ಜೀವನ ಪ್ರೀತಿ, ಮಾನವೀಯ ಮೌಲ್ಯ ಕಲಿಸಿಕೊಟ್ಟ ಗುರುದೇವ್ “ಠಾಗೋರ್”
ತುಡಿತದ ಅಭಿವ್ಯಕ್ತಿಯನ್ನು ಬರಹ ಹಾಗೂ ಬದುಕಿನ ಮೂಲಕ ತೋರಿಸಿಕೊಟ್ಟವರು ಅವರು.
Team Udayavani, May 7, 2022, 11:13 AM IST
ಜನಗಣ ಮನ ಅಧಿನಾಯಕ ಜಯ ಹೇ.. ಈ ಸಾಲುಗಳನ್ನು ಕೇಳುವಾಗ ಎಲ್ಲರಿಗೂ ರವೀಂದ್ರನಾಥ ಠಾಗೋರ್ ಅವರ ನೆನಪು ಬಂದೇ ಬರುತ್ತದೆ.ಮೊನ್ನೆಯಷ್ಟೇ ಅವರ ಜನ್ಮದಿನವನ್ನು ಆಚರಿಸಿದೆವು.ಅವರ ನೆನಪನ್ನು ಕೇವಲ ರಾಷ್ಟ್ರಗೀತೆಗಷ್ಟೇ ಸೀಮಿತಗೊಳಿಸದೆ ಅವರು ನಮ್ಮ ಬದುಕಿಗೆ ಸ್ಫೂರ್ತಿ ನೀಡುವಂತಹ, ಬದುಕಿನಲ್ಲಿ ಹೊಸ ಉತ್ಸಾಹ ತುಂಬುವಂತಹ ಹಲವು ವಿಚಾರಧಾರೆಗಳನ್ನು ಎರೆದಿದ್ದಾರೆ. ಅವುಗಳನ್ನು ಸೂಕ್ಷ್ಮವಾಗಿ ವಿವರಿಸುವ ಪ್ರಯತ್ನವಿದು.
ಅತ್ಯುನ್ನತ ಶಿಕ್ಷಣವೆಂದರೆ ಬರೀ ಮಾಹಿತಿ ನೀಡುವುದಲ್ಲ; ಬದಲಿಗೆ, ನಮ್ಮ ಸಮಸ್ತ ಅಸ್ತಿತ್ವವೂ ಸಾಮರಸ್ಯದಿಂದ ಒಂದುಗೂಡುವಂತೆ ಬದುಕು ರೂಪಿಸಿಕೊಳ್ಳುವುದು…ಶಿಕ್ಷಣದ ಬಗೆಗಿನ ಇಂತಹದೊಂದು ದಾರ್ಶನಿಕ ಆಲೋಚನೆಯನ್ನು ನೀಡಿದವರು ಗುರುದೇವ ಎಂದೇ ಪ್ರಸಿದ್ಧರಾದ ತಣ್ತೀಜ್ಞಾನಿ, ಕವಿ ರವೀಂದ್ರನಾಥ ಠಾಗೋರ್.ಭಾರತದ ಸಾಹಿತ್ಯ ಪರಂಪರೆಯಲ್ಲಿ ಅತಿ ಎತ್ತರದ ಮೇರು ಪ್ರತಿಭೆ ಠಾಗೋರರದ್ದು. ಕಾವ್ಯ, ಕಾದಂಬರಿ, ಕಥೆಗಳ ಮೂಲಕ ಭಾರತದ ಸಾಮಾಜಿಕ ಬದಲಾವಣೆಯ ತುಡಿತದ ಅಭಿವ್ಯಕ್ತಿಯನ್ನು ಬರಹ ಹಾಗೂ ಬದುಕಿನ ಮೂಲಕ ತೋರಿಸಿಕೊಟ್ಟವರು ಅವರು.
ಮೂಲತಃ ಬಂಗಾಳದವರಾದ ರವೀಂದ್ರನಾಥ ಠಾಗೋರ್ 1861ರ ಮೇ 7ರಂದು ಕೊಲ್ಕತ್ತಾದ ಜೊರಸಂಕೊ ಭವನದಲ್ಲಿ ಜನಿಸಿದರು. ಇವರ ತಂದೆ ದೇವೇಂದ್ರ ನಾಥ ಠಾಗೋರ್, ತಾಯಿ ಶಾರದಾದೇವಿ.
ರವೀಂದ್ರನಾಥ ಠಾಗೋರ್ ಅವರಿಗೆ ಶಾಲೆಯಲ್ಲಿ ಕಲಿಸಲಾಗುವ ಯಾಂತ್ರಿಕ ಶಿಕ್ಷಣದ ಪರಿಪಾಠ ಇಷ್ಟವಾಗಲಿಲ್ಲ. ಯಾಂತ್ರಿಕ ಶಿಕ್ಷಣವನ್ನು ಹೊರತುಪಡಿಸಿ ಅವರು ನಿಸರ್ಗ, ಸೃಷ್ಟಿ ಹಾಗೂ ಅಧ್ಯಾತ್ಮದತ್ತ ತೆರಳಿದರು. ಈ ಕುರಿತ ಸೆಳೆತವೇ ಮುಂದೆ ಅವರನ್ನು ಸೂಕ್ಷ್ಮ ಸಂವೇದನೆಯುಳ್ಳ ಕಾವ್ಯ ರಚನೆಗೆ ದಾರಿ ಮಾಡಿತು. ಠಾಗೋರ್ ಅವರು ತಮ್ಮ ಬದುಕಿನುದ್ದಕ್ಕೂ ಕೇವಲ ಸಾಹಿತ್ಯ ರಚನೆ ಮಾತ್ರ ಮಾಡಲಿಲ್ಲ, ಇದನ್ನು ಹೊರತಾಗಿ ಸಾಮಾಜಿಕ ಕ್ರಾಂತಿಗೂ ಕರೆ ಕೊಟ್ಟರು. ಬ್ರಿಟಿಷರ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಬೇಕೆಂದು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು.ಗಾಂಧಿ ಪ್ರೇರಿತ ಅಹಿಂಸಾ ಹೋರಾಟದಲ್ಲಿ ಪಾಲ್ಗೊಂಡು,ಗಾಂಧಿಗೆ ಮಹಾತ್ಮ ಎಂದು ಕರೆದಿದ್ದು ಕೂಡ ಠಾಗೋರರೇ. ಸ್ವಾತಂತ್ರ್ಯ ಹೋರಾಟದ ಜತೆ ಜತೆಗೆ ಅವರು ಸಮಾಜದಲ್ಲಿನ ಅನಿಷ್ಟಗಳ ವಿರುದ್ಧ ಹೋರಾಟ ಮಾಡಿದ ಫಲವಾಗಿ ಕೇರಳದ ಗುರುವಾಯೂರಿನಲ್ಲಿ ದಲಿತರ ದೇಗುಲ ಪ್ರವೇಶಕ್ಕೆ ನಾಂದಿಯಾಯಿತು.ಕನ್ನಡದ ರಾಷ್ಟ್ರಕವಿ ಕುವೆಂಪು, ದ.ರಾ.ಬೇಂದ್ರೆ, ಪು.ತಿ.ನ.ರಂತೆ ಶ್ರೇಷ್ಠ ಸಾಹಿತಿಗಳಿಗೆ ಠಾಗೋರ್ ಅವರ ಬದುಕು ಹಾಗೂ ಬರಹ ಸ್ಫೂರ್ತಿಯಾಯಿತು.
ಶಾಂತಿನಿಕೇತನ
ಧ್ಯೇಯಪರವಾದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದ ಠಾಗೋ ರ್, ತಮ್ಮ ಕನಸಿನ ಶಿಕ್ಷಣವನ್ನು ಜಾರಿಗೊಳಿಸಲೆಂದು ಕೋಲ್ಕತ್ತಾಕ್ಕೆ 180 ಕಿ.ಮೀ. ದೂರದಲ್ಲಿರುವ ಶಾಂತಿನೀಕೇತನ ಎಂಬ ಊರಿನಲ್ಲಿ ವಿಶ್ವವಿದ್ಯಾನಿಲಯ ಆರಂಭಿಸುತ್ತಾರೆ.ಇದೇ ಮುಂದೆ ಶಾಂತಿನಿಕೇತನ (ವಿಶ್ವಭಾರತಿ) ವಿಶ್ವವಿದ್ಯಾಲಯ ಎಂದು ಜಗತøಸಿದ್ಧಿಯಾಗುತ್ತದೆ.
ಕೃತಿಗಳಲ್ಲಿದೆ ಜೀವನ ಪ್ರೀತಿ, ಬದುಕಿನ ಮೌಲ್ಯ
ರವೀಂದ್ರನಾಥ ಠಾಗೋರ್ ಅವರ ಸಾಹಿತ್ಯ ಕೃತಿಗಳ ಮೂಲಕ ಸಾಮಾಜಿಕ ಕ್ರಾಂತಿ, ಸೂಕ್ಷ್ಮ ಸಂವೇದನೆ ಹಾಗೂ ವಿಶೇಷ ಜೀವನ ಪ್ರೀತಿಯನ್ನು ನೋಡಬಹುದಾಗಿದೆ. ಅವರ ಸೂಕ್ಷ್ಮ ಸಂವೇದನೆ ಹಾಗೂ ನವ ನವೀನ ಸುಂದರ ಪದ್ಯಗಳ ಸಂಕಲನವಾದ ಗೀತಾಂಜಲಿ 1913ರಲ್ಲಿ ಪ್ರತಿಷ್ಠಿತ ನೋಬೆಲ್ ಸಾಹಿತ್ಯ ಪ್ರಶಸ್ತಿಯನ್ನು ದೊರೆಕಿಸಿಕೊಟ್ಟಿತು. ಅಲ್ಲದೇ ಭಾರತದ ರಾಷ್ಟ್ರ ಗೀತೆಯಾದ ಜನಗಣಮನ ಗೀತೆಯನ್ನು ರಚಿಸಿದವರು ಕೂಡ ರವೀಂದ್ರನಾಥ ಠಾಗೋ ರ್. ಇವರ ಕೃತಿಗಳಲ್ಲಿ ಪ್ರಮುಖವಾದವು ಎಂದರೆ, ಚತುರಂಗ, ಶೇಶರ್ ಕೋಬಿತ, ಘರ್‌ಬೈರೆ, ವಾಲ್ಮೀಕಿ ಪ್ರತಿಭಾ ಸಹಿತ ಇನ್ನೂ ಹಲ ವಾರು ಕೃತಿಗಳನ್ನು ರಚಿಸಿದ್ದಾರೆ.
ಇನ್ನು ರವೀಂದ್ರನಾಥ ಠಾಗೋರ್ ಅವರ ಬರಹದಲ್ಲಿ ವ್ಯಕ್ತವಾಗುವುದು ಜೀವನ ಪ್ರೀತಿ ಹಾಗೂ ಮಾನವೀಯ ಮೌಲ್ಯಗಳು.ಇದರಿಂದ ಸಮಾಜದಲ್ಲಿ ಸಮಾನತೆ ಹಾಗೂ ನೈತಿಕತೆ ಸೃಷ್ಟಿಸಬೇಕು ಎಂದು ಕೊಂಡಿದ್ದರು ಅವರು.
ಅರಿವೇ ಗುರು
ಸಮಾಜದಲ್ಲಿ ಅರಿವು ಎಂಬ ಜ್ಞಾನ ಇರದಿದ್ದರೆ, ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಹಾಗೂ ಆದರ್ಶದ ಸಮಾಜ ನಿರ್ಮಿಸಲು ಸಾಧ್ಯವಿಲ್ಲ. ಇದಕ್ಕೆ ಪೂರಕವಾಗಿ ರವೀಂದ್ರನಾಥ ಠಾಗೋರ್ ಹೇಳು ವುದು ಹೀಗೆ… ಪ್ರಪಂಚದೊಡನೆ ತನಗಿರುವ ಸಂಬಂಧವನ್ನು ಮನುಷ್ಯ ಅರಿತುಕೊಳ್ಳದಿದ್ದರೆ, ಅವನು ವಾಸಿಸುವ ಸ್ಥಳ ಸೆರೆಮನೆಯಾಗುತ್ತದೆ.
ಅಧರ್ಮದ ನಡೆಗಳು ಇಂದು ತಾಂಡವವಾಡುತ್ತಿರುವ ಈ ಕಾಲದಲ್ಲಿ ಮನುಷ್ಯನ ಅರಿವಿಗೆ ಕೇಡು ಬಂದಿದೆ. ಜೀವನ ಪ್ರೀತಿಗಿಂತ ಸ್ವಾರ್ಥ ಪ್ರೀತಿ ಹೆಚ್ಚುತ್ತಿದೆ ಎಂಬು ದನ್ನು ಠಾಗೋರ್ ವಿವರಿಸುವುದು ಹೀಗೆ… ನಾವು ನಮ್ಮ ಮನುಸ್ಸುಗಳಿಗೆ ಮೊದಲು ಅರಿವು ಎಂಬ ಮದ್ದು ಹಾಕಿ ಜ್ಞಾನದ ಕಡೆ ಹೋಗಬೇಕಿದೆ.
ಕಲಿಕೆಗೆ ಗೋಡೆ ಬೇಡ
ಇಂದಿನ ಶಿಕ್ಷಣ ಎಂದರೆ,ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಔಪಚಾರಿಕ ಕ್ರಮವಾಗಿದೆ. ಇದರಲ್ಲಿ ಸಣ್ತೀಪೂರಿತ,ಸೃಜನಶೀಲ ಶಿಕ್ಷಣ ಇರದೇ ಕೇವಲ ಔಷಚಾರಿಕ ಪಠ್ಯಕ್ಕೆ ಮಾತ್ರ ಸೀಮಿತವಾಗಿದೆ. ಮಕ್ಕಳ ಮೇಲೆ ಪಾಲಕರು ಹಾಗೂ ಶಿಕ್ಷಕರು ಪಠ್ಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಅವರಿಗೆ ಪ್ರಪಂಚದ ಜ್ಞಾನ ನೀಡದಂತೆ ಮಾಡುತ್ತಿದ್ದಾರೆ.ಆ ಮಕ್ಕಳಿಗೆ ಸಂಗೀತ, ಸಾಹಿತ್ಯ, ಸಂಸ್ಕೃತಿ ಬಗೆಗಿನ ವಿಶೇಷ ಚಿಂತನೆಗಳು ಮಾಡಿಸುವ ಕೆಲಸ ಕೂಡ ಆಗುತ್ತಿಲ್ಲ. ಈ ಕುರಿತು ಈ ಠಾಗೋರ್ ಅವರು ನೀಡಿ ರುವ ಸಲಹೆ ಆಧುನಿಕ ಶಿಕ್ಷಣಕ್ಕೆ ಆದರ್ಶವಾಗುತ್ತದೆ.
ಕಲಿಕೆಯ ಮಿತಿಯನ್ನು ಮಕ್ಕಳ ಮೇಲೆ ಹೇರಬೇಡಿ, ಅವರೂ ಹುಟ್ಟಿರುವುದೂ ಬೇರೆ ಕಾಲದಲ್ಲಿ.ಓಡುವ ಕಾಲಕ್ಕೆ ಹೇಗೆ ಮಿತಿಯಿಲ್ಲವೋ ಅದರಂತೆ, ಕಲಿಕೆಗೆ ಮಿತಿಯ ಗೋಡೆಯ ಕಟ್ಟಬೇಡಿ ಎನ್ನುತ್ತಾರೆ.
ಅವಕಾಶಗಳನ್ನು ಕೈ ಚೆಲ್ಲದಿರಿ
ಮನುಷ್ಯನು ಅವಕಾಶ ಸಿಕ್ಕಿತು ಎಂದರೆ, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂಬ ಮಹತ್ವಾ ಕಾಂಕ್ಷೆಯಲ್ಲಿರುತ್ತಾನೆ. ಆದರೆ ಆಕಸ್ಮಾತ್ ಕೈ ತಪ್ಪಿತೆಂದರೆ ಅವರು ಪಡುವ ನೋವು,ಸಂಕಟ,ಯಾತನೆ ಅಷ್ಟಿಷ್ಟಲ್ಲ. ಇನ್ನೇನೂ ಜೀವನ ಮುಗಿಯಿತು ಎಂಬ ಆಲೋಚನೆಯೇ ಮನದಲ್ಲಿ ತುಂಬಿ ಹೋಗುತ್ತದೆ. ಆದರೆ, ಅವನಿಗೆ ತಿಳಿದಿಲ್ಲ, ಅವಕಾಶಗಳೆಂಬ ಸೂರ್ಯ ಮುಳುಗಿರಬಹುದು. ಆದರೆ ಆತ್ಮಸ್ಥೆರ್ಯ ಎಂಬ ನಕ್ಷತ್ರಗಳು ರಾತ್ರಿಯಲ್ಲಿ ಕಾಣು ತ್ತವೆ ಎಂಬ ಕನಿಷ್ಠ ಚಿಂತನೆ ಮಾಡುವುದಿಲ್ಲ. ಅದಕ್ಕೆ ರವೀಂದ್ರ ನಾಥ ಠಾಗೋರ್ ಹೇಳುವುದು ಹೀಗೆ…
ನಮ್ಮ ಜೀವನದಲ್ಲಿ ಸೂರ್ಯ ಮರೆಯಾದನೆಂದು ನೀವು ಅತ್ತರೆ, ಹೊಳೆಯುವ ನಕ್ಷತ್ರಗಳು ಕಾಣಿಸಲು ಕಣ್ಣೀರು ಅಡ್ಡಿಯಾಗುತ್ತದೆ.ಅದಕ್ಕೆ ತಾಳ್ಮೆಯ ಫಲದಿಂದ ಜೀವನ ನಡೆಸಿ, ಅವಕಾಶಗಳ ಯಶಸ್ವಿಗೆ ಕೂಡ ಕಾಲ ಕೂಡಿ ಬರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.