ಗೆಜೆಟ್ ಯುಗದಲ್ಲಿ ನೆಮ್ಮದಿಯ ಹುಡುಕಾಟ


Team Udayavani, Feb 25, 2022, 3:47 PM IST

web exlusive

ಮೊಬೈಲ್ ಗಳು ಜಗತ್ತನ್ನು ನಿಯಂತ್ರಿಸಲು ಆರಂಭಿಸಿದ ನಂತರ ದಿನಕ್ಕೊಂದರಂತೆ ವಿಡಿಯೋ ಗೇಮ್ ಗಳು ಸೃಷ್ಟಿಯಾಗುತ್ತಿದೆ. ಇಂದಿನ ಗೆಜೆಟ್ ಯುಗದಲ್ಲಿ ವಿರಾಮದ ಅವಧಿಯನ್ನು ಕಳೆಯಲು ಮತ್ತು ಮಾನಸಿಕ ನೆಮ್ಮದಿಗಾಗಿ ಎಷ್ಟೋ ಜನ ವಿಡಿಯೋ ಗೇಮ್ಗಳನ್ನೇ ನೆಚ್ಚಿಕೊಂಡವರಿದ್ದಾರೆ. ಎಷ್ಟೋ ಜನ ಇವುಗಳ ನಶೆಯನ್ನು ಏರಿಸಿಕೊಂಡವರಿದ್ದಾರೆ.

ಪ್ರಸ್ತುತ ದಿನದಲ್ಲಿ ಪ್ರತಿಯೊಬ್ಬರೂ ವರ್ಡಲ್ ಎಂಬ ಹೊಸ ಆಟದತ್ತ ಮುಖ ಮಾಡುತ್ತಿದ್ದಾರೆ. ಈ ಇಂಟರ್ನೆಟ್ ಆಟದಲ್ಲಿ, ಆಟಗಾರರು ಹಸಿರು, ಹಳದಿ, ಕಪ್ಪು ಮತ್ತು ಬಿಳಿ ಬಾಕ್ಸ್‌ಗಳ ಸಾಲಿನಲ್ಲಿ ಐದು-ಅಕ್ಷರದ ಪದವನ್ನು ಊಹಿಸಬೇಕು. ಒಂದು ರೀತಿಯಲ್ಲಿ ಇದು ಸುಡೋಕನ್ನು ಓಲುವ ಆಟವಾಗಿದೆ. ಹದಿಹರೆಯದ ಮಕ್ಕಳನ್ನು ಸುಲಭವಾಗಿ ಮೋಸಗೊಳಿಸುವ ಮತ್ತು ಮಧ್ಯವಯಸ್ಕರು ಅರ್ಥೈಸಿಕೊಳ್ಳಲು ಸಾಕಷ್ಟು ಕಠಿಣವಾಗಿದೆ ಈ ಮಾಯ ಆಟಿಕೆ.

ನಮಗೆಲ್ಲ ತಿಳಿದಿರುವಂತೆ, ಯಾವುದೇ ವಸ್ತುವಿಗೆ ಬೇಡಿಕೆಗಳು ಹೆಚ್ಚಾದ ಹಾಗೆ ಬೆಲೆಯು ಹೆಚ್ಚುತ್ತದೆ. ಇದನ್ನು ದಾಳವಾಗಿಸಿಕೊಂಡಿರುವ ವರ್ಡಲ್ ಡೆವಲಪರ್ ದಿನಕ್ಕೆ ಕೇವಲ ಒಂದು ಆಟವನ್ನು ಬಿಡುಗಡೆ ಮಾಡುತ್ತಾನೆ. ಪ್ರೇಕ್ಷಕರು ಅದನ್ನು ಬಿಡಿಸಲು ಕಾತರದಿಂದ ಕಾಯುತ್ತಿರುತ್ತಾರೆ.

ಜಗತ್ತಿನ ಜನ ಒಂದು ರೀತಿಯ ಖಿನ್ನತೆಗೆ, ಏಕಾಂಗಿತನಕ್ಕೆ ಒಳಗಾಗದೆ ಇರುವುತ್ತಿದ್ದರೆ ವರ್ಡಲ್ ಅಂತಹ ಹಿಟ್ ಕಾಣಬಹುದಿತ್ತೇ ? ಬಹುಷಃ ಖಂಡಿತ ಇಲ್ಲ. ಇತ್ತೀಚೆಗೆ, ನಮ್ಮೆಲ್ಲರ ಜೀವನವು ಲಾಕ್ಡೌನ್ ಮತ್ತು ಕರ್ಫ್ಯೂ ಗಳ ಮೂಲಕ ಒಂದು ಮಾನಸಿಕ ಅಸಮತೋಲನಕ್ಕೆ ಒಳಗಾಗಿತ್ತು. ಮನೋರಂಜನೆ ನೀಡುವ ಗ್ಯಾಜೆಟ್‌ಗಳು ಮತ್ತು ಗುರಿಯಿಲ್ಲದ ಸ್ಕ್ರೋಲಿಂಗ್ ಆಟಗಳನ್ನು ಅವಲಂಬಿಸುವಂತೆ ಮಾಡಿತು. ಮಕ್ಕಳು ಹೆಚ್ಚಾಗಿ ಆಟಗಳನ್ನು ಇಷ್ಟಪಡುತ್ತಾರೆ ಎಂಬುವುದು ಎಲ್ಲರೂ ಒಪ್ಪಿಕೊಳ್ಳದ ಸಂಗತಿಯ ಆದರೆ ಇದೆ ಆಟಗಳು ವಯಸ್ಕರಿಗೆ ವಿಭಿನ್ನ ಪರಿಸ್ಥಿತಿಗಳಿಂದ ತಮ್ಮನ್ನು ಕಾಪಾಡಿಕೊಳ್ಳಲು ನೆರವಾದವು.

ಪದಬಂದಗಳನ್ನು ಬಿಡಿಸಲು ವ್ಯಯಿಸುವ ಪರಿಶ್ರಮ ಮತ್ತು ಅಕ್ಷರಗಳನ್ನು ಹಸಿರು ಬಣ್ಣಕ್ಕೆ ತಿರುಗಿಸುವುದನ್ನು ನೋಡುವುದು ಯಾವುದೇ ವಯಸ್ಸಿನವರಿಗೂ ಒಂದು ರೀತಿಯ ಖುಷಿಯನ್ನು ನೀಡುತ್ತದೆ. ಟೆಡಿಯಮ್ ಅನ್ನು ಅಗಾಧವಾಗಿ ಭಾವಿಸುತ್ತಿದ್ದ ದಿನಗಳಲ್ಲಿ, ಈ ಸಣ್ಣ ವಿಜಯಗಳು ನಮಗೆ ಸಂತೃಪ್ತಿಯನ್ನು ಒದಗಿಸುತ್ತದೆ.
ಜೀವನೋತ್ಸಾಹ ಎನ್ನುವುದು ಯುವಜನತೆಯ ವಿಶೇಷ ಗುಣ ಆದರೆ ವಯಸ್ಸಾದವರು ಉತ್ಸುಕರಾಗಲು ಏನಾನ್ನಾದರೂ ಹುಡುಕುತ್ತಿರುತ್ತಾರೆ. ಪ್ರಸ್ತುತ ದಿನದಲ್ಲಿ ಎಲ್ಲ ವಯಸಿನವರು ಮಾನಸಿಕ ನೆಮ್ಮದಿಗಾಗಿ ಹೊಸ ಹೊಸ ದಾರಿಯನ್ನು ಹುಡುಕುತ್ತಿದ್ದಾರೆ. ಮನೆಯೊಳಗೇ ಮನಸುಗಳು ಬಂಧಿಯಾದ ನಂತರ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಯಿತು. ಮಾನಸಿಕ ನೆಮ್ಮದಿಯಿಲ್ಲದೆ ಜೀವವೆ ಬೇಡವೆನಿಸುವ ಮಟ್ಟಿಗೆ ಹಲವು ಜನ ತಲುಪಿದ್ದರು.
ಜಗತ್ತಿನ ಪ್ರಸಿದ್ಧ ಟೆನ್ನಿಸ್ ಆಟಗಾರ ರಾಫೆಲ್ ನಡಾಲ್ ಅವರು ಆಸ್ಟ್ರೇಲಿಯಾ ಓಪನ್ ನ 5 ಸೆಟ್ ನಲ್ಲಿ ತೋರಿದ ಕ್ರೀಡಾಚಾತುರ್ಯ ಎಲ್ಲರನ್ನು ಮಂತ್ರಮುಗ್ದಗೊಳಿಸಿತ್ತು. ಅಂತಹ ಅಭೂತಪೂರ್ವ ಗೆಲುವಿನ ಅದೆಷ್ಟೋ ದಿನಗಳ ಪರಿಶ್ರಮವಿತ್ತು. ಅಂತಹ ದೊಡ್ಡ ಗೆಲುವುಗಳು ಅಪರೂಪ ಮತ್ತು ಅವುಗಳನ್ನು ಕೆಲವರು ಮಾತ್ರ ಸಾಧಿಸುತ್ತಾರೆ. ಆದರೂ, ನಮ್ಮೆಲ್ಲರ ಜೀವನದಲ್ಲಿ, ಪ್ರಯತ್ನಿಸಲು ಯೋಗ್ಯವಾದ ಅನೇಕ ಸಣ್ಣ ಮೈಲಿಗಲ್ಲುಗಳಿವೆ. ಇದು ನಡಾಲ್ ತರಹದ ರೋಚಕತೆಗಳನ್ನು ಮರುಸೃಷ್ಟಿಸಬಹುದು. ಆದರೆ ನಾವು ನಮ್ಮ ಸಾಮರ್ಥ್ಯವನ್ನು ಅಂದಾಜು ಮಾಡುವುದರಲ್ಲಿ ಸೋತಿದ್ದೇವೆ. ನಮ್ಮ ಗುರಿಯ ನಡುವೆ ಸಾಕಷ್ಟು ಅಡೆತಡೆಗಳಿವೆ.

ಮನೆಯೊಳಗೆ ಬಂಧಿಯಾಗಿರುವುದು ಮತ್ತು ಬೇಸರದ ಸನ್ನಿವೇಶಗಳು ನಿರ್ಮಾಣವಾದ ನಂತರ ನಮ್ಮಲ್ಲಿ ಹಲವಾರು ಹೊಸ ಹೊಸ ಹವ್ಯಾಸಗಳು ರೂಡಿಸಿಕೊಂಡಿದ್ದಾರೆ. ಈ ಎಲ್ಲ ಕಾರಣಕ್ಕಾಗಿ ಕೊರೊನ ಪರಿಸ್ಥಿತಿಗೆ ಧನ್ಯವಾದಗಳು. ಖಾಸಗಿ ಸಂಸ್ಥೆಯೊಂದು 2020 ಮತ್ತು 21 ರಲ್ಲಿ ಗೆಜೆಟ್ ಮಾರಾಟದಲ್ಲಿ 21% ಜಿಗಿತವನ್ನು ವರದಿ ಮಾಡಿದೆ, ಏಕೆಂದರೆ ಜನರು ತಮ್ಮ ಸಮಯವನ್ನು ಕಳೆಯಲು ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ.
ಹೀಗೆ ಗೆಜೆಟ್ ಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಒತ್ತಡದ ಪರಿಸ್ಥಿತಿಯಲ್ಲಿ ಒಂದಿಷ್ಟು ರಿಲೀಫ್ ನೀಡಲು ಹೊಸ ತಂತ್ರಜ್ಞಾನಗಳು ಮೂಡಿಬರುತ್ತಿವೆ. ಆಧುನಿಕ ಜಗತ್ತಿನಲ್ಲಿ ನಮ್ಮ ಭಾವನೆಗಳೇ ದೊಡ್ಡ ದೊಡ್ಡ ಉದ್ಯಮದ ಮೂಲ ಸರಕು ಎಂಬುವುದು ಸತ್ಯ ಸಂಗತಿ.

– ಜಗದೀಶ್ ಬಳಂಜ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇಂದು ಕಿಂಗ್‌ ಸಾಮ್ರಾಜ್ಯದ ಕಥೆ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್‌ ಸಾಮ್ರಾಜ್ಯದ ಕಥೆ

palaniswami

AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.