UV Fusion: ಸಾಧಕರ ಸ್ಫೂರ್ತಿ ವರುಷಕ್ಕೆ ಮುನ್ನುಡಿಯಾಗಲಿ
Team Udayavani, Jan 13, 2025, 5:30 PM IST
ಯಾವುದೇ ವ್ಯಕ್ತಿ ಕುಳಿತಲ್ಲಿಯೇ ಕುಳಿತು ಇದು ನನ್ನಿಂದ ಸಾಧ್ಯವಿಲ್ಲ ಎಂದರೆ ಯಾವ ಕಾರಣಕ್ಕೂ ಸಾಧ್ಯವಿಲ್ಲ ಅದೇ ವ್ಯಕ್ತಿ ಇದು ನನ್ನಿಂದ ಸಾಧ್ಯವೆಂದು ಮೈಗೂಡವಿ ನಿಂತರೆ ಎಲ್ಲವೂ ಸಾಧ್ಯ. ಈ ಇಡೀ ಜಗತ್ತಿನಲ್ಲಿ ಎಲ್ಲ ಸಾಧಕರು ಕುಂತಲ್ಲಿ ಕುಂತು ಸಾಧನೆ ಮಾಡಿಲ್ಲ ತಮ್ಮ ತಮ್ಮ ಕ್ಷೇತ್ರದಲ್ಲಿ ಶ್ರಮಪಟ್ಟು ಸಾಧನೆ ಮಾಡಿರುತ್ತಾರೆ.
ನಿನ್ನೆಲ್ಲ ಸಾಧನೆಗಳಿಗೆ ನೀನೇ ನಾಯಕ, ನೀನೇ ಖಳನಾಯಕ, ಸಾಧಿಸಬೇಕು ಅಂದುಕೊಂಡು ಕುಳಿತಲ್ಲಿಯೇ ಕಾಲ ಕಳೆಯದೆ,ಇನ್ನೊಬ್ಬರ ಮೇಲೆ ಸಬೂಬು ಹೇಳುತ್ತಾ ಹಣೆಬರಹಕ್ಕೆ ಹೊಣೆ ಮಾಡಿ ಕಾಲಹರಣ ಮಾಡದೆ ಪ್ರಯತ್ನಶೀಲನಾದರೆ ಗೆಲುವು ಲಭಿಸಬಹುದು ಇಲ್ಲವಾದರೆ ಅನುಭವ ಸಿಗಬಹುದು ಅದೇ ಅನುಭವವನ್ನು ಇಟ್ಟುಕೊಂಡು ಮತ್ತೂಮ್ಮೆ ಪ್ರಯತ್ನಿಸಿದರೆ ಫಲ ಗ್ಯಾರಂಟಿ ಆದರೆ ಪ್ರಮಾಣದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಸಹಜ. ಹಾಗಾಗಿ ಹೊಸ ವರ್ಷಕ್ಕೆ ಸಾಧಕರ ಸಾಧನೆಯ ಹಾದಿಯನ್ನು ನಾವೆಲ್ಲರು ಅನುಸರಿಸಬೇಕಿದೆ.
ಏಕಾಏಕಿ ಫಲ ಸಿಗಬೇಕೆಂದರೆ ಅದು ಕಷ್ಟ ಸಾಧ್ಯ. ಅದೆಷ್ಟೋ ಕೈ,ಕಾಲು,ಕಣ್ಣಿಲ್ಲದ ಕ್ರೀಡಾಪಟುಗಳು ಸಾಕಷ್ಟು ಸಾಧನೆ ಮಾಡಿ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಕೀರ್ತಿ ಮೆರೆದಿ¨ªಾರೆ ಅವರಿಗೆ ಸಿಕ್ಕ ಸಾಧನೆ ನಮಗೇಕೆ ಸಿಗಲಾರದು? ಎಂದು ಯೋಚಿಸಿದರೆ ಮೈಮನ ರೋಮಾಂಚನಗೊಳುವುದು.
ಎರಡು ಕೈಗಳಿಲ್ಲದ ಶೀತಲ್ ದೇವಿ ಭುಜಗಳಿಗೆ ಬಾಣವನ್ನೂಡದಿದ್ದರೆ ಬಿಲ್ಲುಗಾರ್ತಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಲು ಸಾಧ್ಯವಾಗುತ್ತಿತ್ತೆ? ಕಾಲಿನ ತೊಂದರೆಯನ್ನು ಅನುಭವಿಸುತ್ತಿದ್ದ ತಮಿಳುನಾಡಿನ ಮರಿಯಪ್ಪನ್ ತಂಗವೇಲು ಎಂಬ ಎತ್ತರಜಿಗಿತಗಾರ ಒಲಿಂಪಿಕ್ಸ್ ನಲ್ಲಿ ಹ್ಯಾಟ್ರಿಕ್ ಪದಕ ಪಡೆದುಕೊಳ್ಳಲು ಸಾಧ್ಯವಾಗುತ್ತಿತೆ? ಎಡಗೈ ಇಲ್ಲದ ಬೆಂಗಳೂರಿನ ಪ್ಯಾರ ಷಟ್ಲ ಬ್ಯಾಡ್ಮಿಂಟನ್ ಆಟಗಾರ ಸುಮಿತ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ ಎಂದರೆ ನಿಜಕ್ಕೂ ಆಶ್ಚರ್ಯಕರ ಅಲ್ಲವೇ.
ಸರಿಯಾಗಿ ಕಣ್ಣು ಕಾಣದ ಶವದ್ ಎಂಬ ಚಿಕ್ಕಮಗಳೂರಿನ ಯುವ ಓಟಗಾರ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ನೆಲದಲ್ಲಿ ಸಾಧನೆ ಮಾಡುತ್ತಾರೆಂದರೆ ನಂಬಲು ಸಾಧ್ಯವೇ?ಸಾಧಿಸಲಾಗಿದೆ. ಹುಟ್ಟುತ್ತಲೇ ಕುರುಡುತನ ಕೇಳದೆಯೇ ಭಗವಂತನಿಂದ ಬಳುವಳಿಯಾಗಿ ಪಡೆದು ಪ್ರತಿಷ್ಟಿತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಲೆನಾಡಿನ ಮನೆ ಮಗಳು ಓಟಗಾರ್ತಿ ರಕ್ಷಿತಾ ರಾಜು ಸಾಧಿಸಿದ್ದಾರೆಂದರೇ ನಮ್ಮಿಂದ ಸಾಧ್ಯವಿಲ್ಲವೇ?, ಪೋಲಿಯೋ ಪೀಡಿತರಾದ ಬೆಂಗಳೂರಿನ ಕ್ರೀಡಾಪಟು ರಾಘವೇಂದ್ರ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ ಇದು ಸಾಧ್ಯ ಅಲ್ಲವೇ?
ಎತ್ತರ ಜಿಗಿತದಲ್ಲಿ ಕರ್ನಾಟಕದ ಮನೆ ಮಗ ಹಾಸನದ ಗಿರೀಶ್ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಪದಕ ಪಡೆದು ಭಾರತ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪಡೆದಿದ್ದಾರೆ ಇದಕ್ಕೆಲ್ಲ ಕಾರಣ ಏನಿರಬಹುದು? ಎಂದು ಯೋಚಿಸಿ ಅದುವೇ ನಾನು ಸಾಧಿಸುತ್ತೇನೆ ಎಂಬ ಅಚಲವಾದ ನಂಬಿಕೆ ಮತ್ತು ಪ್ರಯತ್ನ. ಬಡ ಕುಟುಂಬದಲ್ಲಿ ಜನಿಸಿದ ಅರ್ಜುನ ಹಲಕುರ್ಕಿ ನಮ್ಮ ರಾಜ್ಯದ ಬಾಗಲಕೋಟೆಯ ಯುವಕ ಕಷ್ಟವೆಂದು ಕೈಕಟ್ಟಿ ಕುಳಿತಿದ್ದರೆ ವಿಶ್ವಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಪದಕ ಪಡೆಯಲು ಸಾಧ್ಯವಾಗುತ್ತಿರಲಿಲ್ಲ.
ನಾನು ಗೃಹಿಣಿ ನನಗೆ ಮಕ್ಕಳಾಗಿವೆ ನನಗೆ ಏಕೆ ಕ್ರೀಡೆ ? ಕುಟುಂಬ,ಮಕ್ಕಳು ಇಷ್ಟೇ ಸಾಕು ಎಂದು ಕೈಕಟ್ಟಿ ಕುಳಿತುಕೊಳ್ಳದೆ ಭಾರತದ ಹೆಸರಾಂತ ಮಹಿಳಾ ಬಾಕ್ಸರ್ ಮೇರಿ ಕೋಮ್ ಅಸಾಧ್ಯವಾದ ಸಾಧನೆಯನ್ನು ಮಾಡಿ ಸಾಧಕರ ಸಾಲಿನಲ್ಲಿಲ್ಲವೇ? ಹೌದು ಸ್ನೇಹಿತರೆ ನಮ್ಮಲ್ಲಿಯೇ ಎಲ್ಲವೂ ಇದೆ. ನಾವು ಕಂಡು ಕೊಳ್ಳ ಬೇಕಷ್ಟೇ ನಮ್ಮನ್ನು ನಾವು ಅಧ್ಯಯನ ಮಾಡಿಕೊಂಡಾಗ ಮಾತ್ರ ಇಂಥಹ ಸಾಧನೆಗಳು ಸಾಧ್ಯ. ಕೇವಲ ಕಂಡುಕೊಂಡರೆ ಸಾಲದು ಅದಕ್ಕೆ ಶ್ರಮದ ಜತೆಗೆ ಧನಾತ್ಮಕ ಚಿಂತನೆ ಹಾಗೂ ನಿಸ್ವಾರ್ಥಿ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ.
ಪ್ರಯತ್ನ,ಕಠಿಣ ಶ್ರಮ,ಧನಾತ್ಮಕ ಚಿಂತನೆಯಿಂದ ನಮ್ಮನ್ನು ನಾವು ತೊಡಗಿಸಿ ಕೊಂಡಾಗ ಎಲ್ಲವೂ ಸಾಧ್ಯ ಆಗದು ಎಂದು ಕೈಕಟ್ಟಿ ಕುಳಿತರೆ ಯಾವುದು ಸಾಧ್ಯವಾಗದು ಕೆಚ್ಚೆದೆ ಯೊಂದಿಗೆ ಮುನ್ನುಗ್ಗಬೇಕು ಅಷ್ಟೇ..!. 2025ರ ವರುಷದ ಆರಂಭಕ್ಕು ಮುನ್ನವೇ ಇಂತಹ ಸಾಧಕರ ಸ್ಫೂರ್ತಿ ನಮ್ಮೆಲ್ಲರ ಬದುಕಿಗೆ ಹೊಸ ಆಶಾ ಕಿರಣ ಮೂಡಿಸಲಿ. ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಡಾ| ಸುಧಾಕರ ಜಿ., ಲಕ್ಕವಳ್ಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.