ಆಧುನಿಕ ಶೈಲಿಯ ಆಹಾರ ಪದಾರ್ಥ; ಸ್ಥೂಲಕಾಯ ನಿವಾರಣೆಗೆ ಸರಳ ಮನೆಮದ್ದು


Team Udayavani, Mar 1, 2021, 6:41 PM IST

the-solution-for-the-obesity

ಆಧುನಿಕ  ಜಗತ್ತು ಮನುಷ್ಯನನ್ನು ಹೊಸ ಪ್ರಪಂಚದತ್ತ ಕರೆದೊಯ್ದಿದೆ. ಜನರ  ಜೀವನ ಕ್ರಮ ಆಚಾರ ವಿಚಾರಗಳನ್ನು ಒಳಗೊಂಡಂತೆ ಆಹಾರ ಕ್ರಮದಲ್ಲಿಯೂ ಗಣನೀಯವಾದ ಬದಲಾವಣೆಗಳಾಗಿವೆ. ಬಾಯಿಗೆ ರುಚಿ ಎನಿಸುವ ಪದಾರ್ಥಗಳನ್ನೇ ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಿದ್ದು, ಈ ನಡುವೆ ಇಂತಹ ಆಧುನಿಕ ಶೈಲಿಯ ಆಹಾರ ಪದಾರ್ಥಗಳು ನಮ್ಮನ್ನು ಹಲವಾರು ಸಮಸ್ಯೆಗಳತ್ತ ಸೆಳೆಯುತ್ತಿದೆ. ಅವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಲವರನ್ನು ಕಾಡುವ ಸಮಸ್ಯೆಯಾದ ಬೊಜ್ಜು ಕೂಡಾ ಒಂದು.

ಬೊಜ್ಜು  ಅಥವಾ ಸ್ಥೂಲ ಕಾಯತೆ ಎಂದು ಕರೆಯಲ್ಪಡುವ  ಈ ಸಮಸ್ಯೆ, ದೇಹದಲ್ಲಿ ನಿಗದಿತ ಆರೋಗ್ಯಕರ ತೂಕಕ್ಕಿಂತಲೂ ಅಧಿಕ ತೂಕವನ್ನು ಹೊಂದಿರುವುದನ್ನು ಸೂಚಿಸುತ್ತದೆ. ಹೀಗೆ ದೇಹದಲ್ಲಿ ಹೆಚ್ಚಿನ ಪ್ರಮಾಣದ ಮಾಂಸ ಶೇಖರಣೆಗೊಂಡಾಗ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾವನ್ನು ಬೀರುತ್ತದೆ.

ಬೊಜ್ಜಿನಿಂದ ಉಂಟಾಗುವ ಸಮಸ್ಯೆಗಳು.

ಸ್ಥೂಲ ಕಾಯವನ್ನು ಹೊಂದಿರುವವರ ದೇಹದ ಆರೋಗ್ಯದಲ್ಲಿ ನಾನಾ ವಿಧವಾದ ಸಮಸ್ಯೆಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ಹೃದ್ರೋಗ ಸಮಸ್ಯೆ, ಮಧುಮೇಹ, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ಕೆಲವು ವಿಧವಾದ ಕ್ಯಾನ್ಸರ್, ಮೂತ್ರ ನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು, ಅಸ್ಥಿ ಸಂಧಿವಾತ, ಅಸ್ಥಮಾ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಕಾಣಬಹುದಾಗಿದೆ.

ಸ್ಥೂಲಕಾಯ ಸಮಸ್ಯೆಗೆ ಸರಳ ಪರಿಹಾರ

ಸ್ಥೂಲ ಕಾಯದಿಂದ ಮುಕ್ತಿ ಹೊಂದುವ ಮೂಲಕ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಹಲವಾರು ಮನೆ ಮದ್ದುಗಳನ್ನು ಸುಲಭವಾಗಿ ತಯಾರಿಸಿ ಬಳಸಬಹುದಾಗಿದೆ. ಈ ಮನೆಮದ್ದುಗಳನ್ನು ದೀರ್ಘ ಸಮಯದವರೆಗೆ ಬಳಸಿದರೂ ಯಾವುದೇ ವಿಧವಾದ ಅಡ್ಡ ಪರಿಣಾಮಗಳು ಕಂಡುಬರುವುದಿಲ್ಲ. ಆದರೆ ಯಾವುದೇ ಮನೆ ಮದ್ದನ್ನು ಬಳಸುವ ಮುನ್ನ ನಮ್ಮ ಆಹಾರ ಕ್ರಮವನ್ನು ಸಿಗದಿತವಾದ ರೀತಿಯಲ್ಲಿ ಪಾಲಿಸಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು..

ಸ್ಥೂಲ ಕಾಯ ಸಮಸ್ಯೆಯಿಂದ ನಮ್ಮ ದೇಹವನ್ನು ಕಾಪಾಡಿಕೊಳ್ಳಲು ಈ ಕೆಳಗಿನ ಯಾವುದಾದರೂ ಮನೆಮದ್ದುಗಳನ್ನು ಬಳಸಬಹುದಾಗಿದೆ.

1.ಅರ್ಧ ಲಿಂಬೆ ಹಣ್ಣಿನ ರಸವನ್ನು ಒಂದು ಲೋಟದಷ್ಟು ನೀರಿನಲ್ಲಿ ಬೆರೆಸಿ ಪ್ರತಿನಿತ್ಯವೂ ಬೆಳಿಗ್ಗೆಯ ಸಮಯದಲ್ಲಿ ಸೇವನೆ ಮಾಡುವುದು ಸ್ಥೂಲ ಕಾಯ ನಿವಾರಣೆಗೆ ರಾಮಬಾಣವಾಗಿದೆ.

2.1/4  ಚಮಚ ಶುಂಠಿ ರಸ, 1/4 ಚಮಚ  ಜೇನು, 1/4   ಚಮಚ ಲಿಂಬೆರಸ ಇವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ.

  1. ಪ್ರತಿನಿತ್ಯವೂ ಅರ್ಧ ಚಮಚ ಜೇನು ಮತ್ತು ಅರ್ದ ಚಮಚ ಲಿಂಬೆಯ ರಸವನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ದೇಹದ ತೂಕವನ್ನು ನಿಯಂತ್ರಣಕ್ಕೆ ತರಬಹುದಾಗಿದೆ. ಒಂದು ವೇಳೆ ಲಿಂಬೆ ಹಣ್ಣಿನ ಲಭ್ಯತೆ ಇಲ್ಲದಿರುವಾಗ ಕೇವಲ ಜೇನನ್ನು ಮಾತ್ರ ಬಿಸಿ ನೀರಿನಲ್ಲಿ ಬೆರೆಸಿ ಸೇವನೆ ಮಾಡಬಹುದು.
  2. ಬಾಳೆಯ ದಿಂಡನ್ನು ತಂದು ಅದಕ್ಕೆ ಒಂದು ಮುಷ್ಠಿಯಷ್ಟು ಗರಿಕೆ ಹುಲ್ಲನ್ನು ಸೇರಿಸಿ, ಅರ್ದ ಲಿಂಬೆ ಹಣ್ಣನ್ನು ಸಿಪ್ಪೆ ಸಮೇತವಾಗಿ ಒಂದು ಲೋಟ ನೀರಿನೊಂದಿಗೆ ಬೆರಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಈ ದ್ರವರೂಪದ ಔಷಧಿಯನ್ನು ಸೋಸಿ ಬೆಳಿಗ್ಗೆಯ ಸಮಯದಲ್ಲಿ ಬರಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಹೀಗೆ ಸೇವನೆಯನ್ನು ಮಾಡಿದ ಬಳಿಕ ಒಂದು ಗಂಟೆಗಳ ಕಾಲ ಯಾವುದೇ ಆಹಾರವನ್ನು ಸೇವಿಸಬಾರದು.
  3. ಒಂದು ಲೋಟ ಮಜ್ಜಿಗೆಗೆ ನೀರು. ಮೆಂತ್ಯ, ಉಪ್ಪು, ಹಸಿ ಶುಂಠಿ ,ಪುದೀನ ಸೊಪ್ಪನ್ನು ಬೆರೆಸಿ ಆಗಾಗ ಕುಡಿಯುವುದರಿಂದ ಬೊಜ್ಜು ನಿವಾರಣೆಯಾಗುತ್ತದೆ.
  4. ಕೆಂಪಕ್ಕಿಯ ಗಂಜಿಯ ತಿಳಿಯನ್ನು ಸ್ಪಲ್ಪ ಕಾಳು ಮೆಣಸು, ಉಪ್ಪು ಮತ್ತು ಸ್ಪಲ್ಪ ಪ್ರಮಾಣದ ತುಪ್ಪವನ್ನು ಸೇರಿಸಿ ಊಟಕ್ಕಿಂತ ಮೊದಲು ಸೇವಿಸಬೇಕು. ಇದನ್ನು ರಾತ್ರಿ ವೇಳೆಯಲ್ಲಿಯೂ ಊಟದ ಬದಲು ಸೇವಿಸುವುದು ಉತ್ತಮ.
  5. ಮೆಂತ್ಯ ಸೊಪ್ಪಿನಲ್ಲಿ ದೇಹದ ಬೊಜ್ಜು ಕರಗಿಸುವ ಅಂಶ ಹೇರಳವಾಗಿರುವುದರಿಂದ ನಮ್ಮ ದಿನನಿತ್ಯದ ಆಹಾರದಲ್ಲಿ ಮೆಂತ್ಯ ಸೊಪ್ಪಿನ ಬಳಕೆ ಮಾಡುವುದು ಉತ್ತಮ.
  6. ಹಸಿ ಅರಶಿನವನ್ನು ಲಿಂಬೆ ರಸದಲ್ಲಿ ತೇಯಬೇಕು. ನಂತರ ಇದನ್ನು ಒಂದು ಚಮಚ ಬೆಳಿಗ್ಗೆ ಹಾಗೂ ಒಂದು ಚಮಚ ಸಂಜೆ ವೇಳೆ ಸೇವಿಸಬೇಕು. ನಂತರ ಬಿಸಿ ನೀರನ್ನು ಕುಡಿಯಬೇಕು.
  7. ಕೊತ್ತಂಬರಿ ಸೊಪ್ಪು ಮತ್ತು ಮೆಂತ್ಯ ಸೊಪ್ಪನ್ನು ಸಮ ಪ್ರಮಾಣದಲ್ಲಿ ತೆಗೆದು ಇದರ ಅರ್ಧದಷ್ಟು ಜೀರಿಗೆಯನ್ನು ಸೇರಿಸಿ, ಎರಡು ಎಸಳು ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಇದರ ರಸವನ್ನು ತೆಗೆದು ಬೆಳಿಗ್ಗೆ ವೇಳೆ ಖಾಲಿ ಹೊಟ್ಟೆಯಲ್ಲಿ ಸೇವನೆಯನ್ನು ಮಾಡಬೇಕು.ಇದರಿಂದ ಅಧಿಕ ತೂಕದವರನ್ನು ಕಾಡುವ ಹೃದಯದ ಸಮಸ್ಯೆಗಳು ಪರಿಹಾರವಾಗುತ್ತವೆ.

ಈ ಮೇಲಿನ ಮನೆಮದ್ದುಗಳನ್ನು ಸೇವಿಸುವುದರಿಂದ ದೇಹದಲ್ಲಿ ಉಷ್ಣದ ಪ್ರಮಾಣ ಅಧಿಕವಾಗುವ ಸಾಧ್ಯತೆಗಳಿರುತ್ತದೆ, ಹೀಗಾಗಿ ಈ ಸಮಯದಲ್ಲಿ ಹೆಚ್ಚು ನೀರನ್ನು ಕುಡಿಯುವುದು ಉತ್ತಮ.

ಟಾಪ್ ನ್ಯೂಸ್

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್‌ ಇದ್ರು: ಫೋಟೋ ಸಾಕ್ಷ್ಯ ಲಭ್ಯ!

Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್‌ ಇದ್ರು: ಫೋಟೋ ಸಾಕ್ಷ್ಯ ಲಭ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.