

Team Udayavani, Dec 30, 2023, 5:12 PM IST
ಬಾಲಿವುಡ್ ನಲ್ಲಿ ಈ ವರ್ಷಹಲವು ಸಿನಿಮಾಗಳು ಹಿಟ್ ಲಿಸ್ಟ್ ಗೆ ಸೇರಿದೆ. ಇದರೊಂದಿಗೆ ಅನೇಕ ನಟರಿಗೆ ಈ ವರ್ಷ ಕಂಬ್ಯಾಕ್ ಮಾಡಿಕೊಟ್ಟ ವರ್ಷವೆಂದರೆ ತಪ್ಪಾಗದು. ಎಷ್ಟೋ ವರ್ಷದ ಬಳಿಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡ ನಟರು, ಎಷ್ಟೋ ವರ್ಷದ ಬಳಿಕ ಒಂದು ದೊಡ್ಡ ಹಿಟ್ ಕೊಟ್ಟು ಮತ್ತೆ ಸೂಪರ್ ಸ್ಟಾರ್ ಪಟ್ಟದ ಮೆಚ್ಚುಗೆಯನ್ನು ಪಡೆದುಕೊಂಡ ಕ್ಷಣಕ್ಕೆ ಬಿಟೌನ್ ನ ಹಲವು ಕಲಾವಿದರು ಸಾಕ್ಷಿಯಾಗಿದ್ದಾರೆ.
ಹಾಗಾದರೆ ಯಾವೆಲ್ಲ ನಟರಿಗೆ ಈ ವರ್ಷ ದೊಡ್ಡ ಕಂಬ್ಯಾಕ್ ಎನ್ನುವುದನ್ನು ನೋಡಿಕೊಂಡು ಬರೋಣ..
ಹ್ಯಾಟ್ರಿಕ್ ಹಿಟ್ ಕೊಟ್ಟ ಕಿಂಗ್ ಖಾನ್:
ಕಿಂಗ್ ಖಾನ್ ಶಾರುಖ್ ಗೆ ಈ ವರ್ಷ ಗೋಲ್ಡನ್ ಇಯರ್. ಒಂದು ಕಾಲದಲ್ಲಿ ಶಾರುಖ್ ಖಾನ್ ಬ್ಯಾಕ್ ಟು ಬ್ಯಾಕ್ ಸಿನಿಮಾವನ್ನು ನೀಡುತ್ತಿದ್ದರು. ಆದರೆ ಇತ್ತೀಚಿನ ವರ್ಷದಲ್ಲಿ ಅವರು ಸಿನಿಮಾ ಮಾಡುವುದು ಅಪರೂಪವಾದರೂ, ರಿಲೀಸ್ ಆದ ಸಿನಿಮಾಗಳು ಕೂಡ ಸೋತು ಸುಣ್ಣವಾಗುತ್ತಿತ್ತು.
ಒಬ್ಬ ಸೂಪರ್ ಸ್ಟಾರ್ ಮತ್ತೆ ಥಿಯೇಟರ್ ನಲ್ಲಿ ರಾರಾಜಿಸುವುದು, ಪ್ರೇಕ್ಷಕರ ಚಪ್ಪಾಳೆಯನ್ನು ಗಿಟ್ಟಿಸಿಕೊಳ್ಳಬೇಕೆಂದರೆ, ಆತ ಒಳ್ಳೆಯ ಸ್ಕ್ರಿಪ್ಟ್ ಆಯ್ದುಕೊಂಡು, ಅದಕ್ಕಾಗಿ ಭರ್ಜರಿ ತಯಾರಿ ನಡೆಸಿಕೊಂಡು ಥಿಯೇಟರ್ ಗೆ ಬರಬೇಕು. ಶಾರುಖ್ ಖಾನ್ ಅನುಸರಿಸಿದ್ದು ಇದನ್ನೇ.
ಈ ವರ್ಷದ ಆರಂಭದಲ್ಲಿ ಸಿದ್ದಾರ್ಥ್ ಆನಂದ್ ಅವರ ʼಪಠಾಣ್ʼ ಸಿನಿಮಾದ ಮೂಲಕ ಶಾರುಖ್ ಖಾನ್ ಮತ್ತೆ ʼಕಿಂಗ್ ಖಾನ್ʼ ಆಗಿ ಪ್ರೇಕ್ಷಕರ ಮನಸ್ಸು ಗೆದ್ದರು. ಆ ಬಳಿಕ ಬಂದ ಅಟ್ಲಿ ಅವರ ʼಜವಾನ್ʼ ಸಾವಿರ ಕೋಟಿ ಗಳಿಸುವ ಮೂಲಕ ಸೋಲಿಲ್ಲದ ಸರದಾರನ ಹೊಸ ದಾರಿಯಲ್ಲಿ ಮುಂದುವರೆದರು.
ಸದ್ಯ ಶಾರುಖ್ ಖಾನ್ ʼಡಂಕಿʼ ಸಿನಿಮಾ ಕೂಡ ಹಿಟ್ ಸಾಲಿಗೆ ಸೇರಿದೆ. ಈ ವರ್ಷ ಹ್ಯಾಟ್ರಿಕ್ ಗೆಲುವು ಸಾಧಿಸುವವ ಮೂಲಕ ಬಿಟೌನ್ ಗೆ ಶಾರುಖ್ ಮತ್ತೆ ಕಂಬ್ಯಾಕ್ ಮಾಡಿದ್ದಾರೆ.
ಡಿಯೋಲ್ ಫ್ಯಾಮಿಲಿ: ಈ ವರ್ಷ ಬಿಟೌನ್ ನಲ್ಲಿ ಗೆಲುವು ಕಂಡು ಕಂಬ್ಯಾಕ್ ಮಾಡಿದವರಲ್ಲಿ ತಂದೆ – ಮಕ್ಕಳ ಡಿಯೋಲ್ ಕುಟುಂಬವೂ ಸೇರಿದೆ. ಹಿರಿಯ ನಟ ಧರ್ಮೇಂದ್ರ ಕರಣ್ ಜೋಹರ್ ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾದಲ್ಲಿನ ನಟನೆ ಹಾಗೂ ಕಿಸ್ಸಿಂಗ್ ವಿಚಾರದಿಂದ ಸದ್ದು ಮಾಡಿದ್ದರು.
ಇನ್ನು ಸನ್ನಿ ಡಿಯೋಲ್ ಅವರಿಗೆ 2023 ಸದಾ ನೆನೆಪಿನಲ್ಲಿ ಉಳಿಯುವ ವರ್ಷವಾಗಿರುವುದು ಖಚಿತ. ಅವರ ʼಗದರ್ -2ʼ ಸಿನಿಮಾ ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ಕೋಟಿ – ಕೋಟಿ ಗಳಿಸುವ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿಕೊಟ್ಟಿದೆ.
ಮೋಡಿ ಮಾಡಿದ ಬಾಬಿ ಡಿಯೋಲ್:
ಚಿತ್ರರಂಗದಲ್ಲಿ ಒಂದು ಸಿನಿಮಾ ಯಾವಾಗ ಬೇಕಾದರೂ ಅದೃಷ್ಟ ಕೈಹಿಡಿಯಬಹುದೆನ್ನುವುದಕ್ಕೆ ಬಾಬಿ ಡಿಯೋಲ್ ಅವರೇ ಒಂದು ಸಾಕ್ಷಿಯೆಂದರೆ ತಪ್ಪಾಗದು. ʼಅನಿಮಲ್ʼ ಸಿನಿಮಾದಲ್ಲಿನ ಅವರ ಕ್ಯಾರೆಕ್ಟರ್ ಅಪಾರ ಮಂದಿಗೆ ಮೆಚ್ಚುಗೆ ಆಗಿದೆ. ಸಿನಿಮಾ ಕೂಡ ದೊಡ್ಡ ಹಿಟ್ ಆಗಿದ್ದು, ಬಾಬಿ ಡಿಯೋಲ್ ಅವರ ಪಾತ್ರವನ್ನು ಎಲ್ಲರೂ ಕೊಂಡಾಡಿದ್ದಾರೆ. ತನ್ನ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದವರಿಗೆ ಧನ್ಯವಾದ ಹೇಳುತ್ತಾ ಬಾಬಿ ಡಿಯೋಲ್ ಭಾವುಕರಾಗಿದ್ದರು. ಬಹಳ ಸಮಯದ ನಂತರ ಬಿಟೌನ್ ಗೆ ಬಾಬಿ ಡಿಯೋಲ್ ದೊಡ್ಡ ಕಂಬ್ಯಾಕ್ ಮಾಡಿದ್ದಾರೆ.
ಓಟಿಟಿ ಮೂಲಕ ʼಬೇಬೋʼ/ ಕಾಜೋಲ್ ಕಂಬ್ಯಾಕ್: ಒಂದು ಕಾಲದಲ್ಲಿ ಬಿಟೌನ್ ನ ಬೇಡಿಕೆಯ ಬೆಡಗಿಯಾಗಿದ್ದ ಕರೀನಾ ಕಪೂರ್ ವಿವಾಹದ ಬಳಿಕ ಸಿನಿರಂಗದಿಂದ ಕೊಂಚ ದೂರವಾಗಿಯೇ ಇದ್ದರು. ಈ ವರ್ಷ ಓಟಿಟಿಯಲ್ಲಿ ಬಂದ ಸುಜಯ್ ಘೋಷ್ ಅವರ ‘ಜಾನೆ ಜಾನ್’ ಸಿನಿಮಾದಲ್ಲಿನ ಅವರ ಪಾತ್ರಕ್ಕೆ ಅಪಾರ ಮೆಚ್ಚುಗೆ ಕೇಳಿ ಬಂದಿತ್ತು.
ಇದಲ್ಲದೆ ಅವರು ಇತ್ತೀಚೆಗೆ BFI ಲಂಡನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಥಮ ಪ್ರದರ್ಶನಗೊಂಡ ಹನ್ಸಲ್ ಮೆಹ್ತಾ ನಿರ್ದೇಶನದ ‘ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್’ ನಲ್ಲಿ ನಟಿಸಿದ್ದಾರೆ.
ಕರೀನಾ ಕಪೂರ್ ಖಾನ್ ಅವರಂತೆಯೇ ಕಾಜೋಲ್ ಗೆ ಇದು ಕಂಬ್ಯಾಕ್ ವರ್ಷವಂದೇ ಹೇಳಬಹುದು. ವಯಸ್ಸಿಗೆ ತಕ್ಕ ಪಾತ್ರವನ್ನು ಮಾಡುವ ಮೂಲಕ ವಿಮರ್ಶಕರಿಂದ ಅವರ ಕಾಣಿಸಿಕೊಂಡ ವೆಬ್ ಸಿರೀಸ್ ಗೆ ಮೆಚ್ಚುಗೆ ಕೇಳಿಬಂದಿತ್ತು.’ದಿ ಟ್ರಯಲ್’ ಕೋರ್ಟ್ ರೂಮ್ ಡ್ರಾಮಾ ಹಾಗೂ ‘ಲಸ್ಟ್ ಸ್ಟೋರೀಸ್ 2’ ವೆಬ್ ಸಿರೀಸ್ ನಲ್ಲಿನ ನಟನೆಯಿಂದ ಬಿಟೌನ್ ಕಾಜೋಲ್ ಅವರು ಕಂಬ್ಯಾಕ್ ಮಾಡಿದ್ದಾರೆ.
ಕರಣ್ ಜೋಹರ್:
ಬಾಲಿವುಡ್‌ನ ಸೂಪರ್ ಹಿಟ್ ನಿರ್ದೇಶಕ ಕರಣ್ ಜೋಹರ್ 7 ವರ್ಷದ ಬಳಿಕ ನಿರ್ದೇಶನಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಅವರ ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾ ಕೆಲವೊಂದು ವಿಚಾರಗಳಿಂದ ಟ್ರೆಂಡ್ ನಲ್ಲಿತ್ತು. ಲಿಂಗ್ ತಾರತಮ್ಯ, ಮತ್ತು ಸಲಿಂಗಕಾಮ, ಬಾಡಿ ಶೇಮಿಂಗ್ ಹೀಗೆ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಕರಣ್ ಜೋಹರ್ ತೆರೆ ಮೇಲೆ ತೋರಿಸಿದ್ದರು. ಒಟ್ಟಿನಲ್ಲಿ ಮನರಂಜನೆಯಿಂದ ಸಿನಿಮಾಕ್ಕೆ ಪಾಸಿಟಿವ್ ರೆಸ್ಪಾನ್ಸ್ ವ್ಯಕ್ತವಾಗಿತ್ತು. ಆ ಮೂಲಕ ಕರಣ್ ಜೋಹರ್ ಭರ್ಜರಿ ಕಂಬ್ಯಾಕ್ ಮಾಡಿದ್ದರು.
ಪ್ರತಿದಿನ ಖಾಲಿ ಹೊಟ್ಟೆಗೆ 5 ನೆನೆಸಿದ ಬಾದಾಮಿ ತಿನ್ನುವುದರಿಂದಾಗುವ 10 ಆರೋಗ್ಯ ಪ್ರಯೋಜನಗಳು
Mahakumbh Mela-No Traffic jam;ಯುವಕರ ಸಾಹಸಯಾತ್ರೆ-ಗಂಗಾನದಿ ಮೂಲಕ ಕುಂಭಮೇಳಕ್ಕೆ ಆಗಮನ!
Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?
ಬಚ್ಚನ್, ಮೋಹನ್‌ಲಾಲ್ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..
ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…
Udupi: ಗೀತಾರ್ಥ ಚಿಂತನೆ-191: “ಡಿಸಿಶನ್ ಮೇಕರ್ ನೀನಲ್ಲ’ ಎಂಬ ಶ್ರೀಕೃಷ್ಣ
Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
You seem to have an Ad Blocker on.
To continue reading, please turn it off or whitelist Udayavani.