![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 7, 2021, 10:55 AM IST
ಸಾಂದರ್ಭಿಕ ಚಿತ್ರ
ಇದು ಸ್ಮಾರ್ಟ್ ಫೋನ್ ಯುಗ. 2021 ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಅಂದಾಜು 760 ಮಿಲಿಯನ್ ಜನರು ಮೊಬೈಲ್ ಬಳಸುತ್ತಿದ್ದಾರೆ. ಮೊದಮೊದಲು ಫೋನ್ ಕರೆಗಳಿಗೆ ಸೀಮಿತವಾಗಿದ್ದ ಮೊಬೈಲ್ ಗಳು, ಸ್ಮಾರ್ಟ್ ಪೋನ್ ಗಳು ಬಂದ ನಂತರ ಮನರಂಜನೆಯ ಸಾಧನವಾಗಿ ಬದಲಾಗಿವೆ. ಇದರ ಮೂಲಕ ಪ್ರತಿನಿತ್ಯ ಕರೆ, ಸಂದೇಶ, ವಿಡಿಯೋ ಕರೆ, ಸಾಮಾಜಿಕ ಜಾಲತಾಣಗಳ ಬಳಕೆ ಮುಂತಾದವುಗಳ ಕ್ರಿಯೆಯಲ್ಲಿ ಜನರು ನಿರತರಾಗಿದ್ದಾರೆ.
ಇಂದಿನ ಕಾಲಮಾನದಲ್ಲಿ ಸ್ಮಾರ್ಟ್ ಫೋನ್ ಗಳಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಪ್ರಮಾಣದಲ್ಲಿ ಅಪಾಯಕಾರಿ ಅಂಶಗಳು ಅಡಗಿವೆ. ಓದಿನ ಕಡೆ ಗಮನಹರಿಸಬೇಕಾದ ಹಲವು ಮಕ್ಕಳು, ಗೇಮಿಂಗ್ ಆಡುವುದರಲ್ಲಿ ನಿರತರಾಗಿದ್ದಾರೆ. ಭವಿಷ್ಯಕ್ಕೆ ಭದ್ರಬುನಾದಿಯನ್ನು ಹಾಕಿಕೊಳ್ಳಬೇಕಾದ ಯುವಕ ಯುವತಿಯರು ಸ್ಮಾರ್ಟ್ ಫೋನ್ ಎಂಬ ಮಾಯಾಜಾಲಕ್ಕೆ ಸಿಲುಕಿದ್ದಾರೆ. ಹಿರಿಯರು ಕೂಡ ಸ್ಮಾರ್ಟ್ ಯುಗಕ್ಕೆ ತಮ್ಮನ್ನು ತಾವು ಒಗ್ಗಿಸಿಕೊಂಡಿದ್ದಾರೆ.
ಕೋವಿಡ್ ಲಾಕ್ ಡೌನ್ ನಂತರದಲ್ಲಿ ನಮ್ಮ ದೇಶದಲ್ಲಿ ಪ್ರತಿನಿತ್ಯ ಕನಿಷ್ಠ 4.3 ಗಂಟೆ ಗಳ ಕಾಲ ಜನರು ಸ್ಮಾರ್ಟ್ ಫೋನ್ ನಲ್ಲೇ ಕಳೆಯುತ್ತಿದ್ದಾರೆ. ಇನ್ನು ಕೆಲವು ವರದಿಗಳ ಪ್ರಕಾರ ದಿನವೊಂದಕ್ಕೆ 7 ರಿಂದ 8 ಗಂಟೆಗಳ ಕಾಲವೂ ಮೊಬೈಲ್ ಬಳಸುವವರು ಇದ್ದಾರೆ. ರಾತ್ರಿ ಸಮಯದಲ್ಲೂ ಮೊಬೈಲ್ ಬಳಸುವವವರ ಸಂಖ್ಯೆ ಅಧಿಕವಾಗುತ್ತಿದೆ. ಅತೀಯಾದ ಮೊಬೈಲ್ ಬಳಕೆಯಿಂದ ಅನೇಕ ಕಾಯಿಲೆಗಳು ನಮಗರಿವಿಲ್ಲದಂತೆ ವಕ್ಕರಿಸಿಕೊಳ್ಳುತ್ತವೆ. ಮುಖ್ಯವಾಗಿ ಸ್ಮಾರ್ಟ್ ಫೋನ್ ನಿಂದ ಹೊರಸೂಸುವ ವಿಕಿರಣಗಳು ವ್ಯಕ್ತಿಯೊಬ್ಬರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ವರದಿ ತಿಳಿಸುತ್ತವೆ. ಹಾಗಾದರೆ ರಾತ್ರಿ ಸಮಯದಲ್ಲಿ ಸ್ಮಾರ್ಟ್ ಫೋನ್ ಬಳಸುವುದರಿಂದ ಯಾವೆಲ್ಲಾ ಅಪಾಯಗಳು ಎದುರಾಗುತ್ತವೆ ಎಂಬ ಮಾಹಿತಿ ಇಲ್ಲಿದೆ.
ಆತಂಕ ಮತ್ತು ಖಿನ್ನತೆಯಿಂದ ಬಳಲುವವರ ಪ್ರಮಾಣ ಹೆಚ್ಚಳ: ಸಾಮಾನ್ಯವಾಗಿ ಮೊಬೈಲ್ ಅನ್ನು ಹೆಚ್ಚಾಗಿ ಅವಲಂಬಿಸಿರುವುದು ಖಿನ್ನತೆಯ ಸಮಸ್ಯೆಗೆ ಕಾರಣವಾಗುತ್ತದೆ. ಕೆಲವೊಮ್ಮೆ ಮಾನಸಿಕ ಸ್ಥಿಮಿತವನ್ನೂ ಕಳೆದುಕೊಳ್ಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಸಮೀಕ್ಷೆಯ ಪ್ರಕಾರ ವಿಡಿಯೋ ಗೇಮ್ ನಲ್ಲಿ ಸದಾ ತೊಡಗಿರುವವರಲ್ಲಿ ಆತಂಕ ಹೆಚ್ಚಾಗಿ ಕಂಡುಬರುತ್ತದೆ. ಸ್ನೇಹಿತರಿಂದ ದೂರಾಗುವುದು, ಸದಾ ಮೊಬೈಲ್ ತನ್ನ ಸಂಗಾತಿ ಎಂದು ಭಾವಿಸುವುದು ಖಿನ್ನತೆಗೆ ಎಡೆಮಾಡಿಕೊಡುತ್ತದೆ.
ಬೆನ್ನು ಹುರಿಯ ಸಮಸ್ಯೆ ತೀವ್ರಗೊಳ್ಳುತ್ತದೆ: ಸಮೀಕ್ಷೆಯೊಂದರ ಪ್ರಕಾರ ಶೇ.25 ರಷ್ಟು ಮೊಬೈಲ್ ಬಳಕೆದಾರರಲ್ಲಿ ಬೆನ್ನು ಹುರಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯ ಎಂಬಂತಾಗಿದೆ. 16 ರಿಂದ 24 ವರ್ಷದ ಯುವಕರು ಬೆನ್ನು ಹುರಿಯ ನೋವಿನಿಂದ ಹೆಚ್ಚಾಗಿ ಬಳಲುತ್ತಿದ್ದಾರೆ ಎಂಬುದನ್ನೂ ವರದಿ ತಿಳಿಸಿದೆ.
ನಿದ್ರಾಹೀನತೆ ಎಂಬ ಸಂಕಷ್ಟ: ಯುವಜನಾಂಗದಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಂಡುಬರುತ್ತಿದೆ. ತಡರಾತ್ರಿಯವರೆಗೂ ಮೊಬೈಲ್ ಬಳಸುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟುಮಾಡುತ್ತದೆ. ಪ್ರತಿ ವ್ಯಕ್ತಿಯು ೬ ರಿಂದ ೮ ಗಂಟೆ ನಿದ್ರಿಸುವುದು ಉತ್ತಮ. ಸಮೀಕ್ಷೆಯೊಂದು ಇಂದು ಶೇ. ೬೮% ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ.
ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಸಂಶೋಧನೆಯ ಪ್ರಕಾರ ಮೊಬೈಲ್ ಮೊಬೈಲ್ ಡಿಸ್ ಪ್ಲೇಯಿಂದ ಹೊರಹೊಮ್ಮುವ ಬೆಳಕು ಕಣ್ಣಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ. ಈ ಬೆಳಕು ರೆಟಿನಾದ ಮೇಲೆ ನೇರವಾಗಿ ಬೀಳುವುದರಿಂದ ಕಣ್ಣಿಗೆ ಹೆಚ್ಚಿನ ಒತ್ತಡ ಉಂಟಾಗುತ್ತದೆ.
ಒತ್ತಡದ ಸಮಸ್ಯೆ: ಮೊಬೈಲ್ ನ ನಿರಂತರ ಬಳಕೆಯಿಂದ ಅಥವಾ ಸತತವಾಗಿ ಬರುವ ಕರೆ, ಸಂದೇಶ, ನೋಟಿಫಿಕೇಶನ್ ಗಳಿಂದ ಹೆಚ್ಚಿನ ಜನರು ಮಾನಸಿಕ ಒತ್ತಡಕ್ಕೆ ಸಿಲುಕುತ್ತಾರೆ ಎಂದು ಸಂಶೋಧನೆ ತಿಳಿಸಿದೆ.
ಕಿವುಡುತನದ ಸಮಸ್ಯೆ: ವಿಪರೀತ ಫೋನ್ ಕರೆಗಳಲ್ಲಿ ತೊಡಗಿಕೊಳ್ಳುವುದು ಮತ್ತು ಇಯರ್ ಫೋನ್ ಗಳಿಂದ ಬರುವ ಹೆಚ್ಚಿನ ಶಬ್ದದಿಂದ ಕಿವುಡುತನ ಉಂಟಾಗುತ್ತದೆ. ಅಮೆರಿಕವೊಂದರಲ್ಲೇ ೨೬ ಮಿಲಿಯನ್ ಜನರು ಈ ಸಮಸ್ಯೆಗೆ ತುತ್ತಾಗಿದ್ದಾರೆ ಎಂದು ಸಮೀಕ್ಷೆಯೊಂದರ ವರದಿ ತಿಳಿಸಿದೆ.
ರೇಡಿಯೇಷನ್ ಅಪಾಯ: ಮೊಬೈಲ್ ನಿಂದ ಹೊರಹೊಮ್ಮುವ ತರಂಗಗಳು ಅಥವಾ ವಿಕಿರಣಗಳು ಮನುಷ್ಯನ ಮೆದುಳಿನ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಇದು ಹಲವು ಸಮಸ್ಯೆಗೆಳಿಗೆ ಎಡೆಮಾಡಿಕೊಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಇದರ ಹೊರತಾಗಿಯೂ ಸ್ಮಾರ್ಟ್ ಫೋನ್ ಬಳಕೆಯಿಂದ ಹಲವು ಸಮಸ್ಯೆಗಳು ಎದುರಾಗುತ್ತದೆ. ಸಮಾಜದೊಂದಿಗೆ ಬೆರೆಯುವುದು ಕಡಿಮೆಯಾಗುತ್ತದೆ. ವ್ಯಕ್ತಿಯೊಬ್ಬನಿಗೆ ಏಕಾಂಗಿತನ ಕಾಡಲು ಆರಂಭವಾಗುತ್ತದೆ. ಮುಖ್ಯವಾಗಿ ಖಾಸಗಿ ಅಥವಾ ವ್ಯಯಕ್ತಿಕ ಮಾಹಿತಿಗಳ ಸೋರಿಕೆಯನ್ನು ಅಲ್ಲಗಳೆಯುವಂತಿಲ್ಲ. ಹಿತಮಿತವಾದ ಸ್ಮಾರ್ಟ್ ಫೋನ್ ಬಳಕೆಯಿಂದ ಉತ್ತಮ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿಯನ್ನು ಗಳಿಸಿಕೊಳ್ಳಬಹುದು.
ಸಂಗ್ರಹ
MahaKumbh Mela: ಪುಣ್ಯಸ್ನಾನದ ಬಗ್ಗೆ ಪ್ರಶ್ನಿಸಿ ಮಲ್ಲಿಕಾರ್ಜುನ ಖರ್ಗೆ ಸಾಧಿಸಿದ್ದೇನು?
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.