ಚಾಕೊಲೆಟ್ ತಿನ್ನಲು ಎಷ್ಟು ಸಿಹಿಯೋ, ಜಾಸ್ತಿಯಾದ್ರೆ ಆರೋಗ್ಯಕ್ಕೆ ಅಷ್ಟೇ ಕಹಿ..!
Team Udayavani, May 17, 2021, 3:05 PM IST
ಚಾಕೊಲೆಟ್ ಯಾರಿಗೆ ತಾನೇ ಇಷ್ಟವಾಗದು? ವಿಶೇಷವಾಗಿ ಮಕ್ಕಳಿಗೆ ಅತಿಯಾಗಿ ಇಷ್ಟಪಡುವ ಚಾಕಲೇಟ್ ಹಲ್ಲಿನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಎಷ್ಟು ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಒಳ್ಳೆಯದು ಎಂಬುದನ್ನು ನೋಡೋಣ.
ಚಾಕೊಲೇಟ್ ಸೇವನೆ ಹಿತಮಿತವಾಗಿದ್ದರೆ ಯಾವುದೇ ತೊಂದರೆಯೂ ಉಂಟಾಗುವುದಿಲ್ಲ. ಇಂದು ಮಾರುಕಟ್ಟೆಗಳಲ್ಲಿ ಹಲವು ಬಗೆಗಳ ಚಾಕೊಲೇಟ್ ಅಥವಾ ಸಿಹಿತಿನಿಸುಗಳು ದೊರೆಯುತ್ತವೆ. ಹೆಚ್ಚು ಸಿಹಿಯಾದ ಮತ್ತು ಸಕ್ಕರೆಯಿಂದ ತಯಾರಿಸಲಾದ ಚಾಕೊಲೇಟುಗಳು ಹಲ್ಲಿನ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ.
ಸಕ್ಕರೆಯುಕ್ತ ಚಾಕೊಲೇಟನ್ನು ತಿನ್ನುವುದರಿಂದ ಬಾಯಿಯಲ್ಲಿನ ಸಕ್ಕರೆಯ ಪ್ರಮಾಣವೂ ಹೆಚ್ಚುತ್ತದೆ. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯಕವಾಗಿ ಪ್ಲ್ಯಾಕ್ನ (ಬ್ಯಾಕ್ಟೀರಿಯಾ ವೃದ್ಧಿಯಾಗಲು ಅವಕಾಶ ಕೊಡುವಂತಹ ಹಲ್ಲಿನ ಮೇಲಿನ ಲೋಳೆಯ ನಿಕ್ಷೇಪ) ರಚನೆಗೆ ಪುಷ್ಟಿ ನೀಡುತ್ತದೆ. ಅಲ್ಲದೆ ಬಾಯಿಯ ಆಮ್ಲೀಯತೆಯನ್ನು ಹೆಚ್ಚಾಗಿಸಿ ಹಲ್ಲಿನ ಮೇಲಿರುವ ಎನಾಮಲ್ ಅನ್ನು ನಷ್ಟಗೊಳಿಸಿ ಹುಳುಕಾಗುವಂತೆ ಮಾಡುತ್ತದೆ. ಹಾಗಾದರೆ ಚಾಕಲೇಟ್ ಅಥವಾ ಸಿಹಿಪದಾರ್ಥಗಳನ್ನು ತಿನ್ನಲೇಬಾರದೇ? ಹೀಗೆ ಹೇಳುವುದು ತಪ್ಪಾಗುತ್ತದೆ. ಸಕ್ಕರೆಯುಕ್ತ ಚಾಕೊಲೇಟ್ ಅಥವಾ ಸಿಹಿತಿನಿಸು ಅಥವಾ ಜಿಗುಟಾದ ಸಿಹಿಪದಾರ್ಥಗಳನ್ನು ಯಾವಾಗಲೂ ಊಟದ ಜೊತೆಯಲ್ಲೇ ತಿನ್ನುವುದು ಸೂಕ್ತ. ಅಲ್ಲದೆ ತಿಂದ ತಕ್ಷಣ ಬಾಯಿಯನ್ನು ಶುಚಿಗೊಳಿಸಿಕೊಳ್ಳಬೇಕು. ಇದರಿಂದ ಹಲ್ಲುಗಳ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗುವುದಿಲ್ಲ.
ಮಕ್ಕಳ ಹಲ್ಲುಗಳು ಹುಳುಕಾಗುವುದಕ್ಕೆ – ಸಿಹಿಪದಾರ್ಥಗಳಾದ ಬಿಸ್ಕತ್ತ, ಚಾಕೊಲೇಟ್ ಅಥವಾ ಚಿಪ್ಸ್ನಂತಹ ಜಿಗುಟಾದ ಆಹಾರಗಳು ಪ್ರಮುಖ ಕಾರಣ. ಜಿಗುಟಾದ ಸಿಹಿಪದಾರ್ಥಗಳು ಹಲ್ಲುಗಳ ಸಂದುಗಳಲ್ಲಿ ಸೇರಿಕೊಂಡು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪೂರಕ ವಾತಾವರಣವನ್ನು ನಿರ್ವಿುಸುತ್ತವೆ. ಆದ್ದರಿಂದ ಯಾವುದೇ ರೀತಿಯ ಚಾಕೊಲೇಟ್, ಸಿಹಿತಿನಿಸುಗಳು ಅಥವಾ ಜಿಗುಟಾದ ಸಿಹಿಪದಾರ್ಥಗಳನ್ನು ತಿಂದ ನಂತರ ಬಾಯಿಯನ್ನು ಶುಚಿಗೊಳಿಸಿಕೊಳ್ಳುವುದರ ಮೂಲಕ ಹಲ್ಲುಗಳು ಹುಳುಕಾಗದ ಹಾಗೆ ನೋಡಿಕೊಳ್ಳಬಹುದು.
ಹಲ್ಲಿನ ಕಲೆಗಳಲ್ಲಿ ಬಾಹ್ಯ ಹಾಗೂ ಆಂತರಿಕ ಎಂದು ಎರಡು ಬಗೆಗಳಿವೆ. ಆಂತರಿಕ ಕಲೆಗಳು ಹಲ್ಲಿನ ಒಳಭಾಗದಿಂದ ಉಂಟಾಗುತ್ತವೆ. ಇದಕ್ಕೆ ಹಲವು ಕಾರಣಗಳಿವೆ. ಉದಾಹರಣೆಗೆ ಫ್ಲೋರೈಡ್ ಕಲೆಗಳು ಅಥವಾ ಹಲ್ಲಿನಲ್ಲಿ ಆಂತರಿಕ ರಕ್ತಸ್ರಾವ ಉಂಟಾದಾಗ – ಹೀಗೆ ಹಲವು ಬಗೆ. ಇನ್ನು ಬಾಹ್ಯ ಕಲೆಗಳು ಹಲ್ಲಿನ ಮೇಲ್ಮೈಯಲ್ಲಿ ಉಂಟಾಗುತ್ತವೆ. ಇದು ಸಾಮಾನ್ಯವಾಗಿ ತಂಬಾಕು ಬಳಕೆಯಿಂದ, ಅತಿಯಾಗಿ ಕಾಫಿ ಅಥವಾ ಚಹಾ ಕುಡಿಯುವುದರಿಂದ ಮತ್ತು ಆಮ್ಲೀಯ ಪಾನೀಯಗಳಿಂದಲೂ ಉಂಟಾಗುತ್ತವೆ. ಯಾವ ರೀತಿಯ ಕಲೆಗಳಿವೆ ಎಂದು ಪರೀಕ್ಷಿಸಿ ತಕ್ಕ ಚಿಕಿತ್ಸೆಯನ್ನು ಪಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.