ವಯಸ್ಸು 87 ದಾಟಿದರೂ ಹಳ್ಳಿಗಳಿಗೆ ಹೋಗಿ ವೈದ್ಯಕೀಯ ಸೇವೆ ಒದಗಿಸುತ್ತಿರುವ ಮಹಾನ್ ವ್ಯಕ್ತಿತ್ವ
Team Udayavani, Nov 4, 2020, 9:53 PM IST
ನಾವು ಆಯಿತು. ನಮ್ಮ ಕೆಲಸವಾಯಿತು. ಹೀಗೆ ದಿನಗಳನ್ನು ದೂಡಿ,ವರ್ಷಗಳನ್ನು ಸವೆದು ಬದುಕು ಬವಣೆಯನ್ನು ಮುಗಿಸುವ ವ್ಯಕ್ತಿಗಳ ಸಾಲಿಗೆ ನಾವು ನೀವು ಸೇರಿರಬಹುದು. ಆದರೆ ಕೆಲವರು ಈ ಸಾಲಿನಲ್ಲಿ ಇದ್ದುಕೊಂಡೇ ಭಿನ್ನವಾಗಿ ಕಾಣುತ್ತಾರೆ. ಅಂಥ ವ್ಯಕ್ತಿಗಳನ್ನು ಸಾಧಕರೆನ್ನಬಹುದು. ಸಮಾಜದ ಸೇವೆಯಲ್ಲಿ ನಿಸ್ವಾರ್ಥತನವನ್ನು ಕಾಣುವ ವ್ಯಕ್ತಿಯೊಬ್ಬರ ಕಥೆಯಿದು.
ವಯಸ್ಸು 87,ಬಾಡಿದ ದೇಹ,ಕುಗ್ಗಿದ ಉತ್ಸಾಹ,ದಣಿವು, ಮಾತ್ರೆ,ನಿದ್ದೆ ಇವಿಷ್ಟೇ ಬದುಕಿನ ನಿತ್ಯ ದೃಶ್ಯದಂತೆ ಚಟುವಟಿಕೆಯಾಗಿ ಸಾಗುವ ಘಟ್ಟದಲ್ಲಿ ಇರುವ ವ್ಯಕ್ತಿಯೊಬ್ಬರ ಕಥೆಯೆಂದು ಅಂದುಕೊಳ್ಳ ಬೇಡಿ. ವಯಸ್ಸು ಮತ್ತು ಮನಸ್ಸಿಗೆ ಇಲ್ಲಿ ಯಾವ ಸಂಪರ್ಕವೇ ಇಲ್ಲ. ವಯಸ್ಸು 87 ದಾಟಿದರೂ ಮನಸ್ಸು, ದೇಹಗಳೆರೆಡು ಇಪ್ಪತ್ತು ಚಿಗುರಿದ ಯುವಕನ ಹಾಗೆ. ಇದು ಮಹಾರಾಷ್ಟ್ರದ ಚಂದಾಪೂರ್ ಗ್ರಾಮದ ವಯೋ ವೃದ್ಧ ಹೋಮಿಯೋಪತಿ ವೈದ್ಯ ರಾಮಚಂದ್ರ ದಾಂಡೆಕರ್ ಅವರ ಕಥೆ.
ರಾಮಚಂದ್ರ ದಾಂಡೆಕರ್ ಅವರ ದಿನ ಆರಂಭವಾಗುವುದು ಸೇವೆಯ ಮೂಲಕ. ಸೇವೆ ಅಂದರೆ ತಾವು ಕಲಿತು ಕರಗತ ಮಾಡಿಕೊಂಡ ವೈದ್ಯ ವೃತ್ತಿ. ಹೋಮಿಯೋಪತಿ ವೈದ್ಯರಾಗಿರುವ ರಾಮಚಂದ್ರ ತಮ್ಮ 87 ನೇ ವಯಸ್ಸಿನಲ್ಲೂ ಹಳ್ಳಿಗರ ಪಾಲಿಗೆ ಜೀವ ಉಳಿಸುವ ಕಾಯಕ ಮಾಡುತ್ತಿದ್ದಾರೆ. ಬೆಳಗಿನ ಜಾವ ಸೈಕಲ್ ಹತ್ತಿ ಮಹಾರಾಷ್ಟ್ರದ ದೂರದ ಹಳ್ಳಿಗಳಿಗೆ ಪಯಣ ಬೆಳೆಸಿ ಗುರಿ ಮುಟ್ಟಿದವರು ಮನೆಗೆ ಬರುವುದು ಸಂಜೆ ಮೇಲೆಯೇ.
ರಾಮಚಂದ್ರ ಹೋಮಿಯೋಪತಿಯಲ್ಲಿ ಡಿಪ್ಲೊಮಾ ಪದವಿ ಪಡೆದು,ಒಂದು ವರ್ಷ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿಕೊಂಡು, ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಯನ್ನು ಆರಂಭಿಸುತ್ತಾರೆ. ಹಳ್ಳಿಗಳಲ್ಲಿ ಬಸ್ಸಿನ ಕೊರತೆಯಿಂದ, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಪರದಾಡುವ ಪರಿಸ್ಥಿತಿಯನ್ನು ಕಣ್ಣಾರೆ ಕಂಡ ರಾಮಚಂದ್ರ ಅವರು ಕಾಡಿನ ಪ್ರದೇಶದ ಮಧ್ಯದಲ್ಲಿರುವ ಮನೆಗಳಿಗೆ ಭೇಟಿ ಕೊಟ್ಟು ಚಿಕಿತ್ಸೆಯನ್ನು ನೀಡುತ್ತ ಬರುತ್ತಿದ್ದಾರೆ.
ಬೆಳಗ್ಗಿನ ಜಾವ ಸೈಕಲ್ ನಲ್ಲಿ ಚಿಕಿತ್ಸೆಗೆ ಸಂಬಂಧಿಸಿದ ಔಷಧಿ ಹಾಗೂ ಪರಿಕರಗಳನ್ನು ಬ್ಯಾಗ್ ನಲ್ಲಿ ಹಾಕಿಟ್ಟು ಪೆಡಲ್ ತುಳಿಯುತ್ತಾ ಸಾಗಿ ಬಂದ ಇವರ ಸೇವೆ 60 ವರ್ಷಕ್ಕೂ ಹೆಚ್ಚಿನ ವರ್ಷವನ್ನು ಪೊರೈಸಿದೆ.
ಕೋವಿಡ್ ಪರಿಸ್ಥಿತಿಯಲ್ಲೂ ರಾಮಚಂದ್ರ ಹಳ್ಳಿಗರ ವೈದ್ಯಕೀಯ ಸೇವೆಯಲ್ಲಿ ಹಿಂದೆ ಬಿದ್ದಿಲ್ಲ.ಅವಶ್ಯಕತೆಯಿದ್ದಾಗ ನಡುರಾತ್ರಿಯಲ್ಲೂ ಚಿಕಿತ್ಸೆಗೆ ಧಾವಿಸುವ ಇವರ ಸೇವೆಗೆ ಹಾಗೂ ದೇಹಕ್ಕೆ ಸುಸ್ತು ಎನ್ನುವುದು ಇದುವರೆಗೆ ಆಗಿಲ್ಲ. ಬಡವರಿಗೆ ಸದಾ ಮಿಡಿಯುವ ಇವರ ಕೈ ಹಣವನ್ನು ಪಡೆಯುವುದು ಬಿಡುವುದು ಕುಟುಂಬದ ಮೇಲೆ ಅವಲಂಬಿತವಾಗುತ್ತದೆ ಎನ್ನುತ್ತಾರೆ.
– ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.