Health Tips: ಪ್ರವಾಸಿಗರಿಗೆ ಆರೋಗ್ಯ ಸಲಹೆ: ವಾಂತಿ ಸಮಸ್ಯೆಗೆ ಮನೆಮದ್ದು
ಕಾವ್ಯಶ್ರೀ, Aug 8, 2023, 6:53 PM IST
ಎಷ್ಟೋ ಜನರಿಗೆ ಪ್ರಯಾಣ ಮಾಡುವ ಆಸೆಯಿದ್ದರೂ ವಾಕರಿಕೆ, ವಾಂತಿಯಾಗುವಿಕೆ, ಆಯಾಸದ ಕಾರಣ ಎಲ್ಲಿಯೂ ಹೋಗಲು ಮುಜುಗರ. ಇನ್ನೂ ಕೆಲವರು ವಾಂತಿಯಾಗದಿರಲು ಮಾತ್ರೆ ತೆಗೆದುಕೊಳ್ಳದೆ ಪ್ರಯಾಣ ಬೆಳೆಸುವುದೇ ಇಲ್ಲ. ಪ್ರಯಾಣಕ್ಕೂ ಮುನ್ನ ಪ್ರವಾಸಿಗರು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬಾರದು.
ಅಂತಹ ಜನರಿಗೆ ವಾಂತಿ ತಡೆಗಟ್ಟುವ ಸುಲಭ ಮನೆ ಮದ್ದುಗಳು, ಸಲಹೆಗಳು ಇಲ್ಲಿವೆ.
ಮೊದಲನೆಯದಾಗಿ ತಾಜಾ ಗಾಳಿ ಬರುವ ಸೀಟು ಆಯ್ಕೆ ಮಾಡಿಕೊಳ್ಳಿ. ವಾಂತಿಯಾಗುವ ಬಗ್ಗೆ ಭಯ ಇರುವವರು ತಮ್ಮ ಪ್ರಯಾಣದ ವೇಳೆ ಕಿಟಕಿ ಬದಿಯ ಸೀಟಿನಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು. ತಾಜಾ ಗಾಳಿ ಪಡೆಯುವುದರಿಂದ ವಾಂತಿಯಾಗುವಿಕೆಯನ್ನು ತಡೆಗಟ್ಟಬಹುದು, ಅಥವಾ ಹಿಡಿತವಾಗಿಟ್ಟುಕೊಳ್ಳಬಹುದು.
ಪ್ರಯಾಣಿಸುವಾಗ ನಿಂಬೆ ಅಥವಾ ಕಿತ್ತಳೆ ಹಣ್ಣು ತಗೊಂಡು ಹೋಗುವುದು ಉಪಯೋಗವಾಗುತ್ತದೆ. ಆಗಾಗ ನಿಂಬೆ ಹಣ್ಣಿನ ಪರಿಮಳ ಆಸ್ವಾದಿಸುತ್ತಿದ್ದರೆ ವಾಂತಿಯಾಗುವ ಪ್ರಮಾಣ ಕಡಿಮೆಗೊಲ್ಳುತ್ತದೆ.
ಕಿತ್ತಳೆ ಹಣ್ಣು ಅಥವಾ ಅದರ ಜ್ಯೂಸ್ ಸೇವಿಸಿದರೆ ವಾಕರಿಗೆ ಸಮಸ್ಯೆ ಬೇಗ ಕಡಿಮೆಯಾಗುತ್ತದೆ.
ಏಲಕ್ಕಿಯಿಂದಲೂ ವಾಂತಿ, ವಾಕರಿಕೆ ಸಮಸ್ಯೆ ದೂರ ಮಾಡಬಹುದು. ಪ್ರಯಾಣದ ವೇಳೆಯಲ್ಲಿ ಏಲಕ್ಕಿ ಚೂರನ್ನು ಬಾಯಿಗೆ ಹಾಕಿಕೊಂಡು ಬಹುಕಾಲ ಬಾಯಿಯಲ್ಲೇ ಇಟ್ಟುಕೊಂಡರೆ ವಾಂತಿಯಾಗುವುದು ತಡೆಗಟ್ಟಬಹುದು.
ಸಿಟ್ರಸ್ ಅಂಶವಿರುವ ನಿಂಬೆ ವಾಂತಿ ತೊಲಗಿಸಲು ಸಹಾಯ ಮಾಡುತ್ತದೆ. ನಿಂಬೆಗೆ ಉಪ್ಪು ಹಾಕಿ ಒಣಗಿಸಿಯೂ ಉಪಯೋಗಿಸಬಹುದು. ಪ್ರಯಾಣದ ವೇಳೆ ಒಂದು ತುಂಡು ನಿಂಬೆ ಬಾಯಿಗೆ ಹಾಕಿಕೊಂಡು ಜಗಿದರೆ ವಾಂತಿ ಕಡಿಮೆಯಾಗುತ್ತದೆ.
ವಾಂತಿ ಬರುವ ಮುನ್ನ ಚಿಕ್ಕ ತುಂಡು ಶುಂಠಿಯನ್ನು ಬಾಯಿಗೆ ಹಾಕಿಕೊಂಡರೆ ವಾಂತಿಯಾಗುವ ಪ್ರಮಾಣ ಕಡಿಮೆಗೊಳಿಸುತ್ತದೆ. ಉಪ್ಪು ಹಾಕಿ ಒಣಗಿಸಿದ ಶುಂಠಿಯ ತುಂಡುಗಳನ್ನು ತಿನ್ನುವುದು ಕೂಡಾ ಉತ್ತಮ ಸಲಹೆಯಾಗಿದೆ.
ಪುದೀನಾ ಎಲೆಯಿಂದ ವಾಂತಿ ಹೋಗಲಾಡಿಸಬಹುದು. ವಾಕರಿಕೆ ಬಂದಂತೆ ಆಗುವ ಸಂದರ್ಭದಲ್ಲಿ ಪುದಿನಾ ಎಲೆಗಳ ಪರಿಮಳ ತೆಗೆದುಕೊಳ್ಳುವುದರಿಂದ ವಾಂತಿ ತಡೆಗಟಗಟಬಹುದು.
ಒಂದು ಕಪ್ ನೀರಿನಲ್ಲಿ 2 ಪುದೀನಾ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ಬಳಿಕ ಅದಕ್ಕೆ ನಿಂಬೆ ರಸ ಮತ್ತು ಉಪ್ಪು ಹಾಕಿ ಕುಡಿಯುವುದರಿಂದ ವಾಂತಿ ಕಡಿಮೆಯಾಗುತ್ತದೆ.
ಒಂದೆರಡು ಪುದೀನಾ ಎಲೆಗಳನ್ನು ಸ್ವಲ್ಪ ಉಪ್ಪು ಸೇರಿಸಿ ಜಗಿದು ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಒಣಗಿದ ಪುದೀನಾ ಎಲೆಗಳು ಉಪಯೋಗವಾಗುವುದರಿಂದ ಪುದಿನಾ ಹೇಗಿದ್ದರೂ ಉಪಯೋಗವಾಗುತ್ತದೆ.
ದಾಲ್ಚಿನ್ನಿ, ಜೀರಿಗೆ ಫೆನ್ನೆಲ್ ಪುಡಿ ವಾಕರಿಕೆ ಮತ್ತು ವಾಂತಿಗೆ ಉತ್ತಮ ಪರಿಹಾರ. ಈ ಸಾಮಾಗ್ರಿಗಳನ್ನು ಬಳಸಿ ಚಹಾ ಮಾಡಿ ಕುಡಿಯುವುದು ಉತ್ತಮ ಪ್ರಯೋಜನವಾಗುತ್ತದೆ.
ನೀರನ್ನು ಚೆನ್ನಾಗಿ ಕುದಿಸಿ ಇದಕ್ಕೆ ಅರ್ಧ ಟೀ ಚಮಚ ಸೋಂಪು ಕಾಳುಗಳನ್ನು ಹಾಕಿ ಕುದಿಯಲು ಬಿಡಿ. ಈ ಕಷಾಯವನ್ನು ದಿನಕ್ಕೆ 3 ಬಾರಿ ಕುಡಿದರೆ ವಾಂತಿ ಮತ್ತು ವಾಕರಿಕೆ ಸಮಸ್ಯೆ ಕಡಿಮೆಯಾಗಲು ಸಹಾಯ ಮಾಡುತ್ತದೆ.
ವಾಂತಿಯಾಗುವಿಕೆಯ ಗಮನ ಬೇರೆಡೆ ಸೆಳೆಯಲು ಸಂಗೀತ ಕೇಳುವುದು, ಚುಲನಚಿತ್ರ ವೀಕ್ಷಿಸುವುದು, ಗೇಮ್ಸ್ ಆಡುವುದು, ಪುಸ್ತಕಗಳನ್ನು ಓದುವುದು ಅಥವಾ ಸಹ ಪ್ರಯಾಣಿಕರ ಜತೆ ಮಾತನಾಡುವುದು.. ಹೀಗೆ ಬೇರೆ ಬೇರೆ ಚಟುವಟಿಕೆಗಳಿಂದ ಗಮನ ಬೇರೆಡೆ ಇದ್ದರೆ ವಾಂತಿಯಾಗುವ ಅನುಭವದಿಂದ ದೂರವಿರಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…
Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?
UV Fusion: ಮಾನವನ ಸ್ವಾರ್ಥ ವಿನಾಶಕ್ಕೆ ಕಾರಣವಾಗುತ್ತಿದೆಯೇ?
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.