ಗುಂಡಿನ ಏಟು ತಿಂದರೂ ಎದೆಗುಂದದ ಧೀರ: ಇದು ಹಾಕಿ ಮಾಂತ್ರಿಕ ಸಂದೀಪ್ ಸಿಂಗ್ ಇನ್ ಸೈಡ್ ಸ್ಟೋರಿ

ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಬಿದ್ದಿತ್ತು ಗುಂಡಿನ ಏಟು! ಫ್ಲಿಕರ್ ಸಿಂಗ್ ವ್ಹೀಲ್ ಚೇರ್ ಪಾಲಾಗಿದ್ದ!

ಕೀರ್ತನ್ ಶೆಟ್ಟಿ ಬೋಳ, Jul 24, 2020, 12:29 PM IST

ಗುಂಡಿನ ಏಟು ತಿಂದರೂ ಎದೆಗುಂದದ ಧೀರ: ಇದು ಆತ್ಮವಿಶ್ವಾಸವೇ ಮೂರ್ತಿವೆತ್ತ ಸಂದೀಪ್ ಸಿಂಗ್ ಕಥೆ

ಅಚಲ ಗುರಿ, ಸಾಧಿಸುವ ತವಕ, ಪ್ರತಿ ದಿನ ಕಾಡುವ ಕನಸು, ಕಠಿಣ ಪರಿಶ್ರಮ ಇದ್ದರೆ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು. ಬದುಕಿನಲ್ಲಿ ಎದುರಾಗುವ ಎಡರುತೊಡರುಗಳನ್ನು ಹಿಮ್ಮೆಟ್ಟಿಸಿ ಜಯದ ಅಂತಿಮ ರೇಖೆಯನ್ನು ತಲುಪುವವರನ್ನು ನಾವು ಸಾಧಕರು ಎನ್ನುತ್ತೇವೆ. ಕಠಿಣ ಪರಿಸ್ಥಿತಿಯಲ್ಲೂ ಸಾಧಿಸಿದ, ಸಾಧಿಸಿದರೆ ಸಬಳ ನುಂಗಬಹುದು ಎಂಬ ಮಾತನ್ನು ನಿಜವಾಗಿಸಿದ ತಾರೆ, ಭಾರತ ಸದಾ ಹೆಮ್ಮೆ ಪಡಬೇಕಾದ ಹಾಕಿ ಮಾಂತ್ರಿಕ ಸಂದೀಪ್ ಸಿಂಗ್.

ಇದು ಸಂದೀಪ್ ಸಿಂಗ್ ಎಂಬ ಕುರುಕ್ಷೇತ್ರದ ಹುಟ್ಟ ಹೋರಾಟಗಾರನ ಕಥೆ. ಗುಂಡಿನ ಏಟಿಗೂ ಜಗ್ಗದ ಕ್ರೀಡಾ ಲೋಕದ ಮಿಂಚು ಹರಿಸಿದ ಆತ್ಮವಿಶ್ವಾಸವೇ ಮೂರ್ತಿವೆತ್ತ ಕಥೆ. ತಾನು ಬಲಹೀನ, ತನ್ನಿಂದಾಗದು ಎಂದು ಸುಮ್ಮನೆ ಕುಳಿತವರಿಗೆ ಚಳಿ ಬಿಡಿಸುವ ಕಥೆ.

1986ರ ಫೆಬ್ರವರಿ 27ರಂದು ಜನಿಸಿದ ಸಂದೀಪ್ ಸಿಂಗ್ ಹುಟ್ಟೂರು ಹರ್ಯಾಣದ ಕುರುಕ್ಷೇತ್ರ ಪಟ್ಟಣದ ಶಹಾಬಾದ್. ತಂದೆ ಗುರುಚರಣ್ ಸಿಂಗ್ ಸೈನಿ, ತಾಯಿ ದಲ್ಜೀತ್ ಕೌರ್ ಸೈನಿ. ಸಹೋದರ ಬಿಕ್ರಮ್ ಜೀತ್ ಸಿಂಗ್. ಇವರೂ ಹಾಕಿ ಆಟಗಾರ.

ಬಿಕ್ರಮ್ ಜೀತ್ ಸಿಂಗ್

ಸಹೋದರ ಬಿಕ್ರಮ್ ಹಾಕಿ ಆಟಗಾರನಾಗಿದ್ದ ಕಾರಣ, ಸಂದೀಪ್ ಗೆ ಎಳವೆಯಿಂದಲೇ ಹಾಕಿ ನಂಟು ಬೆಳೆದಿತ್ತು. ಸಹೋದರನಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದ ಕಾರಣ ತಾನಾದರೂ ರಾಷ್ಟ್ರೀಯ ತಂಡದಲ್ಲಿ ಆಡಬೇಕು, ಟೀಂ ಇಂಡಿಯಾ ಜೆರ್ಸಿ ತೊಡಬೇಕು, ಮನೆಯ ಬಡತನವನ್ನು ದೂರ ಮಾಡಬೇಕು ಎಂದು ಸಂದೀಪ್ ಸದಾ ಹಂಬಲಿಸುತ್ತಿದ್ದ.

2004ರ ಸುಲ್ತಾನ್ ಅಜ್ಲಾನ್ ಶಾ ಕಪ್ ಸರಣಿಗಾಗಿ ಭಾರತೀಯ ತಂಡಕ್ಕೆ ಸಂದೀಪ್ ಮೊದಲ ಬಾರಿ ಆಯ್ಕೆಯಾದ. ಆಗ ಸಂದೀಪ್ ಇನ್ನೂ 17 ವರ್ಷದ ಬಾಲಕ. ಆದರೆ ಆ ಪ್ರತಿಷ್ಠಿತ ಕೂಟದಲ್ಲಿ ಭಾರತ ನೀರಸ ಪ್ರದರ್ಶನ ನೀಡಿತು. ಕೊನೆಯ ಸ್ಥಾನಿಯಾಗಿ ಕೂಟವನ್ನು ಭಾರತ ಮುಗಿಸಿತ್ತು. ನಂತರ ಅದೇ ವರ್ಷ ನಡೆದ ಏಷ್ಯಾ ಕಪ್ ನಲ್ಲಿ ಭಾರತ ವಿಜಯಿಯಾಗಿತ್ತು.

ಸಂದೀಪ್

ಆದರೆ ಮುಂದಿನ ಎರಡು ವರ್ಷ ಒಬ್ಬ ಯುವ ಹಾಕಿ ಆಟಗಾರ ಏನೆಲ್ಲಾ ಬಯಸಿದ್ದ ಅದೆಲ್ಲವನ್ನೂ ಈಡೇರಿಸಿದ್ದ. ಹಾಕಿ ಅಂಗಳದಲ್ಲಿ ಸಂದೀಪ್ ನಷ್ಟು ವೇಗವಾಗಿ, ನಿಖರವಾಗಿ ಡ್ರ್ಯಾಗ್ ಫ್ಲಿಕ್ ಮಾಡುವವರು ಇನ್ನೊಬ್ಬರಿಲ್ಲ ಎನ್ನುವಷ್ಟರ ಮಟ್ಟಿಗೆ ಸಂದೀಪ್ ಬೆಳೆದಿದ್ದರು. ಒಂದರ ಮೇಲೊಂದು ಗೋಲು ಬಾರಿಸುತ್ತಾ ಕೇವಲ ಎರಡೇ ವರ್ಷದಲ್ಲಿ ಭಾರತೀಯ ಹಾಕಿಯಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದಿದ್ದ ಸಂದೀಪ್. ಆದರೆ ಯಶಸ್ಸಿನ ಉತ್ತುಂಗದಲ್ಲಿದ್ದ ಸಂದೀಪ್ ನ ಜೊತೆ ವಿಧಿ ಬೇರೆಯದೇ ಆಟವನ್ನು ಆಡಿತ್ತು.

ಅಂದು 2006ರ ಆಗಸ್ಟ್ 21. ನ್ಯಾಶನಲ್ ಕ್ಯಾಂಪ್ ಸೇರಿಕೊಳ್ಳಲು ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಹೋಗುತ್ತಿದ್ದಾಗ ಭದ್ರತಾ ಸಿಬ್ಬಂದಿಯ ಕೈಯಲ್ಲಿದ್ದ ಬಂದೂಕಿನಿಂದ ಅಕಸ್ಮಾತ್ ಆಗಿ ಗುಂಡು ಹಾರಿತ್ತು. ಆ ಗುಂಡು ಬಂದು ಹೊಕ್ಕಿದ್ದು ಎರಡು ದಿನದಲ್ಲಿ ಆಫ್ರಿಕಾದಲ್ಲಿ ನಡೆಯುವ ವಿಶ್ವಕಪ್ ಗೆ ಹಾರಬೇಕಿದ್ದ ಸಂದೀಪ್ ಸಿಂಗ್ ದೇಹಕ್ಕೆ!

ವಿಶ್ವಕಪ್ ನಲ್ಲಿ ಚಿನ್ನ ಗೆಲ್ಲುವ ಕನಸು ಕಣ್ಣುಗಳಿಂದ ಹೊರಟಿದ್ದ ಸಂದೀಪ್ ಗುಂಡೇಟು ತಿಂದು ಮಲಗಿದ್ದ. ಸೊಂಟದಿಂದ ಕೆಳಕ್ಕೆ ಬಲವಿಲ್ಲ. ಭಾರತದ ಸ್ಟಾರ್ ಆಟಗಾರನ ಬದುಕು ದುರಂತದಲ್ಲಿ ಅಂತ್ಯವಾಯಿತು ಎಂದು ಎಲ್ಲರೂ ಮರುಗಿದ್ದರು. ಇನ್ನೂ ಹಾಕಿ ಆಡುವುದು ಬಿಡಿ, ಈತ ಸ್ವತಂತ್ರವಾಗಿ ನಡೆಯಲೂ ಸಾಧ್ಯವಿಲ್ಲ ಎಂದು ವೈದ್ಯರು ಶರಾ ಬರೆದಿದ್ದರು!

ಸಂದೀಪ್ ಗುಂಡೇಟು ತಿಂದು ಮಲಗಿದ್ದ

ಹಾಕಿ ಅಂಗಳದಲ್ಲಿ ಮಿಂಚಿನ ವೇಗದಲ್ಲಿ ಡ್ರ್ಯಾಗ್ ಫ್ಲಿಕ್ ಬಾರಿಸುತ್ತಿದ್ದ ಸಂದೀಪ್ ಸಿಂಗ್ ವ್ಹೀಲ್ ಚೇರ್ ನಲ್ಲಿ ಇರಬೇಕಾದ ಪರಿಸ್ಥಿತಿ ಬಂತು. ಚಿಕಿತ್ಸೆಗಾಗಿ ನೀರಿನಂತೆ ಹಣ ಖರ್ಚಾಗಿತ್ತು. ಆಗಷ್ಟೇ ಸುಧಾರಿಸುತ್ತಿದ್ದ ಮನೆಯ ಪರಿಸ್ಥಿತಿ ಮತ್ತೆ ನೆಲಕಚ್ಚಿತು. ಇದ್ದ ಬಾಡಿಗೆ ಮನೆಯಿಂದ ಹೊರಹಾಕಲಾಯಿತು. ಸಂದೀಪ್ ಮಾನಸಿಕವಾಗಿಯೂ ಕುಸಿದಿದ್ದರು. ಆಗ ನೆರವಿಗೆ ನಿಂತವರು ಸಹೋದರ ಬಿಕ್ರಮ್ ಜೀತ್. ತಮ್ಮನ ಜೊತೆಯಿದ್ದು, ಮಾನಸಿಕ ಸ್ಥೈರ್ಯ ತುಂಬಿದರು.

ಬಲವಿಲ್ಲದೆ ಹಾಸಿಗೆಯಲ್ಲಿ ಮಲಗಿದ್ದ ಸಂದೀಪ್ ತನ್ನ ಹಾಕಿ ಸ್ಟಿಕ್ ಗಳನ್ನು ತನ್ನ ಕಣ್ಣೆದುರು ಇರಿಸಿದ್ದರು. ಅದನ್ನು ನೋಡುವಾಗ ನಾನು ಮತ್ತೆ ಎದ್ದು ನಿಲ್ಲಬೇಕು, ಮತ್ತೆ ಭಾರತಕ್ಕೆ ಆಡಬೇಕು ಎಂಬ ಛಲ ಮೂಡುತ್ತಿತ್ತು ಎನ್ನತ್ತಾರೆ ಸಂದೀಪ್. ಹಾಕಿ ಫೆಡರೇಶನ್ ನೆರವಿನಿಂದ ಹೊಲ್ಯಾಂಡ್ ನಲ್ಲಿ ಚಿಕಿತ್ಸೆ ಪಡೆದ ಸಂದೀಪ್ ಸಿಂಗ್ ಮತ್ತೆ ಎದ್ದು ನಿಲ್ಲುವಂತಾದರು. ಓಡುವಂತಾದರು. ಭಾರತಕ್ಕೆ ಮರಳಿದ ಸಂದೀಪ್ ಸಹೋದರನಲ್ಲಿ ಹೇಳಿದ ಮೊದಲ ಮಾತು “ನಾನು ಭಾರತಕ್ಕೆ ಮತ್ತೆ ಆಡಬೇಕು”. ಯಾಕೆಂದರೆ ಆತ ಕುರುಕ್ಷೇತ್ರದ ಹುಟ್ಟು ಹೋರಾಟಗಾರ!

ಸಿಂಹ ಎಂದಿಗೂ ಸಿಂಹವೇ, ಒಮ್ಮೆ ಚಾಂಪಿಯನ್ ಆದರೆ ಆತ ಎಂದಿಗೂ ಚಾಂಪಿಯನ್ ಎಂಬ ಮಾತಿದೆ. ಸಂದೀಪ್ ಮತ್ತೆ ಹಾಕಿ ಸ್ಟಿಕ್ ಕೈಗೆತ್ತಿಕೊಂಡರು. ಮತ್ತೆ ಅಭ್ಯಾಸ ನಡೆಸಿದರು. ಸಹೋದರನೊಂದಿಗೆ ಸೇರಿ ವಲಯ ಮಟ್ಟದ ಕೂಟದಲ್ಲಿ ಆಡಿದರು. ಸಂದೀಪ್ ತಂಡ ಕೂಟದಲ್ಲಿ ಜಯಿಸಿತ್ತು. ಡ್ರ್ಯಾಗ್ ಫ್ಲಿಕರ್ ಮತ್ತೆ ತನ್ನ ಕರಾಮತ್ತು ತೋರಿಸಿದ್ದ. ಸಂದೀಪ್ ಗೆ ಮತ್ತೆ ರಾಷ್ಟ್ರೀಯ ತಂಡದ ಕರೆ ಬಂದಿತ್ತು.

ಸಂದೀಪ್

ಗುಂಡೇಟು ತಿಂದು ಸೊಂಟದ ಕೆಳಗೆ ಶಕ್ತಿ ಕಳೆದುಕೊಂಡಿದ್ದ ಸಂದೀಪ್ ಕೇವಲ ಎರಡೇ ವರ್ಷದಲ್ಲಿ ಟೀಂ ಇಂಡಿಯಾ ಭಾಗವಾಗಿದ್ದ. 2008ರ ಸುಲ್ತಾನ್ ಅಜ್ಲಾನ್ ಶಾ ಕೂಟದಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡಿದ. ಗಾಯಗೊಂಡಿರುವುದು ದೇಹ ಮಾತ್ರ, ತನ್ನ ಕೌಶಲವಲ್ಲ ಎಂದು ಜಗತ್ತಿಗೆ ತೋರಸಿದ. ಕೂಟದಲ್ಲಿ ಸಂದೀಪ್ ಎಂಟು ಗೋಲು ಬಾರಿಸಿದ್ದ. 2009ರಲ್ಲಿ ಟೀಂ ಇಂಡಿಯಾ ನಾಯಕನಾದ. 2009ರ ಸುಲ್ತಾನ್ ಅಜ್ಲಾನ್ ಶಾ ಕೂಟದಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ಸಂದೀಪ್ ಭಾರತವನ್ನು 13 ವರ್ಷಗಳ ನಂತರ ಕಪ್ ಗೆಲ್ಲುವಂತೆ ಮಾಡಿದ್ದ. ಅತೀ ಹೆಚ್ಚು ಗೋಲು ಬಾರಿಸಿದ ಸಂದೀಪ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ. ಲಂಡನ್ ಒಲಿಂಪಿಕ್ಸ್ ಅರ್ಹತಾ ಕೂಟದಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ.

ಫ್ಲಿಕರ್ ಸಿಂಗ್

ಗಂಟೆಗೆ 145 ಕಿ.ಮೀ ವೇಗದಲ್ಲಿ ಸಂದೀಪ್ ಡ್ರ್ಯಾಗ್ ಫ್ಲಿಕ್ ಬಾರಿಸುತ್ತದ್ದ ಸಂದೀಪ್ ಸಿಂಗ್ ಗೆ ಫ್ಲಿಕರ್ ಸಿಂಗ್ ಎಂಬ ಬಿರುದು ಲಭಿಸಿತ್ತು. 2010ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ಸಂದೀಪ್ 2012ರ ನಂತರ ನಿವೃತ್ತರಾದರು. ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಡಿಎಸ್ ಪಿ ಹುದ್ದೆಯಲ್ಲಿದ್ದ ಸಂದೀಪ್ ಸದ್ಯ ಪೆಹುವಾ ಕ್ಷೇತ್ರದ ಶಾಸಕರಾಗಿದ್ದಾರೆ.

ಸಂದೀಪ್ ಸಿಂಗ್ ಹರ್ಜಿಂದರ್ ಕೌರ್ ಕೂಡಾ ಹಾಕಿ ಆಟಗಾರ್ತಿ. ಆದರೆ ವಿವಾಹದ ನಂತರ ಆಟ ತ್ಯಜಿಸಿದ್ದಾರೆ. ಸಂದೀಪ್ ಸಿಂಗ್ ಜೀವನದ ಕುರಿತಾಗಿ ಬಾಲಿವುಡ್ ನಲ್ಲಿ ಚಿತ್ರವೊಂದು ತೆರೆಗೆ ಬಂದಿದೆ. ದಿಲ್ಜೀತ್ ಸಿಂಗ್ ಅವರು ‘ಸೂರ್ಮ’ ಚಿತ್ರದಲ್ಲಿ ಸಂದೀಪ್ ಸಿಂಗ್ ಆಗಿ ತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರದಲ್ಲಿ ನಿಜಜೀವನಕ್ಕಿಂತ ಹೊರತಾಗಿ ಬಹಳಷ್ಟನ್ನು ಸೇರಿಸಿದ್ದಾರೆ.

ಹಿರಿದಾದುದನ್ನು ಸಾಧಿಸಲು ಹೊರಟಾಗ ಅನೇಕ ಕಷ್ಟಗಳನ್ನು ನಮ್ಮನ್ನು ಹಿಂದೆ ಸರಿಯುವಂತೆ ಮಾಡುತ್ತದೆ. ಆದರೆ ಅದಕ್ಕೆ ಯಾವುದಕ್ಕೂ ಜಗ್ಗದೆ, ನಮ್ಮ ಲಕ್ಷ್ಯ ಕೇವಲ ಅಂತಿಮ ಗುರಿಯ ಕಡೆಗೆ ಇದ್ದರೆ ನಾವು ಎಂಥಹ ಕಠಿಣ ಗುರಿಯನ್ನು ಸಾಧಿಸಬಹುದು ಎನ್ನುವುದಕ್ಕೆ ಸಂದೀಪ್ ಸಿಂಗ್ ಉತ್ತಮ ಉದಾಹರಣೆ.

ಕೀರ್ತನ್ ಶೆಟ್ಟಿ ಬೋಳ

ಟಾಪ್ ನ್ಯೂಸ್

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

raghav

Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್‌ ನಿಂದ ಸುಳ್ಳು ಆರೋಪ: ರಾಘವೇಂದ್ರ

9

Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.