ನಿಮ್ಮ ಇಂಟರ್ನೆಟ್ ಸ್ಲೋನಾ..? ಹಾಗಾದ್ರೆ ಹೀಗೆ ಮಾಡಿ
ಮಿಥುನ್ ಪಿಜಿ, Jul 7, 2020, 9:49 PM IST
ಇಂಟರ್ ನೆಟ್ ಎಂಬುದು ಇಂದಿನ ದಿನಗಳಲ್ಲಿ ಬಹಳ ಅತ್ಯಗತ್ಯವಾದದ್ದು. ಯಾವುದೇ ರೀತಿಯ ಮಾಹಿತಿ ಪಡೆಯಲೂ ಕೂಡ ಇಂಟರ್ ನೆಟ್ ನ್ನು ಅವಲಂಬಿಸಿರುತ್ತೇವೆ.
ಕೋವಿಡ್ -19 ಕಾಲದಲ್ಲೂ ಅನೇಕರು ಮನೆಯಿಂದಲೇ ತಮ್ಮ ಕೆಲಸ ಕಾರ್ಯಗಳನ್ನು ನಿಭಾಯಿಸುತ್ತಿದ್ದಾರೆ.
ಕೆಲಸಕ್ಕಾಗಿ ಮಾತ್ರವಲ್ಲದೆ ದೈನಂದಿನ ಸುದ್ದಿ ತಿಳಿಯಲು, ಸಾಮಾಜಿಕ ಜಾಲತಾಣಗಳ ಬಳಕೆಗೆ, ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಇಂಟರ್ ನೆಟ್ ಎಂಬುದು ಅಪತ್ಭಾಂಧವವಾಗಿದೆ. ಅದಾಗ್ಯೂ ಕೆಲವೊಮ್ಮೆ ಅಂತರ್ಜಾಲ ನಮಗೆ ಕೈಕೊಡುತ್ತದೆ. ಅದು ಕೂಡ ಅತೀ ಮುಖ್ಯ ಕೆಲಸಗಳಿರುವಾಗ.
ಹೀಗಾಗಿ ಇಂಟರ್ ನೆಟ್ ಸ್ಲೋ ಆದಾಗ ಅನುಸರಿಸಬೇಕಾದ ಮಾರ್ಗಗಳಾವುವು? ಉಪಾಯಗಳೇನು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.
ಮೊದಲಿಗೆ speedtest.net ನಲ್ಲಿ ನಿಮ್ಮ ಅಂತರ್ಜಾಲದ ವೇಗ ಎಷ್ಟಿದೆ ಎಂಬುದು ಅರಿತುಕೊಳ್ಳಿ. ಇಂಟರ್ ನೆಟ್ ತುಂಬಾ ಸ್ಲೋ ಇದ್ದಾಗ ಅಥವಾ ಪದೇ ಪದೇ ಧೀರ್ಘ ಅವಧಿಯಲ್ಲಿ ಬಫರಿಂಗ್ ಆದಾಗ ನಮ್ಮ ಕೋಪ, ಉದ್ವೇಗ ಹೆಚ್ಚುವುದು ಸಾಮಾನ್ಯ. ಈ ಸಮಯದಲ್ಲಿ ವೀಡಿಯೊ ಕರೆ ಅಥವಾ ಆನ್‌ಲೈನ್ ಪೇಜ್‌ಗಳನ್ನು ಡೌನ್‌ಲೋಡ್ ಮಾಡಲು ಕೂಡ ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ವಿಧಾನ ಅನುಸರಿಸಿ.
1) ನಿಮ್ಮ ವೈಫೈ ರೂಟರ್ ಅನ್ನು ಯಾವ ಸ್ಥಳದಲ್ಲಿ ಇಟ್ಟಿದ್ದೀರಿ ಅನ್ನುವುದು ಬಹಳ ಮುಖ್ಯ. ಅಂದರೇ ನೀವು ಕೆಲಸ ಮಾಡುವ ಸ್ಥಳದಲ್ಲಿಯೇ ರೂಟರ್ ಇರಬೇಕು. ನೀವು ಒಂದು ಕಡೆ, ರೂಟರ್ ಇನ್ನೊಂದೆಡೆ ಇದ್ದರೆ ಅಥವಾ ರೂಟರ್ ಗೆ ಅಡ್ಡಲಾಗಿ ಗೋಡೆ ಮತ್ತೀತರ ಅಡೆತಡೆಗಳಿದ್ದರೆ ಸಿಗ್ನಲ್ ಕಡಿಮೆ ಪ್ರಮಾಣದಲ್ಲಿ ಸಿಗುವುದು. ಅದ್ದರಿಂದ ರೂಟರ್ ಅನ್ನು ನೀವು ಕೆಲಸ ಮಾಡುವ ಟೇಬಲ್ ಅಥವಾ ಸಿಗ್ನಲ್ ಉತ್ತಮವಾಗಿ ಸಿಗುವ ಕಡೆ ಇಡುವುದು ಸೂಕ್ತ.
2) ಸಾರ್ವಜನಿಕ ವೈಫೈ ಸಾಮಾನ್ಯವಾಗಿ ವೇಗ ಹೊಂದಿರುವುದಿಲ್ಲ. ಮಾತ್ರವಲ್ಲದೆ ಒಂದಕ್ಕಿಂತ ಹೆಚ್ಚು ಡಿವೈಸ್ ಗಳಿಗೆ ವೈಫೈ ಸಂಪರ್ಕಗೊಂಡಿದ್ದರೇ ಇಂಟರ್ ನೆಟ್ ನಿಧಾನವಾಗುತ್ತದೆ. ಮಾತ್ರವಲ್ಲದೆ ನಿಮ್ಮ ಪಿಸಿ ಅಥವಾ ಲ್ಯಾಪ್ ಟಾಪ್‌ನಲ್ಲಿ ನೆಟ್‌ಫ್ಲಿಕ್ಸ್ ಅಥವಾ ಯೂಟ್ಯೂಬ್‌ನಂತಹ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಸಾಕಷ್ಟು ಬ್ಯಾಂಡ್‌ವಿಡ್ತ್ ಅನ್ನು ಬಳಸುತ್ತವೆ. ಅತ್ಯಂತ ಮುಖ್ಯವಾದ ಕೆಲಸಗಳಿರುವಾಗ ಇವುಗಳನ್ನು ಬಳಸಲೇಬಾರದು.
3) ನಿಮ್ಮ ವೈಫೈ ಪಾಸ್ ವರ್ಡ್ ಅಥವಾ ಹಾಟ್ ಸ್ಪಾಟ್ ಪಾಸ್ ವರ್ಡ್‌ಗಳನ್ನು ಅಗಿಂದ್ದಾಗೆ ಬದಲಾಯಿಸುತ್ತಿರಬೇಕು. ಇದರಿಂದ ಇತರೆ ಅನ್ಯ ಡಿವೈಸ್‌ಗಳಿಗೆ ಇಂಟರ್‌ನೆಟ್ ಕನೆಕ್ಟ್ ಆಗುವುದು ತಪ್ಪುತ್ತದೆ. ಅತೀ ಕ್ಲಿಷ್ಟಕರ ಪಾಸ್‌ವರ್ಡ್‌ಗಳನ್ನು ಹೊಂದಿಸುವುದು ಇನ್ನು ಉತ್ತಮ.
4) ಮೋಡೆಮ್ ಅಥವಾ ರೂಟರ್ ಕನೆಕ್ಟರ್ ಗಳು ಸಡಿಲವಾಗಿದ್ದರೆ ಇಂಟರ್‌ನೆಟ್ ನಿಧಾನವಾಗಲಿದೆ. ಇದರಿಂದಾಗಿ ನಿಮ್ಮ ಎಲ್ಲಾ ಕೇಬಲ್‌ಗಳು ಉತ್ತಮ ಸ್ಥಿತಿಯಲ್ಲಿವೆಯೇ ಮತ್ತು ಸರಿಯಾಗಿ ಸಂಪರ್ಕ ಹೊಂದಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಅವಶ್ಯಕ. ಅಗತ್ಯ ಸಂದರ್ಭದಲ್ಲಿ ಮಾತ್ರ ರೂಟರ್ ಅನ್ನು ಸ್ವಿಚ್ ಆನ್ ಮಾಡುವುದು ಒಳಿತು. ಕಂಪ್ಯೂಟರ್ ಮಾದರಿಯಲ್ಲೇ ರೂಟರ್ ಗಳಿಗೂ ಕೆಲ ಗಂಟೆಗಳ ಕಾಲ ಬ್ರೇಕ್ ನೀಡುವುದು ಉತ್ತಮ.
5) ಕೆಲವೊಮ್ಮೆ ಅತೀ ಮುಖ್ಯ ಕೆಲಸ ಮಾಡುತ್ತಿರುವಾಗ ಒಮ್ಮಿಂದೊಮ್ಮೆಲೆ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಇದು ಆ ಕ್ಷಣಕ್ಕೆ ಮಾನಸಿಕ ಹಿಂಸೆ ನೀಡುವುದು ಮಾತ್ರವಲ್ಲದೆ ಇಂಟರ್ ನೆಟ್ ನಿಧಾನವಾಗಲು ಕಾರಣವಾಗುತ್ತದೆ. ಆದ್ದರಿಂದ ಆ್ಯಡ್ ಬ್ಲಾಕಿಂಗ್ ಪ್ಲಗ್ಗೀನ್ ಅಳವಡಿಸಿಕೊಂಡು, ಅಟೋ ಪ್ಲೇ ಆಗುವ ವಿಡಿಯೋ ಜಾಹೀರಾತುಗಳನ್ನು ತಡೆಗಟ್ಟಬಹುದು.
6) ಗೂಗಲ್ ಅಥವಾ ಇತರ ಬ್ರೌಸರ್ ನಲ್ಲಿ ಹಲವಾರು ಟ್ಯಾಬ್ ಗಳನ್ನು ಓಪನ್ ಮಾಡಿಡುವುದು ಕೂಡ ಇಂಟರ್ ನೆಟ್ ಸ್ಲೋ ಆಗಲು ಪ್ರಮುಖ ಕಾರಣ. ಆದ್ದರಿಂದ ಅಗತ್ಯವಿದ್ದಷ್ಟು ಮಾತ್ರ ಟ್ಯಾಬ್ ಗಳನ್ನು ಬಳಸಿ.
7) ಆ್ಯಂಟಿ ವೈರಸ್ ಅಥವಾ ಮಾಲ್ವೇರ್ ಸ್ಕ್ಯಾನರ್ ನಿಮ್ಮ ಕಂಪ್ಯೂಟರ್ ಗೆ ಅಳವಡಿಸಿಕೊಂಡಿರುವುದು ಅತ್ಯಗತ್ಯ. ಎಕೆಂದರೇ ಮಾಲ್ವೇರ್ ಗಳು ಮೊದಲು ದಾಳಿ ಮಾಡುವುದೇ ಇಂಟರ್ ನೆಟ್ ಸ್ಪೀಡಿನ ಮೇಲೆ. ಮಾಲ್ವೇರ್ ಸ್ಕ್ಯಾನರ್ ಅಳವಡಿಸುವುದರಿಂದ ಪದೇ ಪದೇ ‘ವಿಂಡೋಸ್ ನಾಟ್ ವರ್ಕಿಂಗ್‘ ಎಂದು ಕಾಣಿಸಿಕೊಳ್ಳುವುದು ತಪ್ಪುತ್ತದೆ.
8) ಕೆಲವೊಮ್ಮೆ ಇಂಟರ್ ನೆಟ್ ಪ್ರವೈಡರ್ ಗಳು ಸ್ಲೋ ಕನೆಕಕ್ಷನ್ ಅನ್ನು ನೀಡಿರುತ್ತಾರೆ. ಈ ಸಮಸ್ಯೆ ಧೀರ್ಘಕಾಲದವರೆಗೂ ಮುಂದುವರೆದರೆ ಬೇರೆ ನೆಟ್ ವರ್ಕ್ ಅಳವಡಿಸುವುದು ಸೂಕ್ತ.
9) ನಿಮ್ಮ ಕಂಪ್ಯೂಟರ್ ನಲ್ಲಿ ಯಾವುದೇ ಪ್ರೋಗ್ರಾಂ ಕೂಡ ಅಟೋ ಅಪ್ ಡೇಟ್ ಅಗುವಂತಿರಬಾರದು. ಇದರಿಂದ ಇಂಟರ್ ನೆಟ್ ಕನೆಕ್ಟ್ ಅದಾಗಲೆಲ್ಲ ಅಪ್ ಡೇ್ಟ್ ಆಗುವುದು ತಪ್ಪುತ್ತದೆ. ಅದರ ಜೊತೆಗೆ ಹೆಚ್ಚು ಹೆಚ್ಚು ಸಾಫ್ಟ್ ವೇರ್ ಗಳನ್ನು ತೆರೆದಿಡುವುದು ಕೂಡ ಸೂಕ್ತವಲ್ಲ. ಒಂದು ವೇಳೆ ಇಂಟರ್ ನೆಟ್ ಸ್ಲೋ ಆದಾಗ ಟಾಸ್ಕ್ ಮೆನೇಜರ್ ಗೆ ತೆರಳಿ( cntr+shift+Esc) ಯಾವ ಸಾಫ್ಟ್ ವೇರ್ ಅತೀ ಹೆಚ್ಚು ಪವರ್ ಬಳಸುತ್ತಿದೆ ಎಂಬುದನ್ನು ಗಮನಿಸಬಹುದು.
-ಸಂಗ್ರಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.