StruggleTo Success:ನೀಲಿ ತಾರೆ ಟು ಸೂಪರ್‌ ಸ್ಟಾರ್‌ ನಟಿಯ ಪಯಣ-ಕರೆಂಜಿತ್‌ Untold Story!


Team Udayavani, Aug 31, 2024, 6:25 PM IST

1

ಸಿನಿಮಾರಂಗದಲ್ಲಿ ಅವಕಾಶದ ಬೆನ್ನೇರಿ ಯಶಸ್ಸಿನ ಮೆಟ್ಟಿಲನ್ನು ಹತ್ತುವ ಸಾಲಿನಲ್ಲಿ ನೂರಾರು ಮಂದಿ ಪ್ರಯತ್ನದಲ್ಲಿ ನಿರತರಾಗಿರುತ್ತಾರೆ. ಇಂದು ಯಶಸ್ಸು ಸಾಧಿಸಿ ಉತ್ತುಂಗಕ್ಕೇರಿರುವ ಕಲಾವಿದರು ಕ್ಯಾಮೆರಾ ಹಿಂದೆ ಪಟ್ಟಿರುವ ಕಷ್ಟ ದೊಡ್ಡ ಪರದೆ ಮೇಲೆ ಅವರನ್ನು ನೋಡಿ ಖುಷಿ ಪಡುವ ನಮ್ಮಂತ ಪ್ರೇಕ್ಷಕರಿಗೆ ಗೊತ್ತಿರುವುದಿಲ್ಲ.

ಒಂದು ಕಾಲದಲ್ಲಿ ದಿನ ಕಳೆಯಲು ಪೇಪರ್‌ ಮಾರುತ್ತಿದ್ದ ಕಲಾವಿದೆ ಇಂದು ಬಾಲಿವುಡ್‌ ಟಾಪ್‌ ಸ್ಟಾರ್‌ ಆಗಿ ಮಿಂಚಿರುವ ಕಥೆಯಿದು. ಆದರೆ ಆಕೆಯ ಸಾಧನೆಯ ಹಾದಿಯಲ್ಲಿ ನಡೆದು ಬರುವಾಗ ಸಿಕ್ಕ ಕಲ್ಲುಮುಳ್ಳು ಒಂದೆಡೆರೆಡಲ್ಲ.

ನಾವು ಹೇಳ್ತಾ ಇರೋದು ಬಾಲಿವುಡ್‌ನಲ್ಲಿ ʼಬೇಬಿ ಡಾಲ್‌ʼ ಪಡ್ಡೆ ಹುಡುಗರ ಮನದಲ್ಲಿ ಚಿಟ್ಟೆಯಂತೆ ಹಾರಿದ ಮೋಹಕ ಬೆಡಗಿ ಸನ್ನಿ ಲಿಯೋನ್ ಬಗ್ಗೆ. ಕೆನಡಾದಲ್ಲಿ ಜನಿಸಿದ ಸನ್ನಿ ಲಿಯೋನ್‌ ಭಾರತೀಯ ಸಿನಿಮಾರಂಗದಲ್ಲಿ ಇಂದು ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು.

ಆರಂಭಿಕ ಜೀವನ..

ಮೇ 13, 1981 ರಂದು ಕೆನಡಾದ ಒಂಟಾರಿಯೊದಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ ಸನ್ನಿ ಲಿಯೋನ್‌ ಅವರ ಬಾಲ್ಯ ನಾಮ ಕರೆಂಜಿತ್ ಕೌರ್ ವೋಹ್ರಾ.( ಸನ್ನಿ ಲಿಯೋನ್‌ – ಸ್ಟೇಜ್‌ ನೇಮ್)‌ ಟಿಬೆಟ್‌ನಿಂದ ಬಂದು ದೆಹಲಿಯಲ್ಲಿ ಬೆಳೆದ ತಂದೆ ಹಿಮಾಚಲ ಪ್ರದೇಶದ ತಾಯಿ ಆರೈಕೆಯಲ್ಲಿ ಬೆಳೆದ ಅವರು ವಯಸ್ಕ ಚಿತ್ರರಂಗಕ್ಕೆ ಬಂದಾಗ ತನ್ನ ನಾಮವನ್ನು ಸನ್ನಿ ಲಿಯೋನ್‌ ಎಂದು ಬದಲಾಯಿಸಿಕೊಂಡರು.

ʼಸನ್ನಿ ಲಿಯೋನ್‌ʼ ಎನ್ನುವ ಹೆಸರು ಬಂದದ್ದು ಹೇಗೆ..?;  ‘ಸನ್ನಿ’ ಎನ್ನುವುದು ಕರೆನ್ಜೀತ್ ಕೌರ್ ಸಹೋದರನ ಹೆಸರು. ಸಂದೀಪ್‌ ಸಿಂಗ್‌ ಎನ್ನುವ ಸಹೋದರನನ್ನು ಕುಟುಂಬದಲ್ಲಿ ಸನ್ನಿ ಎಂದು ಕರೆಯುತ್ತಿದ್ದರು. ಮ್ಯಾಗ್‌ಜಿನ್‌ ನಲ್ಲಿ ನನ್ನ ಹೆಸರು ಮರೆಮಾಚಲು ನಾನು ʼಸನ್ನಿʼ ಹೆಸರನ್ನು ಬಳಸಿಕೊಂಡೆ ಎಂದು ಸಂದರ್ಶನವೊಂದರಲ್ಲಿ ಸನ್ನಿ ಲಿಯೋನ್‌ ಹೇಳಿದ್ದರು.

ಪೇಪರ್‌ ಮಾರಾಟ ಮಾಡುತ್ತಿದ್ದ ಆ ದಿನಗಳು.. :

13ನೇ ವಯಸ್ಸಿನಲ್ಲಿ ಸನ್ನಿಯ ಕುಟುಂಬವು ಮಿಚಿಗನ್‌ನ ಫೋರ್ಟ್ ಗ್ರಾಟಿಯೊಟ್‌ಗೆ ಸ್ಥಳಾಂತರಗೊಂಡಿತು. ಆ ನಂತರ ಕ್ಯಾಲಿಫೋರ್ನಿಯಾದ ಲೇಕ್ ಫಾರೆಸ್ಟ್‌ಗೆ ಸ್ಥಳಾಂತರಗೊಂಡು ತನ್ನ ಅಜ್ಜ – ಅಜ್ಜಿಯ ಆರೈಕೆಯಲ್ಲಿ ಬೆಳದರು.

ತಂದೆ – ತಾಯಿಗೆ ನೆರವಾಗಲೆಂದು ಚಿಕ್ಕವಯಸ್ಸಿನಲ್ಲೇ ದುಡಿಮೆಗೆ ಕಾಲಿಟ್ಟ ಅವರು, ಮೊದಲಿಗೆ ಪೆಟ್ರೋಲ್‌ ಬಂಕ್‌ ಗಳಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದವರೆಗೆ ಜರ್ಮನ್ ಬೇಕರಿ ಮತ್ತು ನಂತರ ತೆರಿಗೆ ಮತ್ತು ಪೆನ್ಷನ್ ಸಂಸ್ಥೆಯಲ್ಲಿ ಕೆಲಸ ಮಾಡಿದರು. ಬಿಡುವಿನ ವೇಳೆ ಪೇಪರ್‌ ಮಾರಾಟ ಮಾಡುವ ಕೆಲಸ ಹಾಗೂ ಬೇಬಿ ಸಿಟ್ಟಿಂಗ್‌ ಕೆಲಸವನ್ನು ಮಾಡಿ ತಂದೆ – ತಾಯಿಗೆ ನೆರವಾಗುತ್ತಿದ್ದರು.

ನೋಡಲು ಅಂದವಾಗಿದ್ದ ಸನ್ನಿ ಲಿಯೋನ್‌ ಕೆಲಸದ ವೇಳೆ ಅದೊಂದು ದಿನ ಪೆಂಟ್‌ಹೌಸ್ ಮ್ಯಾಗಜೀನ್‌ಗಾಗಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳಿಂದ ಅವರಿಗೆ ವಯಸ್ಕ(ನೀಲಿ) ಚಿತ್ರರಂಗದಿಂದ ಆಫರ್‌ ಗಳು ಬರಲು ಶುರುವಾಗುತ್ತದೆ. ಮಾಡೆಲಿಂಗ್ ಆಫರ್ ಬರುವ ಮುನ್ನ ಸನ್ನಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು.

2003ರಲ್ಲಿ ಅವರು ವಿವಿದ್ ಎಂಟರ್‌ ಟೈನ್‌ ಮೆಂಟ್ ಎಂಬ ನೀಲಿ ಚಿತ್ರ ತಯಾರಿ ವಿಡಿಯೋ ತಯಾರಿಕಾ ಸಂಸ್ಥೆಯೊಂದಿಗೆ 3 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ನೀಲಿ ಚಿತ್ರ ಉದ್ಯಮಕ್ಕೆ ಕಾಲಿಟ್ಟಿದ್ದರು.

ನೀಲಿ ಚಿತ್ರರಂಗ ಪ್ರವೇಶ  ಪಡೆದ ವಿಚಾರ ಸನ್ನಿ ಲಿಯೋನ್‌ ಅವರ ಕುಟುಂಬಕ್ಕೆ ಇದು ಧಕ್ಕೆ ತರುವಂತೆ ಮಾಡಿತ್ತು. ಈ ಎಲ್ಲ ಸವಾಲುಗಳ ನಡುವೆಯೇ ಸನ್ನಿ ರಾತ್ರೋ ರಾತ್ರಿ ವಯಸ್ಕ ಚಿತ್ರರಂಗದಲ್ಲಿ ಖ್ಯಾತಿಯನ್ನು ಗಳಿಸಲು ಶುರು ಮಾಡಿದರು. ಅವರ ಒಂದೊಂದು ವಯಸ್ಕ ವಿಡಿಯೋಗಳು ಮಿಲಿಯನ್‌ ಗಟ್ಟಲೆ ವೀಕ್ಷಣೆ ಕಾಣುವ ಮೂಲಕ ಅವರು ಆ ಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಗಳಿಸಿ ಅವರ ಲೈಫ್‌ ಹೈಫೈ ಶೈಲಿಗೆ ಹೊಂದಿಕೊಂಡಿತು.

2009 ರಿಂದ ತಮ್ಮ ಸಂಗಾತಿ ಡೇನಿಯಲ್ ವೇಬರ್ ಜೊತೆ ಸೇರಿ ತಮ್ಮದೇ ಸಂಸ್ಥೆ ಸ್ಥಾಪಿಸಿ ನೀಲಿ ಚಿತ್ರಗಳಲ್ಲಿ ನಟಿಸಿ ನಿರ್ಮಿಸಿತೊಡಗಿದರು. ಇವರ ವಿಡಿಯೋಗಳಿಗೆ ಭಾರತೀಯ ಮೂಲದವರೇ ಹೆಚ್ಚು ವೀಕ್ಷಕರಾದ ಕಾರಣ ಅವರ ಆದಾಯ ಭಾರತದಿಂದಲೇ ಹೆಚ್ಚಾಗಿ ಬರುತ್ತಿತ್ತು.

ಮನೆಯವರ ವಿರೋಧದ ನಡುವೆಯೇ ವಯಸ್ಕ ಕ್ಷೇತ್ರದಲ್ಲಿ ತೊಡಗಿಕೊಂಡ ಸನ್ನಿ ಲಿಯೋನ್‌ 2013ರಲ್ಲಿ ಈ ಕ್ಷೇತ್ರಕ್ಕೆ ಗುಡ್‌ ಬೈ ಹೇಳಿ ಭಾರತದಲ್ಲೇ ನೆಲೆಸಿದರು.

ರಿಯಾಲಿಟಿ ಶೋನಿಂದ ಬಾಲಿವುಡ್‌ಗೆ ಎಂಟ್ರಿ..: ನೀಲಿ ಚಿತ್ರತಾರೆಯಾಗಿ ಗುರುತಿಸಿಕೊಂಡಿದ್ದ ಸನ್ನಿ ಲಿಯೋನ್‌ ವಿವಾದಾತ್ಮಕ ರಿಯಾಲಿಟಿ ಶೋ ಬಿಗ್‌ ಬಾಸ್‌ ಹಿಂದಿ ಸೀಸನ್‌ -5ನಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದು ದೊಡ್ಡ ಸಂಚಲನ ಸೃಷ್ಟಿಸಿತ್ತು. ಅನೇಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಬಿಗ್‌ ಬಾಸ್‌ ನಲ್ಲಿ ಸನ್ನಿ ಲಿಯೋನ್‌ ಅವರ ವ್ಯಕ್ತಿತ್ವಕ್ಕೆ ಅಭಿಮಾನಿಗಳಾಗಿದ್ದರು. ದೊಡ್ಮನೆಯೊಳಗೆ ಎಂಟ್ರಿ ಆಗಿದ್ದ ನಿರ್ದೇಶಕ ಮಹೇಶ್‌ ಭಟ್‌ ಸನ್ನಿ ಲಿಯೋನ್‌ ಅವರಿಗೆ ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದಿದ್ದರು.

ಸಾಲು ಸಾಲು ಅವಕಾಶ.. ಸೋತರೂ ಮಿಂಚಿದ್ದ ಸನ್ನಿ..

ಅದರಂತೆ ಪೂಜಾ ಭಟ್‌ ನಿರ್ದೇಶನದ ʼಜಿಸ್ಮ್-2ʼ ಸಿನಿಮಾದಲ್ಲಿ ಸನ್ನಿ ಲಿಯೋನ್‌ ನಟಿಸಿದ್ದರು. ಈ ಸಿನಿಮಾ ಕಮರ್ಷಿಯಲ್‌ ಹಿಟ್‌ ಆದ ಬಳಿಕ ಸನ್ನಿ ಲಿಯೋನ್‌ ‌ʼಜ್ಯಾಕ್ ಪಾಟ್ʼ, ʼಏಕ್ ಪಹೇಲಿ ಲೀಲಾʼ, ʼಬಲ್ವಿಂದರ್ ಸಿಂಗ್ ಫೇಮಸ್ ಹೋ ಗಯಾʼ, ʼಹೇಟ್ ಸ್ಟೋರಿ- 2ʼ, ʼರಾಗಿಣಿ ಎಂಎಂಎಸ್‌ -2ʼ ಸೇರಿದಂತೆ ಸಾಲು ಸಾಲು ಸಿನಿಮಾದಲ್ಲಿ ಸನ್ನಿ ಲಿಯೋನ್‌ ನಟಿಸಿದರು. ಆದರೆ ನಿರಂತರ ಅವಕಾಶ ಕೊಟ್ಟರು ಅವರ ಸಿನಿಮಾಗಳಲ್ಲಿ ಗ್ಲಾಮರಸ್‌ ಸೀನ್‌ ಗಳು ಸದ್ದು ಮಾಡುತ್ತಿತ್ತು ವಿನಃ ಆ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಸೋತದ್ದೇ ಹೆಚ್ಚು.

ವರದಿಗಳ ಪ್ರಕಾರ, ನಟಿ 2014 ರಿಂದ 2019 ರವರೆಗೆ 14 ಬ್ಯಾಕ್ ಟು ಬ್ಯಾಕ್ ಫ್ಲಾಪ್ ಸಿನಿಮಾಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಸನ್ನಿ ಲಿಯೋನ್ ತನ್ನ ಪತಿ (ಡೇನಿಯಲ್ ವೆಬರ್) ಮತ್ತು ಮಕ್ಕಳೊಂದಿಗೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.  ಆಶರ್ ಮತ್ತು ನೋಹ್ ಎನ್ನುವ ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ದಂಪತಿ ಪಡೆದಿದ್ದು, ನಿಶಾ ಎನ್ನುವ ಮಗುವನ್ನು ದತ್ತು ಪಡೆದಿದ್ದಾರೆ.

ನಟಿಯಾಗಿ ಮಾತ್ರವಲ್ಲದೆ ಸನ್ನಿ ಲಿಯೋನ್‌ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಶಾರುಖ್‌ ಖಾನ್‌ ಅವರ ʼರಯೀಸ್‌ʼ ಸಿನಿಮಾದಲ್ಲಿನ ʼಲೈಲಾʼ ಹಾಡಿಗೆ ಅವರು 3 ಕೋಟಿ ರೂ.ಪಡೆದಿದ್ದರು.

ಅವರ ಜೀವನದ ಕಥೆಯನ್ನುಆಧಾರಿಸಿ ʼಕರೆಂಜಿತ್ ಕೌರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ʼ ಎನ್ನುವ ವೆಬ್‌ ಸರಣಿ ಕೂಡ ಬಂದಿದೆ.

ಸಮಾಜ ಸೇವೆ, ನಿರೂಪಕಿಯಾಗಿಯೂ ಫೇಮಸ್..;‌ ನಟಿಯಾಗಿ ಮಾತ್ರವಲ್ಲದೆ ಸನ್ನಿ ಲಿಯೋನ್‌ ಶಾಲೆಗಳನ್ನು ಕೂಡ ದತ್ತು ಪಡೆದಿದ್ದಾರೆ. ಪ್ರಾಣಿದಯ ಸಂಘ ʼಪೇಟಾʼದಲ್ಲಿ ಗುರುತಿಸಿಕೊಂಡಿದ್ದಾರೆ.

ದೊಡ್ಡ ಪರದೆಯಲ್ಲಿ ಮೋಹಕ ಪಾತ್ರಗಳಲ್ಲಿ ನಟಿಸಿದ ಸನ್ನಿ ಲಿಯೋನ್‌,  ಕಿರುತೆರೆಯ ಹಲವು ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಂಟಿವಿ ಜನಪ್ರಿಯ ಶೋ ʼMTV ಸ್ಪ್ಲಿಟ್ಸ್ವಿಲ್ಲಾ 15ʼ ನಲ್ಲಿ ನಿರೂಪಕಿಯಾಗಿಯೂ ಅವರು ಕಾಣಿಸಿಕೊಂಡಿದ್ದಾರೆ.

ನೀಲಿ ಚಿತ್ರಗಳಲ್ಲಿ ನಟಿಸಿದ್ದರ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದು ಹೀಗೆ.. ನನ್ನ ಸ್ವ-ಇಚ್ಛೆಯಿಂದಲೇ ನಾನು ನೀಲಿ ಚಿತ್ರ ಉದ್ಯಮಕ್ಕೆ ಹೋದೆ. ಅದು ನನಗೆ ಉದ್ಯಮವಾಗಿ ಕಂಡಿತು. ಅಲ್ಲಿ ನಾನು ಅವಕಾಶವನ್ನಷ್ಟೆ ನೋಡಿದೆ. ನಾನೊಬ್ಬ ಉದ್ಯಮಶೀಲೆಯಂತೆ ಆ ಅವಕಾಶದ ಬಗ್ಗೆ ಯೋಚಿಸಿದೆ. ಆ ಉದ್ಯಮ ಪ್ರವೇಶ ಮಾಡಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ” ಎಂದಿದ್ದರು.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.