ಮೊದಲ ಸಂಭಾವನೆ 10 ರೂ.! ಬ್ಯೂಟಿ ಕ್ವೀನ್ ಜಯಪ್ರದಾ ಟ್ರಾಜಿಡಿ ಲವ್ ಸ್ಟೋರಿ ಗೊತ್ತಾ…
ಜಗತ್ತಿನ ಅತೀ ಸುಂದರಿ ಎಂದು ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಬಣ್ಣಿಸಿದ್ದರು.
ನಾಗೇಂದ್ರ ತ್ರಾಸಿ, Jun 6, 2020, 6:40 PM IST
ಬಾಲಿವುಡ್, ತೆಲುಗು, ಮಲಯಾಳಂ, ಬಂಗಾಳಿ, ಮರಾಠಿ ಅಷ್ಟೇ ಅಲ್ಲ ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಾಕೆ ಈಕೆ. ನಟಸಾರ್ವಭೌಮ ಡಾ.ರಾಜ್ ಕುಮಾರ್ ಜತೆ ಸನಾದಿ ಅಪ್ಪಣ್ಣ, ಕವಿರತ್ನ ಕಾಳಿದಾಸ. ಹುಲಿಯ ಹಾಲಿನ ಮೇವು ಶಬ್ದವೇದಿ, ಸಾಹಸ ಸಿಂಹ ವಿಷ್ಣು ಜತೆ ಈ ಬಂಧನ, ಹಿಮಪಾತ, ಹಬ್ಬ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿಕೊಂಡಿದ್ದವರು ಲಲಿತಾ ರಾಣಿ ಅಲಿಯಾಸ್ ಜಯಪ್ರದಾ!
1980-90ರ ದಶಕದ ಬಹುಬೇಡಿಕೆಯ ಹಾಗೂ ಪ್ರಭಾವಶಾಲಿ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದವರು ಜಯಪ್ರದಾ ಏಳು ಭಾಷೆಯ ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿದ್ದ ಈಕೆ ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾಗಲೇ ಸಿನಿಮಾ ಇಂಡಸ್ಟ್ರಿಯಿಂದ ಹೊರಬಂದು ತೆಲುಗು ದೇಶಂ ಪಕ್ಷಕ್ಕೆ
ಸೇರ್ಪಡೆಗೊಂಡು ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿದ್ದರು. ಆದರೆ ಟಿಡಿಪಿಯಲ್ಲಿನ ಭಿನ್ನಾಭಿಪ್ರಾಯದಿಂದ ಆ ಪಕ್ಷದಿಂದ ಹೊರನಡೆದಿದ್ದರು. ನಂತರ ಸಮಾಜವಾದಿ ಪಕ್ಷ ಸೇರ್ಪಡೆಗೊಂಡು 2004-2014ರವರಗೆ ಉತ್ತರಪ್ರದೇಶದ ರಾಂಪುರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು.
ಮೊತ್ತ ಮೊದಲ ಸಂಭಾವನೆ 10 ರೂಪಾಯಿ!
ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದ್ದ ಜಯಪ್ರದಾ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿಯೇ ಶಾಲಾ ವಾರ್ಷಿಕೋತ್ಸವದಲ್ಲಿ ನೀಡಿದ್ದ ಅದ್ಭುತ ನೃತ್ಯ ಪ್ರದರ್ಶನ ಎಲ್ಲರ ಮನಗೆದ್ದಿತ್ತು. ಈ ವೇಳೆ ಪ್ರೇಕ್ಷಕರರಾಗಿ ಆಗಮಿಸಿದ್ದ ನಿರ್ದೇಶಕರೊಬ್ಬರು(ಕೆಬಿ ತಿಲಕ್) ತನ್ನ ಭೂಮಿ ಕೋಶಂ ಸಿನಿಮಾದಲ್ಲಿ 3 ನಿಮಿಷಗಳ ನೃತ್ಯ ಮಾಡುವಂತೆ ಆಫರ್ ನೀಡಿದ್ದರು. ಆದರೆ ಪುಟ್ಟ ಹುಡುಗಿಯಾಗಿದ್ದ ರಾಣಿ ಹಿಂಜರಿದುಬಿಟ್ಟಿದ್ದಳು, ಕೊನೆಗೆ ಪೋಷಕರ ಒತ್ತಾಯಕ್ಕೆ ಮಣಿದು ಸಿನಿಮಾದಲ್ಲಿ ನೃತ್ಯ ಮಾಡಿದ್ದು, ಅದಕ್ಕಾಗಿ ಆಕೆ ಪಡೆದ ಸಂಭಾವನೆ ಕೇವಲ ಹತ್ತು ರೂಪಾಯಿ. ಈ ಪುಟ್ಟ ಡ್ಯಾನ್ಸ್ ಲಲಿತಾ ರಾಣಿಯ ಬದುಕಿನ ದಿಕ್ಕನ್ನೇ ಬದಲಾಯಿಸಿಬಿಟ್ಟಿತ್ತು. ನಂತರ ಖ್ಯಾತ ನಿರ್ದೇಶಕರುಗಳೇ ತಮ್ಮ ಸಿನಿಮಾಗಳಲ್ಲಿ ನಟಿಸುವಂತೆ ಕ್ಯೂ ನಿಂತುಬಿಟ್ಟಿದ್ದರು. ಇದರ ಪರಿಣಾಮ 1976ರಲ್ಲಿ
ಜಯಪ್ರದಾ ಸ್ಟಾರ್ ನಟಿಯಾಗಲು ಕಾರಣವಾಯಿತು.
ಸ್ಟಾರ್ ನಿರ್ದೇಶಕ ಕೆ.ಬಾಲಚಂದರ್ ಅವರ “ಅಂತುಲೆನಿ ಕಥಾ” ಎಂಬ ಕಪ್ಪು ಬಿಳುಪಿನ ಚಿತ್ರದಲ್ಲಿ ಜಯ ಅವರ ಕಲಾ ಪ್ರತಿಭೆ ಅನಾವರಣಗೊಂಡಿತ್ತು. ಕೆ.ವಿಶ್ವನಾಥ್ ಅವರ ಸಿರಿ ಸಿರಿ ಮುವ್ವ, ಸೀತಾಕಲ್ಯಾಣಂ, ನಿನೈತ್ತಾಲೆ ಇನಿಕ್ಕುಂ, ಹಿಂದಿಯ ಶರಾಬಿ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. 1990ರ ದಶಕದಲ್ಲಿ ಅಮಿತಾಬ್, ಜಿತೇಂದ್ರ ಜತೆ ಜಯಪ್ರದಾ ಹೀರೋಯಿನ್ ಆಗಿ ಮಿಂಚಿದ್ದರು.
ಜಗತ್ತಿನ ಅತೀ ಸುಂದರಿ ಎಂದು ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಬಣ್ಣಿಸಿದ್ದರು. ಬಂಗಾಳಿ ಸಿನಿಮಾದಲ್ಲಿಯೂ ಜಯ ನಟಿಸಿದ್ದರಾದರೂ ಕೂಡಾ ರೇ ಅವರ ಸಿನಿಮಾದಲ್ಲಿ ನಟಿಸಬೇಕೆಂಬ ಜಯಪ್ರದಾ ಅವರ ಕನಸು ನನಸಾಗಲೇ ಇಲ್ಲ!
ಜಯಪ್ರದಾ ಟ್ರಾಜಿಡಿ ಲೈವ್ ಲೈಫ್:
ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದ ಜಯಪ್ರದಾ ಮೇಲೆ ಆದಾಯ ತೆರಿಗೆ ಇಲಾಖೆ ದೃಷ್ಟಿ ಬಿದ್ದಿತ್ತು. ಅಲ್ಲದೇ ದಿಢೀರ್ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿಬಿಟ್ಟಿತ್ತು. ಭಾವನಾತ್ಮಕವಾಗಿ ಕುಗಿಹೋಗಿರುವ ಜತೆಗೆ ಕೆರಿಯರ್ ಮೇಲೂ ಹೊಡೆತ ನೀಡಿತ್ತು. ಸ್ಫುರದ್ರೂಪಿ ಜಯಪ್ರದಾಳನ್ನು ಮದುವೆಯಾಗಲು ತಾಮುಂದು, ನಾಮುಂದು ಎಂದು ಹೇಳುತ್ತಿದ್ದ ಈ ವೇಳೆ ಜಯಪ್ರದಾ ಇಂತಹ ಸಂದರ್ಭದಲ್ಲಿ ಜಯಪ್ರದಾ ನೆರವಿಗೆ ಬಂದ ವ್ಯಕ್ತಿ ಸಿನಿಮಾ ನಿರ್ಮಾಪಕ ಶ್ರೀಕಾಂತ್ ನಹಾತಾ. ಇದೊಂದು ಸಹಾಯ ಇಬ್ಬರನ್ನೂ ಆತ್ಮೀಯ ಸ್ನೇಹಿರತನ್ನಾಗಿಬಿಟ್ಟಿತ್ತು. ನಿರ್ಮಾಪಕ ಶ್ರೀಕಾಂತ್ ಅವರ ಭಾವನಾತ್ಮಕ ಬೆಂಬಲ ಜಯಪ್ರದಾ ಅವರನ್ನು ಪ್ರೀತಿಯ ಸೆಳೆತಕ್ಕೆ ಸಿಲುಕಿಸಿ ಬಿಟ್ಟಿತ್ತು. ಗಾಢ ಪ್ರೇಮ ವಿವಾಹ ಬಂಧನ ಹಂತಕ್ಕೆ ತಲುಪಿಸಿತ್ತು..ಆದರೆ ಶ್ರೀಕಾಂತ್ ಅದಾಗಲೇ
ಮದುವೆಯಾಗಿ ಮೂವರು ಮಕ್ಕಳು ಕೂಡಾ ಇದ್ದರು.
ಕುರುಡು ಪ್ರೀತಿಗೆ ಬಿದ್ದ ಜಯಪ್ರದಾ ಶ್ರೀಕಾಂತ್ ಜತೆಗಿನ ಸಂಬಂಧ ಕಡಿದುಕೊಳ್ಳಲು ಸಿದ್ದವಾಗಿಲ್ಲ. ಮದುವೆಯಾಗಿ, ಮಕ್ಕಳಿದ್ದರೂ ತೊಂದರೆ ಇಲ್ಲ..ಎಂದು ತಮ್ಮ ಪ್ರೇಮ ಕಹಾನಿ ಮುಂದುವರಿಸಿದ್ದರು. ಸಿನಿಮಾ ಇಂಡಸ್ಟ್ರೀಯಲ್ಲಿಯೂ ಇಬ್ಬರ ಪ್ರಣಯ ಪ್ರಸಂಗ ಭರ್ಜರಿಯಾಗಿ ಹರಿದಾಡತೊಡಗಿತ್ತು. ಯಾವ ವಿರೋಧ, ಟೀಕೆಯನ್ನೂ ಲೆಕ್ಕಿಸದ ಜಯಾ ಮತ್ತು ಶ್ರೀಕಾಂತ್ ಯಾರೂ ಊಹಿಸದ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು.!ಅಂತೂ ಜಯಾ ಮತ್ತು ಶ್ರೀಕಾಂತ್ 1986ರಲ್ಲಿ ವಿವಾಹವಾಗಿದ್ದರು. ಏತನ್ಮಧ್ಯೆ ಎರಡನೇ ವಿವಾಹ ಹೊಸ ವಿಷಯವಾಗಿಲ್ಲ ಸತ್ಯ. ಆದರೆ ಶ್ರೀಕಾಂತ್, ಜಯಾ ಶಾಕಿಂಗ್ ಗೆ ಒಳಗಾಗಿದ್ದರು. ಅದಕ್ಕೆ ಕಾರಣ ಶ್ರೀಕಾಂತ್ ಮೊದಲ ಪತ್ನಿಗೆ ವಿವಾಹ ವಿಚ್ಛೇದನ ನೀಡದೇ ಜಯಾಪ್ರದಾ ಅವರನ್ನು ವಿವಾಹವಾಗಿದ್ದು. ಜಯಾ ಮತ್ತು ಶ್ರೀಕಾಂತ್ ದಂಪತಿಗೆ ಮಕ್ಕಳಾಗಿಲ್ಲದ ಹಿನ್ನೆಲೆಯಲ್ಲಿ ಜಯಾಪ್ರದಾ ತನ್ನ ಸಹೋದರಿಯ ಮಗನನ್ನು ದತ್ತು ತೆಗೆದುಕೊಂಡು ಸಾಕಿದ್ದರು.
ಸಿನಿ ಬದುಕಿನಲ್ಲಿ ಸೂಪರ್ ಸ್ಟಾರ್ ಗಳಾದ ಅಮಿತಾಬ್ ಸೇರಿದಂತೆ ಘಟಾನುಘಟಿಗಳ ಜತೆ ನಟಿಸಿದ್ದ ಜಯಪ್ರದಾ ಎನ್ ಟಿ ರಾಮರಾವ್ ಅವರ ಆಹ್ವಾನದ ಮೇರೆಗೆ ತೆಲುಗುದೇಶಂ ಪಕ್ಷ ಸೇರಿದ್ದರು. ನಂತರ ಸಮಾಜವಾದಿ ಪಕ್ಷ ಆ ಬಳಿಕ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದರು. ಪ್ರಸ್ತುತ ಒಂಟಿಯಾಗಿರುವ ಜಯಾಪ್ರದಾ ಅವರು ಲೋಕಲ್ ಟಿವಿ ಶೋ ಜಯಪ್ರದಂನಲ್ಲಿ ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡುವ ಮೂಲಕ ತೆಲುಗು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.