ಮನೆಯಲ್ಲೇ ಮಾಡಿ ನೋಡಿ ರುಚಿಕರವಾದ ವೆಜಿಟೆಬಲ್ ಸ್ಪ್ರಿಂಗ್ ರೋಲ್ಸ್
Team Udayavani, Oct 29, 2020, 6:00 PM IST
ಜಗತ್ತಿನ ಅತ್ಯಂತ ಜನಪ್ರಿಯ ಅಡುಗೆ ವಿಧಾನಗಳಲ್ಲಿ ಚೈನೀಸ್ ಫುಡ್ ಗೆ ಮೊದಲ ಸ್ಥಾನ. ಭಾರತದಲ್ಲಂತೂ ತಳ್ಳುಗಾಡಿ,ಹೊಟೇಲ್ ಗಳಲ್ಲೂ ಚೈನೀಸ್ ಫುಡ್ ಗಳ ಕಾರುಬಾರು.ಯಾವ ದೇಶಕ್ಕೆ ಈ ಚೀನೀ ಖಾದ್ಯಗಳು ಪಯಣಿಸುತ್ತವೊ ಆ ದೇಶದವರ ನಾಲಗೆಗೆ ಸರಿಯಾಗಿ ರುಚಿ ಬದಲಾಯಿಸಿಕೊಳ್ಳುವುದೇ ಚೈನೀಸ್ ಫುಡ್ ಪ್ರಚಲಿತವಾಗಲು ಕಾರಣ.
ಇಂಥ ಟೇಸ್ವೀ ಚೀನೀ ಅಡುಗೆಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.ಹಾಗಾದರೆ ಇನ್ನೇಕೆ ತಡ ಸ್ವಾಧಿಷ್ಟಕರವಾಗಿ ವೆಜಿಟೆಬಲ್ ಸ್ಪ್ರಿಂಗ್ ರೋಲ್ಸ್ ಮಾಡುವ ವಿಧಾನವನ್ನು ಓದಿಕೊಂಡು ನಿಮ್ಮ ಮನೆಯಲ್ಲೇ ಇದನ್ನು ಮಾಡಿಕೊಂಡು ಸ್ವಾಧಿಷ್ಟವಾಗಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು
ಮೈದಾ 1/4ಕಪ್, ಕಾನ್‌ಫ್ಲೋರ್ 1 ಕಪ್, ಕಾಳು ಮೆಣಸಿನ ಪುಡಿ ಸ್ವಲ್ಪ, ನೀರು ಕಪ್, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೈದಾ, ಕಾನ್‌ಫ್ಲೋರ್, ಉಪ್ಪು, ಕಾಳು ಮೆಣಸಿನ ಪುಡಿ ಸೇರಿಸಿ ಜರಡಿ ಚೆನ್ನಾಗಿ ಬೆರೆಸಿಕೊಳ್ಳಿ.ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿರಿ.ನಂತರ ದೋಸೆ ಕಾವಲಿ ಬಿಸಿ ಮಾಡಿ.ಒಂದು ಸೌಟು ಕಲಸಿಟ್ಟ ಹಿಟ್ಟು ಹಾಕಿ ತೆಳ್ಳಗೆ ಹರಡಬೇಕು.ಹೀಗೆ ಉಳಿದ ಹಿಟ್ಟಿನಿಂದ ತೆಳ್ಳಗಿನ ದೋಸೆಗಳನ್ನು ತಯಾರಿಸಿ ತೆಗೆದಿಡಿ.
ಹೂರಣಕ್ಕೆ ಬೇಕಾಗುವ ಸಾಮಗ್ರಿ:
ಈರುಳ್ಳಿ, ಕ್ಯಾರೆಟ್, ಕ್ಯಾಬೇಜ್ ತೆಳ್ಳಗೆ ಉದ್ದಕ್ಕೆ ಹೆಚ್ಚಿದ್ದು 1 ಕಪ್, ಈರುಳ್ಳಿ ಹೂ 1/4 ಕಪ್, ಮೊಳಕೆ ಬರಿಸಿದ ಹೆಸ್ರು 1/2 ಕಪ್, ಸೋಯಾ ಸಾಸ್ 2ಚಮಚ, ಬೆಳ್ಳುಳ್ಳಿ 2 ಚಮಚ, ಎಣ್ಣೆ 1 ಚಮಚ,ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ , ಬೆಳ್ಳುಳ್ಳಿ ಸೇರಿಸಿ ಕೈಯಾಡಿಸಿ. ಸೋಯಾ ಸಾಸ್ ಸೇರಿಸಿ ಕ್ಯಾರೆಟ್, ಕ್ಯಾಬೇಜ್, ಹೆಸ್ರು, ಈರುಳ್ಳಿ ಹೂ, ಸೇರಿಸಿ. ಉಪ್ಪು ಹಾಕಿ ಅರ್ಧ ನಿಮಿಷ ಬೇಯಿಸಿರಿ.
ಸ್ಟ್ರಿಂಗ್ ರೋಲ್ಸ್ ತಯಾರಿಸುವ ವಿಧಾನ
ತಯಾರಿಸಿಟ್ಟ ದೋಸೆಯನ್ನು ಅಗಲದ ತಟ್ಟೆಯ ಮೇಲೆ ಹರಡಿ. ದೋಸೆಯ ಕೆಳಭಾಗದಲ್ಲಿ ತರಕಾರಿ ಹೂರಣವಿಟ್ಟು ಕೆಳಗಿನ ಭಾಗವನ್ನು ಮಿಶ್ರಣ ಮುಚ್ಚುವಂತೆ ಮಡಚಿ. ಅನಂತರ ಎಡ-ಬಲಭಾಗದ ದೋಸೆಯನ್ನು ಮಡಚಿ. ಈಗ ಇಡೀ ದೋಸೆಯನ್ನು ಸುರುಳಿ ಸುತ್ತಿ. ಹೀಗೆ ಮಿಕ್ಕ ದೋಸೆ ಮತ್ತು ತರಕಾರಿ ಮಿಶ್ರಣದಿಂದ ಸ್ಪ್ರಿಂಗ್ ರೋಲ್ಸ್ ತಯಾರಿಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸ್ಪ್ರಿಂಗ್ ರೋಲ್ಸ್ ಗಳನ್ನು ಗರಿ – ಗರಿಯಾಗಿ ಕರಿದು ತೆಗೆಯಿರಿ. ಸಾಸ್‌ನೊಂದಿಗೆ ರುಚಿಕರವಾದ ವೆಜಿಟೆಬಲ್ ಸ್ಪ್ರಿಂಗ್ ರೋಲ್ಸ್ ಸವಿಯಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…
Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?
UV Fusion: ಮಾನವನ ಸ್ವಾರ್ಥ ವಿನಾಶಕ್ಕೆ ಕಾರಣವಾಗುತ್ತಿದೆಯೇ?
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
MUST WATCH
ಹೊಸ ಸೇರ್ಪಡೆ
Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.