ಮೇಲೆತ್ತುವ ಕೆಳ ಕ್ರಮಾಂಕ: ಟೆಸ್ಟ್ ತಂಡಕ್ಕೆ ಬಲ ತುಂಬುವ ಬಾಲಂಗೋಚಿಗಳು
ಮೊನ್ನೆಯಷ್ಟೇ ನಡೆದ ನಾಗ್ಪುರ ಟೆಸ್ಟ್ ಇದಕ್ಕೊಂದು ಉತ್ತಮ ಉದಾಹರಣೆ
ಕೀರ್ತನ್ ಶೆಟ್ಟಿ ಬೋಳ, Feb 16, 2023, 5:32 PM IST
ಟೀಂ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯುನ್ನತ ಮಟ್ಟದಲ್ಲಿದೆ. ಕೇವಲ ತವರಿನಲ್ಲಿ ಮಾತ್ರವಲ್ಲದೆ, ಏಷ್ಯಾದ ಹೊರಗೂ ತನ್ನ ಅಧಿಪತ್ಯ ಸಾಧಿಸುತ್ತಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾಗಳಲ್ಲೂ ಟೀಂ ಇಂಡಿಯಾ ಪ್ರಮುಖ ಗೆಲುವು ದಾಖಲಿಸಿದೆ. ತವರಿನಲ್ಲಂತೂ ಟೀಂ ಇಂಡಿಯಾವನ್ನು ಸೋಲಿಸುವುದು ಅಸಾಧ್ಯ ಎಂಬಂತಾಗಿದೆ. ಇದಕ್ಕೆ ಬದಲಾದ ಮನೋಸ್ಥಿತಿ, ವೇಗಿಗಳ ಪ್ರದರ್ಶನ ಸೇರಿದಂತೆ ಹಲವು ಕಾರಣಗಳ ನಡುವೆ ಹೆಚ್ಚಾಗಿ ಗುರುತಿಸದ ಅಂಶವೊಂದಿದೆ. ಅದುವೇ ಕೆಳ ಕ್ರಮಾಂಕದ ಬ್ಯಾಟರ್ ಗಳ ಕೊಡುಗೆ.
ಹೌದು, ಕೆಲ ವರ್ಷಗಳಿಂದ ಟೀಂ ಇಂಡಿಯಾದ ಕೆಳ ಕ್ರಮಾಂಕದ ಬ್ಯಾಟಿಂಗ್ ನಲ್ಲಿ ಗಮನಾರ್ಹ ಬದಲಾವಣೆಗಳು ನಡೆದಿದೆ. ಅದರಲ್ಲೂ ಭಾರತದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳ ತಂಡದಲ್ಲಿ 9-10ನೇ ಕ್ರಮಾಂಕದವರೆಗೂ ಸುಲಭವಾಗಿ ಬ್ಯಾಟ್ ಬೀಸುತ್ತಿದ್ದಾರೆ.
ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಈಗ ಕೇವಲ ಬೌಲರ್ ಗಳಾಗಿ ಉಳಿದಿಲ್ಲ. ಬದಲಾಗಿ ಕೆಲವು ಪಂದ್ಯಗಳಲ್ಲಂತೂ ಪ್ರಮುಖ ಬ್ಯಾಟರ್ ಗಳಿಗಿಂತಲೂ ಮುಖ್ಯ ಪಾತ್ರ ವಹಿಸುತ್ತಾರೆ. ಮೊನ್ನೆಯಷ್ಟೇ ನಡೆದ ನಾಗ್ಪುರ ಟೆಸ್ಟ್ ಇದಕ್ಕೊಂದು ಉತ್ತಮ ಉದಾಹರಣೆ.
ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಆಸೀಸ್ 177 ರನ್ ಮಾತ್ರ ಮಾಡಿತ್ತು. ಬ್ಯಾಟಿಂಗ್ ಮಾಡಿದ ಭಾರತವು ಒಂದು ಹಂತದಲ್ಲಿ 240 ರನ್ ಗೆ ಏಳು ವಿಕೆಟ್ ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಈ ಕಠಿಣ ಪಿಚ್ ನಲ್ಲಿ ಒಂದಾಗಿದ್ದು ಇಬ್ಬರು ಲೆಫ್ಟ್ ಹ್ಯಾಂಡರ್ ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್.
ಇಲ್ಲಿಂದ ಆಟ ಬೇರೆಯೇ ಹಂತಕ್ಕೆ ತಿರುಗಿತ್ತು. ಗುಜರಾತ್ ನ ಇವರಿಬ್ಬರು ಬೇರೆ ಯಾವುದೋ ಪಿಚ್ ಮೇಲೆ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬಂತೆ ಆಡಿದರು. ಬಳಿಕ ಅಕ್ಷರ್ ಜತೆ ಸೇರಿದ ಮೊಹಮ್ಮದ್ ಶಮಿ ಕೂಡಾ 37 ರನ್ ಮಾಡಿದರು. ಟೀಂ ಇಂಡಿಯಾ ಗಳಿಸಿದ್ದು 400 ರನ್.
ಅಕ್ಷರ್ ಮತ್ತು ಜಡೇಜಾ 88 ರನ್ ಜೊತೆಯಾಟವಾಡಿದ್ದರು. 2021 ರ ಆರಂಭದಿಂದಲೂ ಟೆಸ್ಟ್ ಕ್ರಿಕೆಟ್ ನಲ್ಲಿ ಏಳನೇ ಅಥವಾ ಅದಕ್ಕಿಂತ ಕೆಳಗಿನ ವಿಕೆಟ್ ಗೆ 50 ಅಥವಾ ಅದಕ್ಕಿಂತ ಹೆಚ್ಚಿನ ರನ್ ಪೇರಿಸಿದ ಭಾರತದ 11 ನೇ ಜೊತೆಯಾಟವಾಗಿದೆ. ಅಕ್ಷರ್ ಮತ್ತು ಮೊಹಮ್ಮದ್ ಶಮಿ ನಂತರ ಒಂಬತ್ತನೇ ವಿಕೆಟ್‌ಗೆ 52 ರನ್ ಸೇರಿಸಿ 12 ನ ಜೊತೆಯಾಟವಾಡಿದರು.
ತವರಿನ ಟೆಸ್ಟ್ ಗಳಲ್ಲಿ ಭಾರತದ ಕೆಳ ಕ್ರಮಾಂಕದ ಜೊತೆಯಾಟಗಳ ಬಗ್ಗೆ ಅತ್ಯಂತ ಗಮನಾರ್ಹವಾದ ವಿಷಯವೆಂದರೆ ಪ್ರತಿ ನಾಲ್ಕು ಇನ್ನಿಂಗ್ಸ್ ಗೆ ಒಮ್ಮೆ ಎಂಬಂತೆ 50-ಪ್ಲಸ್ ಜೊತೆಯಾಟಗಳು ಬಂದಿದೆ. ಎರಡನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ಪ್ರತಿ 7.33 ಇನ್ನಿಂಗ್ಸ್ ಗೆ ಒಂದು ಕೆಳ ಕ್ರಮಾಂಕದ ಅರ್ಧ ಶತಕದ ಜೊತೆಯಾಟ ಆಡುತ್ತಿದೆ.
ಕಳೆದ ಕೆಲವು ವರ್ಷಗಳಿಂದ ನೋಡುವುದಾದರೆ 2016-17 ಋತುವಿನಲ್ಲಿ ಜಡೇಜಾ, ಆರ್ ಅಶ್ವಿನ್ ಮತ್ತು ವೃದ್ಧಿಮಾನ್ ಸಾಹ ಅವರು 13-ಟೆಸ್ಟ್ ಗಳಲ್ಲಿ ನಾಲ್ಕು ಸರಣಿ ಗೆಲುವುಗಳಿಗೆ ಭಾರೀ ಕೊಡುಗೆ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ರಾಂಚಿ ಪಂದ್ಯದಲ್ಲಿ ಸಾಹ ಅವರ ಶತಕ, ಧರ್ಮಶಾಲಾದಲ್ಲಿ ಸಾಹ-ಜಡೇಜಾ ಪಾಲುದಾರಿಕೆಯು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
2021 ರ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿ ಪ್ರಾರಂಭವಾದಾಗಿನಿಂದ, ಭಾರತದ ಕೆಳ ಕ್ರಮಾಂಕವು ತವರು ಟೆಸ್ಟ್ ಗಳಲ್ಲಿ ಮತ್ತೊಂದು ಹಂತಕ್ಕೆ ಹೋಗಿದೆ. ಜಡೇಜಾ ಗಾಯದಿಂದ ಹೊರಗುಳಿದಾಗ ಪದಾರ್ಪಣೆ ಮಾಡಿದ ಅಕ್ಷರ್ ಪಟೇಲ್ ತಮ್ಮ ಛಾಪು ಮೂಡಿಸಿದರು. ಇದಕ್ಕೂ ಮೊದಲು ಆಸೀಸ್ ಪ್ರವಾಸದ ಗಬ್ಬಾ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ.
ಭಾರತವು ಸದ್ಯ ತವರು ಸರಣಿಗಳಲ್ಲಿ ತಮ್ಮ ಬ್ಯಾಟಿಂಗ್ ನ ಬಗ್ಗೆ ಚಿಂತಿಸದೆ ಅಶ್ವಿನ್, ಜಡೇಜಾ ಮತ್ತು ಅಕ್ಷರ್ ಪಟೇಲ್ ರನ್ನು ತುಂಬಾ ಸುಲಭವಾಗಿ ಆಯ್ಕೆ ಮಾಡುತ್ತಿದೆ.
ಈ ಎಲ್ಲಾ ಕೆಳ ಕ್ರಮಾಂಕದ ಕೊಡುಗೆಗಳು ಮತ್ತೊಂದು ಪರಿಣಾಮವನ್ನು ಬೀರಿವೆ. ಬಾಲಂಗೋಚಿಗಳ ಪ್ರದರ್ಶನದ ಕಾರಣದಿಂದ ಭಾರತದ ಉನ್ನತ-ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಗಳು ಅಷ್ಟಾಗಿ ಪರಿಣಾಮ ಬೀರುತ್ತಿಲ್ಲ. 2021 ರ ಆರಂಭದಿಂದಲೂ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಇಬ್ಬರೂ 20 ರ ಅಂಚಿನಲ್ಲಿ ಸರಾಸರಿಯನ್ನು ಹೊಂದಿದ್ದಾರೆ. ಅಲ್ಲದೆ ಕೆಎಲ್ ರಾಹುಲ್ ಕೂಡಾ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಇದರ ಹೊಡೆತ ಹೆಚ್ಚಾಗಿ ಬೀಳದಂತೆ ಈ ಬಾಲಂಗೋಚಿಗಳು ನೋಡಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.