Snake Island: ಇದು ಹಾವುಗಳ ಸಾಮ್ರಾಜ್ಯ… ಈ ಪ್ರದೇಶವನ್ನು ಆಳುವುದೇ ಹಾವುಗಳು
ಇಲ್ಲಿದ್ದ ಹಾವುಗಳಿಂದ ಒಂದು ಕುಟುಂಬವೇ ನಾಶವಾಗಿದೆಯಂತೆ
ಸುಧೀರ್, Aug 26, 2023, 5:15 PM IST
ಹಾವುಗಳ ಹೆಸರು ಕೇಳಿದರೆ ಸಾಕು ಮೈಯೆಲ್ಲಾ ಒಮ್ಮೆ ಜುಂ ಎನ್ನುತ್ತೆ…ಈಗಿನ ಕಾಲದಲ್ಲಿ ಹಾವುಗಳ ಸಂಖ್ಯೆ ವಿಪರೀತ ಕಡಿಮೆಯಾಗಿದೆ ಈ ಹಿಂದೆ ದಿನಕ್ಕೊಂದಾದರೂ ಹಾವುಗಳು ಕಣ್ಣಿಗೆ ಕಾಣುತ್ತಿತ್ತು ಆದರೆ ಈಗ ಅದು ತುಂಬಾ ವಿರಳವಾಗಿದೆ. ಆದರೆ ಇಲ್ಲೊಂದು ಪ್ರದೇಶವಿದೆ ಇಲ್ಲಿ ಹಾವು ಬಿಟ್ಟರೆ ಬೇರೆ ಯಾವುದೇ ಪ್ರಾಣಿಗಳು ಕಾಣಲು ಸಿಗುವುದಿಲ್ಲವಂತೆ. ದೇಶದ ನಾನಾ ಜಾತಿಯ ವಿಷಪೂರಿತ ಹಾವುಗಳಿಂದ ಹಿಡಿದು ಸಾಮಾನ್ಯ ವಿಷ ರಹಿತ ಹಾವುಗಳು ಕಾಣ ಸಿಗುವುದು ಈ ಪ್ರದೇಶದಲ್ಲಿ ಮಾತ್ರವಂತೆ, ಅದಕ್ಕಿಂತಲೂ ಮಿಗಿಲಾಗಿ ಇಲ್ಲಿನ ಪ್ರದೇಶವನ್ನು ಅಳುವುದೇ ಈ ಹಾವುಗಳು.
ಬನ್ನಿ ಹಾಗಾದರೆ ಹಾವುಗಳೇ ಇರುವ ಆ ಪ್ರದೇಶ ಯಾವುದು, ಯಾವೆಲ್ಲಾ ಪ್ರಭೇದದ ಹಾವುಗಳು ಇಲ್ಲಿವೆ ಜೊತೆಗೆ ಇಲ್ಲಿರುವ ಹಾವುಗಳ ಸಂಖ್ಯೆ ಎಷ್ಟು ಎಂಬುದರ ಬಗ್ಗೆ ತಿಳಿದುಕೊಳ್ಳೋಣ…
ಬ್ರೆಜಿಲ್‌ನ ಸಾವೋ ಪೌಲೋದಿಂದ ಕೇವಲ 21 ಕಿಲೋಮೀಟರ್ ದೂರದಲ್ಲಿರುವ ಇಲ್ಹಾ ಡ ಕ್ವಿಮಾಡ ಗ್ರಾಂಡೇ ಎಂಬ ಹೆಸರಿನ ಈ ದ್ವೀಪ ಬಹುಶಃ ಮಾನವನಿಗೆ ಕಾಲಿಡಲು ಸಾಧ್ಯವಾಗದೇ ಇರುವ ಕೆಲವೇ ಕೆಲವು ವಿಸ್ಮಯ ಪ್ರದೇಶಗಳಲ್ಲಿ ಇದೂ ಒಂದಿರಬೇಕು ಹಾಗಾಗಿ ಇದನ್ನು ಹಾವಿನ ದ್ವೀಪ ಎಂದು ಹೆಸರುವಾಸಿಯಾಗಿದೆ. ಅಷ್ಟು ಮಾತ್ರವಲ್ಲದೆ ಹಾವುಗಳೇ ತುಂಬಿರುವುದರಿಂದ ಈ ದ್ವೀಪ ಜನಸಂಪರ್ಕದಿಂದ ಕೂಡ ದೂರ ಉಳಿದುಬಿಟ್ಟಿದೆ.
ಈ ಐಲ್ಯಾಂಡ್ ನಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ಹಾವುಗಳು ಕಾಣಸಿಗುತ್ತವೆಯಂತೆ ವಿಶ್ವದ ಅತ್ಯಂತ ವಿಷಕಾರಿ ಹಾವುಗಳು ಎಲ್ಲಾದರೂ ಇದೆ ಎಂದಿದ್ದರೆ ಅವು ಇಲ್ಲಿ ಮಾತ್ರ. ಗೋಲ್ಡನ್ ಲ್ಯಾನ್ಸ್ ಹೆಡ್ ಹಾವು ಸೇರಿದಂತೆ ಸಾವಿರಾರು ಪ್ರಭೇದದ ಹಾವುಗಳು ಇಲ್ಲಿವೆಯಂತೆ.
ಅಂದಹಾಗೆ, ಸ್ನೇಕ್ ಐಲ್ಯಾಂಡ್‌ನ ನಿಜವಾದ ಹೆಸರು ಇಲ್ಹಾ ಡ ಕ್ವಿಮಡಾ ಗ್ರಾಂಡೆ. ಇದು ಸಾವೊ ಪಾಲೊದಿಂದ ಕೇವಲ 90 ಮೈಲುಗಳಷ್ಟು ದೂರದಲ್ಲಿದೆ. ಜನರು ದ್ವೀಪಕ್ಕೆ ಹೋಗಲು ಸಾಧ್ಯವಿಲ್ಲ. ಬ್ರೆಜಿಲಿಯನ್ ನೌಕಾಪಡೆಯು ತಮ್ಮ ಸ್ವಂತ ಸುರಕ್ಷತೆ ಮತ್ತು ಹಾವುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯಾರು ದ್ವೀಪಕ್ಕೆ ಭೇಟಿ ನೀಡಲು ಅನುಮತಿಸಬೇಕೆಂದು ನಿರ್ಧರಿಸುತ್ತಾರೆ. ಆದಾಗ್ಯೂ, ಕೆಲವು ವಿಜ್ಞಾನಿಗಳು ಮತ್ತು ನೌಕಾ ಅಧಿಕಾರಿಗಳು ಮಾತ್ರ ದ್ವೀಪಕ್ಕೆ ಭೇಟಿ ನೀಡಬಹುದು.
ಜನ ಸಾಮಾನ್ಯರ ಪ್ರವೇಶಕ್ಕೆ ಅವಕಾಶವಿಲ್ಲ:
ಬ್ರೆಜಿಲಿಯನ್ ನೌಕಾಪಡೆ ಇಲ್ಲಿನ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದು ದ್ವೀಪಕ್ಕೆ ಜನ ಸಾಮಾನ್ಯರಿಗೆ ಪ್ರವೇಶ ನಿಷೇಧಿಸಲಾಗಿದೆ, ಪರಿಸರ ಅಧ್ಯಯನ ನಡೆಸುವ ಸಂಶೋಧಕರಿಗೆ ಹಾಗೂ ನೌಕಾಪಡೆಯ ಸಿಬಂದಿಗಳು ಮಾತ್ರ ತಮ್ಮ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪ್ರವೇಶಿಸಲು ಇಲ್ಲಿನ ಸರಕಾರ ಅನುಮತಿ ನೀಡಿದೆ.
ಮಾಂಸವನ್ನೇ ಕರಗಿಸಬಲ್ಲ ವಿಷಪೂರಿತ ಹಾವುಗಳು :
ಈ ದ್ವೀಪದಲ್ಲಿ ಗೋಲ್ಡನ್ ಲ್ಯಾನ್ಸ್ಹೆಡ್ ಮತ್ತು ಬೋತ್ರೋಪ್ಸ್ ಇನ್ಸುಲಾರಿಸ್ ಎಂಬ ವಿಷಪೂರಿತ ಹಾವುಗಳು ವಾಸಿಸುತ್ತಿದ್ದು ಇವುಗಳ ಮುಖ್ಯ ಆಹಾರ ಪಕ್ಷಿಗಳು, ಈ ಹಾವುಗಳು ಒಮ್ಮೆ ಕುಟುಕಿದರೆ ಪಕ್ಷಿ ಸತ್ತೇ ಹೋಗುತ್ತದೆ ಅಷ್ಟು ಮಾತ್ರವಲ್ಲದೆ ಮನುಷ್ಯನಿಗೆ ಕಚ್ಚಿದರೂ ದೇಹ ಮತ್ತು ಚರ್ಮವನ್ನು ಕರಗಿಸುವ ಶಕ್ತಿ ಈ ಹಾವಿನ ವಿಷಕ್ಕೆ ಇದೆ ಎನ್ನಲಾಗಿದೆ. ಪಕ್ಷಿಗಳು ಈ ದ್ವೀಪಕ್ಕೆ ಬರಲು ಹೆದರುತ್ತವೆಯಂತೆ, ಅಲ್ಲದೆ ಪಕ್ಷಿಗಳು ತಮ್ಮ ವಲಸೆ ಹೋಗುವ ಸಂದರ್ಭದಲ್ಲಿ ಈ ದ್ವೀಪದಲ್ಲಿ ವಿಶ್ರಾಂತಿ ಪಡೆಯಲು ಬಂದಾಗ ವಿಷಪೂರಿತ ಹಾವುಗಳ ದಾಳಿಗೆ ತುತ್ತಾಗುತ್ತವೆಯಂತೆ.
ಕಾಲಿಟ್ಟಲ್ಲೆಲ್ಲಾ ಹಾವುಗಳೇ:
ಈ ದ್ವೀಪದಲ್ಲಿ ಎಲ್ಲಿ ನೋಡಿದರು ಹಾವುಗಳೇ ಕಾಣುತ್ತವೆಯಂತೆ ಸಂಶೋಧಕರು ಹೇಳುವ ಪ್ರಕಾರ ಇಲ್ಲಿ ಪ್ರತಿ ಚದರ ಮೀಟರ್‌ಗೆ 5 ಹಾವುಗಳು ಸಿಗುತ್ತವೆಯಂತೆ. ಇಲ್ಲಿಯವರೆಗೆ 2000- 4000 ಜಾತಿಯ ಹಾವುಗಳನ್ನು ಈ ದ್ವೀಪದಲ್ಲಿ ಗುರುತಿಸಲಾಗಿದೆ ಎಂದು ಹೇಳಾಗುತ್ತಿದೆ.
ಹಾವುಗಳಿಂದ ಕುಟುಂಬವೇ ನಾಶ:
ಈ ದ್ವೀಪದಲ್ಲಿ ಲೈಟ್ ಹೌಸ್ ಕೂಡ ಇದೆ. ಒಂದಾನೊಂದು ಕಾಲದಲ್ಲಿ ಈ ಜಾಗದಲ್ಲಿ ಜನ ವಾಸಿಸುತ್ತಿದ್ದರು ಎನ್ನುವುದಕ್ಕೆ ಈ ಲೈಟ್ ಹೌಸ್ ಸಾಕ್ಷಿಯಾಗಿದೆ. ಲೈಟ್‌ಹೌಸ್ ಕೀಪರ್ ಮತ್ತು ಅವರ ಕುಟುಂಬವು 1909 ಮತ್ತು 1920 ರ ನಡುವೆ ಸ್ನೇಕ್ ಐಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಕ್ರಮೇಣ ಈ ಹಾವುಗಳ ದಾಳಿಯಿಂದ ಈ ಕುಟುಂಬವೂ ನಾಶವಾಯಿತು ಎಂದು ಹೇಳಲಾಗಿದೆ.
110 ಎಕರೆ ಪ್ರದೇಶ, 4 ಲಕ್ಷಕ್ಕೂ ಹೆಚ್ಚು ಹಾವುಗಳು:
110 ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ ಈ ದ್ವೀಪದಲ್ಲಿ ಸುಮಾರು 4,30,000ಕ್ಕೂ ಹೆಚ್ಚು ವಿಷಪೂರಿತ ಹಾವುಗಳು ಇವೆಯೆಂದು ಗುರುತಿಸಲಾಗಿದೆ. ಈ ದ್ವೀಪದ ಗಾತ್ರಕ್ಕೆ ಹೋಲಿಸಿದರೆ ಹಾವುಗಳ ಸಂಖ್ಯೆಯೇ ಅಧಿಕ. ಒಮ್ಮೆ ಯೋಚಿಸಿ ಇಲ್ಲಿಗೆ ಪ್ರವೇಶ ಮಾಡಿದವರು ಮತ್ತೆ ಹಿಂದೆ ಬರುವ ಸಾಧ್ಯತೆ ಇದೆಯಾ ಎಂಬುದು.
– ಸುಧೀರ್ ಪರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.