Movies: ಕಾಲಿವುಡ್ ಟು ಟಾಲಿವುಡ್.. ಈ ಸೀಕ್ವೆಲ್ ಸಿನಿಮಾಗಳ ಮೇಲಿದೆ ನೂರಾರು ನಿರೀಕ್ಷೆ
Team Udayavani, Jan 24, 2024, 6:31 PM IST
ಹೈದರಾಬಾದ್/ ಚೆನ್ನೈ: ಈಗಷ್ಟೇ ಸಂಕ್ರಾಂತಿ ಹಬ್ಬ ಮುಗಿದಿದೆ. ಕಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ನಿರೀಕ್ಷೆ ಹುಟ್ಟಿಸಿದ ಸಿನಿಮಾಗಳು ತೆರೆಗೆ ಬಂದಿವೆ. ಈ ಸಿನಿಮಾಗಳ ಕೆಲ ಸಿನಿಮಾಗಳು ಸದ್ದು ಮಾಡಿವೆ. ಇನ್ನು ಕೆಲ ಸಿನಿಮಾಗಳು ಸೀಕ್ವೆಲ್ ಬರುವುದಾಗಿ ಘೋಷಿಸಿದೆ.
ಕಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಮುಂದೆ ಬರಲಿರುವ ಬಹು ನಿರೀಕ್ಷಿತ ಸಿನಿಮಾಗಳ ಸೀಕ್ವೆಲ್ ಗಳ ಒಂದು ಕ್ವಿಕ್ ಲುಕ್ ಇಲ್ಲಿದೆ.
ಕಾಲಿವುಡ್ ನಲ್ಲಿ ಬರಲಿರುವ ಸೀಕ್ವೆಲ್ ಗಳು:
ಅಯಲಾನ್: ಸಂಕ್ರಾಂತಿ ಹಬ್ಬಕ್ಕೆ ತೆರೆಕಂಡ ಶಿವಕಾರ್ತಿಕೇಯನ್ ಅವರ ʼಅಯಲಾನ್ʼ ಸಿನಿಮಾ 90 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಹಿಟ್ ಸಾಲಿಗೆ ಸೇರಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಸೀಕ್ವೆಲ್ ಕೂಡ ಅನೌನ್ಸ್ ಆಗಿದೆ.
ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಸಿನಿಮಾದ ವಿಎಫ್ ಎಕ್ಸ್ ಕೆಲಸ ಮಾಡಿರುವ ಫ್ಯಾಂಟಮ್ FX, “ಅಯಾಲನ್ 2-ವಿನ ವಿಎಫ್ ಎಕ್ಸ್ ಗಾಗಿ 50 ಕೋಟಿ ರೂ. ಬಜೆಟ್ ಇಡಲಾಗಿದೆ. ಸಿನಿಮಾ ಅತ್ಯುತ್ತಮ ಗುಣಮಟ್ಟದಲ್ಲಿ ಮೂಡಿಬರಲಿದೆ. ಸಿನಿಮಾದಲ್ಲಿ ಅದ್ಭುತ ದೃಶ್ಯಗಳ ನಿರೀಕ್ಷೆಯನ್ನು ಪ್ರೇಕ್ಷಕರು ಇಟ್ಟುಕೊಳ್ಳಬಹುದೆಂದು” ಫ್ಯಾಂಟಮ್ FX ಹೇಳಿದೆ.
ಕೈತಿ 2: ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್ ನಲ್ಲಿ ಬಂದ ʼಕೈತಿʼ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡಿತ್ತು. ನಟ ಕಾರ್ತಿ ಸಿನಿಮಾದಲ್ಲಿ ʼದಿಲ್ಲಿʼ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪೆರೋಲ್‌ನಲ್ಲಿರುವ ಅಪರಾಧಿಯ ಕಾರ್ತಿ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ಈ ಸಿನಿಮಾದ ಎರಡನೇ ಭಾಗ ರಿಲೀಸ್ ಆಗುವುದಾಗಿ ಸಿನಿಮಾ ತಂಡ ಈ ಹಿಂದೆಯೇ ಅನೌನ್ಸ್ ಮಾಡಿದೆ. ಈ ವರ್ಷ ಅಥವಾ ಮುಂದಿನ ವರ್ಷ ಸಿನಿಮಾದ ಸಟ್ಟೇರುವ ಸಾಧ್ಯತೆಯಿದೆ.
‘ಸರ್ಪಟ್ಟ ಪರಂಬರೈ’-2: ಪಾ ರಂಜಿತ್ ನಿರ್ದೇಶನದ ಸ್ಪೋರ್ಟ್ಸ್ ಡ್ರಾಮಾ ʼಸರ್ಪಟ್ಟ ಪರಂಬರೈʼ ಆರ್ಯ ಅವರಿಗೆ ಕಂಬ್ಯಾಕ್ ಮಾಡಿಕೊಟ್ಟ ಸಿನಿಮಾ. ಸಿನಿಮಾಕ್ಕೆ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬಂದಿತ್ತು. ರಂಜಿತ್ ‘ಸರ್ಪಟ್ಟ ಪರಂಬರೈʼ ಸಿನಿಮಾದ ಸೀಕ್ವೆಲ್ ನ್ನು 2023 ರ ಮಾರ್ಚ್ 6 ರಂದು ಅನೌನ್ಸ್ ಮಾಡಿದ್ದರು. ಇದಕ್ಕೆ ‘ಸರ್ಪಟ್ಟ ಪರಂಬರೈ ರೌಂಡ್ -2ʼ ಎಂದು ಟೈಟಲ್ ಇಡಲಾಗಿದೆ. ಬಾಕ್ಸಿಂಗ್ ಕಥೆಯಲ್ಲಿ ಆರ್ಯ, ದುಶಾರ ವಿಜಯನ್, ಇತರರು ಕಾಣಿಸಿಕೊಂಡಿದ್ದರು.
ಇಂಡಿಯನ್ – 2: ಕಮಲ್ ಹಾಸನ್ ವೃತ್ತಿ ಬದುಕಿಗೆ ಹೊಸ ಆಯಾಮ ಕೊಟ್ಟ 1996 ರಲ್ಲಿ ಬಂದ ಶಂಕರ್ ಅವರ ʼಇಂಡಿಯನ್ʼ ಸಿನಿಮಾದ ಸೀಕ್ವೆಲ್ ಬಗ್ಗೆ ದೊಡ್ಡಮಟ್ಟದಲ್ಲಿ ಹೈಪ್ ಹೆಚ್ಚಿದೆ. ಪೋಸ್ಟರ್ ಹಾಗೂ ಟೀಸರ್ ಗಳಿಂದ ಸದ್ದು ಮಾಡಿರುವ ʼಇಂಡಿಯನ್ -2ʼ ಇದೇ ವರ್ಷ ತೆರೆ ಕಾಣುವ ಸಾಧ್ಯತೆಯಿದೆ.
ಕಮಲ್ ಹಾಸನ್ ʼಇಂಡಿಯನ್ ತಾತʼ ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್, ಸಿದ್ಧಾರ್ಥ್, ಎಸ್‌ಜೆ ಸೂರ್ಯ, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಬಾಬಿ ಸಿಂಹ, ಇತರರು ಕಾಣಿಸಿಕೊಳ್ಳಲಿದ್ದಾರೆ.
ಥಾನಿ ಒರುವನ್ 2: ತಮಿಳು ನಟ ಜಯಂರವಿ ಅವರ ಪೊಲೀಸ್ – ವಿಜ್ಞಾನಿಗಳ ಚೇಸಿಂಗ್ ಕಥೆಯನ್ನೊಳಗೊಂಡ ʼಥಾನಿ ಒರುವನ್ʼ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ಕೇಳಿ ಬಂದಿತ್ತು. ಈ ಸಿನಿಮಾದ ಸೀಕ್ವೆಲ್ ಅನೌನ್ಸ್ ಆಗಿದ್ದು, ಬಹು ನಿರೀಕ್ಷೆಯಿಂದ ಪ್ರೇಕ್ಷಕರು ಕಾಯುತ್ತಿದ್ದಾರೆ. ನಾಯಕಿಯಾಗಿ ನಟಿಸಿರುವ ನಯನತಾರಾ ಕೂಡ ಮರಳುವ ನಿರೀಕ್ಷೆಯಿದೆ.
ವಿದುತಲೈ 2: ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿರ್ದೇಶನದ ʼವಿದುತಲೈʼ ಸಿನಿಮಾದ ಸೀಕ್ವೆಲ್ ಬುರುವುದಾಗಿ ಸಿನಿಮಾ ತಂಡ ಈಗಾಗಲೇ ಅನೌನ್ಸ್ ಮಾಡಿದೆ.
ಸೂರಿ, ಭವಾನಿ ಶ್ರೀ, ವಿಜಯ್ ಸೇತುಪತಿ, ಗೌತಮ್ ವಾಸುದೇವ್ ಮೆನನ್, ಚೇತನ್ ಮತ್ತು ಇತರಿರುವ ಈ ಸಿನಿಮಾ ಆಕ್ಷನ್ ಡ್ರಾಮಾ ಕಥೆಯನ್ನೊಳಗೊಂಡಿದೆ. ಪೊಲೀಸ್ ದೌರ್ಜನ್ಯ ಮತ್ತು ಅದರ ವಿರುದ್ಧದ ಜನರ ಚಳವಳಿಯನ್ನು ಈ ಸಿನಿಮಾ ಕೇಂದ್ರೀಕರಿಸುತ್ತದೆ.
ಎರಡನೇ ಭಾಗದಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಸೇತುಪತಿ ಅವರೇ ಪ್ರಧಾನವಾಗಿ ಕಥೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಇವಿಷ್ಟು ಅಧಿಕೃತವಾಗಿ ಅನೌನ್ಸ್ ಆಗಿರುವ ಕಾಲಿವುಡ್ ಸಿನಿಮಾಗಳಾಗಿವೆ. ಇದನ್ನು ಹೊರತುಪಡಿಸಿದರೆ ʼಜೈಲರ್ -2ʼ, ಕ್ಯಾಪ್ಟನ್ ಮಿಲ್ಲರ್ -2, ವಡಾ ಚೆನ್ನೈ, ಥೀರನ್ ಈ ಸಿನಿಮಾಗಳು ಸೀಕ್ವೆಲ್ ಆಗಿ ಬರಲಿದೆ ಎನ್ನಲಾಗುತ್ತಿದೆ.
ಟಾಲಿವುಡ್ ಬಹು ನಿರೀಕ್ಷಿತ ಸೀಕ್ವೆಲ್ ಸಿನಿಮಾಗಳು:
ʼಪುಷ್ಪ-2ʼ: ಟಾಲಿವುಡ್ ಮಾತ್ರವಲ್ಲದೆ ಪ್ಯಾನ್ ಇಂಡಿಯಾದಲ್ಲಿ ಸದ್ದು ಮಾಡಿರುವ ಅಲ್ಲು ಅರ್ಜುನ್ ಅವರ ʼಪುಷ್ಪʼ ಸಿನಿಮಾದ ಸೀಕ್ವೆಲ್ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಶೂಟಿಂಗ್ ಹಂತದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ಇದೇ ವರ್ಷದ ಆಗಸ್ಟ್ 15 ರಂದು ಅದ್ಧೂರಿಯಾಗಿ ತೆರೆ ಕಾಣಲಿದೆ.
ಮುಖ್ಯವಾಗಿ ಸುಕುಮಾರ್ ಅವರ ʼಪುಷ್ಪ-2ʼ ನಲ್ಲಿ ಫಾಹದ್ ಫಾಸಿಲ್ ಹಾಗೂ ಅಲ್ಲು ಅರ್ಜುನ್ ಅವರ ಮುಖಾಮುಖಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.
ʼಸಲಾರ್ʼ ಪಾರ್ಟ್ -2: ಥಿಯೇಟರ್ ನಲ್ಲಿ ಕೋಟಿ ಕೋಟಿ ಗಳಿಕೆ ಕಂಡು ದೊಡ್ಡ ಹಿಟ್ ಆದ ಪ್ರಶಾಂತ್ ನೀಲ್ – ಪ್ರಭಾಸ್ ಅವರ ʼಸಲಾರ್ʼ ಸೀಕ್ವೆಲ್ ಬರುವುದು ಗೊತ್ತೇ ಇದೆ. ಇದಕ್ಕೆ ʼ ಸಲಾರ್: ಭಾಗ 2 – ಶೌರ್ಯಂಗ ಪರ್ವಂʼ ಎಂದು ಟೈಟಲ್ ಇಡಲಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆಯಿದೆ.
ಯಾತ್ರಾ -2: ವೈ.ಎಸ್.ರಾಜಶೇಖರ ರೆಡ್ಡಿ ಅವರ ರಾಜಕೀಯ ಬದುಕಿನ ಕಥೆಯನ್ನೊಳಗೊಂಡ ʼಯಾತ್ರಾʼ ಸಿನಿಮಾ ಟಾಲಿವುಡ್ ನಲ್ಲಿ ಸದ್ದು ಮಾಡಿದ್ದು, ಈ ಸಿನಿಮಾದ ಸೀಕ್ವೆಲ್ ನಲ್ಲಿ ಆಂಧ್ರ ಸಿಎಂ ಜಗನ ಮೋಹನ್ ರೆಡ್ಡಿಯವರ ರಾಜಕೀಯ ಕಥೆಯನ್ನು ಮಹಿ ವಿ ರಾಘವ್ ಅವರು ಹೇಳಲಿದ್ದಾರೆ.
ಮಮ್ಮುಟ್ಟಿ, ಜೀವಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾ ಇದೇ ವರ್ಷ ತೆರೆ ಕಾಣಲಿದೆ.
ಟಿಲ್ಲು ಸ್ಕ್ವೇರ್: 2022 ರಲ್ಲಿ ಸದ್ದು ಮಾಡಿದ ಸಿದ್ದು ಜೊನ್ನಲಗಡ್ಡ ಅವರ ʼಡಿಜೆ ಟಿಲ್ಲುʼ ಸಿನಿಮಾದ ಸ್ವೀಕೆಲ್ ಸದ್ದು ಮಾಡುತ್ತಿದೆ. ಕಾಮಿಡಿ ಕಥಾಹಂದರದಿಂದ ಗಮನ ಸೆಳೆದಿದ್ದ ಈ ಸಿನಿಮಾದ ಎರಡನೇ ಭಾಗ ಟಾಲಿವುಡ್ ಸಿನಿರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಸಿನಿಮಾದಲ್ಲಿ ನಟಿ ಅನುಪಮಾ ಪರಮೇಶ್ವರನ್ ಅವರು ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಸ್ಟರ್ ವೈರಲ್ ಆಗಿದೆ.
ಗೂಢಚಾರಿ-2: 2018 ರಲ್ಲಿ ಅಡ್ವಿ ಶೇಷ್ ಅವರ ಥ್ರಿಲ್ಲರ್ ʼಗೂಢಚಾರಿʼ ಟಾಲಿವುಡ್ ಮಂದಿಯನ್ನು ರಂಜಿಸಿತು. ಈ ಸಿನಿಮಾದ ಸೀಕ್ವೆಲ್ ಅಧಿಕೃತವಾಗಿ ಅನೌನ್ಸ್ ಆಗಿದ್ದು, ಈಗಾಗಲೇ ಚಿತ್ರೀಕರಣ ಆರಂಭಗೊಂಡಿದೆ. ಅಡ್ವಿ ಶೇಷ್ ಅವರ ವೃತ್ತಿ ಬದುಕಿನ ದುಬಾರಿ ಸಿನಿಮಾಗಳಲ್ಲಿ ಈ ಸಿನಿಮಾ ಒಂದಾಗಿರಲಿದೆ ಎನ್ನಲಾಗಿದೆ. ಇದೇ ವರ್ಷ ಸಿನಿಮಾ ತೆರೆಕಾಣುವ ಸಾಧ್ಯತೆಯಿದೆ.
ಜೈ ಹನುಮಾನ್: ಇತ್ತೀಚೆಗಷ್ಟೇ ಟಾಲಿವುಡ್ ನಲ್ಲಿ ರಿಲೀಸ್ ಆಗಿ 150 ಕೋಟಿಯ ಕಲೆಕ್ಷನ್ ನತ್ತ ಸಾಗುತ್ತಿರುವ ಪ್ರಶಾಂತ್ ವರ್ಮಾ ಅವರ ʼಹನುಮಾನ್ʼ ಸಿನಿಮಾದ ಸೀಕ್ವೆಲ್ ಬರುವುದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ. ರಾಮಲಲ್ಲಾ ಪ್ರತಿಷ್ಠಾಪನೆ ದಿನದಂದು ನಿರ್ದೇಶಕ ಪ್ರಶಾಂತ್ ವರ್ಮಾ ʼಹನುಮಾನ್ʼ ಸಿನಿಮಾದ ಸೀಕ್ವೆಲ್ ನ್ನು ಅನೌನ್ಸ್ ಮಾಡಿದ್ದಾರೆ. ಇದಕ್ಕೆ ʼಜೈ ಹನುಮಾನ್ʼ ಎಂದು ಟೈಟಲ್ ಇಡಲಾಗಿದೆ.
ಹಿಟ್ -3: ಟಾಲಿವುಡ್ ನಲ್ಲಿ ಹಿಟ್ ಸಿನಿಮಾದ ಸೀಕ್ವೆಲ್ ಈ ಹಿಂದೆಯೂ ಬಂದಿದೆ. ಇದುವರೆಗೆ ಬಂದ ಎರಡು ಸೀಕ್ವೆಲ್ ಗಳಿಗೆ ಪ್ರೇಕ್ಷಕರರಿಂದ ಉತ್ತಮ ಅಭಿಪ್ರಾಯ ಕೇಳಿ ಬಂದಿದೆ. ಹಿಟ್ -2 ನಲ್ಲಿ ನಟ ನಾನಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ʼಹಿಟ್ -3ʼ ನಲ್ಲಿ ನಾನಿ ಅವರೇ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಿಂಬಿಸಾರ -2: ಪೌರಾಣಿಕ ಕಥೆಯನ್ನೊಳಗೊಂಡಿದ್ದ ನಟ ಕಲ್ಯಾಣ್ ರಾಮ್ ಅವರ ʼಬಿಂಬಿಸಾರʼ ಸಿನಿಮಾದ ಸೀಕ್ವೆಲ್ ಈಗಾಗಲೇ ಅನೌನ್ಸ್ ಆಗಿದೆ. ಈ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಇದೇ ವರ್ಷದ ಏಪ್ರಿಲ್ ಅಥವಾ ಮೇನಲ್ಲಿ ಸಿನಿಮಾದ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ಕಲ್ಯಾಣ್ ರಾಮ್ ಈ ಹಿಂದೆ ಹೇಳಿದ್ದರು.
ದೇವರ -2: ʼಆರ್ ಆರ್ ಆರ್ʼ ಬಳಿಕ ಜೂ.ಎನ್ ಟಿಆರ್ ಅವರು ಕಾಣಿಸಿಕೊಳ್ಳುತ್ತಿರುವ ʼದೇವರʼ ಸಿನಿಮಾ ಟಾಲಿವುಡ್ ನ ದೊಡ್ಡ ಸಿನಿಮಾಗಳಲ್ಲಿ ಒಂದು. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಹ್ನವಿ ಕಪೂರ್, ನಟ ಸೈಫ್ ಅಲಿಖಾನ್ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿರುವುದರಿಂದ ಬಿಟೌನ್ ಸಿನಿಮಂದಿಗೂ ʼದೇವರʼ ಸಿನಿಮಾ ಕುತೂಹಲ ಹುಟ್ಟಿಸಿದೆ.
ಎರಡು ಭಾಗದಲ್ಲಿ ʼದೇವರʼ ತೆರೆ ಕಾಣಲಿದೆ. ಮೊದಲ ಭಾಗ ಇದೇ ಏಪ್ರಿಲ್ 5 ರಂದು ರಿಲೀಸ್ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿತ್ತು. ಆದರೆ ಸಿನಿಮಾದ ವಿಎಫ್ ಎಕ್ಸ್ ಕೆಲಸಕ್ಕೆ ಹೆಚ್ಚಿನ ಸಮಯ ಬೇಕಿರುವ ಕಾರಣದಿಂದ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.