ವಿಶ್ವನಾಥ ಧಾಮದ ಸುತ್ತ ಪ್ರವಾಸಿ ಸ್ನೇಹಿ ತಾಣ
Team Udayavani, Nov 20, 2021, 5:55 AM IST
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದಕ್ಕೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿಯವರ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯಾದ “ಕಾಶಿ ವಿಶ್ವನಾಥ ಧಾಮ ಕಾರಿಡಾರ್’ ಲೋಕಾರ್ಪಣೆಗೆ ಸಿದ್ಧವಾಗುತ್ತಿದೆ. ಕಾರಿಡಾರ್ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಉತ್ತರಪ್ರದೇಶ ಚುನಾವಣೆಗೂ ಮುನ್ನ ಅಂದರೆ ಡಿ.13ರಂದು ಮೋದಿ ಅವರೇ ಇದನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಏನಿದು ಕಾರಿಡಾರ್?
ವಾರಾಣಸಿಯ ಗಂಗಾ ನದಿ ತೀರದ ಲಲಿತಾ ಘಾಟ್ ಹಾಗೂ ಕಾಶಿ ವಿಶ್ವನಾಥ ದೇಗುಲದ ಮಂದಿರ್ ಚೌಕ್ ನಡುವೆ ಸಂಪರ್ಕ ಕಲ್ಪಿಸುವ ಕಾರಿಡಾರ್ ಇದಾಗಿದೆ. ಇಲ್ಲಿಗೆ ಬರುವ ಯಾತ್ರಿಗಳಿಗೆ “ಸ್ಮರಣೀಯ ಯಾತ್ರಾ ಅನುಭವ’ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ. ಅವರಿಗೆ ಅನುಕೂಲ ಕಲ್ಪಿಸುವಂಥ ಎಲ್ಲ ವ್ಯವಸ್ಥೆಗಳನ್ನೂ ಇಲ್ಲಿ ಮಾಡಲಾಗಿದೆ.
ಮಂದಿರದ ಸಂಕೀರ್ಣದಲ್ಲಿ ಏನಿರಲಿದೆ?
ಗಂಗಾ ವ್ಯೂವ್ ಕೆಫೆ, ಫುಡ್ ಕೋರ್ಟ್ ಗಳು, ಅಂಗಡಿಗಳು, ಆಧ್ಯಾತ್ಮಿಕ ಗ್ರಂಥಗಳ ಮಳಿಗೆಗಳು, ವಿಐಪಿ ಅತಿಥಿಗೃಹ, ಮುಮುಕ್ಷು ಭವನ, ಗ್ರಂಥಾಲಯಗಳು, ವೈದಿಕ ಕೇಂದ್ರ, ಭೋಗಶಾಲೆ, ಮೂರು ಯಾತ್ರಿ ಸುವಿಧಾ ಕೇಂದ್ರಗಳು, ಶೌಚಾಲಯಗಳು, ಎರಡು ಮ್ಯೂಸಿಯಂಗಳು ಇರಲಿವೆ. ಇವುಗಳನ್ನು ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತಿದೆ.
ಇದನ್ನೂ ಓದಿ:ಆಸ್ಟ್ರಿಯಾದಲ್ಲಿ ಮತ್ತೆ ಜಾರಿಯಾಗಲಿದೆ ಕೋವಿಡ್ ಲಾಕ್‌ಡೌನ್
ಕಾಶಿ ವಿಶ್ವನಾಥ ಧಾಮ್ ಯೋಜನೆ
-ಡಿ.13ರಂದು ಪ್ರಧಾನಿ ಮೋದಿಯಿಂದ ಉದ್ಘಾಟನೆ
-ಲಲಿತಾ ಘಾಟ್‌ನಿಂದ ಮಂದಿರ್ ಚೌಕ್‌ವರೆಗೆ 20-25 ಅಡಿ ವ್ಯಾಪ್ತಿಯ ಕಾರಿಡಾರ್
-ದೇವಾಲಯ ಮತ್ತು ಗಂಗೆ ಘಾಟ್‌ಗೆ ಸಂಪರ್ಕ ಕಲ್ಪಿಸುವ ಪ್ರಾಜೆಕ್ಟ್
-320 ಮೀಟರ್ ಉದ್ದ, 20 ಮೀಟರ್ ಅಗಲದ ವಾಕ್‌ವೆ ಮೂಲಕ ಸಂಪರ್ಕ
-43,000 ಚದರ ಅಡಿ ಪ್ರದೇಶದಲ್ಲಿ ವೈಟ್ ಮಾರ್ಬಲ್ ಬಳಕೆ ಏಕಕಾಲಕ್ಕೆ 2 ಲಕ್ಷ ಮಂದಿ ಸೇರಲು ವ್ಯವಸ್ಥೆ
-ಇಡೀ ಯೋಜನೆಯ ಒಟ್ಟು ವೆಚ್ಚ ಅಂದಾಜು 600 ಕೋಟಿ ರೂ.
ಮುಂದಿನ ತಿಂಗಳು ಪ್ರಧಾನಿ ಮೋದಿ ಈ ಕಾರಿಡಾರ್ ಉದ್ಘಾಟಿಸಲಿದ್ದಾರೆ. ಅಂದು, ದೇಶದ ಎಲ್ಲ ಪ್ರಮುಖ ನದಿಗಳಿಂದ ತಂದ ನೀರಿನ ಮೂಲಕ ಜಲಾಭಿಷೇಕ ಮಾಡಲಾಗುತ್ತದೆ. ಎಲ್ಲ ಜ್ಯೋತಿ ರ್ಲಿಂಗಗಳ ಪ್ರಮುಖ ಅರ್ಚಕರು ಕೂಡ ಇಲ್ಲಿಗೆ ಆಗಮಿಸಲಿದ್ದಾರೆ.
-ಶಶಿ ಕುಮಾರ್,
ಉ.ಪ್ರದೇಶ ಬಿಜೆಪಿ ಸಾಮಾಜಿಕ ಮಾಧ್ಯಮ ಸಹ ಸಂಚಾಲಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.