ಪೊಂಗಲ್ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್ ಆಗಲಿರುವ ಚಿತ್ರಗಳ ಪಟ್ಟಿ
12 ವರ್ಷ ವಿಳಂಬದ ಬಳಿಕ ಖ್ಯಾತ ನಟನ ಸಿನಿಮಾಕ್ಕೆ ರಿಲೀಸ್ ಭಾಗ್ಯ
ಸುಹಾನ್ ಶೇಕ್, Jan 5, 2025, 9:30 AM IST
ನಮ್ಮಲ್ಲಿ ಸಿನಿಮಾಗಳನ್ನು ರಿಲೀಸ್ ಮಾಡಲು ರಜಾ ದಿನ ಅಥವಾ ಹಬ್ಬದ ದಿನವನ್ನು ಆಯ್ಕೆ ಮಾಡಲಾಗುತ್ತದೆ. ಬಾಲಿವುಡ್‌ನಲ್ಲಿ ʼಈದ್ʼ ಹಬ್ಬಕ್ಕೆ ಸಲ್ಮಾನ್ – ಶಾರುಖ್ ರಂತಹ ದೊಡ್ಡ ಸ್ಟಾರ್‌ಗಳ ಚಿತ್ರಗಳು ರಿಲೀಸ್ ಆದರೆ ಸ್ಯಾಂಡಲ್ ವುಡ್ ಬೆಳಕಿನ ಹಬ್ಬ ದೀಪಾವಳಿಗೆ ಬಹುನಿರೀಕ್ಷಿತ ಚಿತ್ರಗಳನ್ನು ತೆರೆಗೆ ತರಲು ಯೋಜನೆ ಹಾಕಿಕೊಳ್ಳಲಾಗುತ್ತದೆ.
ಈ ಎರಡು ಚಿತ್ರರಂಗವನ್ನು ಬಿಟ್ಟರೆ ಕಾಲಿವುಡ್ – ಟಾಲಿವುಡ್‌ನಲ್ಲಿ ʼಪೊಂಗಲ್ ಹಬ್ಬʼ ಅಥವಾ ʼಸಂಕ್ರಾಂತಿ ಹಬ್ಬʼಕ್ಕೆ ಸಾಲು ಸಾಲು ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಡುತ್ತವೆ. ಮೊದಲಿನಿಂದಲೂ ಕಾಲಿವುಡ್‌ನಲ್ಲಿ ಸಿನಿಮಾವೊಂದು ಕೋಟಿ ಗಳಿಸಬೇಕೆಂದರೆ ಅದು ʼಪೊಂಗಲ್ ಹಬ್ಬʼ ಕ್ಕೆ ರಿಲೀಸ್ ಆಗಬೇಕೆನ್ನುವ ಮಾತೊಂದಿದೆ. ಆ ಸಮಯದಲ್ಲಿ ಚಿತ್ರಗಳು ರಿಲೀಸ್ ಆದರೆ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ತಂದುಕೊಡುತ್ತದೆ ಎನ್ನುವುದು ನಿರ್ಮಾಪಕರ ನಂಬಿಕೆ.
ಪೊಂಗಲ್ ಹಬ್ಬಕ್ಕೆ ಕಾಲಿವುಡ್‌ನಲ್ಲಿ ದೊಡ್ಡ ಸ್ಟಾರ್‌ಗಳ ಸಿನಿಮಾಗಳೇ ಸಾಮಾನ್ಯವಾಗಿ ತೆರೆಗೆ ಬರುತ್ತದೆ. ಬಾಕ್ಸಾಫೀಸ್ ನಲ್ಲಿ ಟಕ್ಕರ್ ಕೊಡುವಂತೆ ಬಹು ನಿರೀಕ್ಷಿತ ಸಿನಿಮಾಗಳೇ ಹಬ್ಬಕ್ಕೆ ರಿಲೀಸ್ ಆಗುತ್ತವೆ.
ಈ ವರ್ಷವೂ ಪೊಂಗಲ್‌ಗೆ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಲಿವೆ. ಯಾವೆಲ್ಲ ಚಿತ್ರಗಳು ಈ ವರ್ಷ ರಿಲೀಸ್ ಆಗಲಿವೆ ಎನ್ನುವುದರ ಪಟ್ಟಿ ಇಲ್ಲಿದೆ.
ಕಾಲಿವುಡ್: ಕಾಲಿವುಡ್ ನಲ್ಲಿ ಈ ವರ್ಷ ಪೊಂಗಲ್‌ಗೆ ಅಜಿತ್ ಕುಮಾರ್ ಅವರ ಬಹು ನಿರೀಕ್ಷೆಯ ʼವಿದಮುಯಾರ್ಚಿʼ ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ ಅಂತಿಮ ಕ್ಷಣದಲ್ಲಿ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ. ಈ ಕಾರಣದಿಂದ ಕಾಲಿವುಡ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿರುವ ಇತರೆ ಸಿನಿಮಾಗಳು ಪೊಂಗಲ್ ಹಬ್ಬದ ಸಂದರ್ಭದಲ್ಲೇ ಥಿಯೇಟರ್‌ಗೆ ಬರಲು ಸಜ್ಜಾಗಿದೆ.
ಮದಗಜ ರಾಜ (Madha Gaja Raja):
ಕೆಲ ಸಿನಿಮಾಗಳು ಚಿತ್ರೀಕರಣಗೊಂಡ ಬಳಿಕ ರಿಲೀಸ್ ಕುರಿತು ಯಾವ ಮಾಹಿತಿಯನ್ನು ನೀಡುವುದಿಲ್ಲ. ಕೆಲವೊಮ್ಮೆ ಯಾವುದೋ ಕಾರಣದಿಂದ ಆ ಸಿನಿಮಾ ಮುಂದೂಡಿಕೆ ಆಗುತ್ತಲೇ ಬರುತ್ತದೆ. ವಿಶಾಲ್ (Actor Vishal) ಅಭಿನಯದ ‘ಮದಗಜ ರಾಜʼ ಚಿತ್ರದ ವ್ಯಥೆಯೂ ಇದೆ ರೀತಿ ಆಗುತ್ತಲೇ ಬಂದಿದೆ. ಅಂದುಕೊಂಡಂತೆ ಎಲ್ಲವೂ ಆಗಿದ್ದರೆ 2013ರ ಪೊಂಗಲ್‌ನಲ್ಲೇ ಈ ಚಿತ್ರ ರಿಲೀಸ್ ಆಗಬೇಕಿತ್ತು.
ಇದೀಗ 12 ವರ್ಷಗಳ ನಂತರ ವಿಶಾಲ್ ಅವರ ʼಮದಗಜ ರಾಜʼನಿಗೆ ರಿಲೀಸ್ ಭಾಗ್ಯ ಸಿಕ್ಕಿದೆ. ಮಾಸ್ & ಎಮೋಷನಲ್ ಕಥಾಹಂದರವುಳ್ಳ ಈ ಚಿತ್ರವನ್ನು ಸುಂದರ್ ಸಿ ಅವರು ನಿರ್ದೇಶನ ಮಾಡಿದ್ದಾರೆ.
ವಿಶಾಲ್, ಸಂತಾನಂ, ಅಂಜಲಿ, ವರಲಕ್ಷ್ಮಿ ಶರತ್‌ಕುಮಾರ್, ಸೋನು ಸೂದ್, ಮಣಿವಣ್ಣನ್ (ದಿವಂಗತ), ಸುಬ್ಬರಾಜು, ರಾಜೇಂದ್ರನ್ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಜ.12 ರಂದು ಚಿತ್ರ ತೆರೆ ಕಾಣಲಿದೆ.
ನೇಸಿಪ್ಪಾಯ (Nesippaya):
ದಿವಂಗತ ತಮಿಳು ನಟ ಮುರಳಿ ಅವರ ಪುತ್ರ ಮತ್ತು ಅಥರ್ವ ಮುರಳಿ ಅವರ ಕಿರಿಯ ಸಹೋದರ ಆಕಾಶ್ ಮುರಳಿ (Akash Murali) ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವʼನೇಸಿಪ್ಪಾಯʼ ಎಂಬ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ ಪೊಂಗಲ್‌ಗೆ ಥಿಯೇಟರ್‌ಗೆ ಎಂಟ್ರಿ ಕೊಡಲಿದೆ.
ಈಗಾಗಲೇ ʼ ಶೇರ್ಷಾʼ ಚಿತ್ರದ ಮೂಲಕ ಗಮನ ಸೆಳೆದಿರುವ ವಿಷ್ಣುವರ್ಧನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ʼಶೇರ್ಷಾʼ ದೊಡ್ಡ ಹಿಟ್ ಆದ ಬಳಿಕ ವಿಷ್ಣುವರ್ಧನ್ ಈ ಬಾರಿ ಲವ್ ಕಂ ಥ್ರಿಲ್ಲರ್ ಸ್ಟೋರಿಯ ಕಥೆಯನ್ನು ಹೇಳಲಿರುವ ʼನೇಸಿಪ್ಪಾಯʼ ಸಿನಿಮಾವನ್ನು ಮಾಡಲಿದ್ದು, ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಆಕಾಶ್ ಮುರಳಿ ಜತೆ ಅದಿತಿ ಶಂಕರ್, ಆರ್ ಶರತ್ಕುಮಾರ್, ಖುಷ್ಬು ಸುಂದರ್, ಪ್ರಭು, ಕಲ್ಕಿ ಕೋಚ್ಲಿನ್, ಶಿವ ಪಂಡಿತ್ ನಟಿಸಲಿದ್ದು, ಜನವರಿ 14ರಂದು ಚಿತ್ರ ತೆರೆಗೆ ಬರಲಿದೆ.
ವನಂಗಾನ್ (Vanangaan):
ಪೊಂಗಲ್ ಹಬ್ಬಕ್ಕೆ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿರುವ ಚಿತ್ರ ಎಂದರೆ ಅದು ʼವನಂಗಾನ್ʼ. ಬಾಲ (Bala) ನಿರ್ದೇಶನದ ʼವನಂಗಾನ್ʼ ಚಿತ್ರೀಕರಣದ ಹಂತದಲ್ಲಿ ಒಂದಷ್ಟು ವಿವಾದದಿಂದ ಸುದ್ದಿಯಾಗಿತ್ತು. ಹೀಗಾಗಿ ಕಲಾವಿದರ ಬದಲಾವಣೆಯೂ ಆಗಿತ್ತು.
ಪ್ರಧಾನ ಪಾತ್ರದಲ್ಲಿ ಅರುಣ್ ವಿಜಯ್ ಅವರು ಕಾಣಿಸಿಕೊಳ್ಳಲಿದ್ದು, ಕಿವುಡ ಮತ್ತು ಮೂಕ ವ್ಯಕ್ತಿಯ ಪಾತ್ರದಲ್ಲಿ ಮಾಸ್ ಅವತಾರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಮೊದಲು ಚಿತ್ರದಲ್ಲಿ ಸೂರ್ಯ ಅವರನ್ನು ಆಯ್ಕೆ ಮಾಡಲಾಗಿತ್ತು. ಆ ಬಳಿಕ ಬದಲಾವಣೆ ಮಾಡಿ ಅರುಣ್ ಅವರನ್ನು ಆಯ್ಕೆ ಮಾಡಲಾಗಿತ್ತು.
ಕೃತಿ ಶೆಟ್ಟಿ ಮತ್ತು ಮಮಿತಾ ಬೈಜು ಅವರನ್ನು ಸಹ ಮೊದಲು ಆಯ್ಕೆ ಮಾಡಿ ಆ ಬಳಿಕ ಬದಲಾವಣೆ ಮಾಡಿಕೊಳ್ಳಲಾಗಿತ್ತು.
ಅರುಣ್ ವಿಜಯ್, ರೋಶ್ನಿ ಪ್ರಕಾಶ್, ಸಮುದ್ರಕನಿ, ಜಾನ್ ವಿಜಯ್, ಮಿಸ್ಕಿನ್, ರಾಧಾ ರವಿ ನಟಿಸಿದ್ದು, ಜನವರಿ 10ರಂದು ಚಿತ್ರ ರಿಲೀಸ್ ಆಗಲಿದೆ.
ಮದ್ರಾಸ್ಕಾರನ್ (Madraskaaran):
ಮಲಯಾಳಂ ನಟ ಶೇನ್ ನಿಗಮ್ (Malayalam actor Shane Nigam) ಈ ಚಿತ್ರದ ಮೂಲಕ ಕಾಲಿವುಡ್‌ಗೆ ಕಾಲಿಡುತ್ತಿದ್ದಾರೆ.
ವಾಲಿ ಮೋಹನ್ ದಾಸ್ ನಿರ್ದೇಶನ ಈ ಚಿತ್ರ ಇಬ್ಬರು ಅಪರಿಚಿತರ ಕಥೆಯನ್ನು ಹೇಳಲಿದೆ. ಇಬ್ಬರು ಅಪರಿಚಿತರ ನಡುವೆ ಸಂಘರ್ಷ ಉಂಟಾಗಿ ಅದು ಅವರ ಬದುಕನ್ನೇ ಬದಲಾಯಿಸುವ ಸನ್ನಿವೇಶಕ್ಕೆ ಹೇಗೆ ಕಾರಣವಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಹೇಳಲಾಗಿದೆ.
ಈಗಾಗಲೇ ಟೀಸರ್ ಗಮನ ಸೆಳೆದಿದ್ದು, ಶೇನ್ ನಿಗಮ್ ಜತೆಗೆ ಕಲೈಯರಸನ್, ನಿಹಾರಿಕಾ ಕೊನಿಡೇಲಾ, ಐಶ್ವರ್ಯಾ ದತ್ತಾ, ಕರುಣಾಸ್, ಪಾಂಡ್ಯರಾಜನ್ ಮುಂತಾದವರು ಚಿತ್ರದಲ್ಲಿ ನಟಿಸಲಿದ್ದಾರೆ.
ಜನವರಿ 10 ರಂದು ಚಿತ್ರ ರಿಲೀಸ್ ಆಗಲಿದೆ.
ಕದಳಿಕ್ಕ ನೆರಮಿಲ್ಲೈ (Kadhalikka Neramillai):
ಜಯಂ ರವಿ (Jayam Ravi) ಮತ್ತು ನಿತ್ಯಾ ಮೆನನ್ (Nithya Menen) ಮೊದಲ ಬಾರಿಗೆ ಜೋಡಿಯಾಗುತ್ತಿರುವ ರೊಮ್ಯಾಂಟಿಕ್ ಕಂ ಕಾಮಿಡಿ ಕಥೆಯ ʼಕದಳಿಕ್ಕ ನೆರಮಿಲ್ಲೈʼ ಪೊಂಗಲ್ ಹಬ್ಬಕ್ಕೆ ರಿಲೀಸ್ ಆಗಲಿದೆ.
ಪರಿಪೂರ್ಣ ಜೀವನಕ್ಕಾಗಿ ಪ್ರೀತಿ, ಮದುವೆ ಮತ್ತು ಮಕ್ಕಳು ಬೇಕಾಗಿಲ್ಲ ಎನ್ನುವುದರ ಮೇಲೆ ನಂಬಿಕೆ ಇಡುವ ಶ್ರುತಿ ಎನ್ನುವ ಯುವತಿಯ ಸುತ್ತ ಚಿತ್ರದ ಕಥೆ ಸಾಗಲಿದೆ.
ಕಿರುತಿಗ ಉದಯನಿಧಿ ನಿರ್ದೇಶನದ ಈ ಸಿನಿಮಾದಲ್ಲಿ ಜಯಂ ರವಿ, ನಿತ್ಯಾ ಮೆನೆನ್, ಯೋಗಿ ಬಾಬು, ವಿನಯ್ ರೈ, ಜಾನ್ ಕೊಕ್ಕೆನ್, ಲಾಲ್, ಮನೋ ಮುಂತಾದವರು ನಟಿಸಿದ್ದಾರೆ. ಜನವರಿ 14 ಚಿತ್ರ ತೆರೆ ಕಾಣಲಿದೆ.
ಇದು ಕಾಲಿವುಡ್‌ನ ಕಥೆಯಾದರೆ ಇನ್ನು ಇದೇ ಸಂದರ್ಭದಲ್ಲಿ ಟಾಲಿವುಡ್‌ನಲ್ಲೂ ದೊಡ್ಡ ಸಿನಿಮಾಗಳು ರಿಲೀಸ್ ಆಗಲಿವೆ.
ಗೇಮ್ ಚೇಂಜರ್ (Game Changer):
ಒಂದಷ್ಟು ವಿಳಂಬದ ಬಳಿಕ ಕೊನೆಗೂ ʼಗೇಮ್ ಚೇಂಜರ್ʼ ರಿಲೀಸ್ ಆಗಲಿದೆ. ʼಆರ್ ಆರ್ ಆರ್ʼ ಬಳಿಕ ಮೊದಲ ಬಾರಿಗೆ ಬಿಗ್ ಸ್ಕ್ರೀನ್‌ನಲ್ಲಿ ಗ್ಲೋಬಲ್ ಸ್ಟಾರ್ ರಾಮ್ ಚರಣ್ (Global Star Ram Charan) ಕಾಣಿಸಿಕೊಳ್ಳಲಿದ್ದಾರೆ. ಪೊಲಿಟಿಕಲ್ ಥ್ರಿಲ್ಲರ್ ಜಾನರ್‌ನ ʼಗೇಮ್ ಚೇಂಜರ್ʼ ಕಥೆಯನ್ನು ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಬರೆದಿದ್ದು, ಎಸ್. ಶಂಕರ್ ನಿರ್ದೇಶನ ಮಾಡಿದ್ದಾರೆ.
ʼಇಂಡಿಯನ್ -2ʼ ಬಳಿಕ ಶಂಕರ್ ಅವರಿಗೆ ಕಂಬ್ಯಾಕ್ ತಂದುಕೊಡುವ ನಿರೀಕ್ಷೆ ʼಗೇಮ್ ಚೇಂಜರ್ʼ ಮೇಲಿದೆ. ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು, ಭ್ರಷ್ಟಾಚಾರದ ವಿರುದ್ದ ಹೋರಾಡುವ ಒನ್ ಮ್ಯಾನ್ ಹೀರೋನಂತೆ ರಾಮ್ ಚರಣ್ ಇಲ್ಲಿ ಮಿಂಚಿದ್ದಾರೆ.
ಚಿತ್ರದಲ್ಲಿ ರಾಮ್ ಚರಣ್, ಕಿಯಾರಾ ಅಡ್ವಾಣಿ, ಎಸ್.ಜೆ. ಸೂರ್ಯ, ಸುನಿಲ್ , ರಾಜಶೇಖರ್ ಅಣಿಂಗಿ ಮುಂತಾದವರು ನಟಿಸಿದ್ದಾರೆ ಇದೇ ಜನವರಿ 10ಕ್ಕೆ ಚಿತ್ರ ರಿಲೀಸ್ ಆಗಲಿದೆ.
ಸಂಕ್ರಾಂತಿಕಿ ವಸ್ತುನಾಮ್ (Sankranthiki Vasthunnam):
ದಿಗ್ಗಜ ನಟ ವಿಕ್ಟರಿ ವೆಂಕಟೇಶ್ (Daggubati Venkatesh) ಅವರ ʼಸಂಕ್ರಾಂತಿಕಿ ವಸ್ತುನಮ್ʼ ಪ್ರಚಾರದಿಂದಲೇ ಟಾಲಿವುಡ್ ವಲಯದಲ್ಲಿ ಸದ್ದು ಮಾಡುತ್ತಿದೆ. ಅನಿಲ್ ರವಿಪುಡಿ – ವೆಂಕಟೇಶ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ.
ಫ್ಯಾಮಿಲಿ ಡ್ರಾಮಾ ಕಥೆಯಲ್ಲಿ ಮೀನಾಕ್ಷಿ ಚೌಧರಿ ಮತ್ತು ಐಶ್ವರ್ಯಾ ರಾಜೇಶ್ ಇಬ್ಬರು ನಾಯಕಿಯರು ಕಾಣಿಸಿಕೊಳ್ಳಲಿದ್ದಾರೆ. ಜನವರಿ 14ರಂದು ಚಿತ್ರ ರಿಲೀಸ್ ಆಗಲಿದೆ.
ಡಾಕು ಮಹಾರಾಜ್ (Daaku Maharaaj) :
ಅಪಾರ ಅಭಿಮಾನಿಗಳನ್ನು ಹೊಂದಿರುವ ದಿಗ್ಗಜ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಈ ಬಾರಿ ಸಂಕ್ರಾಂತಿ ಹಬ್ಬಕ್ಕೆ ʼಡಾಕು ಮಹಾರಾಜ್ʼ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ʼದಾಬಿಡಿ ದಾಬಿಡಿʼ ಹಾಡಿನ ಮೂಲಕ ವಿವಾದವನ್ನು ಹುಟ್ಟಿಸಿರುವ ʼಡಾಕು ಮಹಾರಾಜ್ʼ ಹೈಪ್ ಹೆಚ್ಚಾಗಿಸಿದೆ.
ಕುಖ್ಯಾತ ದರೋಡೆಕೋರ ʼ ಮಾನ್ ಸಿಂಗ್ʼ ಅವರ ಜೀವನದ ಕಥೆಯನ್ನು ʼಡಾಕು ಮಹಾರಾಜ್ʼ ಹೇಳಲಿದೆ ಎನ್ನಲಾಗಿದೆ.
ಬಾಬಿ ಕೊಲ್ಲಿ ಚಿತ್ರವನ್ನು ನಿರ್ದೇಶನ ಮಾಡಿದ್ದು, ಜನವರಿ 14 ರಂದು ಸಿನಿಮಾ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra: ʼಗೇಮ್ ಚೇಂಜರ್ʼ ಈವೆಂಟ್‌ನಿಂದ ಮರಳುತ್ತಿದ್ದ ಅಭಿಮಾನಿಗಳು ರಸ್ತೆ ಅಪಘಾತಕ್ಕೆ ಬಲಿ
Toxic: ಯಶ್ ಬರ್ತ್ ಡೇಗೆ ʼಟಾಕ್ಸಿಕ್ʼನಿಂದ ಸಿಗಲಿದೆ ಬಿಗ್ ಅಪ್ಡೇಟ್; ಫ್ಯಾನ್ಸ್ ಥ್ರಿಲ್
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನು ಮಂಜೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Editorial: ಗಿಫ್ಟ್ ಡೀಡ್: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ
ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗಳ ದರವೂ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.