ಒಂಟಿ ಜೀವನ …ಇದು ರತನ್ ಟಾಟಾ ಪ್ರೇಮ ಕಹಾನಿ….


ದಿನೇಶ ಎಂ, Nov 6, 2022, 5:30 PM IST

rathan tata love story

ಉದ್ಯಮಿಗಳೆಂದರೆ ಜನ-ಸಾಮಾನ್ಯರ ಮನದಲ್ಲಿ ಬಿಡಿಗಾಸು ಬಿಚ್ಚದವರು ಹಾಗೂ ಜನಸಾಮಾನ್ಯರನ್ನು ಲೂಟಿ ಮಾಡುವವರು ಎಂಬ ಭಾವನೆ ಹೆಚ್ಚಿನವರಲ್ಲಿ ಇರುವುದು ಸಹಜ. ಆದರೆ ಉದ್ಯಮಿ ರತನ್ ಟಾಟಾ ಈ ಉದ್ಯಮಿಗಳಿಗಿಂದ ದೇಶದ ಪ್ರತಿಯೊಬ್ಬರಿಗೂ ಗೌರವ ಹೆಮ್ಮೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲೂ ದೇಶದ ಜನರ ಬೆಂಬಲಕ್ಕೆ ನಿಂತು ಸುಮಾರು 500 ಕೋಟಿ ದೇಣಿಗೆ ನೀಡಿದವರು ರತನ್‌ ಟಾಟಾ. ಇದರ ಜೊತೆಗೆ ಟಾಟಾ ಗ್ರೂಪ್ 1,000 ಕೋಟಿ ದೇಣಿಗೆ ನೀಡಿ ಇತರರಿಗೆ ಮಾದರಿಯಾಗಿದ್ದಾರೆ.

1835 ರ ಸಮಯದಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಭಾರತದ ಈಶಾನ್ಯದ ಗಡಿ ಪ್ರದೇಶದ ಅಸ್ಸಾಂ ನ ನಿತ್ಯಹರಿದ್ವರ್ಣ ಅರಣ್ಯ ಪ್ರದೇಶಗಳಲ್ಲಿ ವೈವಿಧ್ಯಮಯ ಚಹಾ ಪ್ರಭೇದಗಳಿತ್ತು ಎಂಬುದು ತಿಳಿದಿತ್ತು. ಇದರಿಂದ ಬ್ರಿಟಿಷರ ಚಹಾ ಉದ್ಯಮದ ಅತಿದೊಡ್ಡ ಸಾಮ್ರಾಜ್ಯವಾಗಿ ಭಾರತ ಬೆಳೆಯಿತು.

ಭಾರತಕ್ಕೆ 1947 ರಲ್ಲಿ ದೊರಕಿದ ಸ್ವಾತಂತ್ರ್ಯದೊಂದಿಗೆ ಬ್ರಿಟಿಷ್ ಆಳ್ವಿಕೆ ಕೊನೆಗೊಂಡು ಟಾಟಾ ಗ್ರೂಪ್ ಬ್ರಿಟಿಷ್ ಸಾಮ್ರಾಜ್ಯದ ಅತಿದೊಡ್ಡ ಟಿ ಬ್ರ್ಯಾಂಡ್ ಆಗಿದ್ದ ಟೆಟ್ಲಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಯಿತು. ಭಾರತೀಯ ಕಂಪನಿ ಸ್ವಾಧೀನಪಡಿಸಿಕೊಂಡಿರುವ ಅತಿದೊಡ್ಡ ವಿದೇಶಿ ಸ್ವಾಧೀನ ಕಂಪನಿ ಇದು.

ಆ ಸಮಯದಲ್ಲಿ ಸಂದರ್ಶನ ಮಾಡಿದ್ದ ಪತ್ರಕರ್ತರಾದ ಡಾಮಿಯನ್ ರತನ್ ಅವರನ್ನು ಭೇಟಿಯಾಗುವ ಮುನ್ನವೇ ರತನ್ ಟಾಟಾ ಕುರಿತಾದ ಕೆಲವೊಂದು ವಿಷಯಗಳನ್ನು ತಿಳಿದಿದ್ದರು. ದೇಶದ ಶ್ರೀಮಂತ ವ್ಯಕ್ತಿಯಾಗಿದ್ದರೂ ಅವರ ಜೀವನಶೈಲಿ ಸಾಮಾನ್ಯರದ್ದಾಗಿತ್ತು ಎಂಬುದಾಗಿ ಡಾಮಿಯನ್ ಸ್ವತಃ ಹೇಳಿದ್ದಾರೆ. ಏರ್ ಇಂಡಿಯಾ ಆಯೋಜಿಸಿದ್ದ ಪಾರ್ಟಿಯೊಂದರಲ್ಲಿ ಡಾಮಿಯನ್ ಕೂಡ ಭಾಗವಹಿಸಿದ್ದರು. ಜೆ.ಆರ್‌.ಡಿ ಟಾಟಾ 1932 ರಲ್ಲಿ ಸ್ಥಾಪಿಸಿದ್ದ ಭಾರತದ ಮೊದಲ ವಾಣಿಜ್ಯ ವಿಮಾನವೆಂಬ ಹೆಸರನ್ನು ಇದು ಪಡೆದಿತ್ತು. ಸಂಪೂರ್ಣ ಮುಂಬೈಯ ಅತಿರಥ ಮಹಾರಥರು ಅಲ್ಲಿದ್ದರು. ಆದರೆ ಹಾಜರಿರಬೇಕಿದ್ದ ಒಬ್ಬ ವ್ಯಕ್ತಿ ರತನ್ ಟಾಟಾ ಪಾರ್ಟಿಯಲ್ಲಿರಲಿಲ್ಲ.

ಈ ಬಗ್ಗೆ ಕೇಳಿದಾಗ ಪಾರ್ಟಿಗಳಲ್ಲಿ ಅವರು ಭಾಗವಹಿಸುವುದಿಲ್ಲ. ಏಕಾಂತವನ್ನು ಅವರು ತುಂಬಾ ಇಷ್ಟಪಡುತ್ತಾರೆ ಎಂಬುದು ತಿಳಿದುಬಂತು ಎಂದು ಅವರು ತಿಳಿಸಿದ್ದಾರೆ. ಕಾರನ್ನು ಒಮ್ಮೊಮ್ಮೆ ಅವರೇ ಚಲಾಯಿಸುತ್ತಿದ್ದರು. ಇನ್ನು ತಾನೊಬ್ಬ ಗಣ್ಯವ್ಯಕ್ತಿ ಎಂಬುದನ್ನು ಅವರು ಎಲ್ಲಿಯೂ ತೋರಿಸಿಕೊಳ್ಳುತ್ತಿರಲಿಲ್ಲ. ಜೊತೆಗೆ ಬಡವರ ಕನಸು ಸಾಕಾರಗೊಳಿಸಲು ನ್ಯಾನೋ ಕಾರು ಉದ್ಪಾದನೆ ಮಾಡಿದ ಟಾಟಾ ಹಲವು ಸಲ ನ್ಯಾನೋ ಕಾರಿನಲ್ಲೇ ಓಡಾಡಿ ತಮ್ಮ ಸರಳ ವ್ಯಕ್ತಿತ್ವವನ್ನು ಮತ್ತೆ ಸಾಬೀತುಗೊಳಿಸಿದ್ದಾರೆ.

ಸೆಪ್ಟೆಂಬರ್‌ 2022ರ ಮಾಹಿತಿಯ ಪ್ರಕಾರ, ತುರ್ತು ಪರಿಸ್ಥಿತಿಯಲ್ಲಿ ಹಣದ ನೆರವು ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ನಡೆಸುತ್ತಿರುವ ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟ್‌ಗೆ ರತನ್ ಟಾಟಾ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಸೇರಿಸಿಕೊಳ್ಳಲಾಗಿದೆ. ಇದರಲ್ಲಿ ಪ್ರಮುಖವಾಗಿ ಟಾಟಾ ಸನ್ಸ್ ಸಂಸ್ಥಾಪಕ ಅಧ್ಯಕ್ಷ ರತನ್ ಟಾಟಾ ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟೀ ಆಗಿ ನಾಮನಿರ್ದೇಶನ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಇದರ ಟ್ರಸ್ಟಿಗಳಾಗಿದ್ದಾರೆ. ಇದು ರತನ್‌ ಟಾಟಾರ ಹಿರಿಮೆಗೆ, ಸಮಾಜ ಸೇವೆಗೆ ಮತ್ತೊಂದು ಗರಿ.

ರತನ್ ಟಾಟಾ ಉದಾತ್ತ ಕುಟುಂಬದಿಂದ ಬಂದಿದ್ದರೂ ಅವರು ಎಂದಿಗೂ ಅಧಿಕಾರ ಅಥವಾ ಹಣದ ಹಿಂದೆ ಬಿದ್ದವರಲ್ಲ. ಟಾಟಾ ಹೆಸರಿನಲ್ಲಿ ಅನೇಕ ಕಂಪನಿಗಳನ್ನು ದೊಡ್ಡದಾಗಿ ಬೆಳೆಸಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದವರು ರತನ್ ಟಾಟಾ ಎಂಬುದರಲ್ಲಿ ಸಂದೇಹವಿಲ್ಲ. ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಾ ಇಂದಿನ ಯುವ ಜನತೆಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ. ಅವರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಟಾಟಾ ಮೋಟಾರ್ಸ್ ಫೋರ್ಡ್ ಮೋಟಾರ್ಸ್‌ನೊಂದಿಗೆ ಐತಿಹಾಸಿಕ ಒಪ್ಪಂದವನ್ನು ಪಡೆಯಲು ಸಾಧ್ಯವಾಯಿತು.

ರತನ್ ಟಾಟಾರ ಪ್ರೇಮ ಕತೆ:

ಉದ್ಯಮಿ ರತನ್ ಟಾಟಾ ಮದುವೆಯಾಗಿಲ್ಲ. ಆದರೆ ಒಮ್ಮೆ ಅವರೇ ಹೇಳಿರುವಂತೆ ಅವರಿಗೆ 4 ಬಾರಿ ಮದುವೆ ಪ್ರಸ್ತಾಪ ಬಂದಿತ್ತು. ಆದರೆ ಕಾರಣಾಂತರಗಳಿಂದ ಮದುವೆ ಆಗಲಿಲ್ಲ ಎಂದು ಹೇಳಿದ್ದರು. ಇವತ್ತಿಗೂ ಸಿಂಗಲ್ ಆಗಿರುವ ರತನ್ ಟಾಟಾ ಅವರು 25ನೇ ವಯಸ್ಸಿನಲ್ಲಿದ್ದಾಗ ಸುಂದರವಾದ ಹುಡುಗಿಯೊಬ್ಬಳನ್ನು ಪ್ರೀತಿಸಿದ್ದರು. ಆ ಹುಡುಗಿ ಕೂಡ ರತನ್ ಟಾಟಾರನ್ನು ಮನಸಾರೆ ಇಷ್ಟಪಟ್ಟಿದ್ದಳು. ಆದರೆ ಆ ಹುಡುಗಿಯನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ.

ಹೌದು, ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ರತನ್ ಟಾಟಾ ಅವರು ಮುದ್ದಾದ ಹುಡುಗಿಯೊಬ್ಬಳಿಗೆ ಮನಸೋತಿದ್ದರು. ಇಬ್ಬರು ಮನೆಯವರನ್ನು ಒಪ್ಪಿಸಿ ಮದುವೆಯಾಗಬೇಕು ಅನ್ನೋ ವೇಳೆ ಭಾರತ ಮತ್ತು ಚೀನಾ ನಡುವೆ ಯುದ್ಧ ಶುರುವಾಗಿತ್ತು. ಅಮೆರಿಕದಿಂದ ಭಾರತಕ್ಕೆ ಮರಳುವ ಯೋಚನೆಯಲ್ಲಿದ್ದ ರತನ್ ಟಾಟಾ ಅವರು ಆ ಹುಡುಗಿಯನ್ನು ಮದುವೆಯಾಗಿ ಸ್ವದೇಶಕ್ಕೆ ತೆರಳಲು ಸಿದ್ಧವಾಗಿದ್ದರು. ಆದರೆ ಆ ಹುಡುಗಿಯ ಪೋಷಕರು ತಮ್ಮ ಪುತ್ರಿಯನ್ನು ಭಾರತಕ್ಕೆ ಕಳುಹಿಸಲು ಹಿಂದೇಟು ಹಾಕಿದರು. ಅಲ್ಲದೆ ಬೇರೊಬ್ಬ ಹುಡುಗನೊಂದಿಗೆ ಆಕೆಯ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಇದನ್ನು ತಿಳಿದ ರತನ್ ಟಾಟಾ ಅವರು ಜೀವನದಲ್ಲಿ ಮದುವೆಯೇ ಆಗುವುದಿಲ್ಲವೆಂದು ನಿರ್ಧಾರ ತೆಗೆದುಕೊಂಡಿದ್ದರು.

ಸಾಮಾನ್ಯರಂತೆ ಇರುವ ಅಸಾಮಾನ್ಯರಲ್ಲಿ ರತನ್‌ ಟಾಟಾ ಒಬ್ಬರು. ಅವರ ಸರಳತೆ, ದೃಢವಾದ ನಿರ್ಧಾರ, ನಾಯಕತ್ವ, ತ್ಯಾಗ, ಸಮಾಜ ಸೇವೆ ಎಲ್ಲವೂ ಕೇವಲ ಹೆಸರಿಗಲ್ಲ, ಅದು ಅವರ ಆದರ್ಶ ಜೀವನದ ಭಾಗಗಳೇ ಆಗಿವೆ. ವ್ಯಾಪಾರದಲ್ಲೂ ಧರ್ಮ, ನ್ಯಾಯ, ಭರವಸೆಗೆ ಮತ್ತೊಂದು ಹೆಸರೇ ರತನ್‌ ಟಾಟಾ ಎಂದರೆ ಅತಿಶಯೋಕ್ತಿಯೇನಲ್ಲ.

ಟಾಪ್ ನ್ಯೂಸ್

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇಂದು ಕಿಂಗ್‌ ಸಾಮ್ರಾಜ್ಯದ ಕಥೆ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್‌ ಸಾಮ್ರಾಜ್ಯದ ಕಥೆ

palaniswami

AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?

Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…

Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…

coco

Coconut Oil: ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಯಿರಿ

03

Box Office: ದೀಪಾವಳಿಗೆ ರಿಲೀಸ್‌ ಆದ 8 ಸಿನಿಮಾಗಳಲ್ಲಿ ಗೆದ್ದವರು ಯಾರು? ಸೋತವರು ಯಾರು?

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

6-delhi-pollution

Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್‌, ಬಸ್‌ಗಳಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.