ಆತ್ಮೋದ್ಧಾರದ ಹಾದಿ ತೋರಿದ ಶ್ರೀ ವೇದವ್ಯಾಸರು
ಭಾರತ ಖಂಡದಲ್ಲೇ ಅವತರಿಸಿ ಜ್ಞಾನ ಹಾಗೂ ಬಲಕಾರ್ಯ ವನ್ನು ತೋರಿದ ಮೇರುಶಕ್ತಿ ಶ್ರೀ ವ್ಯಾಸ.
Team Udayavani, Feb 16, 2022, 10:10 AM IST
ಮಹಾಭಾರತದ ಪಾತ್ರಧಾರಿಗಳಾಗಿ ಅದರ ಕರ್ತೃಗಳಾಗಿ ಮೆರೆದ ವ್ಯಾಸರ ಸಾಹಸ ಕಲ್ಪನಾತೀತ. ಕರತಲ ಆಮಲಕದಂತೆ ಸಮಗ್ರ ಭಾರತ ಘಟನೆಯನ್ನು ಮೊದಲೇ ಕಣ್ಮುಂದೆ ನಿಲ್ಲಿಸಿದ ವ್ಯಾಸರ ರಚನ ಕೌಶಲ ಊಹೆಗೂ ನಿಲುಕದು. ಮಹಾಭಾರತ ಕೇವಲ ಐತಿಹಾಸಿಕ ಘಟನೆ ಮಾತ್ರವಲ್ಲ, ಅದಕ್ಕೊಂದು ಅಧ್ಯಾತ್ಮ ಅರ್ಥವಿದೆ. ಅದೊಂದು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವಂತಹುದು.
ಗೌತಮರ ಶಾಪ, ಕಲಿಯ ಪ್ರಭಾವದಿಂದ ಸಜ್ಜನರಲ್ಲಿ ಜ್ಞಾನ ಹ್ರಾಸವಾಗಿ ಅಜ್ಞಾನ ವಿಜೃಂಭಿಸಿ ದಾಗ ತಣ್ತೀಜ್ಞಾನದ ಬೆಳಕಾಗಿ ಬಂದವರೇ ಶ್ರೀ ವೇದವ್ಯಾಸರು. ಬೆಸ್ತರ ಹೆಣ್ಣು ಸತ್ಯವತಿಯಲ್ಲಿ ಅವತರಿಸಿ ಲೋಕಕ್ಕೆಲ್ಲ ಜ್ಞಾನದ ಬೆಳಕನ್ನು ನೀಡಿದ ಭಗವಂತನ ಅವತಾರವೇ ಶ್ರೀ ವ್ಯಾಸ. ವೈವಸ್ವತ ಮನ್ವಂತರದ ಈ 28ನೆಯ ದ್ವಾಪರದಲ್ಲಿ ಭಾರತ ಖಂಡದಲ್ಲೇ ಅವತರಿಸಿ ಜ್ಞಾನ ಹಾಗೂ ಬಲಕಾರ್ಯ ವನ್ನು ತೋರಿದ ಮೇರುಶಕ್ತಿ ಶ್ರೀ ವ್ಯಾಸ.
ವ್ಯಾಸ ಅಂದರೆ ವಿಭಾಗ ಮಾಡಿದವನೆಂದು. ವೇದಗಳನ್ನು ವಿಭಾಗ ಮಾಡಿ ಶಾಖೋಪಶಾಖೆ ಗಳಾಗಿ ವಿಂಗಡಿಸಿ ಅಧ್ಯಯನಕ್ಕೆ ಅನುಕೂಲ ಮಾಡಿದವರೆ ಭಗವದವತಾರಿ ಶ್ರೀ ವೇದವ್ಯಾಸ. ಬದರಿಯಲ್ಲೇ ವಾಸ ಮಾಡಿ ಬಾದರಾಯಣರಾದರೆ ಅಂಬಿಗರ ಹೆಣ್ಣಲ್ಲಿ, ದ್ವೀಪದಲ್ಲಿ ಅವತರಿಸಿದ್ದರಿಂದ ದ್ವೆಪಾಯನರಾದರು.
ಸಮಗ್ರ ವೇದ ರಾಶಿಯನ್ನು ಋಕ್, ಯಜುಸ್, ಸಾಮ ಶಾಖೆಗಳಾಗಿ ವಿಂಗಡಿಸಿ ಅದರ ಪ್ರವರ್ತನೆಗಾಗಿ ಋಕ್ ಶಾಖೆಯನ್ನು ಪೈಲ ಮುನಿಗೂ ಯಜುಸ್ ಶಾಖೆಯಲ್ಲಿ ಕೃಷ್ಣ ಯಜುರ್ವೇದವನ್ನ ವೈಶಂಪಾಯನರಿಗೂ ಶುಕ್ಲ ಯಜುರ್ವೇದವನ್ನ ಸೂರ್ಯದೇವನಿಗೂ ಸಾಮ ಶಾಖೆಯನ್ನು ಜೈಮಿನಿ ಮುನಿಗೂ ಉಪದೇಶಿಸಿದರು. ಸುಮಂತುವನ್ನು ಅಥರ್ವದ ಪ್ರವರ್ತಕನಾಗಿಸಿದರು.
ಸಮಗ್ರ ವೇದರಾಶಿಯನ್ನು ವಿಭಾಗಿಸಿ ಋಕ್ ಶಾಖೆಯನ್ನು 24 ವಿಭಾಗಗಳಾಗಿಯೂ ಯಜುಸ್ ಶಾಖೆಯನ್ನು 101 ಉಪಶಾಖೆಗಳಾಗಿಯೂ ಸಾಮ ಶಾಖೆಯನ್ನು 1,000 ಉಪಶಾಖೆಗಳಾಗಿಯೂ ಅಥರ್ವ ಶಾಖೆಯನ್ನು 12 ವಿಭಾಗವಾಗಿ ವಿಂಗಡಿಸಿ ದರು. ಆದರೆ ನಮ್ಮ ಅಚಾತುರ್ಯದಿಂದ ನಾವಿಂದು ಅವುಗಳಲ್ಲಿ ಬಹುಭಾಗವನ್ನು ಕಳೆದು ಕೊಂಡು ಕೆಲವನ್ನಷ್ಟೇ ಉಳಿಸಿಕೊಂಡಿದ್ದೇವೆ (ಅನಧ್ಯಾಯೇಷು ಅದೀಯಮಾನಾಃ ಪಾಕಶಾ ಸನ ಶಪ್ತಾಃ ಕ್ರಮೇಣವಿನೇಶುಃ ಇತಿ ಚರಣ ವ್ಯೂಹಕಾರಃ). 24 ಋಕ್ ಶಾಖೆಯಲ್ಲಿ ಶಾಕಲ, ಬಾಷ್ಕಲ, ಸಾಂಖ್ಯಾಯನ ಸಂಹಿತೆ ಮಾತ್ರ ಉಳಿದಿದೆ. ಯಜುಸ್ ಶಾಖೆಯಲ್ಲಿ ಕೃಷ್ಣದಲ್ಲಿ ತೈತ್ತೀರಿಯ, ಕಠ ಮತ್ತು ಮೈತ್ರಾಯಣೀಯ ಸಂಹಿತ ಹಾಗೂ ಶುಕ್ಲದಲ್ಲಿ ಕಾಣ್ವ ಮತ್ತು ಮಾಧ್ಯಂದಿನ ಸಂಹಿತೆ ಮಾತ್ರ. ಬಹಳ ನಷ್ಟವಾದುದು ಸಾಮ ಶಾಖೆಯಲ್ಲಿ. 1,000ದಲ್ಲಿ ಇಂದು ಉಳಿದುದು ಕೇವಲ 3 ಗಾನ ಪ್ರಭೇದ ಮಾತ್ರ. ರಾಣಾಯನೀಯ, ಜೈಮಿನೀಯ ಮತ್ತು ಕೌಥುಮ.
ವೇದಾರ್ಥಗಳ ನಿರ್ಣಯಕ್ಕಾಗಿ ವೇದಾಂತ ಸೂತ್ರಗಳೆಂದು ಪ್ರಸಿದ್ಧವಾದ ಬ್ರಹ್ಮಸೂತ್ರಗಳನ್ನು ರಚಿಸಿ ಭಗವಂತನ ಗುಣಮಹಾತೆ¾ಯನ್ನು ಸ್ಪಷ್ಟೀಕರಿಸಿದರು. ಸಜ್ಜನರ ಉದ್ಧಾರಕ್ಕಾಗಿ ಸಮಗ್ರ ಮಹಾಭಾರತದ ರಚನೆಯನ್ನು ಐತಿಹಾಸಿಕ ಭಾರತ ಘಟಿಸುವ ಮೊದಲೇ ರಚಿಸಿ ತಮ್ಮ ಸರ್ವಜ್ಞತ್ವವನ್ನು ಮೆರೆದರು. ಮಹಾಭಾರತದ ಪ್ರತಿಯೊಂದು ಘಟನೆ, ಪಾತ್ರಗಳು, ಸಂಭಾಷಣೆಗಳು ಚಾಚೂ ತಪ್ಪದೆ ಮೊದಲೇ ತಮ್ಮ ಕೃತಿ ಭಾರತದಲ್ಲಿ ತಿಳಿಸಿದ ವ್ಯಾಸರು ಭಗವಂತನ ಅವತಾರವೇ ಎನ್ನುವುದನ್ನು ದೃಢಪಡಿಸಿದರು (ಕೋ ಹ್ಯನ್ಯಃ ಪುಂಡರೀಕಾಕ್ಷಾನ್ಮಹಾಭಾರತ ಕೃದ್ಭವೇತ್). ಭಾರತದ ಪಾತ್ರಧಾರಿಗಳಾಗಿ ಅದರ ಕತೃìಗಳಾಗಿ ಮೆರೆದ ವ್ಯಾಸರ ಸಾಹಸ ಕಲ್ಪನಾತೀತ. ಕರತಲ ಆಮಲಕದಂತೆ ಸಮಗ್ರ ಭಾರತ ಘಟನೆಯನ್ನು ಮೊದಲೇ ಕಣ್ಮುಂದೆ ನಿಲ್ಲಿಸಿದ ವ್ಯಾಸರ ರಚನ ಕೌಶಲ ಊಹೆಗೂ ನಿಲುಕದು. ಮಹಾಭಾರತ ಕೇವಲ ಐತಿಹಾಸಿಕ ಘಟನೆ ಮಾತ್ರವಲ್ಲ, ಅದಕ್ಕೊಂದು ಅಧ್ಯಾತ್ಮ ಅರ್ಥವಿದೆ. ಅದೊಂದು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವಂತಹುದು. ವ್ಯಾಸರಿಂದ ರಚಿಸಲ್ಪಟ್ಟ ಮುಕ್ಕಣ್ಣ ಮಹಾಭಾರತ. ಅದರ ತಣ್ತೀದ ಪ್ರಚಾರಕ್ಕಾಗಿ ವೈಶಂಪಾಯನರನ್ನೇ ನೇಮಿಸಿದರು.
ಅಷ್ಟಾದಶ ಪುರಾಣಗಳನ್ನು ರಚಿಸಿ ತಣ್ತೀ ಜ್ಞಾನದ ರಾಶಿಯನ್ನು ಬೃಹತ್ತಾಗಿಸಿದರು. ಪುರಾಣ, ಭಾರತ, ಪಂಚರಾತ್ರಗಳ ಪ್ರಚಾರಕ್ಕಾಗಿ ರೋಮ ಹರ್ಷಣರನ್ನು ಆದೇಶಿಸಿದರು. ಜೈಮಿನಿ ಮೂಲಕ ಪೂರ್ವ ಮೀಮಾಂಸವನ್ನು ರಚಿಸಿದರು. ದೈವೀ ಮೀಮಾಂಸದ ಆದ್ಯಂತ ಸೂತ್ರಗಳನ್ನ ತಾವೇ ರಚಿಸಿ ಮಧ್ಯ ಭಾಗವನ್ನು ಪೈಲರಿಂದ ರಚಿಸಿದರು. 18ನೆಯದಾದ ಶ್ರೀ ಮದ್ಭಾಗವತ ಮಹಾಪುರಾಣದ ರಚನೆಯನ್ನು ನಾರದರ ಪ್ರಾರ್ಥನೆಯಂತೆ ಸಮಾಧಿ ಭಾಷೆಯಲ್ಲಿ ರಚಿಸಿ ಸಜ್ಜನರಿಗೆ ತಣ್ತೀಜ್ಞಾನದ ಮಹಾಬೆಳಕನ್ನು ಚೆಲ್ಲಿ ಸಂಸಾರದ ಜಂಜಾಟದಿಂದ ಮುಕ್ತರಾಗಿ ಪರತಣ್ತೀದೆಡೆಗೆ ಸಾಗುವ ಮಾರ್ಗವನ್ನು ತೋರಿ ಮಹದುಪಕಾರವನ್ನ ಮಾಡಿದರು.
ಸಾಧನೆಯ ಪಥದಲ್ಲಿ ಮೇಲೇರಿ ಆ ಪರತಣ್ತೀ ವನ್ನು ಹೊಂದಲು ಮಾನವರಿಗೆಲ್ಲ ಸಮಾನ ಅವಕಾಶವಿದೆ. ಆದರೆ ಸಾಧನೆಯ ಮಾರ್ಗಗಳು ಬೇರೆಯಿದೆ. ಅಂತ್ಯಜನಿಗೂ ಮುಕ್ತಿಯ ಮಾರ್ಗವನ್ನು ತೋರಿದವರು ವ್ಯಾಸರು.
ವೇದಜ್ಞಾನದಿಂದ ಮುಕುತಿ ಪಥದಲ್ಲಿ ನಡೆಯಲು ಅಸಾಧ್ಯವಾದವರಿಗೆ ಮಹಾಭಾರತವನ್ನು ರಚಿಸಿ ತನ್ಮೂಲಕ ಸ್ತ್ರೀಯರಿಗೂ ಅಂತ್ಯಜರಿಗೂ ನಾಮಸ್ಮರಣೆ ಮಾತ್ರದಿಂದಲೇ ಮುಕುತಿ ಪಥಕೆ ಸಾಧನವದು ಎಂದು ತಿಳಿಸಿದವರು ಶ್ರೀ ವ್ಯಾಸರು. ಇಂದಿಗೂ ಬದರಿ ಕ್ಷೇತ್ರದಿ ಉಪದೇಶದಲ್ಲಿ ನಿರತರಾಗಿರುವರೆಂದು ಭಾವುಕರ ನಂಬಿಕೆ. ತಣ್ತೀಜ್ಞಾನದ ಮಹಾಬೆಳಕನ್ನ ಚೆಲ್ಲಿ ಆತ್ಮೋದ್ಧಾರದ ದಾರಿಯನ್ನು ತೋರಿದ ವ್ಯಾಸರ ನೆನಪನ್ನ ಮಾಘ ಮಾಸದ ವ್ಯಾಸ ಪೂರ್ಣಿಮೆಯಂದು ಮಾಡುವ ಸಣ್ಣ ಪ್ರಯತ್ನವಿದಷ್ಟೇ.
– ಚಿಪ್ಪಗಿರಿ ನಾಗೇಂದ್ರ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.