Israel-Hamas ಯುದ್ಧ; ಬಿನ್ ಲಾಡೆನ್ ಅಮೆರಿಕನ್ನರಿಗೆ ಬರೆದ ಪತ್ರ ವೈರಲ್!
ಇಪ್ಪತ್ತೊಂದು ವರ್ಷಗಳ ನಂತರ ಪ್ರಕಟ...
Team Udayavani, Nov 17, 2023, 12:24 AM IST
ಇಸ್ರೇಲ್-ಹಮಾಸ್ ಯುದ್ಧವು ಪ್ರಪಂಚದ ಅತ್ಯಂತ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಲಾಡೆನ್ ‘ಅಮೆರಿಕನ್ ಜನರಿಗೆ ಬರೆದ ಪತ್ರ’ ಮೊದಲ ಬಾರಿಗೆ ಇಪ್ಪತ್ತೊಂದು ವರ್ಷಗಳ ನಂತರ ಪ್ರಕಟವಾಗಿದ್ದು ಚರ್ಚೆಗೆ ಬಂದಿದೆ. ಸಾವಿರಾರು ಟಿಕ್‌ಟಾಕ್ ಬಳಕೆದಾರರು ಒಂದೇ ದಿನದಲ್ಲಿ ಕ್ಲಿಪ್‌ಗಳನ್ನು ಸಿದ್ಧಮಾಡಿ ಹಂಚಿಕೊಳ್ಳುವ ಮೂಲಕ, ಒಸಾಮಾ ಪತ್ರದ ವಿಡಿಯೋ ಗಳು ಸದ್ಯ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗುತ್ತಿವೆ.
ಜನರು ಇದನ್ನು “TikTok PsyOp ಸುನಾಮಿ” ಎಂದು ಕರೆದಿದ್ದಾರೆ.ಯುಎಸ್ ನೆಲದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ 2001 ರ 9/11 ದಾಳಿಯ ನಂತರ ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಬರೆದ ಪತ್ರ, ಉಗ್ರ ದಾಳಿಯನ್ನು ಸಮರ್ಥಿಸಲು ಪ್ರಯತ್ನಿಸುತ್ತದೆ ಮತ್ತು ಇತರ ವಿಷಯಗಳ ಜತೆಗೆ, ನಮ್ಮ ಪ್ಯಾಲೆಸ್ತೀನ್ ಇಸ್ರೇಲಿಗಳ ಆಕ್ರಮಣದ ದಬ್ಬಾಳಿಕೆ ವಿರುದ್ಧ ಬೆಂಬಲ” ಎಂದು ಲಿಂಕ್ ಮಾಡಲಾಗಿದೆ. ಒಸಾಮಾ ಪತ್ರ ಮತ್ತೆ ಮುನ್ನೆಲೆಗೆ ಬರಲು, ವೈರಲ್ ಆಗಲು ಇದೇ ಕಾರಣ ಎಂದು ಕಂಡುಬರುತ್ತದೆ.
ಅಕ್ಟೋಬರ್ 7 ರಂದು ಹಮಾಸ್ ಭಯೋತ್ಪಾದಕರು 1,400 ಇಸ್ರೇಲಿ ನಾಗರಿಕರನ್ನು ಹತ್ಯೆಗೈದು, 200 ಕ್ಕೂ ಹೆಚ್ಚು ಜನರನ್ನು ಅಪಹರಿಸಿದ ನಂತರ ಇಸ್ರೇಲ್ ಹಮಾಸ್ ವಿರುದ್ಧ ಭೀಕರ ಸಮರ ಸಾರಿದೆ. ಮಕ್ಕಳು ಸೇರಿದಂತೆ ಸಾವಿರಾರು ಜನರ ಸಾವಿನ ನಂತರ ಗಾಜಾದಲ್ಲಿ ಕದನ ವಿರಾಮವನ್ನು ಒತ್ತಾಯಿಸುವ ಪ್ರತಿಭಟನೆಗಳುತೀವ್ರಗೊಂಡಿವೆ.ಈ ಹಿನ್ನೆಲೆಯಲ್ಲಿ ಒಸಾಮಾ ಬಿನ್ ಲಾಡೆನ್ ಪತ್ರದ ಟಿಕ್‌ಟಾಕ್ ವೀಡಿಯೊಗಳು ಹೊರಹೊಮ್ಮಿ ವೈರಲ್ ಆಗುತ್ತಿವೆ.
ಪ್ಯಾಲೆಸ್ತೀನ್‌ಗೆ ರಾಜ್ಯತ್ವದ ಮತ್ತೊಂದು ಉಲ್ಲೇಖದಲ್ಲಿ, ಒಸಾಮಾ ಪತ್ರದಲ್ಲಿ”ಪ್ಯಾಲೆಸ್ತೀನ್ ದಶಕಗಳಿಂದ ಆಕ್ರಮಣದಲ್ಲಿದೆ ಮತ್ತು ಸೆಪ್ಟೆಂಬರ್ 11 ರ ನಂತರ ನಿಮ್ಮ ಯಾವುದೇ ಅಧ್ಯಕ್ಷರು ಅದರ ಬಗ್ಗೆ ಮಾತನಾಡಲಿಲ್ಲ…”ಎಂದೂ ಬರೆಯಲಾಗಿದೆ.
ಒಸಾಮಾ ಪತ್ರದಲ್ಲಿ “ಪ್ಯಾಲೆಸ್ತೀನ್ ಜನರು ಸೆರೆಯಾಳುಗಳಾಗಿ ಕಾಣುವುದಿಲ್ಲ ಏಕೆಂದರೆ ನಾವು ಅದರ ಸಂಕೋಲೆಗಳನ್ನು ಮುರಿಯಲು ಪ್ರಯತ್ನಿಸುತ್ತೇವೆ ಮತ್ತು ಯುನೈಟೆಡ್ ಸ್ಟೇಟ್ಸ್ ಕ್ರೈಸ್ತರ ರಕ್ತದಿಂದ ಅದರ ದುರಹಂಕಾರವನ್ನು ಬೆಲೆ ತೆರಬೇಕಾಗುತ್ತದೆ” ಎಂದು ಎಚ್ಚರಿಸಿರುವುದು ಎದ್ದು ಕಂಡಿದೆ.
ದಿ ಗಾರ್ಡಿಯನ್ ಪತ್ರಿಕೆಯು 2002 ರಿಂದ ತನ್ನ ವೆಬ್‌ಸೈಟ್‌ನಲ್ಲಿ ಒಸಾಮಾ ಬಿನ್ ಲಾಡೆನ್ ಪತ್ರವನ್ನು ಹೊಂದಿತ್ತು, ಆದರೆ ಈಗ ವಿಡಿಯೋಗಳು ವೈರಲ್ ಆದ ನಂತರ ಅದನ್ನು ತೆಗೆದುಹಾಕಿದೆ.ಡಾಕ್ಯುಮೆಂಟ್ ಅನ್ನು ತೆಗೆದುಹಾಕಲು ಯಾವುದೇ ಕಾರಣವನ್ನು ಅದು ಒದಗಿಸಿಲ್ಲ. ಪತ್ರವನ್ನು ತೆಗೆದಿರುವುದು ಪತ್ರದ ಕುರಿತಾದ ವಿಡಿಯೋಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೆಚ್ಚಿಸಿದೆ ಎಂದು ಹೇಳಲಾಗಿದೆ.
ಗಾರ್ಡಿಯನ್ ಸಂದೇಶದಲ್ಲಿ “ಈ ಪುಟವು ಈ ಹಿಂದೆ 24 ನವೆಂಬರ್ 2002 ರಂದು ಅಬ್ಸರ್ವರ್‌ನಲ್ಲಿ ವರದಿ ಮಾಡಿದಂತೆ, ಅನುವಾದದಲ್ಲಿ, ಒಸಾಮಾ ಬಿನ್ ಲಾಡೆನ್ ಅವರ “ಅಮೆರಿಕನ್ ಜನರಿಗೆ ಪತ್ರ” ದ ಪೂರ್ಣ ಪಠ್ಯವನ್ನು ಒಳಗೊಂಡಿರುವ ಡಾಕ್ಯುಮೆಂಟ್ ಅನ್ನು ಪ್ರದರ್ಶಿಸಿದೆ.” ಎಂದು ಹೇಳಿದೆ.
ಟಿಕ್‌ಟಾಕ್ ಟ್ರೆಂಡ್‌ನ ಬಗ್ಗೆ ತನಿಖೆ ನಡೆಸಬೇಕೆಂದು ಹಲವರು ಒತ್ತಾಯಿಸಿದ್ದು, ಇದು ಉದ್ದೇಶಪೂರ್ವಕ ಪ್ರವೃತ್ತಿಯಿಂದ ಕೂಡಿದ ಅಭಿಯಾನವಾಗಿ ಪ್ರಾರಂಭವಾಯಿತು” ಎಂದು ಎಕ್ಸ್ ಬಳಕೆದಾರರು ಬರೆದಿದ್ದಾರೆ.
ಮೇ 2011 ರಲ್ಲಿ ಪಾಕಿಸ್ಥಾನದ ಅಬೋಟಾಬಾದ್‌ನಲ್ಲಿರುವ ಕಟ್ಟಡದ ಮೇಲೆ ರಾತ್ರಿ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಯುಎಸ್ ಸೈನ್ಯದ ಸೀಲ್ ತಂಡವ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆಗೈದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.