Sania-Shoaib .. ಪ್ರೇಮ್‌ ಕಹಾನಿಯಿಂದ ಸದ್ದು ಮಾಡಿದ ಇಂಡೋ – ಪಾಕ್‌ ಸೆಲೆಬ್ರಿಟಿಗಳಿವರು


ಸುಹಾನ್ ಶೇಕ್, Jan 20, 2024, 4:14 PM IST

11

ಮುಂಬಯಿ: ಭಾರತದ ಮಾಜಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಹಾಗೂ ಶೋಯೆಬ್‌ ಮಲಿಕ್‌ ಅವರ ದಾಂಪತ್ಯ ಜೀವನ ಶುರುವಾದಾಗ ಎಷ್ಟು ಸದ್ದು ಮಾಡಿತ್ತೋ, ಸಂಬಂಧ ಅಂತ್ಯಗೊಂಡಿರುವ ಘಳಿಗೆಯಲ್ಲೂ ಅಷ್ಟೇ ಸುದ್ದಿಯಾಗಿದೆ.

ಶೋಯೆಬ್‌ ಮಲಿಕ್‌ ಪಾಕಿಸ್ತಾನ ಖ್ಯಾತ ನಟಿ ಸನಾ ಜಾವೇದ್‌ ಅವರನ್ನು ವಿವಾಹವಾಗುವ ಮೂಲಕ ಸಾನಿಯಾ ಮಿರ್ಜಾ ಅವರೊಂದಿಗಿನ ಸಂಬಂಧವನ್ನು ಕೊನೆಯಾಗಿಸಿದ್ದಾರೆ. ಆ ಮೂಲಕ ಗಡಿದಾಟಿದ ಪ್ರೇಮಯಾನದ ಕಥೆ ದಿಕ್ಕುದೆಸೆಯಿಲ್ಲದ ಹಾದಿಯಂತೆ ಕೊನೆಯಾಗಿದೆ.

ಭಾರತದ ಸೆಲೆಬ್ರಿಟಿಗಳು ಹಾಗೂ ಪಾಕಿಸ್ತಾನದ ಸೆಲೆಬ್ರಿಟಿಗಳ ಪ್ರೇಮಕಥೆ ಹೊಸತಲ್ಲ. ಪರಸ್ಪರ ಪ್ರೀತಿಸಿ ಆ ಬಳಿಕ ದೂರವಾದ ಖ್ಯಾತ ಸೆಲೆಬ್ರಿಟಿಗಳಿವರು..

ಸಾನಿಯಾ ಮಿರ್ಜಾ – ಶೋಯೆಬ್‌ ಮಲಿಕ್:‌ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್‌ ಮಲಿಕ್‌ – ಭಾರತದ ಟೆನ್ನಿಸ್‌ ತಾರೆ ಅವರಿಬ್ಬರ ಪ್ರೇಮಕಥೆ ಶುರುವಾಗುವುದು ರೆಸ್ಟೋರೆಂಟ್‌ ವೊಂದರಲ್ಲಿ ಭೇಟಿಯ ಬಳಿಕ. ಮೊದಲ ಭೇಟಿಯ ಬಳಿಕ ಆತ್ಮೀಯತೆ ಬೆಳೆದು ಸ್ನೇಹ ಪ್ರೀತಿಗೆ ತಿರುಗಿತ್ತು. 2010  ಏಪ್ರಿಲ್‌ 12 ರಂದು ಇಬ್ಬರು ವಿವಾಹವಾಗಿತ್ತು. ದೊಡ್ಡ ಸುದ್ದಿಯಾಗಿತ್ತು. 2018 ಅಕ್ಟೋಬರ್‌ 30 ರಂದು ದಂಪತಿಗೆ ಇಜಾನ್‌ ಎನ್ನುವ ಗಂಡು ಮಗು ಜನಿಸಿತು. ಇದಾದ ಕೆಲ ಸಮಯದ ಬಳಿಕ ಇಬ್ಬರ ದಾಂಪತ್ಯ ಜೀವನದಲ್ಲಿ  ಮನಸ್ತಾಪ ಉಂಟಾಗಿತ್ತು. ಬಹಿರಂಗವಾಗಿ ಅದನ್ನು ಹೇಳದೆ ಇದ್ದರೂ, ಇಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮನಸ್ತಾಪದ ವಿಚಾರಗಳಿಗೆ ಸಂಬಂಧಪಟ್ಟ ಪೋಸ್ಟ್‌ ಗಳನ್ನು ಹಂಚಿಕೊಳ್ಳುತ್ತಿದ್ದರು.

ವಿಚ್ಚೇದನ ನೀಡುವ ವಿಚಾರ ಬಹಿರಂಗಪಡಿಸದೆ, ಜ.20 ರಂದು ಶೋಯೆಬ್‌ ಮಲಿಕ್‌ ಪಾಕಿಸ್ತಾನದ ನಟಿ ಸನಾ ಜಾವೇದ್‌ ಅವರನ್ನು ವಿವಾಹವಾಗಿದ್ದಾರೆ.

ಸಲ್ಮಾನ್ ಖಾನ್ – ಸೋಮಿ ಅಲಿ:  ಖ್ಯಾತ ನಟ ಸಲ್ಮಾನ್‌ ಖಾನ್‌ ಅವರಿಗೆ ಎಲ್ಲೆಡೆಯಿಂದ ದೊಡ್ಡಮಟ್ಟದ ಅಭಿಮಾನಿಗಳ ವಲಯವಿದೆ. ಪಾಕ್‌ ಮೂಲದ ಸೋಮಿ ಅಲಿ ಅವರಿಗೆ ಸಲ್ಮಾನ್‌ ಅವರ ಮೇಲೆ ಕ್ರಶ್‌ ಇತ್ತು. ಇದೇ ಕಾರಣದಿಂದ ಪಾಕ್‌ ನಿಂದ ಭಾರತಕ್ಕೆ ಬಂದಿದ್ದ ಸೋಮಿ ಅಲಿ  1991 ರಿಂದ 1998 ಹಿಂದಿಯ 10 ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಸೋಮಿ ಎಂಟು ವರ್ಷಗಳ ಕಾಲ ಸಲ್ಮಾನ್ ಜೊತೆ ಸಂಬಂಧ ರಿಲೇಷನ್‌ ಶಿಪ್‌ನಲ್ಲಿದ್ದರು. ಆ ಬಳಿಕ ಸಲ್ಮಾನ್‌ ಖಾನ್‌ ಐಶ್ವರ್ಯಾ ರೈಯೊಂದಿಗೆ ಡೇಟಿಂಗ್‌ ಮಾಡಲು ಶುರು ಮಾಡಿದಾಗ ಸೋಮಿ – ಸಲ್ಮಾನ್‌ ಸಂಬಂಧ ಮುರಿದು ಬಿತ್ತು. ಸೋಮಿ ಅವರೇ ಈ ವಿಚಾರವನ್ನು ಅಧಿಕೃತವಾಗಿ ಹಲವು ಸಂದರ್ಶನಗಳಲ್ಲಿ ಬಹಿರಂಗಪಡಿಸಿದ್ದರು.

ವಾಸಿಂ ಅಕ್ರಮ್ – ಸುಶ್ಮಿತಾ ಸೇನ್:  ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್‌ ಕೂಡ ಭಾರತದ ನಟಿಯ ಅಂದಕ್ಕೆ ಮನಸೋತಿದ್ದರು. ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರನ್ನು 2008 ರಲ್ಲಿ ʼಏಕ್ ಕಿಲಾಡಿ ಏಕ್ ಹಸೀನಾʼ ಎನ್ನುವ ಕಾರ್ಯಕ್ರಮದಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಆ ಸಮಯದಲ್ಲಿ ವಾಸಿಮ್ ಹುಮಾಳನ್ನು ಮದುವೆಯಾಗಿದ್ದರು. ಆದರೆ 2009 ರಲ್ಲಿ ಆಕೆಯ ನಿಧನದ ನಂತರ ಅವನು ಸುಶ್ಮಿತಾ ಅವರೊಂದಿಗೆ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಇಬ್ಬರ ಆತ್ಮೀಯತೆ ವಿವಾಹದ ಯೋಚನೆವರೆಗೂ ಹೋಗಿತ್ತು ಎಂದು ವರದಿಯಾಗಿತ್ತು. ಆದರೆ ಅದ್ಯಾಗ್ಯೋ ಇಬ್ಬರು ಪರಸ್ಪರ ದೂರವಾದರು.

ಇಮ್ರಾನ್ ಖಾನ್ – ಜೀನತ್ ಅಮಾನ್ : ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಆ ಕಾಲದ ಹ್ಯಾಂಡ್ಸಮ್‌ ಹಂಕ್‌ ಇಮ್ರಾನ್‌ ಖಾನ್‌ ಅವರ ಹೆಸರು ಅನೇಕ ನಟಿಯರೊಂದಿಗೆ ಡೇಟಿಂಗ್‌ ವಿಚಾರವಾಗಿ ಕೇಳಿಬಂದಿತ್ತು. ಇದರಲ್ಲಿ ಭಾರತದ ನಟಿ ಜೀನತ್‌ ಅಮಾನ್‌ ಕೂಡ ಇದ್ದರು. 1970 ರ ದಶಕದಲ್ಲಿ, ಪಾಕಿಸ್ತಾನಿ ಕ್ರಿಕೆಟ್ ತಂಡವು ಭಾರತದಲ್ಲಿ ಪ್ರವಾಸ ಮಾಡುತ್ತಿದ್ದಾಗ, ಇಮ್ರಾನ್ ಬಾಲಿವುಡ್ ನಟಿ ಜೀನತ್ ಅವರನ್ನು ಭೇಟಿಯಾಗಿದ್ದರು. ಆ ಬಳಿಕ ಇಬ್ಬರು ಡೇಟಿಂಗ್‌ ನಲ್ಲಿದ್ದರು. ಆದರೆ ಕೆಲ ಸಮಯದ ನಂತರ ಇಬ್ಬರು ದೂರವಾಗಿದ್ದರು.

ಜೀನತ್ ಮಝರ್ ಖಾನ್ ರನ್ನು ವಿವಾಹವಾದರು. ಇಮ್ರಾನ್ ಮೂರು ಬಾರಿ ವಿವಾಹವಾದರು. ವರ್ಷಗಳ ನಂತರ, ಇಮ್ರಾನ್ ಖಾನ್ ಅವರೊಂದಿಗಿನ ಸಂಬಂಧದ ಬಗ್ಗೆ ಜೀನತ್ ಅವರನ್ನು ಕೇಳಿದಾಗ, ಅವರು ಅದನ್ನು ಹಿಂದಿನ ವಿಷಯ ಎಂದು ಕರೆದರು.

ವೀಣಾ ಮಲಿಕ್ ಮತ್ತು ಅಶ್ಮಿತ್ ಪಟೇಲ್: ಹಿಂದಿ ಬಿಗ್‌ ಬಾಸ್‌ ಸೀಸನ್‌ 4 ಗೆ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದ ಪಾಕಿಸ್ತಾನಿ ನಟಿ ವೀಣಾ ಮಲಿಕ್‌ ಮನೆಯೊಳಗಿದ್ದ ಭಾರತ ಮೂಲದ ಅಶ್ಮಿತ್‌ ಪಟೇಲ್‌ ಅವರೊಂದಿಗೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದರು. ಇಬ್ಬರ ನಡುವಿನ ಪ್ರೀತಿ – ಪ್ರೇಮದ ಕೆಲ ಸನ್ನಿವೇಶಗಳು ಬಿಗ್‌ ಬಾಸ್‌ ಮನೆಯಲ್ಲಿ ಸದ್ದು ಮಾಡಿತ್ತು. ಆದರೆ ಕಾರ್ಯಕ್ರಮ ಮುಗಿದು ಮನೆಯಿಂದ ಹೊರಬಂದಾಗ ಇಬ್ಬರ ನಡುವಿನ ಅಂತರವೂ ಹೆಚ್ಚಾಯಿತು. ದಿನಕಳೆದಂತೆ ಇಬ್ಬರು ಬ್ರೇಕ್‌ ಅಪ್‌ ಮಾಡಿಕೊಂಡರು.

ಇಮ್ತಿಯಾಜ್ ಅಲಿ ಮತ್ತು ಇಮಾನ್ ಅಲಿ:  ಬಾಲಿವುಡ್‌ ನ ಖ್ಯಾತ ನಿರ್ದೇಶಕ ಇಮ್ತಿಯಾಜ್‌ ಅಲಿ 1995 ರಲ್ಲಿ ಪ್ರೀತಿ ಅಲಿ ಅವರನ್ನು ವಿವಾಹವಾದರು ಮತ್ತು ದಂಪತಿಗೆ ಇದಾ ಅಲಿ ಎಂಬ ಮಗು ಜನಿಸಿತು. ಆದರೆ 2012 ರಲ್ಲಿ ಕೆಲ ಭಿನ್ನಾಭಿಪ್ರಾಯಗಳಿಂದ ಇಮ್ತಿಯಾಜ್ ಮತ್ತು ಪ್ರೀತಿ 2012 ರಲ್ಲಿ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಿದರು.

ಇದಾದ ಬಳಿಕ ಇಮ್ತಿಯಾಜ್‌ ಅಲಿ ಪಾಕಿಸ್ತಾನ ನಟಿ ಇಮಾನ್‌ ಅಲಿಯೊಂದಿಗೆ ರಿಲೇಷನ್‌ ಶಿಪ್‌ ನಲ್ಲಿದ್ದರು. ʼರಾಕ್‌ಸ್ಟಾರ್ʼ ಬಿಡುಗಡೆಯ ಮೊದಲು ಅವರು ದೆಹಲಿಯ ನಿಜಾಮುದ್ದೀನ್ ದರ್ಗಾಕ್ಕೆ ಒಟ್ಟಿಗೆ ಭೇಟಿ ನೀಡಿದ್ದರು. ಆದಾಗ್ಯೂ ಎರಡು ವರ್ಷಗಳ ಪ್ರಣಯದ ನಂತರ ಇಮ್ತಿಯಾಜ್ ಮತ್ತು ಇಮಾನ್ ದೂರವಾದರು.

ರೀನಾ ರಾಯ್ ಮತ್ತು ಮೊಹ್ಸಿನ್ ಖಾನ್:  ಆ ಕಾಲದಲ್ಲಿ ಬಾಲಿವುಡ್‌ ನಲ್ಲಿ‌ ಮೋಡಿ ಮಾಡಿದ್ದ ಖ್ಯಾತ ನಟಿ ರೀನಾ ರಾಯ್ ಪಾಕಿಸ್ತಾನಿ ಕ್ರಿಕೆಟಿಗ ಮೊಹ್ಸಿನ್ ಖಾನ್ ಅವರನ್ನು ಪ್ರೀತಿಸುತ್ತಿದ್ದರು. ಸ್ವಲ್ಪ ಸಮಯದ ಡೇಟಿಂಗ್ ಬಳಿಕ ರೀನಾ ಮತ್ತು ಮೊಹ್ಸಿನ್ 1983 ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಅವರಿಗೆ ಸನಮ್ ಖಾನ್ ಎಂಬ ಮಗಳಿದ್ದಾಳೆ. ಮೊಹ್ಸಿನ್ ಅವರನ್ನು ಮದುವೆಯಾಗಿ ಬಾಲಿವುಡ್ ತೊರೆದಾಗ ರೀನಾ ವೃತ್ತಿಜೀವನದ ಉತ್ತುಂಗದಲ್ಲಿದ್ದರು.

ಮದುವೆ ಬಳಿಕ ಮೊಹ್ಸಿನ್‌ ಖಾನ್‌ ಕೂಡ ಬಾಲಿವುಡ್‌ ನಲ್ಲಿ ಕಾಣಿಸಿಕೊಂಡರು. ʼಸಾಥಿʼ ʼಬಟ್ವಾರʼದಂತಹ ಕೆಲವು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡರು. ಮೊಹ್ಸಿನ್ ಇಂಗ್ಲೆಂಡ್‌ನಲ್ಲಿ ನೆಲೆಸಲು ಬಯಸಿದ್ದರು. ಆದರೆ ರೀನಾ ಈ ಇದಕ್ಕೆ ವಿರುದ್ಧವಾಗಿದ್ದರು. ಇದು ಅವರ ನಡುವಿನ ಭಿನ್ನಾಭಿಪ್ರಾಯಗಳಿಗೆ ಕಾರಣವಾಯಿತು ಮತ್ತು 1990 ರ ದಶಕದಲ್ಲಿ ಇವರಿಬ್ಬರ ದಾಂಪತ್ಯ ಜೀವನ ಕೊನೆಗೊಂಡಿತು.

ಅಮೃತಾ ರಾವ್ ಮತ್ತು ಫರ್ಹಾನ್ ಸಯೀದ್: 2000 ರ ಇಸವಿಯಲ್ಲಿ ಬಾಲಿವುಡ್‌ ನಲ್ಲಿ ʼಇಷ್ಕ್ ವಿಷ್ಕ್ʼ, ʼವಿವಾಹʼ, ʼಮೈ ಹೂ ನಾʼ, ʼಜಾಲಿ ಎಲ್‌ಎಲ್‌ಬಿʼ.. ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದ ಅಮೃತಾ ಸಿಂಗ್‌  ಅವರು 2008 ರಲ್ಲಿ ಜಲ್ ಬ್ಯಾಂಡ್‌ನ ಪ್ರಮುಖ ಗಾಯಕ ಫರ್ಹಾನ್ ಸಯೀದ್ ಅವರನ್ನು ಭೇಟಿಯಾದರು. ಅಮೃತಾ ಅವರು ಫರ್ಹಾನ್‌ನನ್ನು ಮೊದಲ ಬಾರಿಗೆ ಭೇಟಿಯಾದಾಗ ಮ್ಯೂಸಿಕ್ ವಿಡಿಯೋ ಚಿತ್ರೀಕರಣದಲ್ಲಿ ತೊಡಗಿದ್ದರು. ಫರ್ಹಾನ್ ಮುಂಬೈಗೆ ಭೇಟಿ ನೀಡಿದಾಗಲೆಲ್ಲಾ ಇಬ್ಬರು ಆತ್ಮೀಯವಾಗಿ ಸಮಯವನ್ನು ಕಳೆಯುತ್ತಿದ್ದರು. ಆದರೆ ಕೆಲ ಸಮಯದ ಬಳಿಕ ಇಬ್ಬರು ಪರಸ್ಪರ ದೂರವಾದರು.

ಶೋಯೆಬ್ ಅಖ್ತರ್ ಮತ್ತು ಸೋನಾಲಿ ಬೇಂದ್ರೆ: ಶೋಯೆಬ್‌ ಅಖ್ತರ್‌ ಹಾಗೂ ನಟಿ ಸೋನಾಲಿ ಬೇಂದ್ರೆ ಅವರ ರಿಲೇಷನ್‌ ಶಿಪ್‌ ಒನ್‌ ಸೈಡ್‌ ಸ್ಟೋರಿ ಆಗಿತ್ತು.  ಸೋನಾಲಿ ಮೇಲೆ ಕ್ರಷ್‌ ಇರುವುದಾಗಿ ಶೋಯೆಬ್‌ ಬಹಿರಂಗವಾಗಿ ಹೇಳಿದ್ದರು. ಅವಳಿಗಾಗಿ ತಾನು ಏನು ಬೇಕಾದರೂ ಮಾಡುತ್ತೇನೆ ಎಂದು ಹೇಳಿದ್ದರು. ಅವಳು ನನ್ನ ಪ್ರಪೋಷಲ್‌ ನ್ನು ಒಪ್ಪದಿದ್ದರೆ ನಾನು ಆಕೆಯನ್ನು ಕಿಡ್ನ್ಯಾಪ್ ಮಾಡುತ್ತೇನೆ ಎಂದು ಶೋಯೆಬ್‌ ಹೇಳಿದ್ದರು.

ಆದರೆ ಶೋಯೆಬ್‌ ಅವರ ಪ್ರೇಮ ನಿವೇದನೆಗೆ ಸೋನಾಲಿ ಅವರು ಪ್ರತಿಕ್ರಿಯೆಯನ್ನು ನೀಡಿಲ್ಲ. ಆದಾಗ್ಯೂ, ಸೋನಾಲಿ ನಿರ್ಮಾಪಕ ಗೋಲ್ಡಿ ಬಹ್ಲ್ ಅವರನ್ನು ವಿವಾಹವಾದರು. ಮತ್ತೊಂದೆಡೆ, ಶೋಯೆಬ್ ನಂತರ 2014 ರಲ್ಲಿ ರುಬಾಬ್ ಖಾನ್ ರನ್ನು ವಿವಾಹವಾದರು.

 ನೂರ್ ಬುಖಾರಿ ಮತ್ತು ವಿಕ್ರಮ್:  ಪಾಕಿಸ್ತಾನಿ ಸೆಲೆಬ್ರಿಟಿ ನೂರ್ ಬುಖಾರಿ ಅವರು ದುಬೈ ಮೂಲದ ಭಾರತೀಯ ಉದ್ಯಮಿ ವಿಕ್ರಮ್ ಅವರನ್ನು 4 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2004 ರಲ್ಲಿ ವಿವಾಹವಾದರು. ಆದಾಗ್ಯೂ, ಶೀಘ್ರದಲ್ಲೇ ದಂಪತಿಗಳು ಕೆಲವು ಭಿನ್ನಾಭಿಪ್ರಾಯಗಳಿಂದ ಬೇರ್ಪಟ್ಟರು. ಅವರ ದಾಂಪತ್ಯ ಜೀವನದ ಭಿನ್ನಾಭಿಪ್ರಾಯ ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರಸಾರವಾಗಿತ್ತು.

ನೂರ್ ನಂತರ ನಿರ್ದೇಶಕ ಫಾರೂಕ್ ಮೆಂಗಲ್ ಅವರನ್ನು ಮದುವೆಯಾದರು. ಈ ಸಂಬಂಧ ಕೇವಲ ನಾಲ್ಕು ತಿಂಗಳಲ್ಲಿ ವಿಚ್ಛೇದನ ಪಡೆಯುವಂತಾಯಿತು. ನೂರ್ ಅವರ ಮೂರನೇ ವಿವಾಹವು ಪಾಕಿಸ್ತಾನಿ ರಾಜಕಾರಣಿ ಔನ್ ಚೌಧರಿ ಅವರೊಂದಿಗೆ ಆಗಿತ್ತು. ಈ ಜೋಡಿಯು ಕೇವಲ ಐದು ತಿಂಗಳೊಳಗೆ ದೂರವಾಯಿತು. 2015 ರಲ್ಲಿ ನಟ ವಾಲಿ ಖಾನ್ ಅವರೊಂದಿಗೆ ನೂರ್ ವಿವಾಹವಾದರು. ಆದರೆ ಈ ಸಂಬಂಧ ಕೂಡ ವಿಚ್ಛೇದನ ಹಂತಕ್ಕೆ ಬಂದಿತು.

ಅಮೃತಾ ಅರೋರಾ ಮತ್ತು ಉಸ್ಮಾನ್ ಅಫ್ಜಾಲ್:

ಬಾಲಿವುಡ್ ನಟಿ ಅಮೃತಾ ಅರೋರಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಉಸ್ಮಾನ್ ಅಫ್ಜಾಲ್ ಪರಸ್ಪರ ಗಂಭೀರ ಸಂಬಂಧ ಹೊಂದಿದ್ದರು. ಈ ಜೋಡಿ ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಇಬ್ಬರೂ ತಮ್ಮ ಸಂಬಂಧವನ್ನು ಎಂದಿಗೂ ಮರೆಮಾಚಲಿಲ್ಲ ಮತ್ತು ಒಬ್ಬರಿಗೊಬ್ಬರು ತಮ್ಮ ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದರು. ಆದರೆ ಅವರ ಪ್ರೀತಿ ಹೆಚ್ಚು ಸಮಯ ಉಳಿಯಲಿಲ್ಲ. ಇಬ್ಬರು ಪರಸ್ಪರ ದೂರವಾದರು. ಅಮೃತಾ ನಂತರ 2009 ರಲ್ಲಿ ಉದ್ಯಮಿ ಶಕೀಲ್ ಲಡಾಕ್ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದಾರೆ.

ಜಹೀರ್ ಅಬ್ಬಾಸ್ ಕಿರ್ಮಾನಿ ಮತ್ತು ರೀಟಾ ಲೂತ್ರಾ: ಪಾಕ್‌ ಮಾಜಿ ಕ್ರಿಕೆಟಿಗ್‌ ಜಹೀರ್‌ ಅಬ್ಬಾಸ್‌ ಮೊದಲ ಬಾರಿ ಭಾರತ ಮೂಲದ ರೀಟಾ ಲೂತ್ರಾ ಅವರನ್ನು ಇಂಗ್ಲೆಂಡ್‌ ನಲ್ಲಿ ಭೇಟಿಯಾದರು. ಕೆಲ ಸಮಯ ಜೊತೆಯಾಗಿದ್ದ ಅವರು, ಜಹೀರ್ ರೀಟಾಳನ್ನು ವಿವಾಹವಾದರು. ಆ ಬಳಿಕ ರೀಟಾ ಇಸ್ಲಾಂಗೆ ಮತಾಂತರಗೊಂಡು, ತನ್ನ ಹೆಸರನ್ನು ಸಮೀನಾ ಅಬ್ಬಾಸ್ ಎಂದು ಬದಲಾಯಿಸಿಕೊಂಡರು.

ಸೋನ್ಯಾ ಜೆಹಾನ್ ಮತ್ತು ವಿವೇಕ್ ನಾರಾಯಣ್ : 

ಸೋನ್ಯಾ ಜೆಹಾನ್ ಎಂದು ಕರೆಯಲ್ಪಡುವ ಪಾಕಿಸ್ತಾನಿ ನಟಿ ಸೋನ್ಯಾ ರಿಜ್ವಿ ಪ್ರಸಿದ್ಧ ಗಾಯಕಿ ನೂರ್ ಜೆಹಾನ್ ಅವರ ಮೊಮ್ಮಗಳು. ಶಾರುಖ್ ಖಾನ್ ಅಭಿನಯದ ʼಮೈ ನೇಮ್ ಈಸ್ ಖಾನ್ʼ ಎಂಬ ಭಾರತೀಯ ಚಿತ್ರದಲ್ಲೂ ಆಕೆ ಕಾಣಿಸಿಕೊಂಡಿದ್ದಾಳೆ. ಬಹುಕಾಂತೀಯ ನಟಿ ಭಾರತೀಯ ಬ್ಯಾಂಕರ್ ವಿವೇಕ್ ನಾರಾಯಣ್ ಅವರನ್ನು ಪ್ರೀತಿಸಿ, 2005 ರಲ್ಲಿ ವಿವಾಹವಾದರು. ಮೊದಲಿಗೆ ಇಬ್ಬರ ಪ್ರೀತಿಗೆ ಮನೆಯವರ ವಿರೋಧವಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸೋನ್ಯಾ ಮತ್ತು ಅವರ ಪತಿ ವಿವೇಕ್ ಕ್ಲಬ್ ಮತ್ತು ಕೆಲವು ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ.

ಫೈಸಲ್ ಖುರೇಷಿ ಮತ್ತು ನೋನಿತಾ ಲಾಲ್:  ಪಾಕಿಸ್ತಾನದ ಗೋಲ್ಡ್‌ ಚಾಂಪಿಯನ್, ಗಾಲ್ಫ್ ಆಟಗಾರ ಫೈಸಲ್ ಖುರೇಷಿ ಭಾರತೀಯ ಗಾಲ್ಫ್ ಆಟಗಾರ್ತಿ ನೋನಿತಾ ಲಾಲ್ ಅವರನ್ನು ಪ್ರೀತಿಸುತ್ತಿದ್ದರು. ಇಸ್ಲಾಮಾಬಾದ್‌ನ ಗಾಲ್ಫ್ ಕೋರ್ಸ್‌ನಲ್ಲಿ ಇಬ್ಬರು ಮೊದಲ ಬಾರಿ ಭೇಟಿಯಾದರು. ಭೇಟಿಯ ಒಂದು ತಿಂಗಳ ನಂತರ, ಫೈಸಲ್ ಪ್ರೇಮ ನಿವೇದನೆಯನ್ನು ಮಾಡಿದರು. ಸ್ವಲ್ಪ ಸಮಯದ ನಂತರ ನೋನಿತಾ ಪ್ರೇಮ ನಿವೇದನೆಯನ್ನು ಒಪ್ಪಿದರು. ಆ ನಂತರ ಇಬ್ಬರು ವಿವಾಹವಾದರು.

ಇಮ್ರಾನ್ ಖಾನ್ ಮತ್ತು ರೇಖಾ: ಪಾಕ್‌ ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್ ಅವರು ಆ ಕಾಲದ ಬಾಲಿವುಡ್‌ ಬ್ಯೂಟಿ ರೇಖಾ ಅವರೊಂದಿಗೆ ರಿಲೇಷನ್‌ ಶಿಪ್‌ ನಲ್ಲಿದ್ದರು ಎನ್ನುವ ವಿಚಾರ ಅಂದು ಸದ್ದು ಮಾಡಿತ್ತು. ಎಲ್ಲಿಯವರೆಗೆ ಅಂದರೆ 1985 ರ ಸುದ್ದಿ ಪತ್ರಿಕೆಯಲ್ಲಿ,ಇಮ್ರಾನ್ ಖಾನ್ ರೇಖಾ ಅವರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ವರದಿಯೊಂದು ಮುದ್ರಣಗೊಂಡಿತ್ತು.

ಇಮ್ರಾನ್ ಮುಂಬೈನಲ್ಲಿ ರೇಖಾ ಅವರೊಂದಿಗೆ ಒಂದು ತಿಂಗಳ ಕಾಲ ಆತ್ಮೀಯವಾಗಿ ಸಮಯವನ್ನು ಕಳೆದಿದ್ದರು. ಇಬ್ಬರೂ ಹೆಚ್ಚಾಗಿ ಬೀಚ್‌ಗಳ ಬಳಿ ಕಾಣಿಸಿಕೊಂಡಿದ್ದರು ಎಂದು ಅದೇ ವರದಿ ಬಹಿರಂಗಪಡಿಸಿದೆತ್ತು. ರೇಖಾ ಅವರ ತಾಯಿ ಕೂಡ ಅವರ ಸಂಬಂಧದಿಂದ ತುಂಬಾ ಸಂತೋಷಪಟ್ಟಿದ್ದು. ಆದಾಗ್ಯೂ, ಇಬ್ಬರೂ ತಮ್ಮ ಸಂಬಂಧವನ್ನು ಮದುವೆಯವರೆಗೆ ಮುಂದುವರೆಸಲಿಲ್ಲ.

– ಸುಹಾನ್‌ ಶೇಕ್

ಟಾಪ್ ನ್ಯೂಸ್

14

ಸಾಕಿದ ನಾಯಿಗಾಗಿ ಬಾಯ್‌ ಫ್ರೆಂಡ್‌ ಜತೆ ಬ್ರೇಕಪ್‌ ಮಾಡಿಕೊಂಡ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ

ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ಮದುಮಗ… ನನಗೆ ಈ ಹುಡುಗ ಬೇಡವೆಂದ ಮದುಮಗಳು

Wedding: ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ವರ… ನನಗೆ ಈ ಹುಡುಗ ಬೇಡವೆಂದ ವಧು

BBK11: ಅತಿರೇಕಕ್ಕೆ ತಿರುಗಿದ ಬಿಗ್‌ ಬಾಸ್‌ ಟಾಸ್ಕ್..‌ ರಜತ್‌ – ಮಂಜು ನಡುವೆ ಹೈಡ್ರಾಮಾ

BBK11: ಅತಿರೇಕಕ್ಕೆ ತಿರುಗಿದ ಬಿಗ್‌ ಬಾಸ್‌ ಟಾಸ್ಕ್..‌ ರಜತ್‌ – ಮಂಜು ನಡುವೆ ಹೈಡ್ರಾಮಾ

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

1-bntwl-1

Bantwala: ರೈಲಿನಿಂದ ಬಿದ್ದು ವ್ಯಕ್ತಿ ಸಾವು

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bg

Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ

From 5 Rs Concert to 5 Grammys…: Tabla Ustad Zakir Hussain

Zakir Hussain: ‌5 ರೂ ಕಾನ್ಸರ್ಟ್‌ ನಿಂದ 5 ಗ್ರ್ಯಾಮಿಯವರೆಗೆ…: ತಬಲಾ ಉಸ್ತಾದ್‌ ನಾದಮಯ ಪಯಣ

Benjamin Joby: “ಬೇರೆಯವರ ಯಶಸ್ಸು ನೋಡಿ ಅಳಬೇಡ..” ವೈರಲ್‌ ಆಗುತ್ತಿರುವ ಈ ಬಾಲಕ ಯಾರು?

Benjamin Joby: “ಬೇರೆಯವರ ಯಶಸ್ಸು ನೋಡಿ ಅಳಬೇಡ..” ವೈರಲ್‌ ಆಗುತ್ತಿರುವ ಈ ಬಾಲಕ ಯಾರು?

Virat Kohli- Rohit Sharma; Who is better as a captain?

Captains’ clash: ವಿರಾಟ್‌ ಕೊಹ್ಲಿ- ರೋಹಿತ್‌ ಶರ್ಮಾ; ನಾಯಕನಾಗಿ ಯಾರು ಉತ್ತಮರು?

7-ghee

Winter Skin Care: ಚಳಿಗಾಲದ ತ್ವಚೆಗಾಗಿ ತುಪ್ಪದ ಸೌಂದರ್ಯ ಪ್ರಯೋಜನಗಳು

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

14

ಸಾಕಿದ ನಾಯಿಗಾಗಿ ಬಾಯ್‌ ಫ್ರೆಂಡ್‌ ಜತೆ ಬ್ರೇಕಪ್‌ ಮಾಡಿಕೊಂಡ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ

8

Udupi: ಅಂಬಲಪಾಡಿ ಓವರ್‌ಪಾಸ್‌ ಕಾಮಗಾರಿ ಆರಂಭ

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ಮದುಮಗ… ನನಗೆ ಈ ಹುಡುಗ ಬೇಡವೆಂದ ಮದುಮಗಳು

Wedding: ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ವರ… ನನಗೆ ಈ ಹುಡುಗ ಬೇಡವೆಂದ ವಧು

7(1

Kota: ಬ್ಲಾಕ್‌ ಲಿಸ್ಟ್‌ನಿಂದ ಅಪಾಯಕಾರಿ ಸ್ಥಳಗಳೇ ಔಟ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.