ಸರಳ ವಿಧಾನ… ನೀವೇ ಮನೆಯಲ್ಲೇ ತಯಾರಿಸಿ; ಸ್ಪೆಷಲ್ ಎಗ್ ಕರ್ರಿ ರೆಸಿಪಿ

ಮಕ್ಕಳ ಎಲುಬು, ಮೆದುಳು, ಕಣ್ಣಿನ ದೃಷ್ಟಿಶಕ್ತಿ ಮೊದಲಾದವುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ

Team Udayavani, Nov 5, 2020, 6:20 PM IST

egg-curry-750

ಮೊಟ್ಟೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ದಿನಕ್ಕೊಂದು ಮೊಟ್ಟೆ ತಿಂದರೆ ಬಾಯಿ ರುಚಿಯೂ ತೀರಿತು,ದೇಹಕ್ಕೆ ಶಕ್ತಿ ಪೂರಕೈಯೂ ಆಯಿತು. ಮೊಟ್ಟೆಯಲ್ಲಿ ಏನೆಲ್ಲಾ ಇದೆ ಎನ್ನುವುದಕ್ಕಿಂತ, ಏನಿಲ್ಲ ಎಂದು ಕೇಳುವುದು ಹೆಚ್ಚು ಸರಿ. ಮಿಟಮಿನ್‌ ಎ, ಬಿ, ಡಿ, ಇ ಗಳ ಜತೆಗೆ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಷಿಯಂ ಉತ್ತಮ ಮಟ್ಟದ ಪ್ರೊಟೀನ್‌ ಅಂಶಗಳನ್ನು ಮತ್ತಿತರ ಹಲವು ಆರೋಗ್ಯ ಸಂಬಂಧ ಅಗತ್ಯಗಳನ್ನು ಸುಲಭವಾಗಿ ಪೂರೈಸುತ್ತದೆ. ಮಕ್ಕಳ ಎಲುಬು, ಮೆದುಳು, ಕಣ್ಣಿನ ದೃಷ್ಟಿಶಕ್ತಿ ಮೊದಲಾದವುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ, ಏಕಾಗ್ರತೆ, ಬುದ್ಧಿಮತ್ತೆ ಬೆಳವಣೆಗೂ ಸಹಾಯ ಮಾಡುತ್ತದೆ.

ಮೊಟ್ಟೆಯಿಂದ ಏನು ತಯಾರಿಸಿದರೂ ರುಚಿಯೇ ಅದರಲ್ಲೂ ಎಗ್‌ ಕರ್ರಿ ಎಲ್ಲರ ಬಾಯಿಯಲ್ಲಿ ನೀರೂರಿಸುತ್ತದೆ. ಹಾಗಾದರೆ ಇನ್ನೇಕೆ ತಡ ಸ್ವಾಧಿಷ್ಟಕರವಾಗಿ ಸ್ಪೆಷಲ್‌ಎಗ್‌ ಕರ್ರಿ ಮಾಡಿ ಸ್ವಾಧಿಷ್ಟವಾಗಿ ಸವಿಯಿರಿ…

ಸ್ಪೆಷಲ್‌ ಎಗ್‌ ಕರ್ರಿ;ಬೇಕಾಗುವ ಪದಾರ್ಥಗಳು
ಮೊಟ್ಟೆ 4, ಈರುಳ್ಳಿ 2ರಿಂದ 3, ಶುಂಠಿ ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ಧನಿಯಾ ಪುಡಿ ಅರ್ಧಚಮಚ, ಟೊಮೆಟೋ 3, ಅಚ್ಚ ಖಾರದ ಪುಡಿ 1 ಚಮಚ, ಬೆಳ್ಳುಳ್ಳಿ 8 ಎಸಳು, ಜೀರಿಗೆ 1 ಚಮಚ, ಹಸಿ ಮೆಣಸಿನ ಕಾಯಿ 2ರಿಂದ 4, ಗರಂ ಮಸಾಲೆ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ
ಮೊದಲು ಮೊಟ್ಟೆ ಬೇಯಿಸಿಕೊಂಡು ತಣ್ಣಗಾದ ನಂತರ ಮೇಲಿನ ಸಿಪ್ಪೆ ತೆಗೆದು ನಾಲ್ಕು ಭಾಗ ಮಾಡಿದಂತೆ ಬುಡ ಬಿಚ್ಚಿಕೊಳ್ಳದಂತೆ ಕಟ್‌ ಮಾಡಿ ಇಟ್ಟುಕೊಳ್ಳಿ. ಟೊಮೆಟೋ, ಈರುಳ್ಳಿ ಸಣ್ಣಗೆ ಕಟ್‌ ಮಾಡಿ. ಕೊತ್ತಂಬರಿ ಸೊಪ್ಪು ಸಹ ಸಣ್ಣಗೆ ಕಟ್‌ ಮಾಡಿಕೊಳ್ಳಿ. ಶುಂಠಿ-ಬೆಳ್ಳುಳ್ಳಿ ನುಣ್ಣಗೆ ಅರೆದು ಪೇಸ್ಟ್‌ ಮಾಡಿಕೊಳ್ಳಿ. ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎರಡು ಚಮಚ ಎಣ್ಣೆ ಹಾಕಿ ಬಿಸಿಯಾಗಿರುವ ಎಣ್ಣೆಗೆ ಜೀರಿಗೆ ಹಾಕಿ ಒಗ್ಗರಣೆ ಮಾಡಿ.

ಈರುಳ್ಳಿ ಚೂರುಗಳನ್ನು ಹಾಕಿ ಹಸಿಮೆಣಸಿನಕಾಯಿ ಸಹ ಹಾಕಿ ಕೆಂಪಗೆ ಹುರಿದುಕೊಳ್ಳಿ. ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಹಸಿ ವಾಸನೆ ಹೋಗುವ ತನಕ ಫ್ರೈ ಮಾಡಿ. ಅರಿಶಿನ ಹಾಕಿ ಅಚ್ಚ ಖಾರದ ಪುಡಿ , ಧನಿಯಾ ಪುಡಿ ಹಾಕಿ ಚೆನ್ನಾಗಿ ಕಲೆಸಿ. ಉಪ್ಪು ಹಾಕಿ ಕಲೆಸಿ. ಮಸಾಲೆ ಬೇಯಿಸಲು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಫ್ರೈ ಮಾಡಿದ ನಂತರ ಮಿಶ್ರಣ ಕೆಳಗೆ ಇಳಿಸಿ ನಾಲ್ಕು ಭಾಗ ಮಾಡಿರುವ ಮೊಟ್ಟೆಯ ನಡುವೆ ಮಸಾಲೆ ತುಂಬಿಸಿ.

ಇನ್ನೊಂದು ಬಾಣಲೆ ಒಲೆಯ ಮೇಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ. ಬಿಸಿಯಾದ ಎಣ್ಣೆಗೆ ಮಸಾಲೆ ತುಂಬಿರುವ ಮೊಟ್ಟೆ ಇಟ್ಟು ಎರಡು ಕಡೆ ಫ್ರೈ ಮಾಡಿ ಉಳಿದ ಮಸಾಲೆಗೆ ನೀರು ಸೇರಿಸಿ ಮೊಟ್ಟೆಯ ಮೇಲೆ ಹಾಕಿ. ನಂತರ ಗರಂ ಮಸಾಲೆ ಯನ್ನು ಹಾಕಿ , ಸಣ್ಣಗೆ ಹೆಚ್ಚಿರುವ ಕೊತ್ತಂಬರಿ ಸೊಪ್ಪು ಹಾಕಿರಿ. ಎರಡು ನಿಮಿಷಗಳ ನಂತರ ಕೆಳಗೆ ಇಳಿಸಿ. ರುಚಿಕರವಾದ ಸ್ವಾಧಿಷ್ಟಕರ ಸ್ಪೆಷಲ್‌ ಎಗ್‌ ಕರ್ರಿ ಸವಿಯಲು ರೆಡಿ. ಅನ್ನ ಹಾಗೂ ಚಪಾತಿ ಜೊತೆ ಈ ಕರ್ರಿ ತುಂಬಾನೇ ರುಚಿಯಾಗಿರುತ್ತದೆ.

ಟಾಪ್ ನ್ಯೂಸ್

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Donald Trump Salry: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

Trump: ಗುಜರಾತ್‌ ಮೂಲದ ಪಟೇಲ್‌ CIA ನೂತನ ಮುಖ್ಯಸ್ಥ: ಡೊನಾಲ್ಡ್‌ ಟ್ರಂಪ್‌ ಒಲವು

Trump: ಗುಜರಾತ್‌ ಮೂಲದ ಪಟೇಲ್‌ CIA ನೂತನ ನಿರ್ದೇಶಕ: ಡೊನಾಲ್ಡ್‌ ಟ್ರಂಪ್‌ ಒಲವು

voter

Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.