ವರ್ಷವಿಡೀ ಮಳೆ; ಎಚ್ಚರಿಕೆಯ ಕರೆಗಂಟೆ


Team Udayavani, Dec 2, 2021, 12:20 PM IST

ವರ್ಷವಿಡೀ ಮಳೆ; ಎಚ್ಚರಿಕೆಯ ಕರೆಗಂಟೆ

ಎಲ್ಲ ರಾಷ್ಟ್ರಗಳೂ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಮತ್ತು ನಿಯಂತ್ರಣಕ್ಕೆ ಸೂಕ್ತವಾದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ. ನೈಜ ಪರಿಸ್ಥಿತಿಯ ಅರಿವು ಆಡಳಿತ ವ್ಯವಸ್ಥೆ ಮತ್ತು ಜನರಿಗಾಗಬೇಕಿದೆ. ಪ್ರಕೃತಿ ನಾಶ ನಮ್ಮ ನಾಶವೆಂಬ ಎಚ್ಚರಿಕೆಯಿಂದ ಪ್ರಕೃತಿಯ ಸಮತೋಲನವನ್ನು ಉಳಿಸಲು ಶ್ರಮಿಸಲೇಬೇಕಾದ ಅನಿವಾರ್ಯ ಬಂದೊದಗಿದೆ.

ಯಾವಾಗ ನಿಲ್ಲುತ್ತಪ್ಪಾ ಈ ಮಳೆ, ಸಾಕಾಗಿ ಹೋಯಿತು. ನವರಾತ್ರಿ ಕಳೆದು, ದೀಪಾವಳಿ ಮುಗಿದು ಕೆಲವು ವಾರಗಳೇ ಸಂದರೂ ಮಳೆ ಮಾತ್ರ ನಿಲ್ಲುತ್ತಿಲ್ಲ. ಮಳೆಗಾಲದ ಪ್ರಾರಂಭದಲ್ಲಿ ಇರುವಂತೆ ಎಲ್ಲೆಲ್ಲೂ ಗಿಜಿ ಗಿಜಿ. ಯಾವಾಗ ಈ ಮಳೆ ನಿಲ್ಲುತ್ತದೆಯೋ… ಈ ರೀತಿಯ ಉದ್ಗಾರಗಳು ಈಗ ಎಲ್ಲರ ಬಾಯಲ್ಲೂ ಕೇಳಿಬರುತ್ತಿವೆ.

ಜೂನ್‌ನ ಮೊದಲೇ ಮುಂಗಾರು ಮಳೆ ಪ್ರಾರಂಭ ವಾಗಿ, ಸೆಪ್ಟಂಬರ್‌ ಅಂತ್ಯದಲ್ಲಿ ಈ ಮಳೆ ನಿಂತು ಹಿಂಗಾರು ಮಳೆ ಪ್ರಾರಂಭವಾಗಿ ಆಗಲೇ ಮುಗಿದು ಆಕ್ಟೋಬರ್‌ ಅಂತ್ಯಕ್ಕೆ ಚಳಿಗಾಲ ಪ್ರಾರಂಭವಾಗುವುದು ಮಾಮೂಲಿ. ಆದರೆ ಈ ವರ್ಷ ಡಿಸೆಂಬರ್‌ ಬಂದರೂ ಮಳೆ ನಿಲ್ಲುತ್ತಿಲ್ಲ. ಅದರಲ್ಲೂ ಮಳೆಯ ಕ್ರಮವೇ ವ್ಯತ್ಯಾಸವಾಗಿದೆ. ಇಡೀ ತಿಂಗಳು ಹೊಯ್ಯುವ ಮಳೆ ಒಂದೇ ದಿನದಲ್ಲಿ ಭರ್ರನೆ ಹೊಯ್ದು ನೀರೋ ನೀರು. ಎಲ್ಲೆಲ್ಲೂ ಅವಾಂತರ, ಆತಂಕ.
ಇದು ಈ ವರ್ಷ ಏಕಾಏಕಿಯಾಗಿ ಉದ್ಭವಿಸಿದ ಸಮಸ್ಯೆ ಏನಲ್ಲ. ಕಳೆದ ಕೆಲವು ವರ್ಷಗಳಿಂದೀಚೆಗೆ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ನಾವು ಕಾಣುತ್ತಲೇ ಬಂದಿದ್ದೇವೆ. ಆದರೆ ಈ ಬಾರಿಯಂತೂ ಋತುಮಾನ ಚಕ್ರವೇ ಅದಲುಬದಲಾದಂತೆ ತೋರು ತ್ತಿದೆ. ಆದರೆ ಈ ಎಲ್ಲ ಸಮಸ್ಯೆಗೆ ಕಾರಣೀಭೂತರು ನಾವು ಮತ್ತು ನಮ್ಮ ಆಡಳಿತ ವ್ಯವಸ್ಥೆ ಎಂದರೆ ಅದರಲ್ಲಿ ಕಿಂಚಿತ್‌ ಅತಿಶಯೋಕ್ತಿ ಇರಲಾರದು.

ಯಾಕೆ ಹೀಗೆ?
ಅರಬಿ ಸಮುದ್ರ ಬಿಸಿಯಾಗಿದೆ: ಭಾರತದ ಪಶ್ಚಿಮದ ಅರಬಿ ಸಮುದ್ರವು, ಪೂರ್ವದ ಬಂಗಾಲ ಕೊಲ್ಲಿಗಿಂತ ಯಾವಾಗಲೂ ತಂಪು. ವಿಜ್ಞಾನಿಗಳ ಪ್ರಕಾರ ಇಲ್ಲಿಯವರೆಗೆ ಅರಬಿ ಸಮುದ್ರದ ಸರಾಸರಿ ಉಷ್ಣತೆ 28 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ. ಆದರೆ ಬಂಗಾಲ ಕೊಲ್ಲಿಯ ಉಷ್ಣತೆ 31 ಡಿ. ಸೆ.ಗಿಂತ ಹೆಚ್ಚು. ಚಂಡಮಾರುತ ಸೃಷ್ಟಿಯಾಗಬೇಕಾದರೆ ಸಮುದ್ರದ ಉಷ್ಣತೆಯ ಮಿತಿ 28 ಡಿ. ಸೆ.ಗಳಷ್ಟಿರಬೇಕು. ಮುಂಗಾರು ಮಳೆ ಪ್ರಾರಂಭ ಹಾಗೂ ಮುಗಿಯುವ ಕಾಲದಲ್ಲಿ ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತ ಹೆಚ್ಚು. ಅರಬಿ ಸಮುದ್ರದಲ್ಲಿ ಚಂಡ ಮಾರುತ ಅತೀ ವಿರಳ. ವಿಜ್ಞಾನಿಗಳ ಪ್ರಕಾರ ಈಗ ಅರಬಿ ಸಮುದ್ರದ ಉಷ್ಣತೆ ಮಾಮೂಲಿಗಿಂತ ಹೆಚ್ಚಾಗಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಅರಬಿ ಸಮುದ್ರದಲ್ಲಿ ಚಂಡಮಾರುತ ಹೆಚ್ಚಾಗುತ್ತಿದೆ. ಸರಾಸರಿ 27 ಡಿಗ್ರಿ ಉಷ್ಣತೆಯಿಂದ ತಂಪಾಗಿದ್ದ ಅರಬಿ ಸಮುದ್ರ ಈಗ 29 ಡಿಗ್ರಿಗಿಂತಲೂ ಅಧಿಕವಾಗಿರುವುದರಿಂದ ಬಂಗಾಲ ಕೊಲ್ಲಿಯಲ್ಲಿ ಸಂಭವಿಸುವಂತೆ ಇಲ್ಲೂ ಚಂಡಮಾರುತ ಹೆಚ್ಚಾಗುತ್ತಿದೆ. ಇದೊಂದು ಎಚ್ಚರಿಕೆಯ ಕರೆಗಂಟೆ.

ಇದನ್ನೂ ಓದಿ:ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ಹವಾಮಾನ ಬದಲಾವಣೆ
ಈಗ ಅತೀ ಹೆಚ್ಚು ಮಳೆ, ಚಳಿಗಾಲದಲ್ಲಿ ತಡೆದು ಕೊಳ್ಳಲಾಗದ ಚಳಿ ಹಾಗೂ ಮೈ ಸುಟ್ಟೇ ಹೋಗುವುದೋ ಎನ್ನುವಂತಹ ಬಿಸಿಲು, ಅನೇಕ ಚಂಡಮಾರುತಗಳು ಈ ಎಲ್ಲ ಹವಾಮಾನ ಬದಲಾವಣೆ, ವೈಪರೀತ್ಯಗಳಿಗೆ ಪ್ರಮುಖ ಕಾರಣಗಳೆಂದರೆ ಪಶ್ಚಿಮ ಘಟ್ಟಗಳ ನಾಶ ಮತ್ತು ಭೂಮಿಯ ವಾತಾವರಣದ ಉಷ್ಣತೆ ಏರಿಕೆ.
ಪ್ರಕೃತಿ ರಮ್ಯ ಪಶ್ಚಿಮ ಘಟ್ಟಗಳ ನಾಶ: ಗುಜರಾತ್‌, ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳಗಳನ್ನು ಅಪ್ಪಿಕೊಂಡಿರುವ ಭಾರತದ ಭವ್ಯ ಪಶ್ಚಿಮ ಘಟ್ಟದ ಸಾಲುಗಳಲ್ಲಿ ಅತಿಯಾದ ಅರಣ್ಯ ನಾಶ ಹಾಗೂ ಗಣಿಗಾರಿಕೆ ಈ ಹವಾಮಾನ ಬದಲಾವಣೆಗೆ ಪ್ರಮುಖ ಕಾರಣ. ಸುಮಾರು 1,600 ಕಿ.ಮೀ. ಉದ್ದವಿರುವ ಈ ಪರ್ವತ ಶ್ರೇಣಿಯು 1,40,000 ಚದರ ಕಿ.ಮೀ. ವ್ಯಾಪಿಸಿದೆ. ವಿಶ್ವ ಜೀವ ವೈವಿಧ್ಯತೆಯ ತಾಣವಾಗಿರುವ ಈ ನಮ್ಮ ಪಶ್ಚಿಮ ಘಟ್ಟ ದಕ್ಷಿಣ ಭಾರತದಲ್ಲಿರುವ ಅನೇಕ ನದಿಗಳ ಉಗಮ ತಾಣ. ಕಳೆದ 17 ವರ್ಷಗಳಲ್ಲಿ ಸುಮಾರು 20,000 ಹೆಕ್ಟೇರ್‌ ಅರಣ್ಯ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಲಕ್ಷೋಪಲಕ್ಷ ವರ್ಷಗಳಿಂದ ಬೆಳೆದುಬಂದಿರುವ ಈ ಹಸುರು ಸಂಪತ್ತಿನ ನಾಶ ಸರಿಪಡಿಸಲಸಾಧ್ಯ. ಇದರ ಪರಿಣಾಮ ಈ ವಿಚಿತ್ರ ಹವಾಮಾನ ಬದಲಾವಣೆಗಳೆಂದು ವಿಜ್ಞಾನಿಗಳು ಅನೇಕ ಬಾರಿ ಎಚ್ಚರಿಸಿದ್ದರು. ಈಗ ನಡುಕ ಹುಟ್ಟುವ ರೀತಿಯಲ್ಲಿ ಪ್ರಕೃತಿ ಮುನಿದಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರವು ಕೇರಳದ ಭೂ ಕುಸಿತ, ನೆರೆ ಹಾವಳಿಗೆ 2019ರಲ್ಲೇ ಕಾಡು ನಾಶ ಮತ್ತು ಮಳೆಯ ಅವಾಂತರಗಳ ನೇರ ಸಂಬಂಧವನ್ನು ತಿಳಿಸಿ ಎಚ್ಚರಿಸಿದೆ. ಪಶ್ಚಿಮ ಘಟ್ಟದ ಪರಿಸರ ನಾಶದಿಂದ ಇಡೀ ದೇಶದಲ್ಲಿ ಮುಂಗಾರು, ಹಿಂಗಾರು ಮಳೆಗಳ ಅವ್ಯವಸ್ಥೆಯನ್ನು ಗಮನಿಸಬಹುದು.

ಭೂಮಿಯ ವಾತಾವರಣದ ಉಷ್ಣತೆ ಏರಿಕೆ: ಭೂಮಿಯ ಹಿತಮಿತವಾದ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೆಡ್‌ನ‌ ಪ್ರಮಾಣ ಅದೆಷ್ಟು ಹೆಚ್ಚಿದೆ ಎಂದರೆ ಊಹೆಗೂ ನಿಲುಕದಷ್ಟು. ಈಗ ಎಲ್ಲ ರಾಷ್ಟ್ರಗಳೂ ತಮ್ಮ ತಪ್ಪನ್ನು ಇತರರ ಮೇಲೆ ಹೇರುತ್ತಿವೆ. ಈ ಕಲುಷಿತ ವಾತಾವರಣದಿಂದ ಭೂಮಿಯ ಉಷ್ಣತೆ ಕಳೆದ ಕೆಲವು ವರ್ಷಗಳಿಂದೀಚೆಗೆ ಒಂದೇ ಸಮನೆ ಏರುತ್ತಿದೆ. ಇದರ ಪರಿಣಾಮ ಧ್ರುವ ಪ್ರದೇಶದ ಹಿಮಗಡ್ಡೆಗಳು ಕರಗಿ ಸಮುದ್ರ ಸೇರಿ ಸಮುದ್ರಮಟ್ಟವನ್ನು ಏರಿಸುತ್ತಿವೆ. ಇದರಿಂದಾಗಿ ಸಮುದ್ರ ತೀರ ಮುಳುಗುವ ಸ್ಥಿತಿ. ಒಂದು ಅಂದಾಜಿನ ಪ್ರಕಾರ ಸುಮಾರು 25 ವರ್ಷಗಳಲ್ಲಿ ಭೂಮಿಯ ಸಮುದ್ರ ತೀರದ ಅನೇಕ ಪ್ರದೇಶಗಳು ಮುಳುಗಲಿವೆ. ಅದರಲ್ಲಿ ನಮ್ಮ ಭಾರತದ ಮುಂಬಯಿ, ಸೂರತ್‌, ಗೋವಾ, ಕೇರಳ, ಕರ್ನಾಟಕದ ಕೆಲವು ತೀರಗಳು, ಚೆನ್ನೈ, ಕೊಲ್ಕತಾ ಹಾಗೂ ವಿಶಾಖಪಟ್ಟಣ ಅಪಾಯಕಾರಿ ಸ್ಥಿತಿಯಲ್ಲಿವೆ. ಈ ತೀರ ಪ್ರದೇಶಗಳ ಸುಮಾರು 28 ಮಿಲಿಯ ಜನರಿಗೆ ತೊಂದರೆ ಖಂಡಿತ.

ಎಚ್ಚರಿಕೆಯ ಮುನ್ಸೂಚನೆ
ಈ ವರ್ಷದ ದೇಶದಲ್ಲಿನ ವಿಚಿತ್ರ ಮಳೆ ಇನ್ನು ಪ್ರತೀ ವರ್ಷ ಮುಂದುವರಿಯಲಿದೆ. 2030ರ ವರೆಗಂತೂ ಖಂಡಿತ ಇದೇ ರೀತಿಯ ಹವಾಮಾನ ವೈಪರೀತ್ಯಗಳು ಸಂಭವಿಸುತ್ತದೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ದೇಶದಲ್ಲಿ ಮಳೆ ಬೀಳುವ ಪ್ರದೇಶಗಳಲ್ಲಿ ಈ ತೆರನಾದ ವಿಚಿತ್ರ ಮಳೆ ಹೆಚ್ಚಾಗಲಿದ್ದರೆ ಮಳೆಯೇ ಇಲ್ಲದ ಪ್ರದೇಶಗಳನ್ನು ಬರ ಇನ್ನಷ್ಟು ಕಾಡಲಿದೆ ಎಂದೂ ಅವರು ತಿಳಿಸಿದ್ದಾರೆ.

ಈಗೇನು ಮಾಡಬೇಕು?
ಇನ್ನಾದರೂ ಎಲ್ಲ ರಾಷ್ಟ್ರಗಳೂ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಮತ್ತು ನಿಯಂತ್ರಣಕ್ಕೆ ಸೂಕ್ತವಾದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ. ನೈಜ ಪರಿಸ್ಥಿತಿಯ ಅರಿವು ಆಡಳಿತ ವ್ಯವಸ್ಥೆ ಮತ್ತು ಜನರಿಗಾಗಬೇಕಿದೆ. ಪ್ರಕೃತಿ ನಾಶ ನಮ್ಮ ನಾಶವೆಂಬ ಎಚ್ಚರಿಕೆಯಿಂದ ಪ್ರಕೃತಿಯ ಸಮತೋಲನವನ್ನು ಉಳಿಸಲು ಶ್ರಮಿಸಲೇಬೇಕಾದ ಅನಿವಾರ್ಯ ಬಂದೊದಗಿದೆ. ಸಸ್ಯ ಸಂಪತ್ತು, ಭೂ ಸಂಪತ್ತು ಹಾಗೂ ಪರಿಸರ ಸಂಪತ್ತನ್ನು ಮುಂದಿನ ತಲೆಮಾರಿಗೆ ಆದಷ್ಟು ಉಳಿಸುವ ಪ್ರಯತ್ನ ಪ್ರಾಮಾಣಿಕವಾಗಿ ಆಗಬೇಕಿದೆ. ನಮ್ಮ ಪ್ರತೀ ಹಳ್ಳಿಗಳು ಹಾಗೂ ಪಟ್ಟಣಗಳಲ್ಲಿ ಮುಂಜಾಗ್ರತ ಕ್ರಮಗಳನ್ನು ಅನಿವಾರ್ಯವಾಗಿ ಕೈಗೊಳ್ಳಲೇಬೇಕಿದೆ.

-ಡಾ| ಎ.ಪಿ. ಭಟ್‌, ಉಡುಪಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

KSD-

Kasaragodu: ಆದೂರು ಶ್ರೀಭಗವತಿ ದೈವಸ್ಥಾನ: 351 ವರ್ಷ ಬಳಿಕ ಪೆರುಂಕಳಿಯಾಟ ಸಂಭ್ರಮ

Police

Kodagu: ಬ್ಯಾಂಕ್‌ ಅಧಿಕಾರಿಗಳು, ಜುವೆಲರಿ ಮಾಲಕರ ಜೊತೆ ಎಸ್‌ಪಿ ಸಭೆ

cOurt

Mangaluru: ಪೋಕ್ಸೋ ಪ್ರಕರಣದ ಆರೋಪಿ ದೋಷಮುಕ್ತ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣMLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maha Kumbh Mela 2025: ಛತ್ತೀಸ್‌ ಗಢ ಟು ಪ್ರಯಾಗ್‌ ರಾಜ್;‌ ಸ್ಕೇಟಿಂಗ್‌ ಮೂಲಕ ಕುಂಭಮೇಳಕ್ಕೆ ಆಗಮಿಸಿದ ಯುವಕ

Maha Kumbh: ಛತ್ತೀಸ್‌ ಗಢ ಟು ಪ್ರಯಾಗ್‌;‌ ಸ್ಕೇಟಿಂಗ್‌ ಮೂಲಕ ಕುಂಭಮೇಳಕ್ಕೆ ಆಗಮಿಸಿದ ಯುವಕ

mahatma-gandhi

Belagavi Congress Session: “ತ್ರಿಸೂತ್ರ’ವೇ ನವಭಾರತದ ಮಂತ್ರ!

Work-Time

Work Time Issue: ವಾರಕ್ಕೆ 90 ಗಂಟೆ ಕೆಲಸ ಸಲೀಸಾ?

Jalachara-4

Winter Season: ಚಳಿಗಾಲದಲ್ಲಿ ಕಡಲಿಗೆ ಇಳಿಯುವ ಮುನ್ನ…

CO2

ಶೂನ್ಯ ಇಂಗಾಲದ ಗುರಿ: ಜಾಗತಿಕ ಸಹಭಾಗಿತ್ವ ಅಗತ್ಯ

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

Suside-Boy

Manipal: ಪಶ್ಚಿಮ ಬಂಗಾಲದ ವ್ಯಕ್ತಿಯ ಶವ ಪತ್ತೆ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Frud

Udupi: ಷೇರು ಮಾರುಕಟ್ಟೆಯಲ್ಲಿ 21ಲಕ್ಷ ರೂ. ಹೂಡಿಕೆ: ವಂಚನೆ

balaparadha

Kumbale: ಮೊಬೈಲ್‌ ಫೋನ್‌ ಕಳವು: ಆರೋಪಿ ಸೆರೆ

Suside-Boy

Vitla: ಅನಂತಾಡಿ: ಸೀರೆಗೆ ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.