Toxic To Coolie.. ಇಲ್ಲಿದೆ 2025ರ ಬಹು ನಿರೀಕ್ಷಿತ ಸೌತ್‌ ಇಂಡಿಯಾ ಸಿನಿಮಾಗಳ ಪಟ್ಟಿ


Team Udayavani, Oct 19, 2024, 6:34 PM IST

Toxic To Coolie.. ಇಲ್ಲಿದೆ 2025ರ ಬಹು ನಿರೀಕ್ಷಿತ ಸೌತ್‌ ಇಂಡಿಯಾ ಸಿನಿಮಾಗಳ ಪಟ್ಟಿ

ಕಳೆದ ಕೆಲ ವರ್ಷದಿಂದ ಸೌತ್‌ ಸಿನಿಮಾಗಳು ಮುಟ್ಟಿದೆಲ್ಲ ಚಿನ್ನವಾಗಿ ಕಾಣುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳು ಪ್ಯಾನ್‌ ಇಂಡಿಯಾದಲ್ಲಿ ಮೊಟ್ಟೆಯಿಡುವ ಕೋಳಿಯಂತೆ ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ ಕೋಟಿ ಗಳಿಕೆ ಕಾಣುತ್ತಿದೆ.

ʼಆರ್‌ ಆರ್‌ ಆರ್‌ʼ ,’ಕಾಂತಾರʼನಿಂದ ಶುರುವಾದ ಸೌತ್‌ ಇಂಡಿಯಾ ಸಿನಿಮಾಗಳ ಸಕ್ಸಸ್‌ ಪಯಣ ಇತ್ತೀಚೆಗೆ ಬಂದ ‘ಜೈಲರ್‌ʼ, ʼಮಂಜುಮ್ಮೆಲ್ ಬಾಯ್ಸ್ʼ, ʼಜೈಲರ್‌ʼ ʼಆವೇಶಂʼ, ಪ್ರೇಮಲು ಹೀಗೆ ಸಾಲು ಸಾಲು ಹಿಟ್‌ ಗಳನ್ನು ನೀಡುವವರೆಗೆ ಮುಂದುವರೆದಿದೆ.

2025ರಲ್ಲೂ ಸೌತ್‌ ಇಂಡಿಯಾ ಸಿನಿಮಾಗಳ ಅಬ್ಬರ ಮುಂದುವರೆಯಲಿವೆ. ಮುಂದಿನ ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್‌ ಆಗಲಿದ್ದು, ಶೂಟಿಂಗ್‌ ಹಂತದಲ್ಲೇ ಆ ಸಿನಿಮಾಗಳು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿವೆ. 2025ರಲ್ಲಿ  ತೆರೆಗೆ ಬರಲಿರುವ ಬಹುನಿರೀಕ್ಷಿತ ಸೌತ್‌ ಇಂಡಿಯಾ ಸಿನಿಮಾಗಳ ಪಟ್ಟಿ ಇಲ್ಲಿವೆ..

ಗುಡ್ ಬ್ಯಾಡ್ ಅಗ್ಲಿ ಹಾಗೂ ವಿದಾಮುಯರ್ಚಿ: ಅಧಿಕ್ ರವಿಚಂದ್ರನ್ ನಿರ್ದೇಶನದ ಆಕ್ಷನ್‌ ಥ್ರಿಲ್ಲರ್‘ಗುಡ್ ಬ್ಯಾಡ್ ಅಗ್ಲಿ’(Good Bad Ugly Film) ಸಿನಿಮಾದಲ್ಲಿ ಕಾಲಿವುಡ್ ಸ್ಟಾರ್ ನಟ ಅಜಿತ್ ಕುಮಾರ್ (Ajith Kumar) ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗೆ ಸಿನಿಮಾ ಹೊಸ ಪೋಸ್ಟರ್‌ ರಿಲೀಸ್‌ ಆಗಿದ್ದು, ಇದರಲ್ಲಿ ಅಜಿತ್‌ ತ್ರಿಬಲ್‌ ಶೇಡ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ತ್ರಿಷಾ ಕೃಷ್ಣನ್‌ (Trisha Krishnan) ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಪ್ರಸನ್ನ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2025ರ ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

ಇದಲ್ಲದೆ ಅಜಿತ್‌ ಅವರ ವಿದಾಮುಯರ್ಚಿ (vidaamuyarchi) ಸಿನಿಮಾ ಕೂಡ ಮುಂದಿನ ವರ್ಷವೇ ರಿಲೀಸ್‌ ಆಗಲಿದೆ. ಮಾಗಿಜ್ ತಿರುಮೇನಿ (Magizh Thirumeni) ನಿರ್ದೇಶನದ ಈ ಸಿನಿಮಾದಲ್ಲಿ ತ್ರಿಶಾ ಕೃಷ್ಣನ್, ಅರ್ಜುನ್ ಸರ್ಜಾ ಮತ್ತು ರೆಜಿನಾ ಕಸ್ಸಂದ್ರ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷದ ಸಂಕ್ರಾಂತಿಗೆ ಸಿನಿಮಾ ರಿಲೀಸ್‌ ಆಗಲಿದೆ.

ಕೂಲಿ ಹಾಗೂ ತಲೈವರ್ 169 : ಸೂಪರ್‌ ಸ್ಟಾರ್‌ ರಜಿನಿಕಾಂತ್(Rajinikanth) ಮುಂದಿನ ಬ್ಯಾಕ್‌ ಟು ಬ್ಯಾಕ್‌ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ. ‘ಜೈಲರ್‌ʼ ಬಳಿಕ ʼವೆಟ್ಟೈಯನ್‌ʼ ನಲ್ಲಿ ಕಾಣಿಸಿಕೊಂಡ ರಜಿನಿಕಾಂತ್‌ ಲೋಕೇಶ್‌ ಕನಕರಾಜ್‌ (Lokesh Kanagaraj) ಅವರ ʼಕೂಲಿʼ (Coolie) ಸಿನಿಮಾದಲ್ಲಿ ಮುಂದೆ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ತನ್ನ ಟೀಸರ್‌ನಿಂದ ಸಖತ್‌ ಸದ್ದು ಮಾಡಿರುವ ʼಕೂಲಿʼ ಮುಂದಿನ ವರ್ಷ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಕನ್ನಡದ ಉಪೇಂದ್ರ, ಟಾಲಿವುಡ್‌ ಸ್ಟಾರ್‌ ಅಕ್ಕಿನೇನಿ ನಾಗಾರ್ಜುನ್‌, ಮಾಲಿವುಡ್‌ ಸ್ಟಾರ್‌ ಸೌಬೀನ್‌ ಸಾಹಿರ್‌,  ಹಿರಿಯ ನಟ ಸತ್ಯರಾಜ್‌, ನಟಿ ಶ್ರುತಿ ಹಾಸನ್‌ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ.

ಇದಾದ ಬಳಿಕ ರಜಿನಿಕಾಂತ್‌ ತನ್ನ 169ನೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ʼಜೈಲರ್‌ʼ ನಿರ್ದೇಶಕ ನೆಲ್ಸನ್‌ ದಿಲೀಪ್‌ ಕುಮಾರ್‌ (Nelson Dilipkumar) ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಬರುವುದು ಅಧಿಕೃತವಾಗಿದ್ದು, ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

ಆರ್‌ ಟಿ 75: ಮಾಸ್‌ ಮಹಾರಾಜ ರವಿತೇಜ (Ravi Teja) ಅವರಿಗೆ ದೊಡ್ಡ ಬ್ರೇಕ್‌ ಸಿಗುತ್ತಿಲ್ಲ. ಆದರೂ ಅವರ ಸಿನಿಮಾಗಳು ಬಾಕ್ಸ್‌ ಆಫೀಸ್‌ ನಲ್ಲಿ ಲಾಸ್‌ ಇಲ್ಲದೆ ಬ್ಯುಸಿನೆಸ್‌ ಮಾಡುತ್ತವೆ. ದೊಡ್ಡ ಸಕ್ಸಸ್‌ ಗಾಗಿ ಕಾಯುತ್ತಿರುವ ಅವರು ಮುಂದೆ ನಿರ್ದೇಶಕ ಭಾನು ಭೋಗವರಪು (Bhanu Bhogavarapu) ಅವರೊಂದಿಗೆ 75ನೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಪೋಸ್ಟರ್‌ ರಿಲೀಸ್‌ ಮಾಡಿರುವ ಚಿತ್ರತಂಡ ಕುತೂಹಲ ಹೆಚ್ಚಾಗಿದೆ. 2025ರ ಸಂಕ್ರಾಂತಿಗೆ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆಯಿದೆ.

ದಳಪತಿ 69: ರಾಜಕೀಯ ಅಖಾಡಕ್ಕೆ ಧುಮುಕಿರುವ ದಳಪತಿ ವಿಜಯ್‌ (Thalapathy Vijay)‌, ಚುನಾವಣೆಗೂ ಮುನ್ನ  ಮಾಡಲಿರುವ ಕೊನೆಯ ಸಿನಿಮಾವೆಂದು ಹೇಳಲಾಗುತ್ತಿರುವ ‘Thalapathy 69’  ನಿರೀಕ್ಷೆ ಹೆಚ್ಚಾಗಿಸಿದೆ.

Thalapathy 69’  ಸಿನಿಮಾವನ್ನು ಹೆಚ್. ವಿನೋದ್ (H. Vinoth) ಅವರು ನಿರ್ದೇಶನ ಮಾಡಲಿದ್ದು, ಇತ್ತೀಗಷ್ಟೇ ಸಿನಿಮಾ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ ಆಗಿತ್ತು.

ಈ ಸಿನಿಮಾದಲ್ಲಿ  ಬಾಲಿವುಡ್‌ ನಟ ಬಾಬಿ ಡಿಯೋಲ್ (Bobby Deol), ಪೂಜಾ ಹೆಗ್ಡೆ(Pooja Hegde) ಪ್ರಕಾಶ್‌ ರಾಜ್‌ (Prakash Raj), ಮಮಿತಾ ಬಿಜು (Mamitha Baiju) ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

ದಳಪತಿ ಅವರ 69ನೇ ಸಿನಿಮಾಕ್ಕೆ ಬಂಡವಾಳ ಹಾಕಲಿರುವ ‘ಕೆವಿಎನ್ ಪ್ರೊಡಕ್ಷನ್ಸ್’‌ (Kvn Productions)  ಪೂಜಾ ಹೆಗ್ಡೆ ಅವರ ಪೋಸ್ಟರ್‌ ಹಂಚಿಕೊಂಡು ಪಾತ್ರವರ್ಗವನ್ನು ರಿವೀಲ್‌ ಮಾಡಿದೆ. 2025ರ ಅಕ್ಟೋಬರ್‌ ನಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

ಡೋಂಟ್ ಟ್ರಬಲ್ ದಿ ಟ್ರಬಲ್ (Don’t Trouble The Trouble): ಮಾಲಿವುಡ್ ಸ್ಟಾರ್‌ ಫಾಹದ್‌ ಫಾಸಿಲ್‌ ತೆಲುಗು ಫ್ಯಾಂಟಸಿ ಡ್ರಾಮಾ ಸಿನಿಮಾ ಇದಾಗಿದೆ. ಶಶಾಂಕ್ ಯೆಲೇಟಿ ನಿರ್ದೆಶನದ ಈ ಸಿನಿಮಾದ ಅನೌನ್ಸ್‌ ಆದ ದಿನದಿಂದಲೇ ನಿರೀಕ್ಷೆ ಮೂಡಿಸಿದೆ.

ಮಗುವಿನೊಂದಿಗೆ ಸುತ್ತುವ ಫೋಟೋವೊಂದನ್ನು ಪೋಸ್ಟರ್‌ ಆಗಿ ರಿಲೀಸ್‌ ಮಾಡಿದ್ದು, ಪಾತ್ರವರ್ಗದ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

2025 ರಲ್ಲಿ ತೆಲುಗು, ಮಲಯಾಳಂ, ತಮಿಳು ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

ಇಂಡಿಯನ್‌ -3: ಸೂಪರ್‌ ಸ್ಟಾರ್ ಕಮಲ್‌ ಹಾಸನ್‌ (Kamal Hasan) – ಶಂಕರ್‌ (Shankar) ಕಾಂಬಿನೇಷನ್‌ ನಲ್ಲಿ ಬಂದ ʼಇಂಡಿಯನ್‌ -2ʼ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷೆ ಹುಟ್ಟಿಸಿ ಮಕಾಡೆ ಮಲಗಿತು. ಸಿನಿಮಾದ ಕಥೆ ಔಟ್‌ ಡೇಟೆಡ್‌ ಎನ್ನುವ ಮಾತು ಕೂಡ ಅನೇಕ ಪ್ರೇಕ್ಷಕರಿಂದ ಕೇಳಿಬಂದಿತ್ತು.

ʼಇಂಡಿಯನ್‌ -3ʼ (Indian-3) ಸಿನಿಮಾದ ಮೇಲೆ ಕೂಡ ʼಇಂಡಿಯನ್‌ -2ʼ ಹಾಗೆ ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ʼಇಂಡಿಯನ್‌ -2ʼ ಸಿನಿಮಾದಿಂದ ಉಂಟಾದ ನಷ್ಟವನ್ನು ಪರಿಗಣಿಸಿಕೊಂಡು ನಿರ್ಮಾಪಕರು ʼಇಂಡಿಯನ್‌ -3ʼ ಸಿನಿಮಾವನ್ನು ನೇರವಾಗಿ ಓಟಿಟಿಯಲ್ಲೇ ರಿಲೀಸ್‌ ಮಾಡುವ ಯೋಜನೆಯ ಬಗ್ಗೆ ಆಲೋಚನೆ ಮಾಡಿದ್ದಾರೆ ಎಂದು ವರದಿ ಆಗಿದೆ.

ಈ ಬಗ್ಗೆ ಚಿತ್ರತಂಡದಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 2025ಕ್ಕೆ  ಸಿನಿಮಾ ರಿಲೀಸ್‌ ಆಗಲಿದೆ.

ವಿಶ್ವಂಭರ: ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ”ವಿಶ್ವಂಭರ” (VISHWAMBHARA) ಅನೌನ್ಸ್‌ ಆದ ಸಮಯದಿಂದ ನಿರೀಕ್ಷೆ ಹೆಚ್ಚಿಸಿರುವ ಮತ್ತೊಂದು ಮೆಗಾ ಸಿನಿಮಾ.

ಮಲ್ಲಿಡಿ ವಸಿಷ್ಟ ಕಥೆ ಬರೆದು ನಿರ್ದೇಶಿಸಿರುವ ಈ ಸಿನಿಮಾ ಫ್ಯಾಂಟಸಿ ಕಥೆಯನ್ನೊಳಗೊಳ್ಳಲಿದೆ.  2025 ಜನವರಿ 10 ರಂದು ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ತ್ರಿಶಾ, ಕುನಾಲ್ ಕಪೂರ್, ಮೀನಾಕ್ಷಿ ಚೌಧರಿ ಮತ್ತು ಆಶಿಕಾ ರಂಗನಾಥ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಟಾಕ್ಸಿಕ್:

ಯ‌ಶ್‌(Actor Yash) ‘ಕೆಜಿಎಫ್‌ʼ ಬಳಿಕ ಬಿಗ್‌ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ʼಟಾಕ್ಸಿಕ್‌ʼ (Toxic Movie) ಬಗ್ಗೆ ತುಸು ಹೆಚ್ಚೇ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭಗೊಂಡ ಬಳಿ ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಮುಂಬೈಗೆ ಪಯಣ ಬೆಳೆಸಿದೆ.

ಮಲಯಾಳಿ ನಿರ್ದೇಶಕಿ ಗೀತು ಮೋಹನ್‌ ದಾಸ್‌ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಟಾಕ್ಸಿಕ್‌ ಸಿನಿಮಾಗೆ ಕೆವಿಎನ್‌ ಪ್ರೊಡಕ್ಷನ್ಸ್‌ ಸಂಸ್ಥೆಯ ನಿರ್ಮಾಣವಿದೆ.

ಯಶ್‌, ನಯನತಾರಾ, ಕಿಯಾರಾ ಅಡ್ವಾಣಿ, ಅಕ್ಷಯ್‌ ಒಬೆರಾಯ್‌, ತಣಿಕೆಲ್ಲ ಭರಣಿ, ಕೈಲಿ ಪೌಲ್‌ ಮತ್ತಿತರರು ತಾರಾಗಣದಲ್ಲಿದ್ದಾರೆ. ಕೆಲವು ವಿದೇಶಿ ತಂತ್ರಜ್ಞರು ಚಿತ್ರದ ಭಾಗವಾಗಿದ್ದಾರೆ.

ಮುಂದಿನ ವರ್ಷ ಏ.10 ಕ್ಕೆ ಸಿನಿಮಾ ರಿಲೀಸ್‌ ಆಗಲಿದೆ ಎಂದು ಈಗಾಗಲೇ ಚಿತ್ರತಂಡ ಅನೌನ್ಸ್‌ ಮಾಡಿದೆ.

ಕಾಂತಾರ -1:   

ನಟ – ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ‘ಕಾಂತಾರ’ (Kantara) ಪ್ಯಾನ್‌ ಇಂಡಿಯಾದಲ್ಲಿ ಮೋಡಿ ಮಾಡಿರುವುದು ಗೊತ್ತೇ ಇದೆ.

ಸಿನಿಮಾದ ಪ್ರೀಕ್ವೆಲ್‌ ಬಗ್ಗೆ ದೊಡ್ದದಾದ ನಿರೀಕ್ಷೆ ಇದೆ. ಈಗಾಗಲೇ ಒಂದು ಟೀಸರ್‌ನಿಂದ ಸಖತ್‌ ಸದ್ದು ಮಾಡಿರುವ ʼಕಾಂತಾರ ಚಾಪ್ಟರ್‌-1 (Kantara: Chapter 1) ಪಾತ್ರವರ್ಗದ ಬಗ್ಗೆ ಸಸ್ಪೆನ್ಸ್‌ ಸೃಷ್ಟಿಸಿರುವ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ʼಕಾಂತಾರ ಚಾಪ್ಟರ್-1‌ʼ ಮುಂದಿನ ವರ್ಷದ ಆರಂಭದಲ್ಲಿ ʼಕಾಂತಾರ ಚಾಪ್ಟರ್‌ -1ʼ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.

ಗೇಮ್‌ ಚೇಂಜರ್:‌  ರಾಮ್‌ ಚರಣ್‌ (Ram Charan) ಅಭಿನಯದ , ಶಂಕರ್‌ ನಿರ್ದೇಶನದ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ʼಗೇಮ್‌ ಚೇಂಜರ್‌ʼ (Game Changer) ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ರಿಲೀಸ್‌ ಆಗಲಿದೆ. ವರ್ಷದ ಆರಂಭದಲ್ಲೇ ಸಿನಿಮಾ ತೆರೆಗೆ ಬರಲಿದೆ.

ಕಿಯಾರಾ ಅಡ್ವಾಣಿ, ಅಂಜಲಿ, ಸಮುದ್ರಕನಿ, ಎಸ್‌ಜೆ ಸೂರ್ಯ, ಶ್ರೀಕಾಂತ್, ಸುನಿಲ್ ಮುಂತಾದವರು ನಟಿಸಿದ್ದಾರೆ.

*ಸುಹಾನ್ ಶೇಕ್

ಟಾಪ್ ನ್ಯೂಸ್

Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!

Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!

Parameahwar

Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ

Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ

Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ

Kannada-Replica

ಬೆಳೆ ಕನ್ನಡ: ಉಪಭಾಷೆಗಳು ಉಳಿದರೆ ಸಂಸ್ಕೃತಿಯೂ ಉಳಿಯುತ್ತದೆ…

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇಂದು ಕಿಂಗ್‌ ಸಾಮ್ರಾಜ್ಯದ ಕಥೆ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್‌ ಸಾಮ್ರಾಜ್ಯದ ಕಥೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!

Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!

Parameahwar

Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ

Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ

Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ

Kannada-Replica

ಬೆಳೆ ಕನ್ನಡ: ಉಪಭಾಷೆಗಳು ಉಳಿದರೆ ಸಂಸ್ಕೃತಿಯೂ ಉಳಿಯುತ್ತದೆ…

Chennai: ನೇಮಕಾತಿ ಜಾಹೀರಾತಲ್ಲಿ ವೈವಾಹಿಕ ಮಾನದಂಡ ತೆಗೆಯಲು ಸೂಚನೆ ?

Chennai: ನೇಮಕಾತಿ ಜಾಹೀರಾತಲ್ಲಿ ವೈವಾಹಿಕ ಮಾನದಂಡ ತೆಗೆಯಲು ಸೂಚನೆ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.