Sardar Udham: ಬ್ರಿಟಿಷರಿಗೇ ಸಿಂಹಸ್ವಪ್ನವಾಗಿ ಕಾಡಿದ್ದ ಸರ್ದಾರ್‌ ಉಧಮ್‌ ಸಿಂಗ್‌!

ಜಲಿಯಾನ್‌ ವಾಲಾಬಾಗ್‌ ಹತ್ಯಾಕಾಂಡಕ್ಕೆ ಆಂಗ್ಲರ ನೆಲದಲ್ಲೇ ಈತ ಪ್ರತೀಕಾರ ತೀರಿಸಿದ್ದು ಹೇಗೆ ಗೊತ್ತಾ?

Team Udayavani, Aug 25, 2024, 10:00 AM IST

Jaliayan-walaBaagh-1

* ಈಶ ಪ್ರಸನ್ನ

ಭಾರತಕ್ಕೆ ವ್ಯಾಪಾರಕ್ಕಾಗಿ ಆಗಮಿಸಿದ ಬ್ರಿಟಿಷರು ಇಲ್ಲಿಯೇ ನೆಲೆಯೂರಿ ದೇಶದಾದ್ಯಂತ ಆಡಳಿತದಲ್ಲಿ ಪ್ರಾಬಲ್ಯ ಸಾಧಿಸಿದ್ದು, ದೇಶದ ಜನರ ಸ್ವಾತಂತ್ರ್ಯವು ನಿಜಾರ್ಥದಲ್ಲಿ ಹರಣವಾಯಿತು. ಬ್ರಿಟಿಷರ ಆಡಳಿತದಿಂದ ನೊಂದು, ಬೆಂದು ಅನ್ಯಾಯಕ್ಕೆ ಒಳಗಾದ ದೇಶದ ಕೆಲವು ಕ್ರಾಂತಿಕಾರಿ ಯುವಕರು ಹೋರಾಟಗಳ ಪ್ರಾರಂಭಿಸಿ ಬ್ರಿಟಿಷರಿಗೆ ಟಕ್ಕರ್‌ ಕೊಡಲು ನಿರ್ಧರಿಸಿದರು.

ಅದಕ್ಕಾಗಿ 1857ರಲ್ಲಿ ಹಲವು ವಿಚಾರಗಳು ಒಗ್ಗೂಡಿ ಯುವಜನರು ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯದ ಹೋರಾಟಕ್ಕೆ ಮುನ್ನುಡಿ (ಪ್ರಥಮ ಸ್ವಾತಂತ್ರ್ಯ ಹೋರಾಟ)  ಬರೆಯಿತು. ಬ್ರಿಟಿಷರು ಇದನ್ನು ಸಿಪಾಯಿದಂಗೆ ಎಂದು ಕರೆದರು. ಆದರೆ ಇದರಿಂದಾಗಿ  ಹಲವು ಸ್ವಾತಂತ್ರ್ಯ  ಹೋರಾಟಗಾರರ ಹುಟ್ಟಿಗೂ ಕಾರಣವಾಯಿತು. ಅದರಲ್ಲಿ ಮುಖ್ಯವಾಗಿ ಭಾರತದ ಸ್ವಾತಂತ್ರ್ಯ ಹೋರಾಟದ  ಇತಿಹಾಸದಲ್ಲಿ ಪ್ರಮುಖವಾಗಿ ದಾಖಲಾಗಿರುವುದು ಪಂಜಾಬ್‌ನ ಅಮೃತಸರದ ಜಲಿಯನ್‌ ವಾಲಾಬಾಗ್‌ ದುರಂತ. ಇಲ್ಲಿ ನಡೆದ  ಸಾವಿರಾರು ಮಂದಿಯ ದುರ್ಮರಣವು ಕೆಚ್ಚೆದೆಯ ಹೋರಾಟಗಾರನ ಹುಟ್ಟಿಗೂ ಕಾರಣವಾಯಿತು. ಈ ದುರಂತಕ್ಕೆ ಪ್ರತೀಕಾರ ತೀರಿಸಲು ಬಂದ ಪಂಜಾಬಿನ ಸಿಂಹನ ಬಗ್ಗೆ ತಿಳಿಯೋಣ..

ಅಂದಿನ ಮೊಘಲರ ರಾಜ ಔರಂಗಜೇಬ ಸಿಖ್‌ರ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾಗ ಸಿಖ್‌ ಧರ್ಮದ ಗುರು ತೇಗ್‌ ಬಹದ್ದೂರು ಈ ಮತಾಂತರದ ವಿರುದ್ಧ ಹೋರಾಟಕ್ಕಾಗಿ ಸಿಖ್ಖರ ಒಗ್ಗೂಡಿಸಿ ಖಾಲ್ಸಾ ಸೈನ್ಯ ಕಟ್ಟಿದರು. ಸೈನ್ಯ ಕಟ್ಟಿದ ಆ ದಿನವನ್ನುಸಿಖ್ಖರು ಬೈಸಾಕಿ (ವೈಶಾಖ ಮಾಸದ ಮೊದಲ ದಿನ) ಹಬ್ಬವನ್ನು ಪವಿತ್ರ ದಿನವಾಗಿ ಆಚರಿಸುತ್ತಾರೆ.  ಮತಾಂತರ ವಿರುದ್ಧ ನಿರಂತರ ಹೋರಾಡಿದ  ಖಾಲ್ಸಾ ಸೈನ್ಯವು ಬ್ರಿಟಿಷರಿಗೂ ತಲೆ ನೋವಾಗಿ ಪರಿಣಮಿಸಿತು. 1919ರಲ್ಲಿ ಬ್ರಿಟಿಷರು ರೌಲತ್‌ ಕಾಯಿದೆ ಜಾರಿಗೆ ತಂದು ಪ್ರಮುಖ ಭಾರತೀಯ ಹೋರಾಟಗಾರರ ಬಂಧಿಸಿದರು. ಅದರಲ್ಲೂ ಮುಖ್ಯವಾಗಿ ರಾಷ್ಟ್ರೀಯವಾದಿ ನಾಯಕರಾದ ಸತ್ಯಪಾಲ್‌ ಹಾಗೂ ಡಾ.ಸೈಪುದ್ದೀನ್‌ ಕಿಚ್ಲೆವ್‌ರನ್ನುಬಂಧಿಸಿದ್ದಕ್ಕಾಗಿ ಪ್ರತಿಭಟನೆ ನಡೆಸಲು ಜಲಿಯನ್‌ವಾಲಾ ಬಾಗ್‌ ಪ್ರದೇಶದಲ್ಲಿ ಜನರು ಗುಂಪುಗೂಡಿದ್ದರು.

ರೌಲತ್‌ ಕಾಯಿದೆಗೆ ವ್ಯಾಪಕ ವಿರೋಧ: 
1919ರಲ್ಲಿ ಬ್ರಿಟಿಷ್‌ ಸರಕಾರವು ರೌಲತ್ ಕಾಯಿದೆ ಜಾರಿಗೊಳಿಸಿ ಸಿಕ್ಕ ಸಿಕ್ಕ ಭಾರತೀಯ ಸ್ವಾತಂತ್ರ್ಯ  ಹೋರಾಟಗಾರರ ಬಂಧಿಸುವ ಅಧಿಕಾರ ಬ್ರಿಟಿಷ್‌ ಅಧಿಕಾರಿಗಳಿಗೆ ದೊರಕಿತು. ಈ ರೌಲತ್‌ ಕಾಯಿದೆಯು ಬಂಧಿಸಿದವರ ನ್ಯಾಯಯುತ ವಿಚಾರಣೆಯ ಹಕ್ಕನ್ನು ಕಸಿಯಿತು ಇದರಿಂದ ದೇಶಾದ್ಯಂತ ರೌಲತ್‌ ಕಾಯಿದೆ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಈ ಕಾಯಿದೆ ವಿರುದ್ಧ ಗಾಂಧೀಜಿ ಸತ್ಯಾಗ್ರಹ ಆರಂಭಿಸಿದರು. ಈ ವೇಳೆ ಅನೇಕ ನಾಯಕರನ್ನು ಬ್ರಿಟಿಷರು ಬಂಧಿಸಿದ್ದರು.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ
1919 ಏಪ್ರಿಲ್ 13 ರಂದು ಅಮೃತಸರದ ಜಲಿಯನ್‌ವಾಲಾ ಬಾಗ್‌ನಲ್ಲಿ ಹೆಚ್ಚು ಜನರು ಸೇರದಂತೆ ನಿಯಮವಿದ್ದರೂ ಅದನ್ನು ಮೀರಿ ಸುಮಾರು 30 ರಿಂದ 40  ಸಾವಿರ ನಿರಾಯುಧರು ಒಗ್ಗೂಡಿ ಸಮಾವೇಶ ನಡೆಸುತ್ತಿದ್ದರು.  ಆ ಈ ವೇಳೆ  ಮೈಕಲ್ ಡಯರ್‌ ಪಂಜಾಬ್‌ನ ಲೆಫ್ಟಿನೆಂಟ್ ಗವರ್ನರ್ ಆಗಿದ್ದ. ಪಂಜಾಬ್ ಪ್ರಾಂತ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಕಾರಣ, ಈ ಪ್ರಾಂತ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳ ತೆಗೆದುಕೊಳ್ಳಲು ಬ್ರಿಟಿಷ್ ಆಡಳಿತ ಜನರಲ್  ಡಯರ್ ಗೆ ಪೂರ್ಣ ಅಧಿಕಾರ ನೀಡಿತು.

ಡಯರ್‌ ಮಾತನ್ನು ಮೊದಲ ಮಹಾಯುದ್ಧ ಸಮಯದಲ್ಲಿ ಕೇಳಲಿಲ್ಲ ಎಂಬ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂಬ ವಾದವೂ ಇದೆ.  ಜನರಲ್ ಡಯರ್ ನೇತೃತ್ವದಲ್ಲಿ ಬ್ರಿಟಿಷ್ ಪಡೆಗಳು ಅವರನ್ನು ಸುತ್ತುವರಿದಿದ್ದವು. ಪ್ರತಿಭಟನಾಕಾರರ ಮೇಲೆ ಬ್ರಿಟಿಷ್ ಸೈನಿಕರು ಗುಂಡು ಹಾರಿಸಿದರು, ಇದರಿಂದಾಗಿ ಸಾವಿರಾರು ಸಾವುಗಳು ಮತ್ತು 1,500 ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಹತ್ಯಾಕಾಂಡವು ಭಾರತೀಯ ಸ್ವಾತಂತ್ರ್ಯ ಹೋರಾಟದ ಹಾದಿಯ ಬದಲಿಸಿತು.

ಹೋರಾಟಕ್ಕೆ ಧುಮುಕಿದ ಸಿಂಹ; ಭಗತ್‌ ಸಿಂಗ್‌ ಪ್ರಭಾವ, ಗದ್ದರ್‌ಗಳ ಸ್ನೇಹ 

ಈ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡದಿಂದ ಬೇಸರಗೊಂಡು ಹುಟ್ಟಿದ ಹೋರಾಟಗಾರ  ಪಂಜಾಬಿನ ಉಧಮ್ ಸಿಂಗ್.  ಈ ದುರಂತ ಉಧಮ್‌ ಮೇಲೆ ಆಳ ಪರಿಣಾಮ ಬೀರಿತು. ಆ ಸಂದರ್ಭದಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರಿಗೆ ನೆರವಾಗಿ ಉಧಮ್‌ ಸಿಂಗ್‌ ನೆರವಾಗಿ ನಿಂತಿದ್ದ, ಬಳಿಕ  ಆ ಸಮಯದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು ಮತ್ತು ರಾಜಕೀಯದಲ್ಲಿ ಸಕ್ರಿಯ ತೊಡಗಿಸಿಕೊಂಡರು.

ಕ್ರಾಂತಿಕಾರಿ ಭಗತ್ ಸಿಂಗ್ ಅವರ ಗುಂಪಿನಿಂದ ಆಳವಾಗಿ ಪ್ರಭಾವಿತರಾಗಿದ್ದ ಉಧಮ್‌  ವಸಾಹತುಶಾಹಿ ಆಡಳಿತ ಉರುಳಿಸುವ ಉದ್ದೇಶದಿಂದ ಸಾಗರೋತ್ತರ ಭಾರತೀಯರ ಸಂಘಟಿಸಲು ಉಧಮ್ ಸಿಂಗ್ 1924ರಲ್ಲಿ ಗದರ್ ಪಕ್ಷ ಸೇರಿದರು. ಲಂಡನ್‌ನಲ್ಲಿ ಗದ್ದರ್‌ ಪಕ್ಷದವರ ಸ್ನೇಹವು ಉಧಮ್‌ಗೆ ದೊರಕಿತು. ಗದ್ದರ್‌ಗಳೆಂದರೆ ರಷ್ಯಾದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳ ನಡೆಸುತ್ತ, ಕಮ್ಯೂನಿಸಂ ಪಾರ್ಟಿಯ ಬೆಂಬಲಿತ ಜನರು ಗದ್ದರುಗಳು ಆಗಿದ್ದರು. ಅವರಿಂದ ರಿವಾಲ್ವರ್‌  ಪಡೆದು ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಲು ಸಹಚರರು ಮತ್ತು ಶಸ್ತ್ರಾಸ್ತ್ರಗಳೊಂದಿಗೆ 1927 ರಲ್ಲಿ ಭಾರತಕ್ಕೆ ಹಿಂದಿರುಗುತ್ತಿದ್ದಾಗ, ಅಕ್ರಮ ಶಸ್ತ್ರಾಸ್ತ್ರಗಳ ಹೊಂದಿದ್ದಕ್ಕಾಗಿ ಉಧಮ್‌ ಸಿಂಗ್‌ನನ್ನು ಬಂಧಿಸಲಾಯಿತು ಮತ್ತು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಈ ಶಿಕ್ಷೆ ವೇಳೆ ಜೈಲಿನಲ್ಲಿ ಭಗತ್‌ ಸಿಂಗ್‌ ಭೇಟಿಯೂ ಮಹತ್ವ ಪಡೆಯಿತು.

ಶೇರ್‌ ಸಿಂಗ್ ಆಗಿ ಆರಂಭಿಕ ಜೀವನ
ಉಧಮ್ ಸಿಂಗ್  1899ರ 26 ಡಿಸೆಂಬರ್ ನಂದು ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಸುನಮ್‌ನಲ್ಲಿ ಶೇರ್ ಸಿಂಗ್  ಆಗಿ ಜನಿಸಿದರು. ಅವರ ತಂದೆ, ಸರ್ದಾರ್ ತೆಹಲ್ ಸಿಂಗ್ ಜಮ್ಮು, ಉಪಲಿ ಗ್ರಾಮದಲ್ಲಿ ರೈತರಾಗಿದ್ದರು. ಅವರ ತಂದೆಯ ಮರಣದ ನಂತರ, ಅವರನ್ನು ಅಮೃತಸರದ ಕೇಂದ್ರ ಖಾಲ್ಸಾ ಅನಾಥಾಶ್ರಮಕ್ಕೆ ಕರೆದೊಯ್ಯಲಾಯಿತು. ಸಿಖ್ ವಿಧಿಗಳನ್ನು ಅನುಸರಿಸಿ ಅವರನ್ನು ಉಧಮ್ ಸಿಂಗ್ ಎಂದು ಹೆಸರಿಸಲಾಯಿತು. ಅವರು 1918ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ 1919 ರಲ್ಲಿ ಅನಾಥಾಶ್ರಮ ತೊರೆದರು.

ಹೆಸರುಗಳ ಬದಲಿಸಿ ಪಯಣ

1931ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ, ಗದ್ದರ್ ಪಾರ್ಟಿಯೊಂದಿಗಿನ ಸಂಬಂಧದಿಂದ ಉಧಮ್ ಸಿಂಗ್ ಮೇಲೆ ಪೊಲೀಸ್ ಕಣ್ಗಾವಲಿನಿಂದ  ತಪ್ಪಿಸಿಕೊಳ್ಳಲು ಉಧಮ್‌ ಸಿಂಗ್‌ ವಿವಿಧ ಹೆಸರುಗಳನ್ನು ಬಳಸಿಕೊಂಡು  ಜರ್ಮನಿಗೆ ಪ್ರಯಾಣ ಬೆಳೆಸಿದರು ಮತ್ತು 1934 ರಲ್ಲಿ ಲಂಡನ್ ತಲುಪಿದರು. ನಗರದಲ್ಲಿ ಉದ್ಯೋಗ ಕಂಡುಕೊಂಡ ಉಧಮ್‌  ಜಲಿಯನ್ ವಾಲಾ ಬಾಗ್‌ನಲ್ಲಿ ನಡೆದ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ  ಮೈಕಲ್ ಡಯರ್‌ ಹತ್ಯೆಗೆ ಸಂಚು ರೂಪಿಸುವ ಬಗ್ಗೆ ಯೋಜಿಸಿದರು.

ಮೈಕಲ್‌ ಡಯರ್‌ ಹತ್ಯೆ
ಮಾ. 13, 1940 ರಂದು, ಮೈಕಲ್ ಡಯರ್‌ ಲಂಡನ್‌ನ ಬ್ರಿಟನ್‌ ಸಂಸತ್ತಿನಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿದ್ದ ಕ್ಯಾಕ್ಸ್‌ಟನ್ ಹಾಲ್‌ಗೆ  ಅಫ್ಘಾನಿಸ್ತಾನ ವಿಚಾರವಾಗಿ ಮಾತನಾಡಲು ಆಗಮಿಸಿದ್ದರು. ಆ ಸಭೆಯಲ್ಲಿ ಡಯರ್‌ ಜಲಿಯನ್‌ವಾಲಾಬಾಗ್‌ ದುರಂತದ ಬಗ್ಗೆ ಕೊಚ್ಚಿಕೊಂಡು ಮಾತನಾಡಿದ್ದನು ಎನ್ನಲಾಗಿದೆ. ಅಂದು ಡಯರ್‌ ಜೊತೆಗೆ ಆಗಿನ ಪಂಜಾಬ್‌ ಗವರ್ನರ್‌ ಆಗಿದ್ದ ಲಾರ್ಡ್‌ ಲ್ಯಾಮಿಂಗ್‌ಟನ್‌ ಇದ್ದರು.  ಉಧಮ್‌ ಸಿಂಗ್‌ ಡಯರ್‌ ಹತ್ಯೆಗೆ ಯೋಜನೆ ರೂಪಿಸಿ ತಾನು ಖರೀದಿಸಿದ ರಿವಾಲ್ವರ್ ಮರೆ ಮಾಚುತ್ತಾ, ಸಭಾಂಗಣ ಪ್ರವೇಶಿಸಿದ ಉಧಮ್ ಸಿಂಗ್  ಆಸನ ಸ್ವೀಕರಿಸಿ ಮೈಕೆಲ್ ಡಯರ್‌ ಬರುವವರೆಗೆ ಕಾಯುತ್ತಿದ್ದನು. ಮೈಕಲ್ ಭಾಷಣದ ವೇದಿಕೆಗೆ ಹೋಗುತ್ತಿದ್ದಾಗ, ಉಧಮ್ ಸಿಂಗ್ ಅವರ ಮೇಲೆ ಎರಡು ಬಾರಿ ಗುಂಡು ಹಾರಿಸಿದರು. ಗುಂಡುಗಳು ಮೈಕೆಲ್‌ನ ಪ್ರಮುಖ ಅಂಗಗಳಿಗೆ ಹೊಕ್ಕಿದ್ದರಿಂದ ಸ್ಥಳದಲ್ಲೇ  ಹತ್ಯೆಗೆ ಒಳಗಾದರು. ಗುಂಡಿನ ದಾಳಿಯ ನಂತರ ಉಧಮ್ ಸಿಂಗ್ ಪೋಲಿಸರಿಗೆ ಶರಣಾದರು.

ಉಧಮ್ ಸಿಂಗ್ ವಿಚಾರಣೆ ಮತ್ತು ಮರಣದಂಡನೆ
ಉಧಮ್ ಸಿಂಗ್ ಮೈಕೆಲ್ ಡಯರ್‌  ಹತ್ಯೆಯ ಆರೋಪದ ಮೇಲೆ ಆತನ ವಿಚಾರಣೆಯ ಬ್ರಿಕ್ಸ್ಟನ್ ಜೈಲಿನಲ್ಲಿ ಮಾಡಲಾಯಿತು.  ಉಧಮ್‌ ವಿಚಾರಣೆಯು ಜೂ. 4, 1940 ರಂದು ಓಲ್ಡ್ ಬೈಲಿನಲ್ಲಿರುವ ಸೆಂಟ್ರಲ್ ಕ್ರಿಮಿನಲ್ ಕೋರ್ಟ್‌ನಲ್ಲಿ ಪ್ರಾರಂಭವಾಯಿತು. ವಿ.ಕೆ. ಕೃಷ್ಣಮೆನನ್ ಮತ್ತು ಸೇಂಟ್ ಜಾನ್ ಹಚಿನ್ಸನ್ ಉಧಮ್‌ ಪರ  ವಾದ ಮಂಡಿಸಿದರು. ಆದರೆ ಪ್ರಾಸಿಕ್ಯೂಷನ್ ಪರ  ಜಿ.ಬಿ. ಮ್ಯಾಕ್ ಕ್ಲೂರ್ ಪ್ರತಿನಿಧಿಸಿದರು. ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ಕೇಳಿದಾಗ ಅವರು “ತನ್ನ ಜನರ ಆತ್ಮಕ್ಕೆ ಶಾಂತಿ ದೊರಕಿಸಲು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದೆ” ಎಂದು ಹೇಳಿದ್ದರು. ಕೊನೆಗೆ ಕೋರ್ಟ್‌ ತನ್ನ ತೀರ್ಪಿನಲ್ಲಿ ಉಧಮ್ ಸಿಂಗ್ ಹತ್ಯೆಯ ಅಪರಾಧಿ ಎಂದು ಪರಿಗಣಿಸಿ ಮರಣದಂಡನೆ ವಿಧಿಸಿತು. ಜುಲೈ 31, 1940 ರಂದು ಉಧಮ್‌ರನ್ನು  ಗಲ್ಲಿಗೇರಿಸಲಾಯಿತು ಮತ್ತು ಪೆಂಟನ್ವಿಲ್ಲೆ ಜೈಲಿನಲ್ಲಿ ಸಮಾಧಿ ಮಾಡಲಾಯಿತು.

ಉಧಮ್‌ ಅವಶೇಷ ಭಾರತಕ್ಕೆ ರವಾನೆ:
ಉಧಮ್‌ ಅವಶೇಷಗಳ 1974 ರಲ್ಲಿ ಭಾರತ ಸರ್ಕಾರದ ಕೋರಿಕೆಯ ಮೇರೆಗೆ ಹೊರತೆಗೆಯುವ ಜೊತೆಗೆ  ಸ್ವದೇಶಕ್ಕೆ ಕಳಿಸಲಾಯಿತು. ಅವರ ಅವಶೇಷಗಳ ಹೊಂದಿರುವ ಶವಪೆಟ್ಟಿಗೆಯ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ಭಾರತ ಸರ್ಕಾರದ ಇತರ ಪ್ರಮುಖ ಸದಸ್ಯರು ಸ್ವೀಕರಿಸಿದರು. ನಂತರ ಉಧಮ್ ಸಿಂಗ್ ರನ್ನು ಪಂಜಾಬ್‌ನ ಅವರ ಜನ್ಮಸ್ಥಳವಾದ ಸುನಮ್‌ನಲ್ಲಿ ದಹಿಸಲಾಯಿತು ಮತ್ತು ಅವರ ಚಿತಾಭಸ್ಮವನ್ನು ಸಟ್ಲೆಜ್ ನದಿಯಲ್ಲಿ ಚದುರಿಸಲಾಯಿತು. ಅವರ ಕೆಲವು ಚಿತಾಭಸ್ಮವನ್ನು ಉಳಿಸಿಕೊಳ್ಳಲಾಯಿತು. ಅವುಗಳನ್ನು ಪ್ರಸ್ತುತ ಜಲಿಯನ್ ವಾಲಾಬಾಗ್‌ನಲ್ಲಿ ಮುಚ್ಚಿದ ಪಾತ್ರೆಯಲ್ಲಿ ಇರಿಸಲಾಗಿದೆ.

ಉತ್ತರಾಖಂಡ್‌ನ ಜಿಲ್ಲೆಗೆ ಉಧಮ್ ಸಿಂಗ್ ಹೆಸರು : 
ಉಧಮ್ ಸಿಂಗ್ ರನ್ನು ಶಹೀದ್ ಇ ಆಜಮ್ ಸರ್ದಾರ್ ಉಧಮ್ ಸಿಂಗ್ ಎಂದೂ ಕರೆಯಲಾಗುತ್ತದೆ, ಇದರರ್ಥ ‘ಮಹಾನ್ ಹುತಾತ್ಮ’. ಉತ್ತರಾಖಂಡ್‌ನ ಉಧಮ್ ಸಿಂಗ್ ನಗರ ಎಂಬ ಜಿಲ್ಲೆಗೆ ಅಕ್ಟೋಬರ್ 1995 ರಲ್ಲಿ ಗೌರವ ಸಲ್ಲಿಸಲು ಅವರ ಹೆಸರು  ಇಡಲಾಯಿತು.

ಉಧಮ್ ಗೆ ಸಂದ ಗೌರವಗಳು :

*  ರಾಜಸ್ಥಾನದ ಅನುಪ್‌ಗಢದಲ್ಲಿ ಶಹೀದ್ ಉಧಮ್ ಸಿಂಗ್ ಚೌಕ್ ನಿರ್ಮಾಣ
* ಉಧಮ್‌ ಮರಣದ ದಿನ ಪಂಜಾಬ್ ರಾಜ್ಯದಲ್ಲಿ ಸಾರ್ವಜನಿಕ ರಜಾದಿನವಾಗಿದೆ.
* ಹರಿಯಾಣದಲ್ಲಿ ಅವರ 10 ಅಡಿ ಎತ್ತರದ ಪ್ರತಿಮೆ ಸ್ಥಾಪನೆ
* ಅಂತಾರಾಷ್ಟ್ರೀಯ ಸರ್ವ್ ಕಾಂಬೋಜ್ ಸಮಾಜವು  ಮಾರ್ಚ್ 13 2018ರಲ್ಲಿ ಅಮೃತಸರದ ಜಲಿಯನ್ ವಾಲಾ ಬಾಗ್‌ನ ಮುಖ್ಯ ದ್ವಾರದಲ್ಲಿ ಸ್ಥಾಪಿಸಿತು. ಪ್ರತಿಮೆಯನ್ನು ಅಂದಿನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್  ಅನಾವರಣಗೊಳಿಸಿದರು. ಇಂದಿಗೂ ಉಧಮ್ ಸಿಂಗ್ ರನ್ನು ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಮುಖ ಕ್ರಾಂತಿಕಾರಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

 

ಟಾಪ್ ನ್ಯೂಸ್

Nagamangala Case: “ಟಾರ್ಗೆಟ್‌ ಮಾಡಿ ಅಂಗಡಿಗಳಿಗೆ ಬೆಂಕಿ’: ಛಲವಾದಿ ನಾರಾಯಣಸ್ವಾಮಿ

Nagamangala Case: “ಟಾರ್ಗೆಟ್‌ ಮಾಡಿ ಅಂಗಡಿಗಳಿಗೆ ಬೆಂಕಿ’: ಛಲವಾದಿ ನಾರಾಯಣಸ್ವಾಮಿ

Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ

Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ

ಎಚ್‌ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ

Ramanagara: ಎಚ್‌ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ

Nagamangala ಅಳಿಯನ ಬಂಧನದ ನೋವಿನಲ್ಲಿ ಸೋದರ ಮಾವ ಸಾವು

Nagamangala ಅಳಿಯನ ಬಂಧನದ ನೋವಿನಲ್ಲಿ ಸೋದರ ಮಾವ ಸಾವು

BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ

BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ

bjValmiki Corporation Scam ಯತ್ನಾಳ್‌, ಜಾರಕಿಹೊಳಿ ನೇತೃತ್ವದ ತಂಡ ರಾಜಭವನಕ್ಕೆValmiki Corporation Scam ಯತ್ನಾಳ್‌, ಜಾರಕಿಹೊಳಿ ನೇತೃತ್ವದ ತಂಡ ರಾಜಭವನಕ್ಕೆ

Valmiki Corporation Scam ಯತ್ನಾಳ್‌, ಜಾರಕಿಹೊಳಿ ನೇತೃತ್ವದ ತಂಡ ರಾಜಭವನಕ್ಕೆ

CM ಗಾದಿ ಆಕಾಂಕ್ಷಿಗಳ ಜತೆಗೆ ಸಿದ್ದರಾಮಯ್ಯ ಉಪಾಹಾರ ಕೂಟ

CM ಗಾದಿ ಆಕಾಂಕ್ಷಿಗಳ ಜತೆಗೆ ಸಿದ್ದರಾಮಯ್ಯ ಉಪಾಹಾರ ಕೂಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Special Food ಮನೆಯಲ್ಲೊಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ… ಟೇಸ್ಟ್ ಹೇಗಿದೆ ಹೇಳಿ

Special Food ಮನೆಯಲ್ಲೊಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ… ಟೇಸ್ಟ್ ಹೇಗಿದೆ ಹೇಳಿ

Paris ಪ್ಯಾರಾಲಿಂಪಿಕ್ಸ್‌ ನಲ್ಲಿ ಭಾರತಕ್ಕೆ ಹೆಚ್ಚು ಯಶಸ್ಸು ಸಿಕ್ಕಿದ್ಹೇಗೆ? ಇಲ್ಲಿದೆ ವಿವರ

Olympics Vs Para; ಪ್ಯಾರಾಲಿಂಪಿಕ್ಸ್‌ ನಲ್ಲಿ ಭಾರತಕ್ಕೆ ಹೆಚ್ಚು ಯಶಸ್ಸು ಸಿಕ್ಕಿದ್ಹೇಗೆ?

1-ssss

US Presidential debate; ಟ್ರಂಪ್-ಕಮಲಾ ಮುಖಾಮುಖಿ: ಬಾಣಕ್ಕೆ ಪ್ರತಿಬಾಣ

Abu Dhabi:ವಿದೇಶ ಪ್ರವಾಸ ಕಥನ-ಅಬುಧಾಬಿ ಹಿಂದು ಮಂದಿರ ಸರ್ವ ಧರ್ಮದ ಸೌಹಾರ್ದತೆಯ ಸಂಕೇತ

Abu Dhabi:ವಿದೇಶ ಪ್ರವಾಸ ಕಥನ-ಅಬುಧಾಬಿ ಹಿಂದು ಮಂದಿರ ಸರ್ವ ಧರ್ಮದ ಸೌಹಾರ್ದತೆಯ ಸಂಕೇತ

ಈ ಗ್ರಾಮದಲ್ಲಿರುವ ಮನುಷ್ಯರಷ್ಟೇ ಅಲ್ಲ ಸಾಕು ಪ್ರಾಣಿಗಳೂ ಮಾಂಸಾಹಾರ ಮುಟ್ಟಲ್ವಂತೆ

Non Veg:ಈ ಗ್ರಾಮದಲ್ಲಿರುವ ಮನುಷ್ಯರಷ್ಟೇ ಅಲ್ಲ ಸಾಕು ಪ್ರಾಣಿಗಳೂ ಮಾಂಸಾಹಾರ ಮುಟ್ಟಲ್ವಂತೆ

MUST WATCH

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

ಹೊಸ ಸೇರ್ಪಡೆ

Nagamangala Case: “ಟಾರ್ಗೆಟ್‌ ಮಾಡಿ ಅಂಗಡಿಗಳಿಗೆ ಬೆಂಕಿ’: ಛಲವಾದಿ ನಾರಾಯಣಸ್ವಾಮಿ

Nagamangala Case: “ಟಾರ್ಗೆಟ್‌ ಮಾಡಿ ಅಂಗಡಿಗಳಿಗೆ ಬೆಂಕಿ’: ಛಲವಾದಿ ನಾರಾಯಣಸ್ವಾಮಿ

Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ

Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ

ಎಚ್‌ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ

Ramanagara: ಎಚ್‌ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ

Nagamangala ಅಳಿಯನ ಬಂಧನದ ನೋವಿನಲ್ಲಿ ಸೋದರ ಮಾವ ಸಾವು

Nagamangala ಅಳಿಯನ ಬಂಧನದ ನೋವಿನಲ್ಲಿ ಸೋದರ ಮಾವ ಸಾವು

BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ

BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.