ಲಾಕ್ ಡೌನ್ ವೇಳೆ ಕಾರ್ಮಿಕರ ಪಾಡನ್ನು ಹಾಡಿನ ರೂಪದಲ್ಲಿ ಬರೆದು “RAPPER” ಆದ ಯುವಕ
Team Udayavani, Oct 22, 2020, 12:49 PM IST
ಸಂಕಷ್ಟ ಮತ್ತು ಸಾಧನೆ ಎರಡೂ ಒಂದೇ ನಾಣ್ಯದ ಭಿನ್ನ ಮುಖದ್ದಂತೆ. ನಾವು ಕಲಿತ ಕ್ಷೇತ್ರದಲ್ಲೇ ನಮ್ಮ ಕನಸು ಚಿಗುರ ಬೇಕೆನ್ನೆವುದು ಎಲ್ಲರ ಆಸೆ ಹಾಗೂ ಆಕಾಂಕ್ಷೆ. ಕೆಲವರಿಗೆ ಆ ಅದೃಷ್ಟ ಇರಲ್ಲ. ಸಾಧಿಸುವ ದಾರಿಗೆ ಕುಟುಂಬದ ಹೊರೆ, ಅನಿರೀಕ್ಷಿತ ಆಘಾತಗಳು ಅಡ್ಡಿ ಉಂಟು ಮಾಡುತ್ತವೆ.
ಒಡಿಶಾದ ಕಲಹಂಡಿ ಜಿಲ್ಲೆಯ ವಲಸೆ ಕಾರ್ಮಿಕನೊಬ್ಬ ತನ್ನ ಹಾಡುಗಳಿಂದ ಕಲಾವಿದನಾಗಿ ಮಿಂಚಿದ ಸ್ಪೂರ್ತಿದಾಯಕ ಕಥೆಯಿದು.
ದುಲೇಶ್ವರ್ ತಾಂಡಿ. ಜೋರಗಿ ಗಾಳಿ,ಮಳೆ ಬಂದರೆ ಹಾರಿ ಹೋಗುವಂಥ ಪರಿಸ್ಥಿತಿಯಲ್ಲಿರುವ ಮನೆಯಲ್ಲಿ ಬೆಳೆದ ದಲಿತ ಹುಡುಗ. ಬಾಲ್ಯದಿಂದಲೇ ಅಸ್ಪೃಶ್ಯತೆ ಅನುಭವಸುತ್ತಲೇ,ಅನುಕರಿಸುತ್ತಲೇ ಬಂದ ಸಣ್ಣ ಗ್ರಾಮವೊಂದರಲ್ಲಿ ಬೆಳೆದ ದುಲೇಶ್ವರ್ ಶಾಲಾ ದಿನಗಳಿಂದಲೇ ಬಾಯಿ ಮಾತಿನ ಸಾಹಿತ್ಯದಲ್ಲಿ ಹಾಡನ್ನು ಹಾಡುವ ಹವ್ಯಾಸವನ್ನು ಹೊಂದಿದ್ದರು. ಇದೇ ಹವ್ಯಾಸ ಅಭ್ಯಾಸವಾಗಿ ದುಲೇಶ್ವರರಿಗೆ ತಾನೊಬ್ಬ ರ್ಯಾಪರ್ ( Rapper) ಆಗಬೇಕೆನ್ನುವ ಕನಸೊಂದು ಚಿಗುರುತ್ತದೆ.
ವಿಜ್ಞಾನದಲ್ಲಿ ಪದವಿ ಪೂರ್ತಿಗೊಳಿಸಿ ಡಾಕ್ಟರ್ ಕಲಿಕೆಗಾಗಿ ಪ್ರಯತ್ನ ಮಾಡುತ್ತಿರುವಾಗಲೇ ದುಲೇಶ್ವರ್ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ.ತಾಯಿ ಆರೋಗ್ಯ ಹದಗೆಟ್ಟು ಚಿಕಿತ್ಸೆಗೆ ಹಣದ ಕೊರತೆ ಎದುರು ಕಾಣುವಾಗ ಒಂದಿಷ್ಟು ದಿನ ಸ್ಥಳೀಯರಿಗೆ ಟ್ಯೂಷನ್ ಕೊಟ್ಟು ದಿನ ಕಳೆದ್ರೂ ಸಮಾಧಾನ ಆಗದೆ ದುಲೇಶ್ವರ್ ದುಡಿಮೆಗಾಗಿ ರಾಯಪುರಕ್ಕೆ ಪಯಣ ಬೆಳೆಸುತ್ತಾರೆ. ರಾಯಪುರದಲ್ಲಿ ಹೊಟೇಲ್ ನಲ್ಲಿ ಪಾತ್ರೆ ತೊಳೆದು,ಟೇಬಲ್ ಒರೆಸಿ,ವೇಟರ್ ಆಗಿ ಬದುಕು ಕಾಣಿಸುವ ಭೀಕರ ದಿನಗಳನ್ನು ಅನುಭವಿಸುತ್ತಾರೆ. ಎಷ್ಟೋ ದಿನ ಹಸಿವಿನ ಬೆಂಕಿಯಿಂದ ಹೊಟ್ಟೆ ಧಗೆಯಂತೆ ಉರಿಯುತ್ತದೆ.
ವಲಸಿಗರ ಪಾಡು ನೋಡಿ ಹಾಡು ಬರೆದ : ಕೋವಿಡ್ ವೈರಸ್ ಜಗತ್ತಿನ ಮಹಾನ್ ದೇಶಗಳನ್ನು ಲಾಕ್ ಡೌನ್ ಮಾಡುವಂಥ ಪರಿಸ್ಥಿತಿಗೆ ತಂದು ನಿಲ್ಲಿಸಿದಾಗ,ಭಾರತವೂ ಇದಕ್ಕೆ ಹೊರತಾಗಿಲ್ಲವೆಂದು ಭಾವಿಸಿದ ದುಲ್ಲೇಶ್ವರ ತಕ್ಷಣವೇ ತಮ್ಮ ಊರಿಗೆ ಮರಳುವ ಸಿದ್ಧತೆ ನಡೆಸುತ್ತಾರೆ. ರಾಷ್ಟ್ರ ವ್ಯಾಪಿ ಲಾಕ್ ಡೌನ್ ಘೋಷಿಸುವ ಒಂದು ದಿನ ಮೊದಲು ಅಂದರೆ ಮಾರ್ಚ್ 23 ರಂದು ತಮ್ಮ ಊರ ಕಡೆ ಹೊರಡುತ್ತಾರೆ. ಇದೇ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಮನೆಯ ಸಾಮಾಗ್ರಿ ಭಾರ, ಮಕ್ಕಳ ಜೀವ, ಪರಿಸ್ಥಿತಿ, ಬಡತನ,ಅಸಹಾಯಕತೆಯನ್ನು ಹೊತ್ತು ದೂರದೂರಿಗೆ ಪಾದಚಾರಿಗಳಾಗಿ ಪಯಣ ಬೆಳೆಸೋದು ಹತ್ತಿರದಿಂದ ಕಂಡ ದುಲ್ಲೇಶ್ವರ್ ಮನ ಮುಟ್ಟುವಂತೆ ವಲಸಿಗರ ವಾಸ್ತವ ಕಣ್ಣಮುಂದೆ ಬರುವಂಥ ಸಾಹಿತ್ಯವನ್ನು ರಚಿಸುತ್ತಾರೆ. “Telling the Truth” ಎನ್ನುವ 2:45 ನಿಮಷದ ಹಾಡನ್ನು ಮೊಬೈಲ್ ನಿಂದ ಶೂಟ್ ಮಾಡಿ ಅಪ್ಲೋಡ್ ಮಾಡುತ್ತಾರೆ. ಇದು ವೈರಲ್ ಆಗುತ್ತದೆ ಎಂದರೆ ಇಡೀ ರಾಜಕೀಯ ವ್ಯವಸ್ಥೆಗೆ ನೇರವಾಗಿ ಚಾಟಿ ಏಟುನಿಂದ ಬಡಿದಂತೆ ಬಲವಾಗಿ ನಾಟಿತು. “Sun Sarkar, Sat Katha” ರ್ಯಾಪ್ ಸಾಂಗ್ ಕೂಡ ನೇರವಾಗಿ ವ್ಯವಸ್ಥೆಯ ಎದೆಗೆ ನಾಟಿದ ಬಾಣದಂತೆ ತಾಗುತ್ತದೆ.
2014 ರಲ್ಲಿ ಪಂಜಾಬಿನಿಂದ ಒಬ್ಬರು ಈತನ ರ್ಯಾಪ್ ಕೇಳಿ ವೇದಿಕೆಯಲ್ಲಿ ಪ್ರದರ್ಶನ ಮಾಡಲು ಕೇಳಿ ಕೊಳ್ಳುತ್ತಾರೆ. ಚಂಡಿಗಢದಲ್ಲಿ ಕೊಟ್ಟ ಪ್ರದರ್ಶನ ಇಷ್ಟುವಾಗುತ್ತದೆ. ಭುವನೇಶ್ವರಕ್ಕೆ ಮರಳಿ ಬಂದಾಗ ಕೆಲಸಕ್ಕಾಗಿ ನಾನಾ ಸ್ಟುಡಿಯೋಗಳಿಗೆ ಅಲೆದಾಡುತ್ತಾರೆ. ಯಾರೊಬ್ಬರೂ ಸಹಾಯ ಮಾಡಲು ಮುಂದೆ ಬರುವುದಿಲ್ಲ. ಆದರೆ ದುಲೇಶ್ವರ್ ರಚಿಸಿದ ಹಾಡುಗಳು ನಿಧಾನವಾಗಿ ವೈರಲ್ ಆಗುತ್ತವೆ.ಇದಾದ ಬಳಿಮ ಇಂದಿಗೂ ಅವರಯ ತಮ್ಮ ಮೊಬೈಲ್ ನಲ್ಲೇ ರೆಕಾರ್ಡಿಂಗ್ ಮಾಡಿ,ಹಾಡನ್ನು ರಚಿಸಿ ಹಾಡುತ್ತಾರೆ. ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡುತ್ತಾರೆ.
ಸೆಲೆಬ್ರಿಟಿಗಳಿಗೂ ಇವರ ಪ್ರತಿಭೆ ತಲುಪಿದೆ. ಬಾಲಿವುಡ್ ಸಂಗೀತಹಗಾರ ವಿಶಾಲ್ ದಾದಲಾನಿ ಏನಾದ್ರು ಸಹಾಯ ಬೇಕದ್ರೆ ಮಾಡಬಲ್ಲೇ ಎಂದಿದ್ದಾರೆ. ಓಡಿಶಾದ ಕ್ಷೇತ್ರದಲ್ಲೂ ಅವಕಾಶದ ಬಾಗಿಲು ತೆರೆದಿದೆ..
– ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.