ಇದು ಕೌಶಲಗಳನ್ನು ಬೇಡುವ ಯುಗ!
ತಂತ್ರಜ್ಞಾನ, ವಾಹನ ಚಲಾುಸುವ ಕೌಶಲ ಮೊದಲಾದುವುಗಳನ್ನು ಹೊಂದಿರಬೇಕಾಗುತ್ತದೆ.
Team Udayavani, Dec 21, 2020, 10:28 AM IST
Representative Image
ಯಾವುದೇ ಕೆಲಸವನ್ನು ಸಮರ್ಥವಾಗಿ ಮಾಡಬೇಕಾದರೆ ಬೇಕಾಗುವ ಜಾಣ್ಮೆಯನ್ನು ಕೌಶಲವೆಂದು ಹೇಳಬಹುದು. ಕೌಶಲ ಬೆಳೆಸಲು ಪರಿಶ್ರಮ ಬೇಕಾಗುತ್ತದೆ. ವಿದ್ಯೆಗೂ ಕೌಶಲಕ್ಕೂ ವ್ಯತ್ಯಾಸವಿದೆ. ವಿದ್ಯೆ ಕಲಿಕೆಯಿಂದ, ಬುದ್ಧಿಶಕ್ತಿಯಿಂದ ಕರಗತವಾಗುವಂಥದ್ದು. ಕೌಶಲವು ಒಂದು ಕೆಲಸವನ್ನು ಮಾಡಿ ಕಲಿಯುವುದರಿಂದ, ಅನುಭವ ದಿಂದ ಕರಗತವಾಗುವಂಥದ್ದು. ಒಂದು ಕೆಲಸವನ್ನು ಹೇಗೆ ಮಾಡುವುದೆಂಬ ಪುಸ್ತಕದ ಜ್ಞಾನವಿದ್ದರೆ ಅದರಿಂದ ಹೆಚ್ಚಿನ ಪ್ರಯೋಜನವಾಗಲಾರದು. ಆ ಕೆಲಸವನ್ನು ಕೆಲವು ಬಾರಿ ಮಾಡಿ ಅನುಭವ ಹೊಂದಿದರೆ, ಅದು ಕೌಶಲವಾಗಿ ನಮ್ಮೊಳಗೆ ಸೇರಿಕೊಳ್ಳುತ್ತದೆ. ಈಜು ಕಲಿಯುವುದು, ಸೈಕಲು ತುಳಿಯುವುದು ಮೊದಲಾದುವು ಉದಾಹರಣೆಗಳು. ಜೀವನದುದ್ದಕ್ಕೂ ಇದು ಬೇಕಾದಾಗ ಉಪಯೋಗಕ್ಕೆ ಬರುತ್ತದೆ. ವಿದ್ಯಾಭ್ಯಾಸ ಕೌಶಲವರ್ಧನೆಗೆ
ಸಹಾಯಕ ಮಾತ್ರ; ಅದೇ ಕೌಶಲವಲ್ಲ.
ಯಾವುದೇ ಕೌಶಲವನ್ನು ಬೆಳೆಸಿಕೊಂಡರೂ ಅದರಿಂದ ಜೀವನಾ ಧಾರ ಹೊಂದಲು ಸಾಧ್ಯ. ಕೃಷಿ, ವ್ಯಾಪಾರ, ಉದ್ಯಮ, ಹೈನುಗಾರಿಕೆ, ಬಡಗಿ ಕೆಲಸ, ಕಮ್ಮಾರಿಕೆ, ಮರ ಹತ್ತುವ ಕೆಲಸ, ದೋಣಿ ನಡೆಸುವುದು, ವಾಹನ ಚಲಾಯಿಸುವುದು, ಗಾರೆ ಕೆಲಸ ಇತ್ಯಾದಿ ಕೌಶಲ ಬೇಡುವ ವೃತ್ತಿಗಳು. ಇವುಗಳಲ್ಲಿ ಬಹಳಷ್ಟು ವೃತ್ತಿಗಳು ವಿದ್ಯಾಭ್ಯಾಸವಿಲ್ಲದಿದ್ದರೂ ಬೆಳೆಸಬಹುದಾದುವುಗಳು! ಬಡಗಿ, ಕಮ್ಮಾರಿಕೆ, ವ್ಯಾಪಾರದಂತಹ ಕೌಶಲಗಳು ತಲೆಮಾರಿನಿಂದ ತಲೆಮಾರಿಗೆ ಹಸ್ತಾಂತರಗೊಳ್ಳುತ್ತಿದ್ದುವು. ಕೆಲವು ವೃತ್ತಿಗಳಿಗೂ ಜಾತಿಗೂ ನಂಟು ಕೂಡ ಇತ್ತು. ಜಾಗತೀಕರಣದ ಕಾರಣದಿಂದ ಬಹಳಷ್ಟು ವೃತ್ತಿಗಳು ಸಾರ್ವತ್ರಿಕಗೊಂಡಿವೆ.
ಕೆಲವು ವೃತ್ತಿಗಳು ಈಗ ಕುಲ ಕಸುಬುಗಳಾಗಿ ಉಳಿದಿಲ್ಲ. ಕೌಶಲ ವೃದ್ಧಿಯ ಕಲಿಕೆ ಸವಲತ್ತುಗಳು ಸಾರ್ವಜನಿಕವಾದುದು ಮುಖ್ಯ ಬೆಳವಣಿಗೆಯಾಗಿದೆ. ಇದರಿಂದ ಉದ್ಯೋಗ ಸೃಷ್ಟಿಯು ಅಧಿಕಗೊಂಡು ಆರ್ಥಿಕತೆ ಪ್ರಗತಿಗೆ ಪೂರಕ ವಾಗುತ್ತಿರುವುದು ಜೀವನ ಮಟ್ಟದ ಸುಧಾರಣೆಗೆ ಉತ್ತಮ ಸಾಧನ ವಾಗಿದೆ.
ಇಂದಿನ ಯುವ ಜನಾಂಗ ಜೀವನಾಧಾರವನ್ನು ನೀಡಬಲ್ಲ ಕೌಶಲ ಬೆಳೆಸುವ ವಿದ್ಯಾಭ್ಯಾಸ ಮುಂದುವರಿಸುವುದು ಉತ್ತಮ ಬೆಳವಣಿಗೆ. ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿದರೆ ಹೆಚ್ಚಿನ ಕೌಶಲ ವೃದ್ಧಿಗೆ ಬೇಕಾಗುವ ಸಾಮಾನ್ಯ ಜ್ಞಾನ ಬೆಳೆದಿರುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಜನರ ಆರ್ಥಿಕ ಗಳಿಕೆ ಬೆಳೆದಂತೆ ಜೀವನಕ್ರಮವೂ ಬದಲಾಗುತ್ತಿದೆ. ಈ ಪ್ರವೃತ್ತಿ ಬೆಳೆದಷ್ಟು ಸವಲತ್ತುಗಳಿಗೂ ಸೇವೆಗಳಿಗೂ ಬೇಡಿಕೆಯನ್ನು ಹೆಚ್ಚಿಸಿದೆ. ಕಟ್ಟಡ ನಿರ್ಮಾಣ-ಅದರೊಂದಿಗೆ
ನಂಟಿರುವ ಕಲ್ಲು-ಇಟ್ಟಿಗೆ ಕೆಲಸ, ಗಾರೆಕೆಲಸ, ಬಡಗಿ, ವೆಲ್ಡಿಂಗ್, ಪೈಂಟಿಂಗ್, ಪ್ಲಂಬಿಂಗ್, ಎಲೆಕ್ಟ್ರೀಶಿಯನ್ ಮೊದಲಾದ ಕೌಶಲಗಳೂ ಹೆಚ್ಚಿನ ಬೇಡಿಕೆ ಕಂಡುಕೊಂಡಿವೆ.
ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೌಶಲಕ್ಕೆ ಉತ್ತಮ ಸಂಭಾವನೆ. ಇದಕ್ಕೆ ಅಂತರ್ದೇಶೀಯ ನೆಲೆಯಲ್ಲಿ ಬೇಡಿಕೆ ಇರುವುದು ಈ ತರದ ಸಂಭಾವನೆಗೆ ಕಾರಣ. ವೈದ್ಯಕೀಯ ಕೌಶಲ ಕೂಡ ಹಿಂದೆಂದೂ ಕಾಣದಷ್ಟು ಮುನ್ನೆಲೆಗೆ ಬಂದಿರುವುದು ಜನರ ಆರೋಗ್ಯಪ್ರಜ್ಞೆ, ವೈಜ್ಞಾನಿಕ ಬೆಳವಣಿಗೆಗಳ ಕಾರಣದಿಂದಾಗಿದೆ ಎನ್ನಬಹುದು. ಪ್ರವಾಸೋದ್ಯಮ, ಹೊಟೇಲ್ ಉದ್ಯಮಗಳು ಕೂಡ ವಿಶೇಷ ಕೌಶಲವನ್ನು ಬೇಡುವಂತಾದದ್ದು ವೃತ್ತಿಪರತೆಯ ಕಾರಣದಿಂದ.
ಉದ್ಯಮ ರಂಗದ ಕಡೆಗೆ ಗಮನಿಸಿದರೆ, ಉತ್ಪನ್ನಗಳ ಉತ್ಪಾದನೆಯ ಜತೆಗೆ ಮಾರುವ ಕಲೆ (ಮಾರ್ಕೆಟಿಂಗ್) ಒಂದು ಕೌಶಲವಾಗಿ ನೆಲೆ ನಿಂತಿದೆ. ವ್ಯವಹಾರಕ್ಕೆ ಅಗತ್ಯವಾದ ಮಾತುಗಾರಿಕೆ (ಸಂವಹನ), ಶಿಷ್ಟಾಚಾರಗಳು (ಎಟಿಕೆಟ್ಸ್), ಗ್ರಾಹಕ ಸಂಬಂಧಗಳ ನಿರ್ವಹಣೆ (ಕಸ್ಟಮರ್ ರಿಲೇಶನ್‌ಶಿಪ್ ಮೇನೇಜೆ¾ಂಟ್) ಮೊದಲಾದುವುಗಳು ಮೃದು ಕೌಶಲಗಳು (ಸೋಪ್ಟ್ ಸ್ಕಿಲ್ಸ್) ಎಂದು ವಿಶೇಷವಾಗಿ ಕರೆಸಿಕೊಂಡು ಮುನ್ನೆಲೆಗೆ ಬಂದಿವೆ.
ಕೆಲವು ಉದ್ಯೋಗಗಳಂತೂ ಬಹು ಕೌಶಲಗಳನ್ನು (ಮಲ್ಟಿ ಸ್ಕಿಲ್ಸ್) ಬೇಡುತ್ತವೆ. ಉದಾಹರಣೆಗೆ ಬಿಕರಿ ವೃತ್ತಿಯವರು ಉತ್ತಮ ಮಾತುಗಾರಿಕೆ, ಶಿಷ್ಟಾಚಾರ, ಗ್ರಾಹಕ ಸಂಬಂಧಗಳಂಥ ವಿವಿಧ ಕೌಶಲಗಳನ್ನು ಹೊಂದಿರಬೇಕಾಗುತ್ತದೆ. ಇದಲ್ಲದೆ ತಂತ್ರಜ್ಞಾನ, ವಾಹನ ಚಲಾುಸುವ ಕೌಶಲ ಮೊದಲಾದುವುಗಳನ್ನು ಹೊಂದಿರಬೇಕಾಗುತ್ತದೆ. ಇವೆಲ್ಲವೂ ಇಂದಿನ ಉದ್ಯಮಗಳು ಬೇಡುವ ಕೌಶಲಗಳು.
ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಕ್ಷೇತ್ರಕ್ಕೆ ಕಾಲಿಡುವ ನವ ಪದವೀಧರ ಯುವಕ ಯುವತಿಯರು ಸಾಕಷ್ಟು ಉದ್ಯೋಗಾರ್ಹ ಕೌಶಲಗಳನ್ನು ಬೆಳೆಸಿಕೊಳ್ಳದಿರುವುದು ಉದ್ಯೋಗ ಒದಗಿಸುವವರ ಕೊರಗು. ಪದವಿ ಕಲಿಕೆ ಜತೆಗೆ ಉದ್ಯೋಗಗಳು ಬೇಡುವ ಮೃದು ಕೌಶಲಗಳನ್ನು ಬೆಳೆಸಿಕೊಳ್ಳುವುದು ಇಂದಿನ ತುರ್ತಾಗಿದೆ. ಈ ಬೇಡಿಕೆ ಪೂರೈಸಲು “ನಿಶಿಂಗ್ ಸ್ಕೂಲ್’ಗಳು ತಲೆಯೆತ್ತಿರುವುದು ಉದ್ಯಮ ರಂಗ ಬೇಡುವ ವಿಶೇಷ ಕೌಶಲಗಳನ್ನು ಬೆಳೆಸುವು ದಕ್ಕಾಗಿಯೇ ಆಗಿದೆ. ವಿವಿಧ ಭಾಷೆಗಳಲ್ಲಿ ಮಾತನಾಡುವ ಕಲೆ, ಆಯಾ ಗ್ರಾಹಕರ ಮಾತನಾಡುವ ಉಚ್ಛಾರಣೆ ವಿಧಾನ, ಗ್ರಾಹಕರೊಂದಿಗೆ ಒಡನಾಡುವ ವಿಧಾನ ಮೊದಲಾದುವು ಈ ಸ್ಕೂಲುಗಳು ಕಲಿಸುವ ಕೌಶಲಗಳು.
ಇಂದಿನದು ಕೌಶಲಗಳನ್ನು ಬೇಡುವ ಕಾಲ. ಇದನ್ನು ಗಮನದಲ್ಲಿಟ್ಟು ಹೆತ್ತವರು ತಮ್ಮ ಮಕ್ಕಳಿಗೆ ಮುಂದಿನ ಕಲಿಕೆ ಬಗ್ಗೆ ಮಾರ್ಗದರ್ಶನ ನೀಡಬೇಕು. ಬರೇ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಕೆಲಸ ಪಡೆಯುವ ಕಾಲ ಮುಗಿದಿದೆ. ಈಗ ಏನಿದ್ದರೂ ಅಭ್ಯರ್ಥಿಯ ಕೌಶಲಗಳ ಆಧಾರದಲ್ಲಿ ನೇಮಕಾತಿ ನಡೆಯುತ್ತದೆ. ಆದ್ದರಿಂದ ಕಲಿಕೆಯ ಜತೆಗೆ ಸಕಾರಾತ್ಮಕ ಮನೋಧರ್ಮ, ಮಾತುಗಾರಿಕೆ, ಮುಂದಾಳುತನ, ಕ್ರೀಡಾ ಮನೋಭಾವ, ಗೆಲ್ಲುವ ಹುಮ್ಮಸ್ಸು ಮೊದಲಾದ ಅತೀ ಅಗತ್ಯದ ಕೌಶಲಗಳತ್ತ ಹೆತ್ತವರು ತಮ್ಮ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು.
ಡಾ| ಕೊಳ್ಚಪ್ಪೆ ಗೋವಿಂದ ಭಟ್
ಲೇಖಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.