Snakes Village; ಇದು ಹಾವುಗಳ ಗ್ರಾಮ… ಇಲ್ಲಿ ಹಾವುಗಳು ಕೂಡ ಮನೆಯ ಸದಸ್ಯರೇ

ಇಲ್ಲಿ ಜನಸಂಖ್ಯೆಗಿಂತ ಹೆಚ್ಚಿದೆಯಂತೆ ಹಾವುಗಳ ಸಂಖ್ಯೆ

Team Udayavani, Apr 3, 2024, 6:06 PM IST

Snakes Village; ಇದು ಹಾವುಗಳ ಗ್ರಾಮ, ಇಲ್ಲಿ ಜನಸಂಖ್ಯೆಗಿಂತ ಹೆಚ್ಚಿದೆಯಂತೆ ಹಾವುಗಳ ಸಂಖ್ಯೆ

ಹಾವು ನೋಡುವುದು ಇರಲಿ ಹಾವಿನ ಸುದ್ದಿ ಕೇಳಿದರೆಯೇ ಒಮ್ಮೆ ಹಾರಿ ಬೀಳುತ್ತೇವೆ ಅಷ್ಟೊಂದು ಭಯ ಜನರಲ್ಲಿದೆ, ಆದರೆ ನಮ್ಮ ದೇಶದಲ್ಲಿ ಕೆಲವೊಂದು ಹಾವುಗಳನ್ನು ಪೂಜ್ಯನೀಯ ಭಾವದಿಂದ ನೋಡುತ್ತೇವೆ, ಜೊತೆಗೆ ನಾಗರ ಪಂಚಮಿ ಹಬ್ಬದ ಸಮಯದಲ್ಲಿ ವಿಶೇಷವಾದ ಪೂಜೆ ಪುನಸ್ಕಾರವನ್ನು ಮಾಡುತ್ತೇವೆ. ಆದರೆ ಇಲ್ಲೊಂದು ಗ್ರಾಮವಿದೆ ಈ ಗ್ರಾಮದ ಹೆಸರೇ ಹಾವಿನ ಗ್ರಾಮ ಎಂದು ಯಾಕೆಂದರೆ ಇಲ್ಲಿನ ಜನರು ಹಾವುಗಳೊಂದಿಗೆ ಬದುಕುತ್ತಾರೆ, ಅಷ್ಟೇ ಯಾಕೆ ಈ ಗ್ರಾಮದ ಜನರು ತಮ್ಮ ತಮ್ಮ ಮನೆಗಳಲ್ಲಿ ಹಾವುಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರಂತೆ, ಈ ವಿಚಾರ ಕೇಳಿ ನಿಮಗೆ ಆಶ್ಚರ್ಯವಾಗಬಹುದು ಆದರೂ ಇದು ಸತ್ಯ, ಇನ್ನೊಂದು ವಿಚಾರ ಏನೆಂದರೆ ಈ ಗ್ರಾಮ ಇರುವುದು ನಮ್ಮ ಭಾರತ ದೇಶದಲ್ಲೇ.

ಬನ್ನಿ ಹಾಗಾದರೆ ಯಾವ ಪ್ರದೇಶದಲ್ಲಿದೆ ಈ ಗ್ರಾಮ ಜನರು ಯಾಕಾಗಿ ಹಾವುಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ ಹಾವುಗಳು ಮನುಷ್ಯರಿಗೆ ಕಚ್ಚಲ್ವಾ ಈ ಎಲ್ಲ ವಿಚಾರದ ಬಗ್ಗೆ ತಿಳಿದುಕೊಂಡು ಬರೋಣ…

ಮಹಾರಾಷ್ಟ್ರದ ಪುಣೆಯಿಂದ ಸುಮಾರು 200 ಕಿಮೀ ದೂರದಲ್ಲಿರುವ ಸೊಲ್ಲಾಪುರ ಜಿಲ್ಲೆಯಲ್ಲಿರುವ ಸಣ್ಣ ಗ್ರಾಮವೇ ‘ಶೆಟ್ಪಾಲ್ ಗ್ರಾಮ’ ಈ ಗ್ರಾಮದಲ್ಲಿ ಹಲವಾರು ಕುಟುಂಬಗಳು ವಾಸಮಾಡುತ್ತಿವೆ. ವಿಶೇಷವೆಂದರೆ ಈ ಗ್ರಾಮದ ಜನರು ಹಾವುಗಳೊಂದಿಗೆ ವಾಸಮಾಡುತ್ತಾರೆ ಹಾಗಾಗಿ ಈ ಗ್ರಾಮಕ್ಕೆ ಹಾವುಗಳ ಗ್ರಾಮವೆಂದೇ ಹೆಸರು ಬಂದಿದೆ.

ಗ್ರಾಮದ ಜನಸಂಖ್ಯೆಗಿಂತ ಹಾವುಗಳ ಸಂಖ್ಯೆ ಹೆಚ್ಚು
ಅಂದಹಾಗೆ ಈ ಗ್ರಾಮದಲ್ಲಿ ಸುಮಾರು 2,600ಕ್ಕೂ ಹೆಚ್ಚು ಮಂದಿ ವಾಸಮಾಡುತ್ತಿದ್ದಾರಂತೆ ವಿಶೇಷವೆಂದರೆ ಈ ಗ್ರಾಮದಲ್ಲಿರುವ ಜನಸಂಖ್ಯೆಗಿಂತ ಹೆಚ್ಚು ಹಾವುಗಳು ಇವೆ ಎಂದು ಹೇಳಲಾಗುತ್ತಿದೆ ಹಾಗಾಗಿ ಹಾವುಗಳು ಗ್ರಾಮದಲ್ಲಿ ಆರಾಮವಾಗಿ ವಾಸಿಸುತ್ತವೆಯಂತೆ.

ಮನೆಗಳಲ್ಲಿ ಹಾವುಗಳಿಗೂ ವಾಸಸ್ಥಾನ
ಇನ್ನೊಂದು ವಿಶೇಷವೆಂದರೆ ಈ ಗ್ರಾಮದಲ್ಲಿ ಹಾವುಗಳನ್ನು ತಮ್ಮ ಕುಟುಂಬ ಸದಸ್ಯರಂತೆ ನೋಡಿಕೊಳ್ಳುತ್ತಾರೆ ಹಾಗಾಗಿ ಮನೆ ನಿರ್ಮಾಣ ಮಾಡುವಾಗ ಹಾವುಗಳಿಗೂ ಉಳಿದುಕೊಳ್ಳಲು ಮನೆಯ ಒಳಗೆ ಬಿಲಗಳ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರಂತೆ ಜೊತೆಗೆ ಹಾವುಗಳು ಯಾರ ಹೆದರಿಕೆಯೂ ಇಲ್ಲದೆ ಮನೆಯೊಳಗೇ ಸಂಚರಿಸುತ್ತಿರುತ್ತವೆ ಮನೆಯಲ್ಲಿರುವ ಮಕ್ಕಳೂ ಕೂಡ ಈ ಹಾವುಗಳನ್ನು ಕಂಡು ಹೆದರದೆ ಅವುಗಳ ಜೊತೆಗೆ ಬೆರೆಯುತ್ತಾರೆ.

ಹಾವುಗಳಿಂದ ಯಾವುದೇ ಅಪಾಯವಾಗಿಲ್ಲ:
ಹಾವುಗಳನ್ನು ಕಂಡ ಕೂಡಲೇ ಜಾಗ ಖಾಲಿ ಮಾಡುವ ನಾವುಗಳು ಆದರೆ ಅಲ್ಲಿ ಹಾಗಲ್ಲ ಸಣ್ಣ ಮಕ್ಕಳಿರುವಾಗಲೇ ಹಾವುಗಳ ಜೊತೆಗೆ ಇದ್ದುಕೊಂಡು ಹಾವುಗಳ ಹೆದರಿಕೆಯೇ ಇಲ್ಲದಂತಾಗಿರುತ್ತದೆ ಹಾಗಾಗಿ ಆ ಗ್ರಾಮದ ಮಕ್ಕಳಿಗೂ ಹಾವಿನ ಹೆದರಿಕೆ ಇಲ್ಲದಂತಾಗಿದೆ. ಅಲ್ಲದೆ ಈ ಹಾವುಗಳು ಇದುವರೆಗೂ ಯಾವುದೇ ಒಬ್ಬ ವ್ಯಕ್ತಿಗೂ ಕಚ್ಚಿದ ಉದಾಹರಣೆ ಇಲ್ಲವಂತೆ, ಹಾಗಾಗಿ ನಾವು ನಾಗರ ಪಂಚಮಿಯಂದು ಹಾವಿಗೆ ಪೂಜೆ ಸಲ್ಲಿಸಿದರೆ ಈ ಗ್ರಾಮದ ಜನರು ವರ್ಷವಿಡೀ ನಾಗರಾಜನ ಸೇವೆಯನ್ನು ಮಾಡಿಕೊಂಡೆ ಇರುವವರು, ಜೊತೆಗೆ ಹಾವುಗೆ ಪೂಜ್ಯನೀಯ ಭಾವದಿಂದ ಆಹಾರವನ್ನು ನೀಡುತ್ತಾರೆ.

ಮನೆಯ ಸದಸ್ಯರಂತೆ ಹಾವುಗಳು ಮನೆಯೊಳಗೇ ಆಚೆ ಈಚೆ ತಿರುಗಾಡುತ್ತಿರುತ್ತವೆ ಇದಕ್ಕೆ ಪುಷ್ಟಿ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ, ಮನೆಮಂದಿ ತಮ್ಮ ಪಾಡಿಗೆ ಮನೆಗೆಲಸ ಮಾಡಿಕೊಂಡಿದ್ದರೆ ಹಾವುಗಳು ಕೂಡ ಅವುಗಳ ಪಾಡಿಗೆ ಮನೆಯೊಳಗೇ ಸಂಚರಿಸುತ್ತಿರುತ್ತವೆ.

ಶಾಲೆಯಲ್ಲೂ ಹಾವು:
ಈ ಗ್ರಾಮದಲ್ಲಿರುವ ಶಾಲೆಯ ಕೊಠಡಿಯೊಳಗೂ ಹಾವುಗಳು ತಿರುಗಾಡುತ್ತಿರುತ್ತವೆಯಂತೆ ಅಷ್ಟು ಮಾತ್ರವಲ್ಲದೆ ಕಲೆ ವಿದ್ಯಾರ್ಥಿಗಳು ಹಾವುಗಳನ್ನು ಶಾಲೆಗೂ ತರುತ್ತಾರಂತೆ. ಶಾಲೆಯ ಶಿಕ್ಷಕರು ಹಾವುಗಳ ಜೊತೆಗೆ ಪಾಠ ಮಾಡುತ್ತಾರೆ.

ಹಲವಾರು ವರ್ಷಗಳಿಂದ ಜನ ಈ ಗ್ರಾಮದಲ್ಲಿ ಹಾವುಗಳ ಜೊತೆ ವಾಸಮಾಡುತ್ತಿದ್ದಾರೆ ಆದರೆ ಯಾವ ಕಾರಣಕ್ಕಾಗಿ ಈ ಗ್ರಾಮದ ಜನರು ಹಾವುಗಳನ್ನು ಮನೆ ಸದಸ್ಯರಂತೆ ನೋಡಿಕೊಳ್ಳುತ್ತಿದ್ದಾರೆ ಎಂಬುದು ಮಾತ್ರ ಇಂದಿಗೂ ನಿಗೂಢವಾಗಿಯೇ ಉಳಿದಿದೆ.

ನೀವು ಹಾವಿನ ಗ್ರಾಮವನ್ನು ನೋಡಲು ಬಯಸುತ್ತೀರಾ?
ನೀವು ಶೆಟ್‌ಫಾಲ್‌ಗೆ ಹೋಗಲು ಬಯಸಿದ್ದರೆ, ಈ ಗ್ರಾಮಕ್ಕೆ ಹತ್ತಿರವಿರುವ ರೈಲು ನಿಲ್ದಾಣವೆಂದರೆ ಮೊಡ್ನಿಂಬ್ ಮತ್ತು ಅಷ್ಟಿ ರೈಲು ನಿಲ್ದಾಣ ಇಲ್ಲಿಗೆ ಬಂದು ಬಾಡಿಗೆ ವಾಹನದಲ್ಲಿ ಶೆಟ್ಪಾಲ್ ಗ್ರಾಮವನ್ನು ತಲುಪಬಹುದು ಇಲ್ಲವಾದಲ್ಲಿ ಶೋಲಾಪುರಕ್ಕೆ ಬಂದು ಇಲ್ಲಿಂದ ಕ್ಯಾಬ್ ಅಥವಾ ಬಸ್ ಮೂಲಕ ಹಾವಿನ ಗ್ರಾಮವನ್ನು ತಲುಪಬಹುದು.

– ಸುಧೀರ್. ಪರ್ಕಳ

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇಂದು ಕಿಂಗ್‌ ಸಾಮ್ರಾಜ್ಯದ ಕಥೆ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್‌ ಸಾಮ್ರಾಜ್ಯದ ಕಥೆ

palaniswami

AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?

Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…

Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…

coco

Coconut Oil: ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಯಿರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.