ಅಂದು ಸೆಕ್ಯೂರಿಟಿ ಗಾರ್ಡ್ ಆಗಿದ್ದ ವ್ಯಕ್ತಿ; ಇಂದು ತಿಂಗಳಿಗೆ 2 ಲಕ್ಷ ಗಳಿಸುವ ಚಹಾ ವ್ಯಾಪಾರಿ
Team Udayavani, Jul 1, 2021, 9:00 AM IST
ಅಂದು ಸೆಕ್ಯುರಿಟಿ ಗಾರ್ಡ್ ಆಗಿದ್ದ ವ್ಯಕ್ತಿ ಇಂದು ತಿಂಗಳಿಗೆ ಲಕ್ಷ ಆದಾಯ ಗಳಿಸುವ ಚಹಾ ವ್ಯಾಪಾರಿ
ಕೋವಿಡ್ ಲಾಕ್ ಡೌನ್ ನಲ್ಲಿ ಭವಿಷ್ಯದ ಕನಸು ಕಾಣುತ್ತಿದ್ದ ಎಷ್ಟೋ ಮಂದಿಯ ಕನಸುಗಳು ನುಚ್ಚುನೂರಾಗಿದೆ. ಆಗಷ್ಟೇ ಶಿಕ್ಷಣ ಮುಗಿಸಿ ಕೆಲಸಕ್ಕಾಗಿ ಕಾಯುತ್ತಾ ಕೂತ ವಿದ್ಯಾರ್ಥಿಗಳ ಪಾಡು ಒಂದೆಡೆಯಾದರೆ, ಸಂಸಾರ ನಿಭಾಯಿಸಲು ಸಾಕಾಗುತ್ತಿದ್ದ ದುಡಿಮೆಯೂ ಲಾಕ್ ಡೌನ್ ನಿಂದ ಕಳೆದುಕೊಂಡ ಎಷ್ಟೋ ಜನ ದಿಕ್ಕು ದೆಸೆ ಕಾಣದೆ ನಾಳೆಯ ಭರವಸೆಯಲ್ಲಿ ಇದ್ದಾರೆ.
ಇದ್ದ ಕೆಲಸವನ್ನು ಕಳೆದುಕೊಂಡು ,ಬದುಕನ್ನು ತಾನೇ ರೂಪಿಸಿಕೊಂಡು ಯಶಸ್ಸಾದವನ ಕಥೆಯಿದು.
ರೇವನ್ ಶಿಂಧೆ. ಕಲಿತದ್ದು 12 ತರಗತಿಯವರೆಗೆ ಮಾತ್ರ. ಕೆಲಸವನ್ನು ಹುಡುಕುತ್ತಾ ಪುಣೆಗೆ ಬಂದು ನೆಲೆಸಿದಾಗ ಸಿಕ್ಕಿದ್ದು ಸೆಕ್ಯೂರಿಟಿ ಗಾರ್ಡ್ ನ ಕೆಲಸ. ತಿಂಗಳ ಸಂಬಳ 12 ಸಾವಿರ. ಅಷ್ಟು ಇಷ್ಟು ಉಳಿಸಿ, ತಮ್ಮವರ ಹೊಟ್ಟೆ ತಂಪಾಗಿಡಲು, ಸಿಗುವ ಸಂಬಳ ಸಾಕಾಗುತ್ತಿತ್ತು.
ಚೆನ್ನಾಗಿಯೇ ಸಾಗುತ್ತಿದ್ದ ಬದುಕಿನಲ್ಲಿ ಅನಿರೀಕ್ಷಿತ ತಿರುವೊಂದು ಬಂದು ಬಿಡುತ್ತದೆ. ರೇವನ್ ಕೆಲಸ ಮಾಡುತ್ತಿದ್ದ ಕಂಪೆನಿ ಮುಚ್ಚಿ ಹೋಗುತ್ತದೆ. ಆ ಬಳಿಕದ ದಿನಗಳು ಕಷ್ಟಕರವಾದ ಪರಿಸ್ಥಿತಿಯಲ್ಲಿ ರೇವನ್ ಸಣ್ಣ ಹೊಟೇಲ್ ನಲ್ಲಿ ಕೆಲಸ ಮಾಡುತ್ತಾರೆ. ದಿನ ಕಳೆದಂತೆ ಗಳಿಸಿದ ಹಣವನ್ನು ಉಳಿಸಿ ಒಂದು ಜಾಗವನ್ನು ಬಾಡಿಗೆ ರೂಪದಲ್ಲಿ ಪಡೆದು ಅಲ್ಲಿ ಒಂದು ಪುಟ್ಟ ಗೂಡಂಗಡಿ ತೆರೆದು ತಿಂಡಿ, ಚಹಾ ಸಿಗುವ ಹೋಟೆಲ್ ನ್ನಾಗಿ ಮಾಡುತ್ತಾರೆ. ತನ್ನದೇ ಸ್ವಂತ ಕನಸಿಗೆ ಬಣ್ಣ ಬಳಿಯುವ ಕೆಲಸದಲ್ಲಿ ನಿರತರಾಗುತ್ತಾರೆ. ಆದರೆ ಬಹುಬೇಗ ಕನಸಿನ ಬಣ್ಣ ಮಾಸಿ ಹೋಗುತ್ತದೆ.
ಕೋವಿಡ್ ಪ್ರಕರಣಗಳು ಹೆಚ್ಚಾದ ಕಾರಣ ಲಾಕ್ ಡೌನ್ ಘೋಷಣೆಯಾಗುತ್ತದೆ. ಲಾಕ್ ಡೌನ್ ನಿಧಾನವಾಗಿ ತೆರೆವಾದಾಗ, ಕೆಲ ಕಂಪೆನಿ, ಬ್ಯಾಂಕ್ ಗಳ ಉದ್ಯೋಗಿಗಳು ಆರೋಗ್ಯ ರಕ್ಷಣೆ ಕಾರಣದಿಂದ ಹತ್ತಿರದ ಚಹಾದಂಗಡಿಗಳಿಗೆ ಬಾರದೇ ಇರುವುದನ್ನು ರೇವನ್ ಗಮನಿಸುತ್ತಾರೆ. ಈ ಕಾರಣದಿಂದ ರೇವನ್ ಅವರಿಗೆ ತನ್ನ ಚಹಾದ ರುಚಿಯನ್ನು ತೋರಿಸಲು ಆ ರಸ್ತೆಯ ಬಳಿ ಹೋಗಿ, ಕಂಪೆನಿಯ ಉದ್ಯೋಗಿಗಳಿಗೆ ಉಚಿತವಾಗಿ ಚಹಾವನ್ನು ನೀಡಲು ಶುರು ಮಾಡುತ್ತಾರೆ. ಥರ್ಮಸ್, ಸುರಕ್ಷಿತ ಕೈಗವಚ, ಸ್ಯಾನಿಟೈಸರ್ ನ್ನು ಬಳಸಿಕೊಂಡು, ಪ್ರತಿದಿನದಂತೆ 2 ತಿಂಗಳು ನಿರಂತರವಾಗಿ ಚಹಾವನ್ನು ನೀಡಿ ಆ ಯೋಜನೆಯನ್ನು ಅಲ್ಲಿಗೆ ನಿಲ್ಲಿಸುತ್ತಾರೆ.
ಮುಂದೆ ರೇವನ್ ಬದುಕಿನ ಹೊಸ ಅಧ್ಯಾಯ ಆರಂಭವಾಗುತ್ತದೆ. ದಿನಕಳೆದಂತೆ ರೇವನ್ ಅವರಿಗೆ ನಾನಾ ಕಂಪೆನಿಗಳಿಂದ ಉದ್ಯೋಗಿಗಳಿಗೆ ಚಹಾವನ್ನು ನೀಡಲು ಕರೆ ಬರುತ್ತದೆ. ಸಣ್ಣ ಕಪ್ ಚಹಾಕ್ಕೆ 6 ರೂಪಾಯಿ, ದೊಡ್ಡ ಕಪ್ ಚಹಾಕ್ಕೆ 10 ರಂತೆ ದರವನ್ನು ನಿಗದಿ ಮಾಡುತ್ತಾರೆ. ಪ್ರತಿದಿನ 700 ಕಪ್ ಚಹಾವನ್ನು ಮಾರುತ್ತಾರೆ. ಆರ್ಥಿಕ ಸ್ಥಿತಿ ಸುಧಾರಣೆಯಾದ ಬಳಿಕ ತಮ್ಮ ಚಹಾ ಸರ್ವಿಸ್ ಗೆ ‘ಅಭಿಮನ್ಯು’ಯೆಂದು ಹೆಸರಿಡುತ್ತಾರೆ.
ಅಭಿಮನ್ಯ ಚಹಾದ ಸೇವೆ ಬಹುಬೇಗ ಜನಪ್ರಿಯವಾಗುತ್ತದೆ. ಕೋವಿಡ್ ನಂಥ ಸಂಕಷ್ಟದ ಘಳಿಗೆಯಲ್ಲಿ ರೇವನ್ ಅವರ ಚಹಾ ಸರ್ವಿಸ್ ಕಂಪೆನಿಗಳ ಉದ್ಯೋಗಿಗಳಿಗೆ ಅನುಕೂಲವಾಗಿದೆ.
ಇಂದು ರೇವನ್ ಪ್ರತಿದಿನ 2000 ರೂಪಾಯಿ ಲಾಭವನ್ನು ಪಡೆಯುತ್ತಿದ್ದಾರೆ. ತಿಂಗಳಿಗೆ 2 ಲಕ್ಷ ಆದಾಯವನ್ನು ಗಳಸುತ್ತಿದ್ದಾರೆ. ಇದರೊಂದಿಗೆ 5 ಜನ ಜನರಿಗೆ ತಮ್ಮ ವ್ಯಾಪಾರದಲ್ಲಿ ಕೆಲಸ ಕೊಟ್ಟಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ತಮ್ಮಿಂದಾದ ಸಹಾಯವನ್ನೂ ಕೂಡ ರೇವನ್ ಮಾಡುತ್ತಿದ್ದಾರೆ.
-ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ವಿರಾಟ್ ಬಗ್ಗೆ ಆಸೀಸ್ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್ ಸಾಮ್ರಾಜ್ಯದ ಕಥೆ
AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?
Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…
Coconut Oil: ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಯಿರಿ
Box Office: ದೀಪಾವಳಿಗೆ ರಿಲೀಸ್ ಆದ 8 ಸಿನಿಮಾಗಳಲ್ಲಿ ಗೆದ್ದವರು ಯಾರು? ಸೋತವರು ಯಾರು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.