Director Sukumar: ಪ್ರಾಧ್ಯಾಪಕನಾಗಿದ್ದ ಸುಕುಮಾರ್‌ಗೆ ಸಿನಿಮಾ ನಂಟು ಬೆಳೆದದ್ದೇಗೆ?
ಇದು ʼಪುಷ್ಪʼ ಸಾಮ್ರಾಜ್ಯ ಕಟ್ಟಿದಾತನ ಕಥೆ..
ಸುಹಾನ್ ಶೇಕ್, Nov 30, 2024, 6:19 PM IST
ಕೆಲವೇ ದಿನಗಳಲ್ಲಿ ಪ್ಯಾನ್ ಇಂಡಿಯಾದಲ್ಲಿ ʼಪುಷ್ಪ-2ʼ ಸಿನಿಮಾ ರಿಲೀಸ್ ಆಗಲಿದೆ. 2021ರಲ್ಲಿ ಸಿನಿಮಾದ ಮೊದಲ ಭಾಗಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸು ಸೀಕ್ವೆಲ್ ಮೇಲೂ ಇಡಲಾಗಿದೆ. ʼಪುಷ್ಪ-2ʼ (Pushpa 2: The Rule) ಸಿನಿಮಾಕ್ಕಾಗಿ ಕಳೆದ ಮೂರು ವರ್ಷಗಳಿಂದ ನಿರ್ದೇಶಕ ಸುಕುಮಾರ್ ( Director Sukumar) ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ನಿರ್ದೇಶನ, ಕಥೆಯ ಜತೆ ಜತೆಗೆ ಪ್ರತಿ ಫ್ರೇಮ್ ಪರ್ಫೆಕ್ಟ್ ಆಗಿ ಮೂಡಿಬರುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರಿಗೆ ಸೌತ್ ಇಂಡಿಯಾ ಮಾತ್ರವಲ್ಲದೆ ಉತ್ತರ ಭಾರತದಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಅವರ ತೆಲುಗು ಸಿನಿಮಾಗಳು ಹಿಂದಿ ಭಾಷೆಗೆ ಡಬ್ ಆಗಿ ಟಿವಿಗಳಲ್ಲಿ ಪ್ರಸಾರವಾಗಿರುವುದು ಕೂಡ ಇದಕ್ಕೆ ಒಂದು ಕಾರಣ.
ಕನ್ನಡದಲ್ಲಿ ಬಂದ ʼಕೆಜಿಎಫ್ʼ ಪ್ಯಾನ್ ಇಂಡಿಯಾದಲ್ಲಿ (Pan India) ದೊಡ್ಡ ಅಲೆಯನ್ನೇ ಸೃಷ್ಟಿಸಿತು. ಇದೇ ನಿರೀಕ್ಷೆ ʼಪುಷ್ಪʼ ಸಿನಿಮಾದ ಮೇಲೂ ಇತ್ತು. ಆ ನಿರೀಕ್ಷೆ ಸುಳ್ಳಾಗಿಲ್ಲ. 200-250 ಕೋಟಿ ಬಜೆಟ್‌ನಲ್ಲಿ ಬಂದಿದ್ದ ʼಪುಷ್ಪʼ ಹತ್ರ ಹತ್ರ 400 ಕೋಟಿ ಗಳಿಕೆಯನ್ನು ಗಳಿಸಿತು. ಆ ಮೂಲಕ ಸುಕುಮಾರ್ ಟಾಲಿವುಡ್‌ನಲ್ಲಿ ಮತ್ತೊಮ್ಮೆ ಗೆಲುವಿನ ದೊಡ್ಡ ಶಿಖರವನ್ನೇ ಏರಿದರು.
ಇಂದು ಸುಕುಮಾರ್ ಒಬ್ಬ ಖ್ಯಾತ ನಿರ್ದೇಶಕ. ʼಪುಷ್ಪʼಗಿಂತ ಮೊದಲು ʼಆರ್ಯʼ, ʼಆರ್ಯ 2ʼ, ʼರಂಗಸ್ಥಳಂʼ ನಂತಹ ಸಿನಿಮಾಗಳು ಸುಕುಮಾರ್ ವೃತ್ತಿ ಬದುಕಿಗೆ ತಿರುವು ಕೊಟ್ಟ ಸಿನಿಮಾಗಳು.
ಬರಹಗಾರನಾಗಿ ಎಂಟ್ರಿ.. ಚಿತ್ರರಂಗವೆಂಬ ಬಣ್ಣದ ಕಡಲಿಗೆ ಧುಮುಕಬೇಕೆಂದರೆ ಒಂದೋ ನಮಗೆ ಈಜು ಗೊತ್ತಿರಬೇಕು ಅಥವಾ ಈಜು ಅರಿತ ಪರಿಣಿತರ ತಂಡದಲ್ಲಿ ಗುರುತಿಸಿಕೊಂಡು ಸವಾಲವೆಂಬ ಅಲೆಗಳ ವಿರುದ್ಧವಾಗಿ ಈಜಬೇಕು.!
ಸಿನಿಮಾರಂಗಕ್ಕೆ ಎಂಟ್ರಿ ಆಗುವ ಮುನ್ನ ಸುಕುಮಾರ್ ಕಾಕಿನಾಡದಲ್ಲಿ 6 ವರ್ಷಗಳ ಕಾಲ ಗಣಿತ ಮತ್ತು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾರೆ. ಕಥೆ ಹೇಳುವುದರಲ್ಲಿ ಅತೀವ ಆಸಕ್ತಿಯಿದ್ದ ಕಾರಣ ಸುಕುಮಾರ್ ಪ್ರಾಧ್ಯಾಪಕ ವೃತ್ತಿ ಬಿಟ್ಟು ಸಿನಿಮಾರಂಗದತ್ತ ಆಸಕ್ತಿ ವಹಿಸುತ್ತಾರೆ.
ಜಯಂತ್ ಸಿ. ಪರಂಜಿಯವರ ಬಾವಗಾರು ಬಾಗುನ್ನಾರಾ? (1998) ಎನ್ನುವ ಸಿನಮಾದಲ್ಲಿ ಮೂರು ದೃಶ್ಯಗಳಿಗೆ ಸ್ಕ್ರೀನ್ ಪ್ಲೇ ಬರೆಯುತ್ತಾರೆ. ಆದರೆ ಕಾರಣಾಂತರಗಳಿಂದ ಈ ಸಿನಿಮಾದಿಂದ ಸುಕುಮಾರ್ ಹೊರ ನಡೆಯುತ್ತಾರೆ. ಇದಾದ ನಂತರ ಮತ್ತೆ ಕೆಲ ಸಮಯ ಅವರು ಪ್ರಾಧ್ಯಾಪಕ ವೃತ್ತಿಯನ್ನು ಮುಂದುವರೆಸಿ ಹಣ ಸಂಪಾದಿಸುತ್ತಾರೆ.
ಸಿನಿಮಾರಂಗದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮುನ್ನ ಸುಕುಮಾರ್ ಅನುಭವಿ ನಿರ್ದೇಶಕ ಮೋಹನ್ ಅವರ ಮಾರ್ಗದರ್ಶನದಲ್ಲಿ ಬರಹಗಾರರಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಾರೆ.
1998ರಲ್ಲಿ ಬಂದ ʼಮನಸಿಚಿ ಚೂಡುʼ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಸುಕುಮಾರ್ ಕೆಲಸ ಮಾಡುತ್ತಾರೆ. ಇದಾದ ನಂತರ ʼಕ್ಷೇಮಮಗ ವೆಲ್ಲಿ ಲಾಭಗಾ ರಂಡಿʼ (2000) ಸಿನಿಮಾದಲ್ಲಿ ಸಂಕಲನಕಾರರಾಗಿ ಮೋಹನ್ ಅವರಿಗೆ ಸಹಾಯ ಮಾಡುತ್ತಾರೆ. ನಿರ್ದೇಶಕನಾಗಿ ಕಾಲಿಡುವ ಮುನ್ನ ವಿ. ವಿ. ವಿನಾಯಕ್ ಅವರ ʼದಿಲ್ʼ (2003) ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಾರೆ.
ಮೊದಲ ಸಿನಿಮಾದಲ್ಲೇ ದೊಡ್ಡ ಗೆಲುವು: ಕೆಲ ವರ್ಷ ಬರಹರಾಗಿ, ಸಹಾಯಕ ನಿರ್ದೇಶಕನಾಗಿ ಕ್ಯಾಮೆರಾ ಹಿಂದೆ ಕೆಲಸ ಮಾಡಿದ ಸುಕುಮಾರ್ ತಾವು ಕಲಿತ ಸಿನಿಮಾ ಸಂಬಂಧಿತ ಕೆಲಸ, ಪಡೆದ ಮಾರ್ಗದರ್ಶನದಿಂದ 2004ರಲ್ಲಿ ʼಆರ್ಯʼ ಎನ್ನುವ ಸಿನಿಮಾವನ್ನು ಮಾಡಿ ಡೈರೆಕ್ಟರ್ ಕ್ಯಾಪ್ ತೊಡುತ್ತಾರೆ. ಅಲ್ಲು ಅರ್ಜುನ್ ಪ್ರಧಾನ ಪಾತ್ರದಲ್ಲಿ ಬಂದ ಈ ಸಿನಿಮಾ ಟಾಲಿವುಡ್‌ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸುತ್ತದೆ.
4 ಕೋಟಿ ಬಜೆಟ್‌ನಲ್ಲಿ ಬಂದ ʼಆರ್ಯʼ 30 ಕೋಟಿ ಗಳಿಕೆಯನ್ನು ಕಾಣುತ್ತದೆ. ಸಿನಿಮಾದ ಭರ್ಜರಿ ಯಶಸ್ಸು ಸುಕುಮಾರ್ ಅವರಿಗೆ ಅತ್ಯುತ್ತಮ ನಿರ್ದೇಶಕನಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ತಂದುಕೊಡುತ್ತದೆ. ಅತ್ಯುತ್ತಮ ಚಿತ್ರಕಥೆಗಾಗಿ ನಂದಿ ಪ್ರಶಸ್ತಿ ತಂದು ಕೊಡುತ್ತದೆ.
ಇಷ್ಟು ವರ್ಷ ತೆರೆಮರೆಯಲ್ಲಿದ್ದ ಸುಕುಮಾರ್ ʼಆರ್ಯʼ ಮೂಲಕ ಸಿನಿ ಪಯಣದ ಆರಂಭವನ್ನು ದೊಡ್ಡದಾಗಿಯೇ ಮಾಡುತ್ತಾರೆ. ಸುಕುಮಾರ್ ಅವರಿಗೆ ಮಾತ್ರವಲ್ಲದೆ ಅಲ್ಲು ಅರ್ಜುನ್ ಅವರಿಗೂ ʼಆರ್ಯʼ ಒಂದು ಹೊಸ ಆರಂಭವನ್ನೇ ನೀಡುತ್ತದೆ.
ʼಆರ್ಯʼ ಸಿನಿಮಾದ ದೊಡ್ಡ ಯಶಸ್ಸು ಸುಕುಮಾರ್ ಅವರಿಗೆ ನಿರ್ದೇಶಕನಾಗಿ ಹೊಸ ಸವಾಲನ್ನು ಎದುರಿಗೆ ತಂದಿಡುತ್ತದೆ. 2007ರಲ್ಲಿ ʼಜಗದಮ್ʼ ಎನ್ನುವ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡುತ್ತಾರೆ. ಈ ಸಿನಿಮಾದಲ್ಲೂ ʼಆರ್ಯʼದಂತೆ ಮಾಸ್ ಅಂಶಗಳೇ ಹೆಚ್ಚಾಗಿರುತ್ತದೆ. ರಾಮ್ ಪೋತಿನೇನಿ ಮತ್ತು ಇಶಾ ಸಾಹ್ನಿ ಪ್ರಧಾನ ಭೂಮಿಕೆಯಲ್ಲಿ ಬಂದ ʼಜಗದಮ್ʼ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ʼಆರ್ಯʼ , ʼಜಗದಮ್ʼ ಬಳಿಕ ಸುಕುಮಾರ್ ʼಆರ್ಯʼ ಸೀಕ್ವೆಲ್‌ಗೆ ಮುಂದಾಗುತ್ತಾರೆ. ಅಲ್ಲು ಅರ್ಜುನ್ ಅವರ ಪಾತ್ರಕ್ಕೆ ಹೆಚ್ಚಿನ ತೂಕ ಕೊಟ್ಟು 2009ರಲ್ಲಿ ʼಆರ್ಯ-2ʼ ಸಿನಿಮಾವನ್ನು ಮಾಡುತ್ತಾರೆ. ʼಆರ್ಯʼಕ್ಕೆ ಸಿಕ್ಕ ರೆಸ್ಪಾನ್ಸ್ ಸೀಕ್ವೆಲ್‌ಗೆ ಸಿಗದೆ ಇದ್ದರೂ, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಸಿನಿಮಾ ಹಿಂದೆ ಬೀಳಲಿಲ್ಲ.
ಎರಡು ವರ್ಷದ ಗ್ಯಾಪ್ ಬಳಿಕ ಸುಕುಮಾರ್ ಲವ್ ಸ್ಟೋರಿ ಕಥೆಯುಳ್ಳ ʼ100% ಲವ್ʼ ಎನ್ನುವ ಸಿನಿಮಾವನ್ನು ಮಾಡುತ್ತಾರೆ. ನಾಗ ಚೈತನ್ಯ ಮತ್ತು ತಮನ್ನಾ ಪ್ರಧಾನ ಭೂಮಿಕೆಯ ಈ ಸಿನಿಮಾ ಕರ್ಮಷಿಯಲ್ ಹಿಟ್ ಆಗುತ್ತದೆ.
ಈ ಸಿನಿಮಾ ವಾರ್ಷಿಕ ನಂದಿ ಪ್ರಶಸ್ತಿ ಸಮಾರಂಭದಲ್ಲಿ ಬೆಸ್ಟ್ ಹೋಮ್ ವೀವಿಂಗ್ ಫೀಚರ್ ಫಿಲ್ಮ್ ಪ್ರಶಸ್ತಿಯನ್ನು ಗಳಿಸುತ್ತದೆ.
59ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್‌ನಲ್ಲಿ ಪ್ರಶಸ್ತಿಗೆ ನಾಮಿನೇಟ್ ಆಗುತ್ತದೆ. 1st ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವೀ ಅವಾರ್ಡ್ಸ್‌ನಲ್ಲಿ ತೆಲುಗು ಅತ್ಯುತ್ತಮ ನಿರ್ದೇಶಕನ ವಿಭಾಗಕ್ಕೆ ನಾಮಿನೇಟ್ ಆಗುತ್ತದೆ.
2014ರಲ್ಲಿ ಮಹೇಶ್ ಬಾಬು ಅವರೊಂದಿಗೆ ʼನೆನೊಕ್ಕಡಿನೆʼ ಎನ್ಜುವ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವನ್ನು ತೆರೆಗೆ ತರುತ್ತಾರೆ. ಸಿನಿಮಾಕ್ಕೆ ನಿರೀಕ್ಷೆಗೆ ತಕ್ಕ ರೆಸ್ಪಾನ್ಸ್ ಸಿಗುವುದಿಲ್ಲ. ಹಾಗಾಗಿ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಅಷ್ಟಾಗಿ ಕಮಾಲ್ ಮಾಡುವುದಿಲ್ಲ. ಇದು ಅವರ ಡ್ರೀಮ್ ಪ್ರಾಜೆಕ್ಟ್ ಆಗಿತ್ತು. ಆದರೆ ತಕ್ಕಮಟ್ಟಿಗಿನ ಯಶಸ್ಸು ಮಾತ್ರ ಚಿತ್ರಕ್ಕೆ ಸಿಗುವುದಿಲ್ಲ.
ಯಶಸ್ಸಿನ ನಡುವೆಯೇ ಕಿರುಚಿತ್ರಕ್ಕೆ ನಿರ್ದೇಶನ..: ಸಿನಿಮಾರಂಗದಲ್ಲಿ ಯಶಸ್ಸಿನ ನಿರ್ದೇಶಕರಾಗಿದ್ದಾಗಲೇ ಸುಕುಮಾರ್ ʼಐಯಾಮ್ ದೇಟ್ ಚೇಂಜ್ʼ ಎನ್ನುವ ಶಾರ್ಟ್ ಫಿಲ್ಮ್‌ವೊಂದನ್ನು ನಿರ್ದೇಶನ ಮಾಡುತ್ತಾರೆ. ಈ ಕಿರುಚಿತ್ರಕ್ಕೆ ಖ್ಯಾತ ನಟ ಅಲ್ಲು ಅರ್ಜುನ್ ಅವರು ಬಂಡವಾಳ ಹಾಕುತ್ತಾರೆ.
ಈ ಕಿರುಚಿತ್ರ ಡ್ರಂಕ್ ಅಂಡ್ ಡ್ರೈವ್ ಪರೀಕ್ಷೆಯ ವೇಳೆ ಪೊಲೀಸ್ ಸಿಬ್ಬಂದಿ ಜತೆ ನಡೆಯುವ ವಾಗ್ವಾದ ಸುತ್ತ ಸಾಗುತ್ತದೆ. ಸೆಲೆಬ್ರಿಟಿಗಳಿಂದ ಅಮೋಘ ಪ್ರತಿಕ್ರಿಯೆ ಸಿಗುವುದರ ಜತೆಗೆ ಆನ್ ಲೈನ್‌ನಲ್ಲಿ ಕಿರುಚಿತ್ರ ವೈರಲ್ ಆಗುತ್ತದೆ.
ಇದಾದ ನಂತರ ತಂದೆ – ಮಗನ ಎಮೋಷನಲ್ ಸಂದೇಶದ ʼ ನನ್ನಾಕು ಪ್ರೇಮತೋʼ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತದೆ.
ʼರಂಗಸ್ಥಳಂʼ ಟು ʼಪುಷ್ಪʼ ವರ್ಲ್ಡ್.. ಮತ್ತೆ ಉತ್ತುಂಗಕ್ಕೇರಿದ ಸುಕುಮಾರ್: ʼಆರ್ ಆರ್ ಆರ್ʼ ಸಿನಿಮಾಗಿಂತ ಮೊದಲು, ʼಪುಷ್ಪʼ ಗಿಂತ ಮೊದಲು ರಾಮ್ ಚರಣ್, ಸುಕುಮಾರ್ ಅವರಿಗೆ ʼರಂಗಸ್ಥಳಂʼ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು.
1980ರ ದಶಕದ ಹಳ್ಳಿಯ ಆ್ಯಕ್ಷನ್ ಪ್ಯಾಕ್ಡ್ ಕಥೆಯನ್ನು ʼರಂಗಸ್ಥಳಂʼ ಹೇಳಿತ್ತು. ಚಿಟ್ಟಿಬಾಬು ಆಗಿ ರಾಮ್ ಚರಣ್ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಎರಡು ವರ್ಷ ಸ್ಕ್ರಿಪ್ಟ್‌ಗಾಗಿ ತಮ್ಮ ಸಮಯವನ್ನು ಸುಕುಮಾರ್ ಮೀಸಲಿಟ್ಟಿದ್ದರು. ಅಂದಾಜು 60 ಕೋಟಿ ಬಜೆಟ್‌ನಲ್ಲಿ ಬಂದ ʼರಂಗಸ್ಥಳಂʼ 216 ಕೋಟಿ ಕಲೆಕ್ಷನ್ ಮಾಡಿತು.
ಈ ಸಿನಿಮಾದ ಯಶಸ್ಸಿನ ಬಳಿಕ ಸುಕುಮಾರ್ ʼಪುಷ್ಪʼ ಮೂಲಕ ಪ್ಯಾನ್ ಇಂಡಿಯಾ ನಿರ್ದೇಶಕರಾಗಿ ಆಗಿ ವರ್ಲ್ಡ್ ವೈಡ್ ಗಮನ ಸೆಳೆಯುತ್ತದೆ. ರಕ್ತಚಂದನ ಮರದ ಸಾಗಾಟದ ಕಥೆಯೊಂದನ್ನು ಪವರ್ ಫುಲ್ ಆ್ಯಕ್ಷನ್ ಗಳೊಂದಿಗೆ ಹೇಳಿದ ʼಪುಷ್ಪʼ ಭಾರತದಲ್ಲಿ ಅತೀ ಹೆಚ್ಚು ಸದ್ದು ಮಾಡಿದ ಸಿನಿಮಾಗಳಲ್ಲಿ ಒಂದಾಗುತ್ತದೆ. ʼಆರ್ಯʼದಿಂದ ಕಾಲಿವುಡ್‌ನಲ್ಲಿ ಸುದ್ದಿಯಾಗಿದ್ದ ಸುಕುಮಾರ್ ʼಪುಷ್ಪʼದಿಂದ ಭಾರತೀಯ ಸಿನಿಮಾರಂಗದ ಖ್ಯಾತ ನಿರ್ದೇಶಕ ಎನ್ನುವ ಹೆಗ್ಗಳಿಕೆಯನ್ನು ತಂದುಕೊಡುತ್ತದೆ.
ಇದೀಗ ಸುಕುಮಾರ್ ತಮ್ಮ ನಿರ್ದೇಶನದ 9ನೇ ಸಿನಿಮಾವಾಗಿ ʼಪುಷ್ಪ-2ʼ ತೆರೆಗೆ ತರಲಿದ್ದಾರೆ. ರಿಲೀಸ್‌ಗೂ ಮುನ್ನ ಬರೀ ಬಾಯಿ ಮಾತಿನ ಪ್ರಚಾರದಿಂದಲೇ ಸಿನಿಮಾ ಈಗಾಗಲೇ ಗೆದ್ದಿದೆ ಎಂದರೆ ತಪ್ಪಾಗದು. 400 ಕೋಟಿ ಬಜೆಟ್‌ನಲ್ಲಿ ಬರುತ್ತಿರುವ ʼಪುಷ್ಪ-2ʼ ಭಾರತೀಯ ಸಿನಿಮಾ ಲೋಕದಲ್ಲಿ ಹೊಸ ಅಲೆಯನ್ನು ಸೃಷ್ಟಿಸಲು ಸಜ್ಜಾಗಿದೆ. ಇದೇ ಡಿ.5 ರಂದು ಚಿತ್ರ ತೆರೆ ಕಾಣಲಿದೆ.
– ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…
International: New Orleans-ದಾಳಿ ನಡೆಸಿದಾತ ಅಮೆರಿಕದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ
2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…
Year Ender: 2024ರಲ್ಲಿ ಬಣ್ಣದ ಲೋಕದಿಂದ ದೂರ ಉಳಿದ ಬಿಟೌನ್ ಸ್ಟಾರ್ ಗಳಿವರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.