ಇಂದು ಶ್ರೀ ರಾಘವೇಂದ್ರ ಜಯಂತಿ: ಕರೆದಲ್ಲಿಗೆ ಬರುವ ಗುರುರಾಯರು
ಕರ್ಮಜದೇವತೆ ಶಂಕು ಕರ್ಣನೆ ವ್ಯಾಸ ರಾಗಿ ಶ್ರೀ ರಾಘವೇಂದ್ರರಾಗಿ ಅವತರಿಸಿದವರು.
Team Udayavani, Mar 9, 2022, 10:55 AM IST
ಕರೆದಲ್ಲಿಗೆ ಬಂದು ನಿಂತು ಚಿಂತಾಸಂತಾಪ ಗಳನ್ನೆಲ್ಲ ಕಳೆದು ಮನದಭೀಷ್ಠೆಯನ್ನು ಪೂರೈಸುವ ಗುರುಗಳೆಂದರೆ ಕಲಿಯುಗ ಕಾಮಧೇನು ಶ್ರೀ ರಾಘವೇಂದ್ರ ಗುರುರಾಯರು.ಹರಿ ಮುನಿದರೂ ಗುರುತಾ ಒಲಿವ ಎಂಬಂತೆ ಭಗ ವಂತ ಮುನಿಸಿಕೊಂಡರೂ ಗುರುಗಳು ಪ್ರೀತಿ-ವಾತ್ಸಲ್ಯದಿಂದ ನಮ್ಮ ಮೇಲೆ ಅನು ಗ್ರಹದ ಧಾರೆಯನ್ನು ಸುರಿಸು ವರು. ಲೋಕದಲ್ಲಿ ತಿರಸ್ಕೃತರಾದರೂ ಮನದಾಳದಿಂದ ಭಜಿಸಿದಾಗ ತಾಯಿಯು ಕಂದನನ್ನು ಸಂತೈಸುವಂತೆ ಮಮ ತೆಯ ಮಡಿಲ ಲ್ಲಿರಿಸಿ ಭರವಸೆಯ ಬೆಳಕಾಗಿ ಅನುಗ್ರಹಿಸುವ ಗುರುಗಳೆಂದರೆ ಮಂಚಾಲೆಯ ಗುರುರಾಯರು. ರಾಯರನ್ನು ನೆನೆಯುವ ಮನ ಮನೆಯೇ ವೃಂದಾವನ ಮಂತ್ರಾಲಯ.
ಪ್ರಹ್ಲಾದನಾಗಿ ನರಸಿಂಹನಿಂದ ಅನುಗ್ರಹೀತ ನಾದ. ಕರ್ಮಜದೇವತೆ ಶಂಕು ಕರ್ಣನೆ ವ್ಯಾಸ ರಾಗಿ ಶ್ರೀ ರಾಘವೇಂದ್ರರಾಗಿ ಅವತರಿಸಿದವರು. ತಮಿಳುನಾಡಿನ ಭುವನಗಿರಿ ಸಣ್ಣ ಊರು.
1595ರಲ್ಲಿ ಫಾಲ್ಗುಣ ಶುದ್ಧ ಸಪ್ತಮಿ ಸಾತ್ವಿಕ ದಂಪತಿಯರಾದ ಗೋಪಿಕಾಂಬ ಮತ್ತು ತಿಮ್ಮಣ್ಣ ಭಟ್ಟರ ಮಡಿಲಲ್ಲಿ ವೆಂಕಟಾಚಲದ ತಿಮ್ಮಪ್ಪನ ಪ್ರಸಾದದಿಂದ ಭುವನಗಿರಿಯಲ್ಲಿ ಭುವನಪಾವನ ಕಾಮಧೇನುವಾಗಿ ಅವತರಿಸಿದವರೆ ಶ್ರೀ ರಾಘವೇಂದ್ರರು. ವೆಂಕಟನಾಥ ನೆಂದು ನಾಮ ಪಡೆದರು. ಉಪನಯನ್ ಅಧ್ಯಯನ ಸರಸ್ವತಿ ಎಂಬ ಕನ್ಯಾ ಜತೆ ವಿವಾಹವು ನಡೆಯಿತು. ಪ್ರತಿನಿತ್ಯ ಮಹಾಭಾಷ್ಯ ಚಂದ್ರಿಕಾದಂತಹ ಉದ್ಗ†ಂಥಗಳ ಅಧ್ಯಯನ ನಡೆದು ಮಹಾಭಾಷ್ಯ ವೆಂಕಟ ನಾಥನೆಂದು ಬಿರುದು ಪಡೆದರು.
ಆಶ್ರಮ ಪೂರ್ವದಲ್ಲೇ ಭಗವದನುಗ್ರಹ ಪರಿ ಪೂರ್ಣವಿದ್ದ ರಾಯರು ಅನೇಕ ಮಹಿಮೆಗಳನ್ನು ತೋರಿದರು. ಪದ್ಮನಾಭತೀರ್ಥ ಪರಂಪರೆಯ ಶ್ರೀ ಸುಧೀಂದ್ರರು ಸ್ವಪ್ನದಲ್ಲಿ ಆದೇಶ ಬಂದಂತೆ ಆನಂದತೀರ್ಥರ ವೇದಾಂತ ಸಾಮ್ರಾಜ್ಯಕ್ಕೆ ಇವರನ್ನೇ ಉತ್ತರಾಧಿಕಾರಿಗಳಾಗಿ ನೇಮಿಸಬೇಕೆಂದು ಇವರ ವಿನಯ ಪಾಂಡಿತ್ಯಕ್ಕೆ ಮನಸೋತು ವೆಂಕಟ ನಾಥನನ್ನು ಪ್ರಾರ್ಥಿಸು ವರು. (ಬಾಲಾ ಭಾರ್ಯಾ ಬಾಲಕೋನೊ ಪಾನೀತ) ಇನ್ನೂ ಹರೆಯದ ಹೆಂಡತಿ ಪುತ್ರನೂ ಅನುಪನೀತ ನನಗೆಲ್ಲಿಯ ಸನ್ಯಾಸ ಎಲ್ಲಿಯ ವೇದಾಂತ ಸಾಮ್ರಾಜ್ಯ? ಭಾರವನ್ನು ಹೊತ್ತು ಸಮುದ್ರದಾಟುವ ಪ್ರಯತ್ನವಿದು ನಾನೊಲ್ಲೆ ಎಂದು ಚಿಂತಾ ಕ್ರಾಂತರಾಗಿದ್ದಾಗ ಸರಸ್ವತಿ ದೇವಿಯೇ ಅಂದು ಕನಸಿನಲ್ಲಿ ಬಂದು ವೇದಾಂತ ಸಾಮ್ರಾಜ್ಯದ ಉತ್ತರಾಧಿಕಾರಿಯಾ ಗಲೇ ಬೇಕು, ಆಚಾರ್ಯ ಮಧ್ವರ, ವೇದವ್ಯಾಸರ ತಣ್ತೀವನ್ನು ಜಗದಗಲದಲ್ಲಿ ಪಸರಿಸಲು ನೀನೇ ಸಮರ್ಥ, ಒಪ್ಪಿಕೋ ಅಂದಾಗ ಭಗವದಣತಿಯಂತೆ ಸುಧೀಂದ್ರರಿಂದ ಸನ್ಯಾಸ ಸ್ವೀಕರಿಸಿ ಶ್ರೀ ರಾಘವೇಂದ್ರ ತೀರ್ಥರಾದರು. ತಂಜಾವೂರಿನ ರಘುನಾಥ ಭೂಪಾಲನ್ ಸಂಸ್ಥಾನದಲ್ಲಿ ವೇದಾಂತ ಸಾಮ್ರಾಜ್ಯದ ಪಟ್ಟಾಭಿಷೇಕವಾಗಿ ತಣ್ತೀಜ್ಞಾನ ಪ್ರಸಾರ, ಭಕ್ತರಾನುಗ್ರಹದ ದೀಕ್ಷೆ ತೊಟ್ಟರು.
ಸತ್ಯನಾಮಕ ಭಗವಂತನನ್ನು ನಿತ್ಯವು ಹೃದಯದಿ ಧರಿಸಿ ಸತ್ಯಧರ್ಮರತರಾಗಿ ಭಜಕರ ಕಾಮನೆ ಗಳನ್ನು ಪೂರೈಸುತ್ತಾ ಕಲ್ಪವೃಕ್ಷ ಕಾಮಧೇನು ವಿನಂತೆ ಬೆಳಗಿದರು ಶ್ರೀ ರಾಯರು.
ಬ್ರಹ್ಮಸೂತ್ರ, ಗೀತೆ, ಉಪನಿಷತ್ತುಗಳಿಗೆ ಟಿಪ್ಪಣಿ ಗಳನ್ನು ಸರಳ ಸುಂದರ ಭಾಷೆಯಲ್ಲಿ ರಚಿಸಿ ಅಧ್ಯೇತೃ ಗಳಿಗೆ ಮಾಡಿದ ಇವರ ಉಪಕಾರ ಅಸದೃಶ. ರಾಮಕೃಷ್ಣರ ಬಗ್ಗೆ ಚಾರಿತ್ರ್ಯಮಂಜರಿ, ಗೀತಾವಿ ವೃತ್ತಿ, ಸಂಕಲ್ಪಗದ್ಯ, ಸಮರ್ಪಣಗದ್ಯ ಹೀಗೆ ಅನೇಕ ಸ್ತೋತ್ರ ಸಾಹಿತ್ಯಗಳನ್ನು ರಚಿಸಿ ವ್ಯಾಸರ ಸೇವೆಯನ್ನು ಬಹುಮುಖದಲ್ಲಿ ನಡೆಸಿದರು. ಪರಿಮಳಾಚಾರ್ಯ ರೆನಿಸಿದ ಇವರು ಉಡುಪಿ ಯಲ್ಲಿ ಕೃಷ್ಣನನ್ನು ಸಾಕ್ಷಾತ್ತಾಗಿ ಕಂಡು ರಚಿಸಿದ “ಇಂದು ಎನಗೆ ಗೋವಿಂದ’ ಕೃತಿ ಪ್ರಸಿದ್ಧವಾಗಿದೆ.
ಭಗವದನುಗ್ರಹದಿಂದ ಭಕ್ತರ ಕಾಮನೆ ಗಳನ್ನು ಪೂರೈಸುತ್ತಾ ರಾಯರು 1671ರಲ್ಲಿ ಶ್ರಾವಣ ಬಹುಳ ದ್ವಿತೀಯದಂದು ಸಶರೀರರಾಗಿ ವೃಂದಾವನ ಪ್ರವೇಶಿಸಿ ಅಲ್ಲಿಂದಲೇ ಇಂದಿಗೂ ಅನುಗ್ರಹಿಸುತ್ತಿರುವರು. ರಾಮ, ಕೃಷ್ಣ, ವ್ಯಾಸ, ನರಸಿಂಹ ಮುಂತಾದ ಭಗ ವಾದ್ರೂಪಗಳಿಂದ ಕೂಡಿ ಕಂಗೊಳಿಸುತ್ತಿರುವ ತುಂಗಾ ತೀರದ ವೃಂದಾವನ “ಆವೃತ್ತ ಚಕ್ಷು: ಅಮೃತಣ್ತೀ¤$ಮಿತ್ಛನ್’ ಎಂಬಂತೆ ಒಳಕಣ್ಣಿನಿಂದ ನೋಡುವವರಿಗೆ ಇಂದಿಗೂ ಸಾಕ್ಷಾತ್ ದರ್ಶನ ನೀಡುತ್ತಿರುವುದು.
– ಚಿಪ್ಪಗಿರಿ ನಾಗೇಂದ್ರ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.