ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ


Team Udayavani, Oct 19, 2021, 6:50 AM IST

ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ

ಸಾಂದರ್ಭಿಕ ಚಿತ್ರ

ಸರಿಸುಮಾರು ಕಳೆದೆರಡು ವರ್ಷಗಳಿಂದ ಮಕ್ಕಳು ಶಾಲೆಗಳಿಂದ ದೂರವಿದ್ದು ಆನ್‌ಲೈನ್‌ ಶಿಕ್ಷಣದ ಮೂಲಕ ಕಲಿಕೆಯನ್ನು ಮುಂದುವರಿಸಿದ್ದರು. ಇದೀಗ ಸುದೀರ್ಘ‌ ವಿರಾಮದ ಬಳಿಕ ಮಕ್ಕಳು ಶಾಲೆಗಳತ್ತ ಮುಖ ಮಾಡಿದ್ದು ಭೌತಿಕ ತರಗತಿಗಳಿಗೆ ಹಾಜರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳ ಮನಸ್ಸನ್ನು ಕಲಿಕೆಯತ್ತ ಕೇಂದ್ರೀಕರಿಸುವ ಗುರುತರವಾದ ಹೊಣೆಗಾರಿಕೆಯ ಜತೆಯಲ್ಲಿ ಇನ್ನೂ ಹತ್ತುಹಲವು ಸವಾಲುಗಳು ಶಿಕ್ಷಕರ ಮುಂದಿವೆ. ಈ ಎಲ್ಲ ಸವಾಲುಗಳನ್ನು ಎದುರಿಸಿ ಮಕ್ಕಳನ್ನು ಭೌತಿಕ ತರಗತಿಗಳಿಗೆ ಮರು ಒಗ್ಗಿಕೊಳ್ಳುವಂತೆ ಮಾಡಲು ಸಮಸ್ತ ಶಿಕ್ಷಕ ಸಮುದಾಯ ಸನ್ನದ್ಧವಾಗಿದೆ.

ಕೋವಿಡ್‌-19 ಸಾಂಕ್ರಾಮಿಕ ರೋಗವು ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಸವಾಲುಗಳನ್ನು ಸೃಷ್ಟಿಸಿದೆ. ಈ ಸವಾಲುಗಳನ್ನು ಶಿಕ್ಷಣ ವ್ಯವಸ್ಥೆ, ನೀತಿ ರೂಪಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಹೆತ್ತವರು ಅರ್ಥ ಮಾಡಿಕೊಂಡು ಅವುಗಳನ್ನು ಪರಿಹರಿಸುವುದು ಅತೀಮುಖ್ಯವಾಗಿದೆ.
“ಉತ್ತಮ ನಾಗರಿಕನಾಗಲು ಅಥವಾ ಯಶಸ್ವಿ ಜೀವನ ಸಾಗಿಸಲು ಗುರು ಇರಬೇಕು ಇಲ್ಲವೇ ಗುರಿಯಿರಬೇಕು’ ಎಂಬ ಮಾತು ಬಹಳ ಅರ್ಥಪೂರ್ಣವಾದುದು. ಆದರೆ ಕೋವಿಡ್‌-19ರ ಸಂದರ್ಭದಲ್ಲಿ ದೂರದಲ್ಲಿರುವ ಗುರುವ ನೆನೆದು ಆರಾಧಿಸಿ ಗುರಿ ಸಾಧಿಸುವ ಏಕಲವ್ಯರ ಸಂಖ್ಯೆ ಕೇವಲ ಬೆರಳೆ ಣಿಕೆಯಷ್ಟಿತ್ತು. “ಗುರುವಿನ ಗುಲಾ ಮನಾಗುವ ತನಕ ದೊರೆಯ ದಯ್ಯ ಮುಕುತಿ’ ಎಂಬ ಕವಿ ವಾಣಿಯಂತೆ ಗುರುವಿನ ಸನಿಹ ವಿದ್ದರೆ ಮಾತ್ರ ಸನ್ಮಾರ್ಗದಲ್ಲಿ ನಡೆಯಲು, ಜೀವನದ ಗುರಿ ಸಾಧಿಸಲು ಸಾಧ್ಯ.

ಕೋವಿಡ್‌-19ರ ವಿಷಮ ಪರಿಸ್ಥಿತಿಯಲ್ಲಿ ಆನ್‌ಲೈನ್‌ ಶಿಕ್ಷಣ, ವಾಟ್ಸ್‌ಆ್ಯಪ್‌ ಶಿಕ್ಷಣ ಇತ್ಯಾದಿಗಳ ಮೂಲಕ ಬೋಧನೆಗಳು ಮುಂದುವರಿದವಾದರೂ ಇಂಥ ವಿಧಾನಗಳಿಂದ ಜ್ಞಾನಾ ರ್ಜನೆ ಪರಿಪೂರ್ಣವಾಗದು. ಈ ನಿಟ್ಟಿನಲ್ಲಿ ಭೌತಿಕ ತರಗತಿಗಳು ಅತ್ಯಂತ ಮಹತ್ವಪೂರ್ಣವಾಗಿದ್ದು ಸರಿಸು
ಮಾರು ಎರಡು ವರ್ಷಗಳ ಬಳಿಕ ಶಾಲೆಗಳು ಪುನರಾ ರಂಭಗೊಂಡಿವೆ. ಈ ಸಂದರ್ಭದಲ್ಲಿ ಶಾಲಾಧಾರಿತ ಕಲಿಕೆಗೆ ಸುರಕ್ಷಿತ ಮತ್ತು ಉತ್ತಮ ಮಾರ್ಗಸೂಚಿಗಳನ್ನು ರೂಪಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭಗೊಂಡಿ ರುವ ಈ ಪರಿಸ್ಥಿತಿಯಲ್ಲಿ ಶಿಕ್ಷಕರ ಮುಂದೆ ಹಲವಾರು ಸವಾಲುಗಳ ಸರಮಾಲೆಯೇ ಸೃಷ್ಟಿಯಾಗಿದೆ. ಇವುಗಳಲ್ಲಿ ಪ್ರಮುಖವಾಗಿ
1 ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಕಲಿಕಾ ಅಂತರ ಸರಿದೂಗಿಸುವುದು.
2 ವಿದ್ಯಾರ್ಥಿಗಳು, ಶಾಲೆ ಮತ್ತು ಶಿಕ್ಷಕರ ನಡುವಿನ ಭಾವನಾತ್ಮಕ ಸಂಬಂಧಗಳ ಬೆಸುಗೆ ಸಡಿಲಗೊಂಡಿರುವುದು.
3 ಮಕ್ಕಳನ್ನು ಮಾನಸಿಕವಾಗಿ ಭೌತಿಕ ತರಗತಿಗಳಿಗೆ ತಯಾರು ಮಾಡುವುದು.
4 ವಿದ್ಯಾರ್ಥಿಗಳಲ್ಲಿ ಕಲಿಕೆಯ ಅಭ್ಯಾಸವನ್ನು ಪುನಶ್ಚೇತನಗೊಳಿಸುವುದು.
5 ವಿದ್ಯಾರ್ಥಿಗಳ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸಮತೋಲನ ಕಂಡುಕೊಳ್ಳುವುದು.
6 ಮಕ್ಕಳಲ್ಲಿ ಸಾಮಾಜಿಕ ವಿಕಾಸ ಕುಂಠಿತವಾಗದಂತೆ ನೋಡಿಕೊಳ್ಳುವುದು.
7 ಹಿಂದಿನ ಮತ್ತು ಪ್ರಸಕ್ತ ಶೈಕ್ಷಣಿಕ ಸಾಲಿನ 1ನೇ ತರಗತಿಯ ಮಕ್ಕಳ ಭಾಷೆಯ ಬೆಳವಣಿಗೆಗೆ ಒತ್ತು ನೀಡುವುದು ಮತ್ತು ಕಲಿಕಾ ತಳಹದಿಯನ್ನು ಬಲಪಡಿಸುವುದು.
8 ವಿದ್ಯಾರ್ಥಿಗಳು ಈ ಅವಧಿಯಲ್ಲಿ ಸಾಮಾಜಿಕ ಜಾಲತಾಣ ಹಾಗೂ ಇಂಟರ್ನೆಟ್‌(ಅಂತರ್ಜಾಲ) ಬಳಕೆಯಿಂದ ಸಂಪಾದಿಸಿರುವ ಅಗತ್ಯ ಮತ್ತು ಅನಗತ್ಯ ಜ್ಞಾನದ ಒಳಿತು-ಕೆಡಕುಗಳ ಅರಿವು ಮೂಡಿಸುವುದರೊಂದಿಗೆ ಅವರಲ್ಲಾಗಿರುವ ನೈತಿಕ ಮೌಲ್ಯಗಳ ಕೊರತೆಯನ್ನು ಸರಿದೂಗಿಸುವುದು.
9 ಬಾಲ ಕಾರ್ಮಿಕರಾಗಿ ದುಡಿಮೆಗೆ ಒಗ್ಗಿಕೊಂಡಿರುವ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆ ತರುವುದು.
10 ಬಾಲ್ಯವಿವಾಹ, ಮಾನಸಿಕ ಮತ್ತು ದೈಹಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬುವುದು.
11 ಫ್ರೀ ಫೈಯರ್‌, ಪಬ್ಜಿà ಮುಂತಾದ ಆನ್‌ಲೈನ್‌ ಆಟಗ ಳಿಗೆ ದಾಸರಾಗಿರುವ ವಿದ್ಯಾರ್ಥಿಗಳನ್ನು ಮರಳಿ ಶಾಲಾ ಚಟುವಟಿಕೆಗಳಿಗೆ ಒಗ್ಗಿಕೊಳ್ಳುವಂತೆ ಮಾಡುವುದು.
12 ವಲಸೆ ಕಾರ್ಮಿಕರ ಮಕ್ಕಳನ್ನು ಹುಡುಕಿ ಶಾಲೆಗೆ ಮರಳಿ ಸೇರುವಂತೆ ಕ್ರಮ ಕೈಗೊಳ್ಳುವುದು.

ಇದನ್ನೂ ಓದಿ:ಅಮೆರಿಕದ ಮೊದಲ ಕಪ್ಪುವರ್ಣೀಯ ವಿದೇಶಾಂಗ ಸಚಿವ ಪೊವೆಲ್‌ ನಿಧನ

ಶಿಕ್ಷಕರು ತಮ್ಮ ಮುಂದಿರುವ ಈ ಸವಾಲುಗಳನ್ನು ಎದುರಿಸಲು ತಮ್ಮದೇ ಆದ ಯೋಚನಾ ಕ್ರಮಗಳ ಮೂಲಕ ವಿದ್ಯಾರ್ಥಿಗಳು ಪುನಃ ಭೌತಿಕ ತರಗತಿಗಳಿಗೆ ಒಗ್ಗಿಕೊಳ್ಳುವಂತೆ ಮಾಡಲು ಹಲವಾರು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ.

1 ಶಿಕ್ಷಕರು ವಿದ್ಯಾರ್ಥಿಗಳ ಆರೋಗ್ಯದ ಸುರಕ್ಷತೆಯ ಕಡೆ ಗಮನ ನೀಡುವುದರೊಂದಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಕೋವಿಡ್‌-19 ರ ನಿಯಮಗಳನ್ನು ಪಾಲಿಸುವುದು.
2 ಈ ಎರಡು ಶೈಕ್ಷಣಿಕ ವರ್ಷಗಳಲ್ಲಿ ಉಂಟಾಗಿರುವ ಕಲಿಕಾ ನಷ್ಟ, ಕಲಿಕಾ ಅಂತರ ಸರಿದೂಗಿಸುವಲ್ಲಿ ಕಳೆದು ಹೋದ ಕಲಿಕೆಯನ್ನು ಪುನಃ ಹಿಂಪಡೆಯುವಲ್ಲಿ ಕಲಿಕಾ ವಿನ್ಯಾಸ ಮತ್ತು ಅನುಷ್ಠಾನ ರೂಪಿಸುವ ನೀಲನಕ್ಷೆಯನ್ನು ತಯಾರಿಸುವುದು.
ಐಐಐ ವಿದ್ಯಾರ್ಥಿಗಳಲ್ಲಿನ ಕಲಿಕಾ ನಷ್ಟವನ್ನು ಗುರುತಿಸಿ ಕಲಿಕಾ ಅಗತ್ಯತೆಯ ಮೌಲ್ಯಮಾಪನ ಮಾಡಿ ಪರಿಹಾರಾತ್ಮಕ ಬೋಧನೆಗೆ ಒತ್ತು ನೀಡುವುದರೊಂದಿಗೆ ಕಲಿಕೆಯ ಸ್ಥಿರತೆ ಮತ್ತು ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು.
3 ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವ ಮೂಲಕ ಶಾಲೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಭಾವನಾತ್ಮಕ ಸಂಬಂಧಗಳನ್ನು ಬಲಪಡಿಸುವುದು.
4 ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಆಪ್ತ ಸಮಾಲೋಚನೆ ಮತ್ತು ಮಾರ್ಗದರ್ಶನ ನೀಡುವ ಸಲುವಾಗಿ ನೋಡಲ್‌ ಶಿಕ್ಷಕರನ್ನು ನೇಮಿಸಿ ಜವಾಬ್ದಾರಿ ನೀಡುವುದು.
5 ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಹಾಗೂ ಇಂಟರ್ನೆಟ್‌(ಅಂತರ್ಜಾಲ) ಬಳಕೆಯಿಂದ ಸಂಪಾದಿಸಿರುವ ಅಗತ್ಯ ಮತ್ತು ಅನಗತ್ಯ ಜ್ಞಾನದ ಒಳಿತು-ಕೆಡಕುಗಳ ಅರಿವು ಮೂಡಿಸಲು ತಜ್ಞ ಮಾರ್ಗದರ್ಶಕ (ಸೈಬರ್‌ ಕ್ರೈಂ)ರಿಂದ ಉಪನ್ಯಾಸ ಏರ್ಪಡಿಸುವುದು.
6 ವಲಸೆ ಕಾರ್ಮಿಕರ ಮಕ್ಕಳನ್ನು ಮರಳಿ ಮುಖ್ಯವಾಹಿನಿಗೆ ತರಲು ಟ್ರ್ಯಾಕಿಂಗ್‌ ಮಾಡುವುದು.
7 ಸಾಮಾಜಿಕ ಪಿಡುಗುಗಳಿಗೆ, ದೈಹಿಕ ಮತ್ತು ಮಾನಸಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿಗಳಿಗಾಗಿ ವಿಶೇಷ ಆಪ್ತ ಸಮಾಲೋಚನ ಸಭೆಯನ್ನು ಏರ್ಪಡಿಸುವುದು.
8 ಶಿಕ್ಷಕರ ಮುಂದಿರುವ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ಶಿಕ್ಷಕರಿಗೆ ಪಠ್ಯಕ್ರಮ, ಪಾಠಯೋಜನೆ ಮತ್ತು ಸಮಯದ ಹಂಚಿಕೆಗೆ ಸಂಬಂಧಿಸಿದಂತೆ ಸ್ವಾಯತ್ತತೆಯ ಅಗತ್ಯವಿದೆ.

ಅಂತಿಮವಾಗಿ ಹೇಳುವುದಾದರೆ ಹಲವಾರು ಸಮಸ್ಯೆ, ಸವಾಲುಗಳಿ¨ªಾಗ್ಯೂ ಸೃಜನಾತ್ಮಕ, ಆಸಕ್ತಿ ದಾಯಕ ಬೋಧನ ವಿಧಾನಗಳ ಮೂಲಕ ಮಕ್ಕ ಳಲ್ಲಿ ಕಲಿಕೆಯ ಅಭಿರುಚಿ, ಅಭಿಮಾನ ಹಾಗೂ ಅಭಿ ಪ್ರೇರಣೆ ಮೂಡಿಸುವ ಮೂಲಕ ಅವರಲ್ಲಿ ಕಂಡು ಬರುವ ಆತಂಕಗಳನ್ನು ದೂರಮಾಡಿ ಧನಾತ್ಮಕ ಮನೋಭಾವ ಬೆಳೆಸುವುದರೊಂದಿಗೆ ಮುಗ್ಧ ಮತ್ತು ಯುವ ಮನಸ್ಸುಗಳು ಕಲಿಕೆ ಹಾಗೂ ಭೌತಿಕ ತರಗತಿಗಳಿಗೆ ಒಗ್ಗಿಕೊಳ್ಳುವಂತೆ ಪ್ರೇರೇಪಿಸಲು ಸಮಸ್ತ ಶಿಕ್ಷಕ ಸಮು ದಾಯ ಸನ್ನದ್ಧವಾಗಿದೆ ಎಂದರೆ ಅತಿಶ ಯೋಕ್ತಿಯಾಗದು.

– ದಾಕ್ಷಾಯಿಣಿ ವೀರೇಶ್‌
ಶಿಕ್ಷಕಿ, ಮಂಗಳೂರು

ಟಾಪ್ ನ್ಯೂಸ್

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.