Recipe: ಈ ಬಾರಿಯ ಹಬ್ಬಕ್ಕೆ ಸಕ್ಕರೆ-ಬೆಲ್ಲ ಬಳಸದೇ ಈ ಸಿಹಿ ಖಾದ್ಯ ತಯಾರಿಸಿ
ಈ ಸಿಹಿ ಖಾದ್ಯ ತಿಂತಾಯಿದ್ರೆ ತಿಂತಾನೆ ಇರ್ತಿರಾ ಅಷ್ಟು ರುಚಿ...
ಶ್ರೀರಾಮ್ ನಾಯಕ್, Sep 30, 2024, 5:47 PM IST
ಮಹಾಲಯ ಮುಗಿಯಲು ಇನ್ನೇನು ಎರಡು ದಿನಗಳು ಮಾತ್ರ ಬಾಕಿ ಇದಾದ ಬಳಿಕ ನವರಾತ್ರಿ, ದೀಪಾವಳಿ ಹಬ್ಬಗಳು ಬರುತ್ತಿವೆ ಈ ಶುಭ ದಿನಗಳಲ್ಲಿ ಹೆಚ್ಚಿನ ಮನೆಗಳಲ್ಲಿ ಸಿಹಿ ಖಾದ್ಯಗಳನ್ನು ಮಾಡುತ್ತಾರೆ ಹಾಗಾಗಿ ಈ ಬಾರಿಯ ಹಬ್ಬಕ್ಕೆ ನೀವು ಮನೆಯಲ್ಲಿ ಹೊಸ ಬಗೆಯ ಸಿಹಿ ಖಾದ್ಯವನ್ನು ಪ್ರಯೋಗ ಮಾಡಿ ನೋಡಿ. ಈ ರೆಸಿಪಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇನ್ನೊಂದು ವಿಷಯವೇನೆಂದರೆ ಈ ಖಾದ್ಯಕ್ಕೆ ಸಕ್ಕರೆ ಹಾಗೂ ಬೆಲ್ಲದ ಅಗತ್ಯವಿಲ್ಲ. ಇದರಲ್ಲಿ ಅತೀ ಹೆಚ್ಚು ಪ್ರೋಟೀನ್ ಅಂಶವಿರುವುದರಿಂದ ಇದು ಮಕ್ಕಳ ಆರೋಗ್ಯಕ್ಕೂ ಬಹಳ ಒಳ್ಳೆಯದು. ಕೆಲವು ಮಕ್ಕಳು ಡ್ರೈ ಫ್ಯೂಟ್ಸ್ ತಿನ್ನಲು ಇಷ್ಟಪಡುವುದಿಲ್ಲ ಅದರ ಬದಲಿಗೆ ಈ ರೀತಿಯ ರೆಸಿಪಿ ಮಾಡಿಕೊಟ್ಟರೆ ಖಂಡಿತವಾಗಿಯೂ ತಿನ್ನುತ್ತಾರೆ. ಹಾಗಾದರೆ ಮತ್ಯಾಕೆ ತಡ ಈ ಬಾರಿಯ ಹಬ್ಬಕ್ಕೆ ಮನೆಯಲ್ಲೇ ಅಂಜೂರ ರೋಲ್ ಮಾಡಿ ಮನೆಮಂದಿಯೊಂದಿಗೆ ಸವಿಯಿರಿ. ಬನ್ನಿ ಹಾಗಾದರೆ “ಅಂಜೂರ ರೋಲ್” ಮಾಡುವುದು ಹೇಗೆಂದು ತಿಳಿದು ಬರೋಣ…
ಅಂಜೂರ ರೋಲ್ ರೆಸಿಪಿ
ಬೇಕಾಗುವ ಸಾಮಗ್ರಿಗಳು:
ಒಣ ಅಂಜೂರ -250ಗ್ರಾಂ, ಖರ್ಜೂರ-250ಗ್ರಾಂ, ತುಪ್ಪ- 4ಚಮಚ, ಗೋಡಂಬಿ-ಅರ್ಧ ಕಪ್, ಬಾದಾಮ್ – ಅರ್ಧ ಕಪ್, ವಾಲ್ ನಟ್ಸ್- ಅರ್ಧ ಕಪ್, ಪಿಸ್ತಾ- 2 ಚಮಚ, ಒಣದ್ರಾಕ್ಷಿ – 2 ಚಮಚ, ಏಪ್ರಿಕಾಟ್(ಜಲ್ದರು ಹಣ್ಣು)- 4, ಸೂರ್ಯಕಾಂತಿ ಬೀಜ- 2ಚಮಚ, ಗಸಗಸೆ- 1ಚಮಚ, ತೆಂಗಿನಕಾಯಿ ಪುಡಿ – 2 ಚಮಚ, ಏಲಕ್ಕಿ ಪುಡಿ- ಅರ್ಧ ಟೀಸ್ಪೂನ್.
ತಯಾರಿಸುವ ವಿಧಾನ:
-ಮೊದಲಿಗೆ ಒಂದು ಮಿಕ್ಸಿಜಾರಿಗೆ ಒಣ ಅಂಜೂರ ಮತ್ತು ಖರ್ಜೂರವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
-ನಂತರ ಒಲೆ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 2 ಚಮಚದಷ್ಟು ತುಪ್ಪ ಹಾಕಿ ರುಬ್ಬಿಟ್ಟ ಅಂಜೂರ/ಖರ್ಜೂರವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ(ಮೃದು ಆಗುವ ತನಕ).
-ತದನಂತರ ಇನ್ನೊಂದು ಪ್ಯಾನ್ ಗೆ 2 ಚಮಚದಷ್ಟು ತುಪ್ಪವನ್ನು ಹಾಕಿ ಅದಕ್ಕೆ ಸಣ್ಣಗೆ ಕಟ್ ಮಾಡಿಟ್ಟ ಗೋಡಂಬಿ, ಬಾದಾಮ್, ವಾಲ್ ನೆಟ್ಸ್ ಪಿಸ್ತಾ, ಒಣದ್ರಾಕ್ಷಿ, ಜಲ್ದರ್ ಹಣ್ಣು ಮತ್ತು ಸೂರ್ಯಕಾಂತಿ ಬೀಜ ಇವೆಲ್ಲವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
-ಆ ಬಳಿಕ ಗಸಗಸೆ, ತೆಂಗಿನ ಪುಡಿ ಹಾಕಿ ಪುನಃ ಹುರಿಯಿರಿ. ನಂತರ ಮೊದಲೇ ಮಾಡಿಟ್ಟ ಅಂಜೂರ/ಖರ್ಜೂರದ ಮಿಶ್ರಣ ಸೇರಿಸಿ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕೆ ಇರಿಸಿ ಸ್ವಲ್ಪ ತಣ್ಣಗಾಗಲು ಬಿಡಿ.
-ನಂತರ ಒಂದು ಪ್ಲೇಟ್ ಗೆ ಸಣ್ಣಗೆ ಚೂರು ಮಾಡಿಟ್ಟ ಪಿಸ್ತಾವನ್ನು ಹಾಕಿ, ಮಾಡಿಟ್ಟ ಅಂಜೂರದ ಮಿಶ್ರಣವನ್ನು ಹಾಕಿ ರೋಲ್ ಮಾಡಿ 30 ನಿಮಿಷ ಹಾಗೆ ಬಿಡಿ ಬಳಿಕ ಸಣ್ಣಗೆ ಕಟ್ ಮಾಡಿದರೆ ಅಂಜೂರ ರೋಲ್ ಸವಿಯಲು ಸಿದ್ಧ.
-ಶ್ರೀರಾಮ್ ಜಿ . ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.