ರುಚಿ, ರುಚಿಯಾದ ಸೋಯಾ ಚಿಲ್ಲಿ…ಸರಳ ವಿಧಾನದ ರೆಸಿಪಿ ನಿಮಗಾಗಿ…
ಶ್ರೀರಾಮ್ ನಾಯಕ್, Sep 30, 2022, 5:40 PM IST
ಇಂದು ಎಲ್ಲರೂ ಆಹಾರದಲ್ಲಿ ವೈವಿಧ್ಯತೆಯನ್ನು ಬಯಸುತ್ತಾರೆ. ಅದರಲ್ಲೂ ನಗರ ಪ್ರದೇಶದಲ್ಲಿರುವವರಂತೂ ಪ್ರತೀ ದಿನ ಅಲ್ಲದಿದ್ದರೂ ವೀಕೆಂಡ್‌ನಲ್ಲಂತೂ ವೈವಿಧ್ಯಮಯ ಆಹಾರಗಳಿಗೆ ತಮ್ಮ ಆಧ್ಯತೆಯನ್ನು ನೀಡುತ್ತಿದ್ದಾರೆ. ಹಾಗಿದ್ದರೆ ಈ ವೀಕೆಂಡ್‌ಗೆ ಮನೆಯಲ್ಲೇ ಕುಳಿತು ಚೈನೀಸ್ ಫುಡ್ ತಿನ್ನಬೇಕು ಎಂಬ ಆಸೆ ನಿಮಗಿದ್ದರೆ ಸೋಯಾ ಚಿಲ್ಲಿ ತಯಾರಿಸಿ ನೋಡಿ, ಇದು ತುಂಬಾ ಸಿಂಪಲ್.
ಸಹಜವಾಗಿ ಸೋಯಾಬೀನ್ ಎಲ್ಲರಿಗೂ ಇಷ್ಟವಾಗುತ್ತೆ. ತಿನ್ನಲು ಸ್ವಲ್ಪ ಮಟ್ಟಿಗೆ ಚಿಕನ್ ರೀತಿ ಅನಿಸುತ್ತೆ. ನಾಲಿಗೆಗೂ ಹೆಚ್ಚು ರುಚಿ ಕೊಡುವ ಸೋಯಾಬೀನ್ ನಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೋಯಾಬೀನ್ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದೆ.ಇನ್ನು ಸೋಯಾ ಬೀನ್ ನಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ.
ಹಾಗಾದರೆ ಇನ್ನೇಕೆ ತಡ ಸ್ವಾದಿಷ್ಟಕರವಾಗಿ “ಸೋಯಾ ಚಿಲ್ಲಿ” ಮಾಡುವ ವಿಧಾನವನ್ನು ಓದಿ… ಮನೆಯಲ್ಲೇ ಇದನ್ನು ಮಾಡಿಕೊಂಡು ಸ್ವಾದಿಷ್ಟವಾಗಿ ಸವಿಯಿರಿ…
ಬೇಕಾಗುವ ಸಾಮಗ್ರಿಗಳು
ಸೋಯಾ ಚಂಕ್ಸ್(ಸೋಯಾ ಬೀನ್)- 2ಕಪ್, ಮೈದಾ- 3 ಚಮಚ, ಕಾನ್ ಫ್ಲೋರ್ -2ಚಮಚ, ಕರಿಮೆಣಸಿನ ಪುಡಿ(ಪೆಪ್ಪರ್)-1/4 ಟೀಸ್ಪೂನ್, ಅಚ್ಚ ಖಾರದ ಪುಡಿ-2ಚಮಚ, ಎಣ್ಣೆ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ-2ಚಮಚ, ಸಣ್ಣಗೆ ಹೆಚ್ಚಿದ ಶುಂಠಿ-ಸ್ವಲ್ಪ,ಹಸಿ ಮೆಣಸು-2, ಈರುಳ್ಳಿ -2, ದೊಣ್ಣೆ ಮೆಣಸು(ಕ್ಯಾಪ್ಸಿಕಂ )-ಸಣ್ಣದು 1, ಸೋಯಾ ಸಾಸ್-2ಚಮಚ, ಟೊಮೆಟೋ ಸಾಸ್-3ಚಮಚ, ರೆಡ್ ಚಿಲ್ಲಿ ಸಾಸ್-2ಚಮಚ, ವಿನೆಗರ್ ಸ್ವಲ್ಪ, ಸ್ಪ್ರಿಂಗ್ ಈರುಳ್ಳಿ (ಅಲಂಕಾರಕ್ಕೆ), ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
– ಮೊದಲಿಗೆ, ಒಂದು ಪಾತ್ರೆಗೆ 3 ಕಪ್ ನೀರನ್ನು ಹಾಕಿ ಅದಕ್ಕೆ ಅರ್ಧ ಟೀಸ್ಪೂನ್ ಉಪ್ಪು ಸೇರಿಸಿರಿ.
– ಈಗ ಅದಕ್ಕೆ 2 ಕಪ್ ಸೋಯಾ ಚಂಕ್ಸ್(ಸೋಯಾ ಬೀನ್) ಹಾಕಿ ಸರಿಯಾಗಿ ಮಿಕ್ಸ್ ಮಾಡಿರಿ.
– ಸುಮಾರು 3ರಿಂದ 5ನಿಮಿಷಗಳ ಕಾಲ ಬೇಯಿಸಿರಿ.
– ನಂತರ ಅದರಲ್ಲಿದ್ದ ನೀರನ್ನು ತೆಗೆದು ಸರಿಯಾಗಿ ಹಿಂಡಿ ಒಂದು ಪಾತ್ರೆಗೆ ಹಾಕಿರಿ.
– ತದನಂತರ ಅದಕ್ಕೆ ಮೈದಾ, ಕಾನ್ ಫ್ಲೋರ್, ಕರಿಮೆಣಸಿನ ಪುಡಿ, ಅಚ್ಚ ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇಟ್ಟುಕೊಳ್ಳಿ .
– ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದನಂತರ ಮಾಡಿಟ್ಟ ಸೋಯಾ ಚಂಕ್ಸ್ ಗಳನ್ನು ಹಾಕಿ ಸರಿಯಾಗಿ ಫ್ರೈ ಮಾಡಿ.
– ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ, ಬಿಸಿಯಾದ ಮೇಲೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಈರುಳ್ಳಿ, ದೊಣ್ಣೆ ಮೆಣಸು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಹುರಿಯಿರಿ.
– ತದನಂತರ ಪೆಪ್ಪರ್ ಪುಡಿ,ಸೋಯಾ ಸಾಸ್, ಟೊಮೆಟೋ ಸಾಸ್, ರೆಡ್ ಚಿಲ್ಲಿ ಸಾಸ್ ಮತ್ತು ವಿನೆಗರ್ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
-ನಂತರ ಕಾಯಿಸಿಟ್ಟಿದ್ದ ಸೋಯಾ ಚಂಕ್ಸ್ ಹಾಕಿ ಪುನಃ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿರಿ.
– ಅಂತಿಮವಾಗಿ ಹೆಚ್ಚಿದ ಸ್ಪ್ರಿಂಗ್ ಈರುಳ್ಳಿಯೊಂದಿಗೆ ಅಲಂಕರಿಸಿರಿ.
ಬಿಸಿ-ಬಿಸಿಯಾದ ಸೋಯಾ ಚಿಲ್ಲಿ ಸವಿಯಲು ಸಿದ್ಧ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
BGT: ವಿರಾಟ್ ಬಗ್ಗೆ ಆಸೀಸ್ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್ ಸಾಮ್ರಾಜ್ಯದ ಕಥೆ
AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.