬರೆಯಲು ಬಾರದವರನ್ನು ಕಂಡ ಅವರು ಸಹಿ ಹಾಕಲು ಕಲಿಸಲು ಕರೆಯುತ್ತಾರೆ. ಆಗ ಅನೇಕರು ಆಸಕ್ತಿಯಿಂದ ಬಂದರು ಹಾಗೂ ಭಗವದ್ಗೀತೆಯನ್ನು ಓದಲು ಕಲಿತರು ಎನ್ನುತ್ತಾರೆ.
ಉತ್ಸಾಹದಿಂದ ಪ್ರಾರಂಭಿಸಿದ ನಂದಾ ಪ್ರಸ್ಥಿಯ ಪಾಠ ಶಾಲೆಯ ಸುದ್ದಿ ಮಾಧ್ಯಮಗಳಲ್ಲಿ ಕಂಡದ್ದೆ ತಡ, ಎಲ್ಲಡೆಯಿಂದ ನಂದಾ ಅವರ ಕಲಿಕಾ ಕ್ರಮವನ್ನು ಮೆಚ್ಚಿಕೊಂಡು, ಪ್ರೋತ್ಸಾಹ ಹಾಗೂ ಸ್ಪೂರ್ತಿಯ ಮಾತುಗಳು ಕೇಳಿ ಬರುತ್ತಿದೆ. ಏನೇ ಆದರೂ ನಂದಾ ಪ್ರಸ್ಥಿ ಮಾತ್ರ ಯಾರ ಸಹಯವನ್ನಾಗಲಿ ಅಥವಾ ನೆರವನ್ನಾಗಲಿ ಬೇಡಿಕೊಂಡಿಲ್ಲ.ಇಂಥವರೇ ಅಲ್ವಾ ನಿಜವಾದ ಗುರು..
-ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.