ಕ್ರಿಕೆಟ್ ಏಕೆ ಇನ್ನೂ ಒಲಿಂಪಿಕ್ ಅಂಗಳಕ್ಕೆ ಪ್ರವೇಶಿಸಿಲ್ಲ..?
ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ರಸದೌತಣ ಸವಿಯುವುದೆಂದು..?
Team Udayavani, Aug 27, 2021, 11:53 AM IST
ಪ್ರಾತಿನಿಧಿಕ ಚಿತ್ರ
ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಆಟವನ್ನು ಸೇರಿಸಬೇಕು ಎಂಬ ಚರ್ಚೆ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಈಗಲೂ ಅದು ಚರ್ಚಿತ ವಿಷಯವೇ. ಟೋಕಿಯೋ ಒಲಿಂಪಿಕ್ಸ್ ಮುಗಿದ ಬೆನ್ನಲ್ಲೇ ಐಸಿಸಿ ಹಾಗೂ ಬಿಸಿಸಿಐ, 2028ರ ಒಲಿಂಪಿಕ್ಸ್ ಗೆ ಆಟವನ್ನು ಸೇರಿಸುವ ಸರ್ವಪ್ರಯತ್ನವನ್ನೂ ಮಾಡಲಾಗುವುದು ಎಂದಿದೆ.
ಹೀಗಿದ್ದರೂ, ವಿಶ್ವದ ಅತ್ಯಂತ ದೊಡ್ಡ ಹಾಗೂ ಜನಪ್ರಿಯ ಕ್ರೀಡಾಕೂಟಗಳಲ್ಲೊಂದಾದ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಆಟವನ್ನು ನೋಡುವ ದಿನಗಳು ಇನ್ನೂ ದೂರದಲ್ಲಿದೆ ಎಂದೇ ಹೇಳಬಹುದು. ಅದಕ್ಕೆ ಹಲವಾರು ಕಾರಣಗಳಿವೆ.
ಇದನ್ನೂ ಓದಿ : ಒಳ್ಳೆಯ ಕೆಲಸ ಮಾಡಲು ರಾಜಕೀಯ ಬೇಕೆಂದಿಲ್ಲ, ಅರವಿಂದ್ ಜಿ ಜೊತೆನೂ ರಾಜಕೀಯ ಮಾತಾಡಿಲ್ಲ: ಸೋನು
ಜನಪ್ರಿಯತೆ
ಕ್ರಿಕೆಟ್ ಆಟ ಸೀಮಿತ ದೇಶಗಳು ಆಡುವ ಒಂದು ಆಟ. ಕೇವಲ 12 ದೇಶಗಳಿಗೆ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಮಾನ್ಯತೆ ಸಿಕ್ಕಿರುವುದೇ ಇದಕ್ಕೆ ಸಾಕ್ಷಿ! ಜಗತ್ತಿನಾದ್ಯಂತ ಸುಮಾರು 100 ದೇಶಗಳು ಕ್ರಿಕೆಟ್ ಆಡುತ್ತಿದ್ದರೂ, ಈ ಆಟವನ್ನು ಗಂಭೀರವಾಗಿ ಪರಿಗಣಿಸಿರುವುದು ಕೆಲವೇ ದೇಶಗಳು. ಮತ್ತೊಂದು ಹಿನ್ನಡೆಯೆಂದರೆ, ಜಗತ್ತಿನ ಬಲಾಢ್ಯ ದೇಶಗಳು ಎನಿಸಿರುವ ಅಮೇರಿಕಾ, ಚೀನಾ, ರಷ್ಯಾ, ಜರ್ಮನಿ ಇತ್ಯಾದಿ ದೇಶಗಳಲ್ಲಿ ಕ್ರಿಕೆಟ್ ಇನ್ನೂ ಜನಪ್ರಿಯತೆ ಪಡೆಯದಿರುವುದು.
ತಯಾರಿ ಹಾಗೂ ಸಮಯ
ಕ್ರಿಕೆಟ್ ಆಟಕ್ಕಾಗಿ ಹಲವಾರು ತಯಾರಿಗಳು ಆಗಬೇಕಿದೆ. ಅದಲ್ಲದೆ, ಕನಿಷ್ಠ 2-3 ಘಂಟೆಗಳನ್ನು ಒಂದು ಪಂದ್ಯಕ್ಕೆ ಮೀಸಲಿಡಬೇಕು. ಏನೇ ಅಂದರೂ ಟಿ10 ಆಟ ಆಡಿಸಿದರೂ 120 ನಿಮಿಷಗಳು ಬೇಕಾಗಿದೆ. ಫುಟ್ ಬಾಲ್ ಆಟವೂ ಸುಮಾರು 90 ನಿಮಿಷ ಆಡಿಸಿದರೂ, ಸತತವಾಗಿ ಪಂದ್ಯಗಳನ್ನು ನಡೆಸಬಹುದು. ಆದರೆ, ಕ್ರಿಕೆಟ್ ನಲ್ಲಿ ಅದು ಕಷ್ಟಸಾಧ್ಯ. ಮಳೆ ಬಂದರೂ ಪಂದ್ಯಕ್ಕೆ ಹಿನ್ನಡೆ ಆಗುತ್ತದೆ.
ಅಂಪೈಯರಿಂಗ್ ವೈಫಲ್ಯ
ನ್ಯಾಯಯುತವಾಗಿ ಪಂದ್ಯ ನಡೆಸುವುದು ಕಷ್ಟ. ಕ್ರಿಕೆಟ್ ಅಭಿಮಾನಿಗಳಿಗೂ ಇದು ತಿಳಿದಿರುವಂತದ್ದೆ. ಹಲವಾರು ಬಾರಿ, ತೀರ್ಪುಗಳು ವಿವಾದ ಸೃಷ್ಟಿಸಿರುವುದೂ ಉಂಟು. ಎಷ್ಟೇ ತಂತ್ರಜ್ಞಾನಗಳನ್ನು ಬಳಸುತ್ತಿದ್ದರೂ, ಕೆಲವೊಂದು ಬಾರಿ ಅಂಪೈರ್ ಗಳಿಂದ ತಪ್ಪು ನಿರ್ಧಾರಗಳು ಬಂದಿವೆ. ಹೀಗಾಗಿ, ಸರಿಯಾದ ನಿರ್ಧಾರ ಕೈಗೊಳ್ಳಲು ಆಗದಿರುವುದು ಒಂದು ಕಾರಣ ಎನ್ನಬಹುದು.
ಪಿಚ್ ಮಾಡುವುದೂ ಸವಾಲಿನ ಕೆಲಸ
ಒಂದು ತಟಸ್ಥವಾಗಿ, ಎಲ್ಲ ತಂಡಗಳಿಗೂ ಸಮಾನ ನ್ಯಾಯ ಒದಗಿಸಬಲ್ಲ ಪಿಚ್ ನಿರ್ಮಿಸುವುದೂ ಕೂಡ ಒಂದು ಸವಾಲಿನ ಕೆಲಸ. ಆ ಯೋಜನೆ ಮಾಡುವ ದೇಶಗಳಿಗೆ ಸಹಕಾರಿಯಾಗಬಲ್ಲ ಪಿಚ್ ನಿರ್ಮಾಣ ಮಾಡುವುದು ಸರ್ವೇ ಸಾಮಾನ್ಯ. ಇದರೊಂದಿಗೆ, ಬ್ಯಾಟ್ಸ್ಮನ್ ಹಾಗೂ ಬೌಲರ್ಸ್ ಇಬ್ಬರಿಗೂ ಸ್ಪರ್ಧಾತ್ಮಕ ಎನ್ನಿಸಬಲ್ಲ ಪಿಚ್ ನಿರ್ಮಿಸುವುದು ಕಷ್ಟಸಾಧ್ಯ. ಏಷ್ಯಾ ಖಂಡದ ತಂಡಗಳು ಸಾಮಾನ್ಯವಾಗಿ ಸ್ಪಿನ್ ಗೆ ಸಹಕಾರಿಯಾಗಬಲ್ಲ ಪಿಚ್ ಗಳನ್ನು ನಿರ್ಮಿಸಿದರೆ, ಇತರ ದೇಶಗಳಿಗೆ ವೇಗದ ಬೌಲಿಂಗೇ ಶಕ್ತಿ!
ಉತ್ಸಾಹ ರಹಿತ ಕ್ರೀಡೆ
ಇದು ಚರ್ಚಾಸ್ಪದ ಆದರೂ, ಇತರೆ ಕ್ರೀಡೆಗಳಿಗಿಂತ ಕ್ರಿಕೆಟ್ ನಲ್ಲಿ ಕಡಿಮೆ ಉತ್ಸಾಹ ಇರುತ್ತದೆ. ಬೌಂಡರಿ, ಸಿಕ್ಸರ್, ವಿಕೆಟ್ ಹೋದಾಗ ಮಾತ್ರ ಒಂದು ರೀತಿಯ ಮಜಾ! ಅದಲ್ಲದೆ, ಫೀಲ್ಡರ್ಸ್ ಳಿಗೂ ಹೆಚ್ಚಿನ ಕೆಲಸ ಇರುವುದಿಲ್ಲ.
ಇವುಗಳೊಂದಿಗೆ, ಒಲಿಂಪಿಕ್ ಸೇರ್ಪಡೆಗೆ ಕ್ರಿಕೆಟ್ ಆಟಕ್ಕೆ ಬಹುಮತವೂ ಸಿಗದಿರಬಹುದು. ಆಗಲೇ ತಿಳಿಸಿದಂತೆ, ಬಲಾಢ್ಯ ದೇಶಗಳಲ್ಲಿ ಕ್ರಿಕೆಟ್ ಆಟಕ್ಕೆ ಪ್ರಾಮುಖ್ಯತೆ ಇಲ್ಲದಿರುವುದರಿಂದ, ಆಟ ಒಲಿಂಪಿಕ್‌ಗೆ ಸೇರ್ಪಡೆಯಾದರೂ, ಅವರಿಗೆ ಪದಕ ಗೆಲ್ಲುವ ಅವಕಾಶವೂ ಇಲ್ಲದಿರುವುದರಿಂದ, ಅಂತಹ ದೇಶಗಳು ಇದಕ್ಕೆ ಮತ ಹಾಕುವ ಸಾಧ್ಯತೆ ತೀರಾ ಕಡಿಮೆ. ಅದಲ್ಲದೆ, ಏನೋ ಅದೃಷ್ಟದಲ್ಲಿ ಒಲಿಂಪಿಕ್‌ಗೆ ಕ್ರಿಕೆಟ್ ಸೇರ್ಪಡೆಯಾದರೂ, ಸೆಮಿಫೈನಲ್‌ಗೆ ಏರುವ 4 ತಂಡಗಳನ್ನು ನಾವು ಮೊದಲೇ ಊಹಿಸಬಹುದು.
ಹೀಗಾಗಿ, ವಿಶ್ವಕಪ್, ಏಷ್ಯಾಕಪ್, ಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ ಇತರ ಸರಣಿಗಳಲ್ಲಿ ಮಾತ್ರ ಸದ್ಯ ಕ್ರಿಕೆಟಾಭಿಮಾನಿಗಳು ಮನರಂಜನೆ ಪಡೆಯಬಹುದು. ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್ ನಲ್ಲೂ ಕ್ರಿಕೆಟ್ ರಸದೌತಣವನ್ನು ಸವಿಯುವ ಅವಕಾಶ ಅಭಿಮಾನಿಗಳಿಗೆ ಸಿಗಲಿ ಎಂದು ಆಶಿಸೋಣ.
-ಇಂದುಧರ ಹಳೆಯಂಗಡಿ
ಇದನ್ನೂ ಓದಿ : ಒಳ್ಳೆಯ ಕೆಲಸ ಮಾಡಲು ರಾಜಕೀಯ ಬೇಕೆಂದಿಲ್ಲ, ಅರವಿಂದ್ ಜಿ ಜೊತೆನೂ ರಾಜಕೀಯ ಮಾತಾಡಿಲ್ಲ: ಸೋನು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.