ಸೌರಶಕ್ತಿಯಿಂದ ಓಡಲಿದೆ ವ್ಯಾನ್; ವಿದ್ಯಾರ್ಥಿಗಳ ಕೈಚಳಕದಲ್ಲಿ ತಯಾರಾಗಿದೆ ಸ್ಟೆಲ್ಲಾ ವೀಟಾ
ವ್ಯಾನ್‌ನ ಒಂದು ವಿಶೇಷವೆಂದರೆ ರಾತ್ರಿ ಬಿಸಿಲು ಎಲ್ಲದಕ್ಕೂ ಸೈ ಎನಿಸಿಕೊಂಡಿದೆ.
Team Udayavani, Jan 12, 2022, 1:45 PM IST
ಒಂದು ಕಡೆ ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಹಾಗಾಗಿ ಜನರು ಸಾಮಾನ್ಯವಾಗಿ ಯೋಚಿಸುವುದು ಮುಂದೆನು ಎಂದು. ಅದಕ್ಕೆ ಪರ್ಯಾಯವಾಗಿ ಏನು ಮಾಡಬಹುದು ಎಂಬುದಕ್ಕೆ ಈಗಾಗಲೇ ನಮ್ಮ ಮುಂದೆ ಸಾಕಷ್ಟು ನಿದರ್ಶನಗಳಿವೆ. ಇದಕ್ಕೆ ಪೂರಕವೆಂಬ ಹಾಗೇ ನೆದರ್‌ಲ್ಯಾಂಡ್‌ನ ವಿದ್ಯಾರ್ಥಿಗಳು ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ವ್ಯಾನ್ ವಿನ್ಯಾಸಗೊಳಿಸಿದ್ದಾರೆ. ಈ ವ್ಯಾನ್‌ಗೆ ಸ್ಟೆಲ್ಲಾ ವೀಟಾ ಎಂದು ಹೇಸರಿಡಲಾಗಿದ್ದು ಇದು ಉತ್ಪಾದಿಸುವ ಶಕ್ತಿಯಿಂದ ಟಿವಿ ನೋಡಲು ಲ್ಯಾಪ್‌ಟಾಪ್ ಚಾರ್ಜ್ ಮಾಡಲು ಮತ್ತು ಅಲ್ಲಿಯೇ ಆಹಾರ ತಯಾರಿಸಲು ಸಹಾಯ ಮಾಡುತ್ತದೆ.
ವ್ಯಾನ್‌ನ ಒಂದು ವಿಶೇಷವೆಂದರೆ ರಾತ್ರಿ ಬಿಸಿಲು ಎಲ್ಲದಕ್ಕೂ ಸೈ ಎನಿಸಿಕೊಂಡಿದೆ. ರಾತ್ರಿ ಸಮಯ ನಿಮ್ಮ ಪಯಣ ನಿಲ್ಲುವುದಿಲ್ಲ. ಇದರಲ್ಲಿರುವ ಬ್ಯಾಟರಿಯು 600ಕಿ. ಮೀ. ವರೆಗೆ ಪ್ರಯಾಣಿಸಲು ಸಹಾಯ ಮಾಡುತ್ತದೆ. ವ್ಯಾನ್‌ನ ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗಿದ್ದು ನಿರಂತರ ಸೌರಶಕ್ತಿಯನ್ನು ನೀಡುತ್ತದೆ.
ಈ ವ್ಯಾನ್‌ನನ್ನು ನೆದರ್‌ಲ್ಯಾಂಡ್ಸ್‌ನ ಐಧೋವನ್ ತಂತ್ರಜ್ಞಾನ ವಿಶ್ವವಿದ್ಯಾಲಯದ 20 ವಿದ್ಯಾರ್ಥಿಗಳು ಸೇರಿ ವಿನ್ಯಾಸಗೊಳಿಸಿದ್ದು ಇದರ ಸಾಮರ್ಥ್ಯ ಪರೀಕ್ಷಿಸಲು ತಂಡದವರು ಯುರೋಪ್ ಪ್ರವಾಸ ಕೈಗೊಂಡಿದ್ದು. ಪ್ರಯಾಣದ ಜತೆ ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇವರ ಉದ್ದೇಶವಾಗಿದ್ದು ಹಾಗಾಗಿ ಈ ವ್ಯಾನ್ 3 ಸಾವಿರ ಕಿ. ಮೀ ಪ್ರಯಾಣಿಸಬೇಕಾಗುತ್ತದೆ. ಅಂದರೆ ಸ್ಪಾನಿಷ್ ನಗರವಾದ ತಾರಿಫ್ನಲ್ಲಿ ಈ ಪ್ರಯಾಣ ಕೊನೆಗೊಳ್ಳುತ್ತದೆ.
ಏನೇನಿದೆ?
ಈ ವ್ಯಾನ್ ಒಂದು ಕೋಣೆ, ಡಬಲ್ ಬೆಡ್, ಡೈನಿಂಗ್ ಟೇಬಲ್ ಮತ್ತು ಕುಳಿತುಕೊಳ್ಳಲು ಸ್ವಲ್ಪ ಜಾಗವನ್ನು ಹೊಂದಿದೆ. ಇದರ ಹೊರತಾಗಿ ಆಹಾರ ತಯಾರಿಸಲು ಸುಲಭವಾಗುವಂತೆ ಒಲೆ ಅದರ ಬದಿಯಲ್ಲಿ ಸಿಂಕ್ ಹಾಗೂ ಸ್ನಾನಕ್ಕೆ ಶವರ್ ಕೂಡ ಇದೆ. ವ್ಯಾನ್‌ನ ಮುಂಭಾಗದಲ್ಲಿ ಚಾಲಕನ ಹೊರತು ಪಡಿಸಿ ಇಬ್ಬರು ಕುಳಿತುಕೊಳ್ಳಲು ಆಸನವಿದೆ. ಆದರೆ ವ್ಯಾನ್‌ನಲ್ಲಿ ಶೌಚಾಲಯವಿಲ್ಲ. ಅದಕ್ಕೆ ನೀವು ಹೋಗುವ ದಾರಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.
ನೀವು ಸಾಗುತ್ತಾ ಸಾಗುತ್ತಾ ಎಷ್ಟು ಶಕ್ತಿ ಬೇಕಾಗುತ್ತದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಎಷ್ಟು ಟಿವಿ, ಮತ್ತು ಶವರ್ ಇನ್ನಿತರ ಕೆಸಲಗಳಿಗೆ ವ್ಯಯಿಸಲ್ಪಡುತ್ತದೆ ಎಂಬುದನ್ನು ನೀವು ಅರ್ಥ ಮಾಡಿಕೊಂಡಾಗ ನಿಮಗೆ ಆ ಶಕ್ತಿಯನ್ನು ಹೇಗೆ ಬಳಸಬಹುದು ಎಂಬುದು ಅರಿವಾಗುತ್ತದೆ.
ಇದರ ಉದ್ದೇಶ?
ವಿದ್ಯಾರ್ಥಿಗಳು ಪ್ರವಾಸ ಮಾಡುವ ಸಮಯದಲ್ಲಿ ನಗರಗಳಲ್ಲಿ ಈ ವ್ಯಾನ್‌ಗಳ ಪ್ರದರ್ಶನ ನಡೆಸಿ, ಭವಿಷ್ಯದಲ್ಲಿ ಸೌರಶಕ್ತಿಯನ್ನು ಉಳಿಸಲು. ಮತ್ತು ಬಳಸಲು ಜನರಿಗೆ ಅರಿವು ಮೂಡಿಸುತ್ತಾರೆ. ಇದು ಕೇವಲ ವ್ಯಾನ್ ಅಲ್ಲ ಚಕ್ರಗಳ ಮೇಲೆ ನಿಂತಿರುವ ಮನೆ ಎಂದು ಅದನ್ನು ಹೆಮ್ಮೆಯಿಂದ ಬಣ್ಣಿಸುತ್ತಾರೆ ಈ ವಿದ್ಯಾರ್ಥಿಗಳು.
ಈ ವ್ಯಾನ್ ಗಂಟೆಗೆ 120ಕಿಮೀ ವೇಗದಲ್ಲಿ ಚಲಿಸುತ್ತದೆ. ಅಲ್ಲದೆ ಆಕಾಶ ಸ್ಪಷ್ಟವಾಗಿದ್ದು ಬಿಸಿಲಿನ ಪ್ರಮಾಣ ಪ್ರಕರವಾಗಿದ್ದಾಗ 730 ಕಿಮೀ ದೂರವನ್ನು 120 ಕಿಮೀ ವೇಗದಲ್ಲಿ ಕ್ರಮಿಸಬಹುದಾಗಿದೆ. ಇದು 60 kಗಜಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದರಿಂದಾಗಿ ನೀವು ರಾತ್ರಿಯೂ ಕೂಡ ಚಲಿಸಬಹುದು.
ಇಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ಯಂತ್ರಗಳು ಕೂಡ ಮಾರುಕಟ್ಟೆಗೆ ಬರುತ್ತಿದ್ದು ಇದಕ್ಕೆ ಟಕ್ಕರ್ ನೀಡಲು ಈ ಸೌರಶಕ್ತಿಯಾದಾರಿತ ವಾಹನಗಳನ್ನು ತಯಾರು ಮಾಡುತ್ತಿರುವುದು ಒಳ್ಳೆಯ ಸಂಗತಿಯಾಗಿದ್ದು. ಇನ್ನು ಮುಂಬರುವ ದಿನಗಳಲ್ಲಿ ಇಂತಹ ವಾಹನ ಹೆಚ್ಚು ಸುದ್ದಿಯಾಗುವುದರಲ್ಲಿ ಅನುಮಾನವೇ ಇಲ್ಲ.
ಪ್ರೀತಿ ಭಟ್, ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Trump: ಗುಜರಾತ್ ಮೂಲದ ಪಟೇಲ್ CIA ನೂತನ ನಿರ್ದೇಶಕ: ಡೊನಾಲ್ಡ್ ಟ್ರಂಪ್ ಒಲವು
Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.