ತಮ್ಮ ಸ್ವಂತ ರಕ್ತವನ್ನು ಬಳಸಿ ನೂರಾರೂ ಸಾಧಕರ ಚಿತ್ರಕಲೆ ಬಿಡಿಸುವ ಡಾ. ಸಂಗಮೇಶ ಬಗಲಿ

ಅಮೇರಿಕಾದಿಂದ ಗೌರವ ಡಾಕ್ಟರೇಟ್ ಪಡೆದ ಚಿತ್ರಕಲಾ ಶಿಕ್ಷಕ ಬಗಲಿ

Team Udayavani, Feb 16, 2022, 8:00 PM IST

ತಮ್ಮ ಸ್ವಂತ ರಕ್ತವನ್ನು ಬಳಸಿ ನೂರಾರೂ ಸಾಧಕರ ಚಿತ್ರಕಲೆ ಬಿಡಿಸುವ ಡಾ. ಸಂಗಮೇಶ ಬಗಲಿ

ರಬಕವಿ-ಬನಹಟ್ಟಿ: ಕಲೆ ಸಾಹಿತ್ಯ, ಸಂಸ್ಕೃತಿ ಎಲ್ಲವುಗಳು ರಕ್ತದಿಂದಲೇ ಬರಬೇಕು ಎಂಬ ನಾನ್ನುಡಿಯಂತೆ ರಬಕವಿ-ಬನಹಟ್ಟಿ ತಾಲೂಕಿನ ಹೊಸೂರ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಡಾ. ಸಂಗಮೇಶ ಬಗಲಿ ತಮ್ಮ ಸ್ವಂತ ರಕ್ತವನ್ನು ಬಳಸಿಕೊಂಡು ನೂರಾರೂ ಸಾಧಕರ ಚಿತ್ರ ಬಿಡಿಸಿದ್ದಾರೆ.

ಜಮಖಂಡಿಯ ನಿವಾಸಿಯಾಗಿರುವ ಇವರು ಸದ್ಯ ರಬಕವಿ-ಬನಹಟ್ಟಿ ತಾಲ್ಲೂಕಿನ ಹೊಸೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರು. ತಮ್ಮ ಮೈ ರಕ್ತವನ್ನು ಬಳಸಿಕೊಂಡು, 350ಕ್ಕೂ ಅಧಿಕ ಸಮಾಜ ಸುಧಾರಕರು, ಸ್ವಾತಂತ್ರ ಹೋರಾಟಗಾರರು ಹಾಗೂ ಮಹಾನ್ ನಾಯಕರ ಅದ್ಭುತ ಚಿತ್ರಗಳನ್ನು ಬಿಡಿಸಿ ಪ್ರತಿಯೊಬ್ಬರಿಂದ ಪ್ರಶಂಸೆಗೆ ಪಾತ್ರರಾಗುವುದರೊಂದಿಗೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದ್ದಾರೆ.

ಚಿತ್ರಕಲೆಯಲ್ಲಿ ಎ. ಎಂ. ಜಿಡಿ., ಎಂ.ಎಫ್.ಎ. ಪದವಿಧರರಾಗಿರುವ ಡಾ. ಸಂಗಮೇಶ ಚಿತ್ರಕಲಾ ಶಿಕ್ಷಕ ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ಚಿತ್ರಕಲೆಯನ್ನು ಅಪ್ಪಿಕೊಂಡಿದ್ದಾರೆ. ೨೦೦೮ರಲ್ಲಿ ಚಿತ್ರಕಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಬಗಲಿಯವರು ತಮ್ಮ ಸುತ್ತಲೀನ ಪರಿಸರವನ್ನೂ ಸಮಗ್ರ ಹಾಗೂ ಸೂಕ್ಮವಾಗಿ ಅವಲೋಕಿಸಿ ತಮ್ಮ ಚಿತ್ರಗಳಲ್ಲಿ ಜೀವ ತುಂಬುತ್ತಾರೆ.

ಜಲವರ್ಣ, ತೈಲವರ್ಣ, ಆಕ್ರೆಲಿಕ್, ವ್ಯಾಕ್ಸ್ ಕಲರನ್ನು ಮಾಧ್ಯಮವನ್ನಾಗಿಸಿಕೊಂಡಿರುವ ಸಂಗಮೇಶ ಅವರಿಗೆ ಚಿಕ್ಕದಿಂನಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಇತ್ತು. ಚಿತ್ರ ಕಲೆಯಲ್ಲಿಯೇ ಮುಂದುವರೆದು ಶಾಲಾ ಶಿಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿದ ಇವರು 2013 ರಿಂದ  ಸ್ವರಕ್ತವನ್ನು ಮಾಧ್ಯಮವನ್ನಾಸಿಕೊಂಡು ಚಿತ್ರಕಲೆ ಬರೆಯಲು ಪ್ರಾರಂಭಿಸಿ 100 ಜನ ಅಂತರರಾಷ್ಟ್ರೀಯ ಸಾಧಕರು ಹಾಗೂ 200 ಜನ ಸ್ವದೇಶದ ಸಾಧಕರ ಚಿತ್ರಗಳನ್ನು ರಚಿಸಿದ್ದಾರೆ.

ವೈದ್ಯರ ಸಲಹೆ ಮೇರೆಗೆ 10 ಎಂ.ಎಲ್ ರಕ್ತವನ್ನು ತೆಗೆದು ರಕ್ತದಿಂದ ಚಿತ್ರಕಲೆಯನ್ನು ಬಿಡಿಸುತ್ತಾರೆ. ನೋಡುಗರಿಗೆ ಚಿತ್ರದಲ್ಲಿನ ಭಾವನೆಗಳು ತಿಳಿಯುವ ರೀತಿಯಲ್ಲಿ ಕಲಾಕೃತಿಗಳು ಪ್ರತಿಯೊಬ್ಬರನ್ನು ಆಕರ್ಷಿಸುತ್ತವೆ.

ರಕ್ತದಿಂದಲೇ ದೇಶಭಕ್ತರ, ಸಾಹಿತಿಗಳ, ಕವಿಗಳ ಸ್ಮರಣೆಗಾಗಿ ತಮ್ಮ ಮೈನಲ್ಲಿನ ರಕ್ತವನ್ನು ತೆಗೆದು ಚಿತ್ರಗಳನ್ನು ರಚಿಸಿದ್ದಾರೆ. ‘ಬಗಲಿಯವರ ಈ ಸಾಧನಗೆ 2017ರಲ್ಲಿ ಅಮೆರಿಕದ ವಿಶ್ವವಿಧ್ಯಾಲಯವಂದು ಗೌರವ ಡಾಕ್ಟರೆಟ್ ಪ್ರಶಸ್ತಿ ನೀಡಿ ಗೌರವಿಸಿದೆ. ಜೊತೆಗೆ ಇಂಡಿಯಾಬುಕ್ ಆಫ್ ರೆಕಾರ್ಡದಲ್ಲಿ ಸ್ಥಾನ, 2019 ರಲ್ಲಿ ಜಿನಿಯಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಕೀರ್ತಿ ಅವರದು. ತಮ್ಮ ಜಮಖಂಡಿಯ ಮನೆಯಲ್ಲಿಯೇ ಪುಟ್ಟದಾದ ಗ್ಯಾಲರಿ ನಿರ್ಮಿಸಿ ನೋಡುಗರನ್ನು ಆಕರ್ಷಿಸಿದ್ದಾರೆ. ವೃತ್ತಿ ಬದುಕು ಕಟ್ಟಿ ಕೊಟ್ಟರೆ ಪ್ರವೃತ್ತಿ ದೇಶಭಕ್ತಿಯನ್ನು ಹೆಚ್ಚಿಸಿದೆ.

ಇತ್ತೀಚಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜೀಯವರ 150 ನೇ ಜಯಂತಿ ಸಂದರ್ಭದಲ್ಲಿ  ಅವರು ಗಾಂಧೀಜಿಯವರ ಜೀವನ ಚರಿತ್ರೆ ಹಾಗೂ ಅವರ ಸಂದೇಶವನ್ನು ಸಾರುವ ಬೃಹತ್ ಕಲಾಕೃತಿಯನ್ನು ಬಿಡಿಸಿ ಗಮನ ಸೆಳೆದಿದ್ದರು. ಅದರಲ್ಲಿ ಗಾಂಧೀಜಿಯವರ ಹುಟ್ಟಿನಿಂದ ಕೊನೆಯ ದಿನಗಳವರೆಗಿನ ಪ್ರತಿಯೊಂದು ಪ್ರಮುಖ ಘಟ್ಟಗಳನ್ನು ಆಕರ್ಷಕವಾಗಿ ಚಿತ್ರಿಸಿದ್ದಾರೆ. ಈ ಚಿತ್ರಕಲೆ ಅವರ ಜೀವನದ ಜೊತೆ ಅವರ ತತ್ವಗಳನ್ನು ಸಹಿತ ತೋರಿಸುತ್ತದೆ ಎನ್ನುತ್ತಾರೆ ಡಾ. ಬಗಲಿಯವರು.

ಪ್ರದರ್ಶನ : ನವದೆಹಲಿ, ಫರಿದಾಬಾದ, ಬೆಂಗಳೂರು, ರಾಯಚೂರ, ಧಾರವಾಡ, ಕಲಬುರ್ಗಿ, ವಿಜಯಪೂರ, ಬಾಗಲಕೋಟೆ ರಾಯಚೂರ ಸೇರಿದಂತೆ ಅಂದಾಜು 25ಕ್ಕೂ ಹೆಚ್ಚು ಕಡೆ ತಮ್ಮ ಚಿತ್ರಕಲೆಗಳನ್ನು ಪ್ರದರ್ಶನ ಮಾಡಿದ್ದಾರೆ. ಜೊತೆಗೆ ಕೊಪ್ಪಳ, ಬಾಗಲಕೋಟೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ನವರಸಪೂರ ಉತ್ಸವ, ಚಾಲೂಕ್ಯ ಉತ್ಸವಗಳಲ್ಲಿಯೂ ತಮ್ಮ ಕಲೆಯನ್ನು ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

ಪ್ರಶಸ್ತಿ : 2013 ರಲ್ಲಿ ತಾಲ್ಲೂಕು ಸೃಜನಶೀಲ ಶಿಕ್ಷಕ, 2014 ರಲ್ಲಿ ರಾಜ್ಯ ಬಸವ ಶಾಂತಿ ಪ್ರಶಸ್ತಿ, ರಾಷ್ಟ್ರೀಯ ಬಸವ ರತ್ನ, 2015 ರಲ್ಲಿ ಜಿಲ್ಲಾ ರಾಜ್ಯೋತ್ಸವ, 2016ರಲ್ಲಿ ಜಿಲ್ಲಾ ಮಾದರಿ ಶಿಕ್ಷಕ, ಇಂಡಿಯಾ ಬುಕ್ ಆಫ್  ರಿಕಾರ್ಡ್ ರಾಷ್ಟ್ರೀಯ ನೂತನ ದಾಖಲೆ, 2017 ರಲ್ಲಿ ಗೌರವ ಡಾಕ್ಟರೇಟ್ ವರ್ಲ್ಡ್ ರಿಕಾರ್ಡ್ ಯೂನಿವರ್ಸಿಟಿ, ವರ್ಡ ರಿಕಾರ್ಡ ಸ್ಟೇಜ್ ಯೂನಿಯನ್, 2018 ರಲ್ಲಿ ವಲ್ಡ್ ರಿಕಾರ್ಡ್ ಇಂಡಿಯಾ ಪ್ರಶಸ್ತಿ, 2019 ರಲ್ಲಿ ಜಿನಿಯಸ್ ಬುಕ್ ಆಫ್ ರಿಕಾರ್ಡ್ ಸೇರಿದಂತೆ ಅನೇಕ ಗೌರವ ಸನ್ಮಾನಗಳು ದೊರಕಿವೆ.

ಸದ್ಯ ಹೊಸೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ತಮ್ಮದೇ ಆದ ಆರ್ಟ್ ಗ್ಯಾಲರಿಯನ್ನು ನಿರ್ಮಾಣ ಮಾಡಿ ಈ ಭಾಗದ ಮಕ್ಕಳಿಗೆ ಚಿತ್ರಕಲೆ ಪ್ರೇರಣೆಯಾಗುವ ಕಾರ್ಯವನ್ನು ಮಾಡುತ್ತಿದ್ದಾರೆ.  ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಹೊಸ ಪ್ರಯೋಗ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನನಗೆ ವಿಶೇಷ ಗೌರವ. ದೇಶ ಪ್ರೇಮದ ಕುರಿತು ಕೇವಲ ಮಾತಿನಲ್ಲಿ ಹೇಳುವುದರ ಬದಲು ದೇಶಕ್ಕೆ ಪ್ರಾಣ ಕೊಟ್ಟವರಿಗೆ ನನ್ನ ರಕ್ತದ ಒಂದು ಪಾಲು ಹೋಗಲಿ ಎಂದು ನಿರ್ಧರಿಸಿ ಇಂತಹ ಸಾಧಕರ ಚಿತ್ರಗಳನ್ನು ಚಿತ್ರಿಸಿದ್ದೇನೆ.ಡಾ. ಸಂಗಮೇಶ ಬಗಲಿ ಚಿತ್ರಕಲಾ ಶಿಕ್ಷಕರು, ಹೊಸೂರ

ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Rabkavi Banhatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.