ಹೃದಯವಂತ ವಡಪಾವ್ ಅಂಕಲ್ : ವಿದ್ಯಾರ್ಥಿಗಳಿಗೆ 5 ರೂಪಾಯಿಯಲ್ಲಿ ಹೊಟ್ಟೆ ತುಂಬುವ ವಡಪಾವ್
Team Udayavani, Nov 18, 2020, 9:40 PM IST
ಬಡತನ ಜೀವನದ ಎಲ್ಲಾ ಪಾಠವನ್ನು ಕಲಿಸುತ್ತದೆ. ಹಸಿವು, ಹತಾಶೆ, ಕೋಪ, ಮೌನ, ಒಂಟಿತನ, ಸಾವು, ನೋವು, ದ್ವೇಷ ಜೀವನದ ಎಲ್ಲಾ ಮಗ್ಗಲ್ಲನ್ನು ಬಡತನ ಎನ್ನುವ ಸಹಿಸದ ಬೆಂಕಿಯ ಕಾವು ಅನುಭವಿಸಿದವರಿಗೆನೇ ಗೊತ್ತು.
ಬಡತನದ ಮೂಲ ಹಸಿವು. ಖಾಲಿ ಕೈಯಲ್ಲಿ ಹೊಟ್ಟೆಗೇನು ಇಲ್ಲದೆ, ಕೂತು ಕೂರಗುವ ಪರಿಸ್ಥಿತಿ ರೋಷ- ದ್ವೇಷ ಎಲ್ಲದರ ಅರಿವನ್ನು ನೀಡುತ್ತದೆ. ಕೆಲವೊಬ್ಬರಿಗೆ ಬಡತನದ ಭೇಗುದಿಯಲ್ಲಿ ಬೆಂದು ಬೆಂದು ಜೀವನವೇ ಇಷ್ಟು ಎನ್ನುವ ಅಲಸ್ಯ ಬಂದು ಉತ್ಸಾಹಕ್ಕೆ ಜಿಡ್ಡು ಹತ್ತಿ ಬಿಡುತ್ತದೆ. ಇನ್ನು ಕೆಲವರು ಬಡತನ ಇದ್ದರು ಕಷ್ಟಪಟ್ಟು ಎರಡು ಹೊತ್ತಿನ ಹೊಟ್ಟೆಯ ಹಸಿವನ್ನು ತಣ್ಣಿಸಲು ದುಡಿದು ತಿನ್ನುವ ದಾರಿಯಲ್ಲಿ ಸಾಗಿ ಬಡತನದಲ್ಲೂ ನೆಮ್ಮದಿಯ ಜೀವನವನ್ನು ಬದುಕುತ್ತಾರೆ.
ಮುಂಬಯಿ. ಕನಸಿನ ಮಹಾನಗರ. ಸಾವಿರಾರು ಮಮದಿ ಕನಸು ಕಾಣುತ್ತಾ, ನಾಳೆಯ ಆಶಯದಲ್ಲಿ ಇವತ್ತನ್ನು ಸವೆಯುತ್ತಾ, ಬೆಳೆಯುತ್ತಾ ಇರುವ ನಗರ. ಇಲ್ಲಿರುವ ಅರ್ಧದಷ್ಟು ಜನ ದುಡಿದು ತಿಂದು, ಬೆವರು ಸುರಿಸಿ, ಸಾಲ, ಒತ್ತಡ, ಕುಟುಮಬದ ಹೊಣೆ, ಮಕ್ಕಳ ಶಿಕ್ಷಣದ ಕುರಿತು ವ್ಯಥೆ ಪಡುತ್ತಾ ಸಾಗುತ್ತಿರುವವರೇ ಹೆಚ್ಚು.
ಬಡತನದಲ್ಲಿ ಹುಟ್ಟಿ ಏಳನೇ ತರಗತಿವರೆಗೆ ಅಕ್ಷರವನ್ನು ಕಲಿತು, ಬೆಳೆದವರು ಸತೀಶ್ ಗುಪ್ತಾ.ಅತ್ಯಂತ ಬಡ ಹಿನ್ನಲೆಯಲ್ಲಿ ಹುಟ್ಟಿದ ಸತೀಶ್ ಶಾಲೆಯೊಂದರಲ್ಲಿ ಕ್ಯಾಟರಿಂಗ್ ಕೆಲಸಕ್ಕೆ ಸೇರಿಕೊಂಡು, ತನ್ನ ಸಂಸಾರವನ್ನು ಬೆಳೆಸಲು ದುಡಿಮೆಯ ದಾರಿಗೆ ಇಳಿಯುತ್ತಾರೆ. ಮದುವೆಯ ಬಳಿಕ ಇನ್ನಷ್ಟು ಜವಬ್ದಾರಿ ಹೆಚ್ಚಾಗಿ ಮಕ್ಕಳನ್ನು ಸಾಕಲು, ಕೆಲಸದ ಕ್ಷೇತ್ರದಲ್ಲಿ ದಿನ ನಿತ್ಯ ವಿಶ್ರಾಂತಿಯೇ ಇಲ್ಲದೆ ದುಡಿಯುವ ಸತೀಶ್ ಸಂಸಾರಕ್ಕೆ ಕೆಲವೊಮದು ದಿನ ಬಡತನ ಎಷ್ಟು ಕಾಡುತ್ತದೆ ಅಂದರೆ, ಮಕ್ಕಳಿಗಾಗಿ ಚಟ್ನಿ ಹಾಗೂ ರೊಟ್ಟಿಯನ್ನು ತಿನ್ನಿಸಿ, ಹೆಂಡತಿಯ ಜೊತೆ ಬರೀ ಮೆಣಸಯ ತಿಂದು ರಾತ್ರಿ ದೂಡಿ, ಹಗಲು ಹೊತ್ತು ದುಡಿಯುತ್ತಿದ್ದರು. 20 ವರ್ಷ ಕ್ಯಾಟರಿಂಗ್ ನಲ್ಲಿ ದುಡಿದ ಸತೀಶ್ ಗೆ ಅದೊಂದು ದಿನ ಆ ಕೆಲಸ ಕೈಯಿಂದ ತಪ್ಪಿ ಹೋಗುತ್ತದೆ.
ಕೆಲಸವೇ ಇಲ್ಲದೆ ಸತೀಶ್ ಪರದಾಟ ನಡೆಸುತ್ತಿದ್ದಾಗ. ಮಕ್ಕಳನ್ನು ಸಾಕಲು ತುಂಬಾ ಕಷ್ಟ ಪಡಬೇಕಿತ್ತು. ಕ್ಯಾಟರಿಂಗ್ ನಲ್ಲಿ ಕಲಿತ ಕೆಲಸದ ಅನುಭವ ಸತೀಶ್ ರಲ್ಲಿ ಏನಾದ್ರು ಮಾಡಬೇಕೆನ್ನುವ ಯೋಚನೆಯಲ್ಲಿ ಮುಳುಗಿಸುತ್ತದೆ. ಆ ಸಮಯದಲ್ಲಿ ಅವರಿಗೆ ಹೊಳೆದದ್ದು. ವಡಪಾವ್ ಸ್ಟಾಲ್ ಮಾಡುವ ಯೋಜನೆ. ವಡಪಾವ್ ಮುಂಬಯಿಯ ಬೀದಿಯಲ್ಲಿ ಹಸಿವಿನ ದಾಹವನ್ನು ತೀರಿಸಲು ಕಾಣುತ್ತಿದ್ದ ಮೊದಲ ಆದ್ಯತೆಯ ಆಯ್ಕೆಯಾಗಿತ್ತು.ಅದರಂತೆ ಸತೀಶ್ ಯೋಚಿಸಿದ್ದ ವಡಪಾವ್ ಸ್ಟಾಲ್ ಹಾಕಲು ಅಷ್ಟು ಸುಲಭವಾಗಿ ಸಾಧ್ಯವಾಗಿಲ್ಲ. ಅಂತೂ ಬಡತನದ ಹೊರೆಯನ್ನು ತಗ್ಗಿಸಲು ಸತೀಶ್ ಮುಂಬಯಿಯ ಸಿಯಾನ್ ಸರ್ಕಲ್ ಬಳಿ ತನ್ನ ವಡಪಾವ್ ಸ್ಟಾಲ್ ಅನ್ನು ತೆರೆಯುತ್ತಾರೆ.
ಹೃದಯವಂತ ವಡಪಾವ್ ಅಂಕಲ್ .. :
ಸತೀಶ್ ವಡಪಾವ್ ಸ್ಟಾಲ್ ಪ್ರಾರಂಭಿಸಿದಾಗ, ಎಲ್ಲಾ ಸ್ಟಾಲ್ ನ ಹಾಗೆ ಸಾಮಾನ್ಯ ಸ್ಟಾಲ್ ಎನ್ನುವ ಹಾಗೆ ಪ್ರತಿದಿನದ ವ್ಯಾಪಾರ ಮಮೂಲಾಗಿ ಸಾಗುತ್ತಿತ್ತು. ದಿನಗಳು ಸವೆದಂತೆ, ತಿಂಗಳು ಸಾಗಿದಂತೆ, ವರ್ಷಗಳು ಉರುಳಿದಂತೆ, ಸತೀಶ್ ಅವರ ವಡಪಾವ್ ರುಚು ಹಾಗೂ ಅವರ ಮನವನ್ನು ಮೆಚ್ಚಿಕೊಂಡು ಬರುವವರ ಸಂಖ್ಯೆಯೂ ಹೆಚ್ಚಾಯಿತು.ಸತೀಶ್ ವಡಪಾವ್ ವ್ಯಾಪಾರಕ್ಕೆ ಈಗ ಮೂವತ್ತು ವರ್ಷ. ವಡಪಾವ್ ಪ್ರಾರಂಭಿಸಿದ್ದೇ ಬಡತನದ ಸ್ಥಿತಿಯ ಒತ್ತಡದಿಂದ ಪಾರಾಗುವ ಸಲುವಾಗಿ. ಸತೀಶ್ ಅವರು ತಯಾರಿಸುವ ವಡಪಾವ್ ಎಲ್ಲರಂತೆ ರುಚಿಯ ಸ್ವಾದ ಮಾತ್ರ ಇದ್ದಿದ್ರೆ ಅದು ಅಷ್ಟು ಸುದ್ದಇ ಆಗುತ್ತಿಲಿಲ್ಲ. ಇವರ ವಡಪಾವ್ ನಲ್ಲಿ ಒಂದು ವಿಶೇಷವಾದ ವಿಷಯ ಇದೆ.
ಸತೀಶ್ ಗುಪ್ತಾ,ವಿದ್ಯಾರ್ಥಿಗಳಿಗೆ ವಡಪಾವ್ ವನ್ನು ಕೇವಲ 5 ರೂಪಾಯಿಗೆ ಮಾರುತ್ತಾರೆ. ಪ್ರತಿದಿನ ಬರುವ ವಿದ್ಯಾರ್ಥಿಗಳಿಗೆ ರುಚಿಯಲ್ಲಿ ಯಾವುದೇ ಕಡಿತ ಇಲ್ಲದೆ ವಿದ್ಯಾರ್ಥಿಗಳಿಗೆ ಮಾತ್ರ 5 ರೂಪಾಯಿಯಲ್ಲಿ ಹೊಟ್ಟೆ ತುಂಬುವ ವಡಪಾವ್ ನೀಡುತ್ತಾರೆ. ಇದರ ಹಿಂದೆಯೂ ಒಂದು ಕಾರಣವಿದೆ. ಸತೀಶ್ ಅವಎ ಕುಟುಂಬ ಬಡತನದಲ್ಲಿ ಇದ್ದಾಗ, ಅವರ ಮಕ್ಕಳು ತುಂಬಾ ಕಷ್ಟವನ್ನು ನೋಡಿ ಬೆಳೆದವರು, ತನ್ನ ಮುಂದೆ ಯಾವ ಮಕ್ಕಳು ಹಸಿವಿನ ಕಷ್ಟವನ್ನು ಅನುಭವಿಸಬಾರದು, ಅವರಿಗೆ ಕೈಗೆಟಕ್ಕುವ ಬೆಲೆಯಲ್ಲಿ ವಡಪಾವ್ ಮಾರಬೇಕೆನ್ನುವ ನಿಟ್ಟಿನಲ್ಲಿ ಸತೀಶ್ 5 ರೂಪಾಯಿನಲ್ಲಿ ಮಕ್ಕಳಿಗೆ ವಡಪಾವ್ ನೀಡುತ್ತಾರೆ. ಕೆಲವೊಮ್ಮೆ ಮಕ್ಕಳಲ್ಲಿ ಹಣಯಿಲ್ಲದೆ ಇದ್ರೆ ಅಥವಾ ಹಣ ಕಮ್ಮಿಯಿದ್ರೆ ಆಗಲೂ ಸತೀಶ್ ವಡಪಾವ್ ಕೊಟ್ಟು ಮಕ್ಕಳ ಮೊಗದಲ್ಲಿ ಅರಳುವ ಖುಷಿಯನ್ನು ನೋಡಿ ಬಡತನದಿಂದ ಸಾಗಿದ ತನ್ನ ಜೀವನವನ್ನು ನೆನೆಸಿಕೊಳ್ಳುತ್ತಾರೆ.
ಇಂದು ಸತೀಶ್ ಅವರ ವಡಪಾವ್ ಸ್ಟಾಲ್ ಮುಂಬಯಿಯಲ್ಲಿ ಪ್ರಸಿದ್ಧಿಯಾಗಿರೋದು ಅವರ ಮಾನವೀಯತಎ ಗುಣದಿಂದ. ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದ್ದ ಸತೀಶ್ ಕುಟುಂಬ ಇಂದು ದೇವರ ದಯೆಯಿಂದ ಉಳ್ಳವರ ಮನೆಯಲ್ಲಿರುವ ಎಲ್ಲಾವನ್ನು ತನ್ನ ದುಡಿಮೆಯಿಂದ ಗಳಿಸಿಕೊಂಡು, ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.
ಬಡತನ ಆಗಲಿ, ಸಿರಿತನ ಆಗಲಿ ಕಾಲಕ್ಕೆ ತಕ್ಕ ಬದಲಾಗುವಂಥದ್ದು, ನಮ್ಮ ಮೇಲಿನ ನಂಬಿಕೆ ಹಾಗೂ ದುಡಿದು ಮುನ್ನಡೆಯುವ ವಿಶ್ವಾಸ ಸದಾ ಇರಬೇಕು ಎನ್ನುವುದಕ್ಕೆ ಸತೀಶ್ ಜೀವನವೊಂದು ಉದಾಹರಣೆ.
-ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.