ಬಾಹುಬಲಿ ಹಾಡನ್ನು ಹಾಡಿ ವೈರಲ್ ಆದ ಈತನಿಗೆ ಕನ್ನಡ ಹಾಡುಗಳೇ ಸಾಧನೆಗೆ ಸ್ಫೂರ್ತಿಯಂತೆ..


ಸುಹಾನ್ ಶೇಕ್, Jun 17, 2020, 6:24 PM IST

web-tdy-1

ನಮ್ಮಲ್ಲಿ ಅಡಗಿರುವ ಪ್ರತಿಭೆ ಯಾವುದೇ ಹಂತದಲ್ಲಿ ಬೆಳಕಿಗೆ ಬರಬಹುದು. ಅದಕ್ಕೆ ಬೇಕಿರುವುದು ನಮ್ಮ ಒಂದು ಪ್ರಯತ್ನ ಅಷ್ಟೇ. ಮುಂದೆ ಹೋಗು ಎನ್ನುವ ಒಂದಿಷ್ಟು ಹಿತೈಷಿಗಳು ಇದ್ರು ಸಾಕು ಆತ್ಮವಿಶ್ವಾಸದಿಂದ ನಮ್ಮೊಳಗಿರುವ ಪ್ರತಿಭೆ ಹೊರ ಜಗತ್ತಿನ ಬೆಳಕಿಗೆ ಮಿಂಚಾಗಿ ಕಾಣುತ್ತದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಾಹುಬಲಿ ಚಿತ್ರದ ‘ಕೌನ್ ಹೇ ಹೋ ಕೌನ್ ಹೇ’ ಹಾಡನ್ನು ಪಾರ್ಕ್ ವೊಂದರಲ್ಲಿ ಹುಡುಗನೊಬ್ಬ ಹಾಡುವ ಹಾಡು ಸಾಕಷ್ಟು ವೈರಲ್ ಆಗಿತ್ತು. ಆ ಹಾಡಿನ ಹಿಂದಿರುವ ಹುಡುಗ ಬಿಹಾರದ ಚಪ್ರ ಗ್ರಾಮದ ಚಂದನ್ ಕುಮಾರ್ ಗುಪ್ತಾ. ಚಂದನ್ ಕುಮಾರ್. ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಪ್ರವೃತ್ತಿಯಲ್ಲಿ ಒಬ್ಬ ಪ್ರತಿಭಾವಂತ ಹಾಡುಗಾರ, ಹಾಡಿನ ದನಿಗೆ ಹೆಜ್ಜೆಯಿಡುವ ನೃತ್ಯಗಾರ ಕೂಡ ಹೌದು.

ಚಂದನ್ ಕುಮಾರ್ ಬಾಲ್ಯ ಮನೆಯಲ್ಲಿ ಸೊಗಸಾಗಿ ಹಾಡುವ ಅಜ್ಜನ ಧ್ವನಿಯನ್ನು ಕೇಳುತ್ತಾ, ಅಮ್ಮನ ಪೂಜಾ ಪ್ರಸಂಗದ ಇಂಪಾದ ಹಾಡುಗಳನ್ನು ಕೇಳುತ್ತಾ, ಸಂಗೀತದ ವಾತಾವರಣದಲ್ಲಿ ಬೆಳೆದು ಬಂದದ್ದು. ಬಾಲ್ಯ ಕಳೆದ ವಿದ್ಯಾರ್ಥಿ ಜೀವನ ಹೊಸ್ತಿಲಲ್ಲಿ ಚಂದನ್ ಹಾಡನ್ನು ಹಾಡುತ್ತ  ಹವ್ಯಾಸವನ್ನು ರೂಢಿಸಿಕೊಂಡು ಮುಂದುವರೆಯುತ್ತಾರೆ. ಇಂಜಿನಿಯರಿಂಗ್ ಕಲಿಕೆಗಾಗಿ ಪಂಜಾಬ್  ಸೇರುವ ಚಂದನ್ ಡ್ಯಾನ್ಸ್ ಕ್ಲಾಸ್ ಕಡೆ ಆಕರ್ಷಿತರಾಗುತ್ತಾರೆ. ಅದೊಂದು ದಿನ ಅವರ ಡ್ಯಾನ್ಸ್ ತರಬೇತುದಾರರು ಚಂದನ್ ಕುಮಾರ್ ಹಾಡನ್ನು ಕೇಳಿ ಖುಷಿಯಲ್ಲಿ ದಂಗಾಗುತ್ತಾರೆ. ಆ ಕ್ಷಣದಿಂದಲೇ ಚಂದನ್ ರನ್ನು ಹಾಡಿನ ತರಬೇತಿಯನ್ನು ಸರಿಯಾಗಿ ಪಡೆದುಕೊಳ್ಳುವ ಸಲಹೆಯನ್ನು ನೀಡುತ್ತಾರೆ. ಇದು ಚಂದನ್ ಗಾಯಕನ ಕನಸಿನ ಮೊದಲ ಹೆಜ್ಜೆ.

ಬೆಂಗಳೂರು ಕಲಿಸಿದ ಕನ್ನಡ; ಕಲ್ಪಿಸಿದ ಅವಕಾಶ: ಇಂಜಿನಿಯರಿಂಗ್ ಕಲಿಕೆಯ ಬಳಿಕ ಚಂದನ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಅಲ್ಲಿರುವ ಸಹೋದ್ಯೋಗಿಗಳಿಗೆ ಚಂದನ್ ಹಾಡಿನ ಪ್ರತಿಭೆ ಕುರಿತು ತಿಳಿದಿರುತ್ತದೆ. ಹಾಡನ್ನು ಕೇಳಿ ಅವರ ಸಹೋದ್ಯೋಗಿಗಳು ಚಂದನ್ ಧ್ವನಿಗೆ ಪ್ರೋತ್ಸಾಹಕರಾಗಿ, ಇಲ್ಲಿನ ಸ್ಥಳೀಯ ಕನ್ನಡ ಭಾಷೆಯನ್ನು ಕಲಿಯಲು ಪ್ರಯತ್ನ ಪಡು, ನಾವು ನಿನಗೆ ಕಲಿಸುತ್ತೇವೆ, ನೀನು ಇಲ್ಲಿದ್ದುಕೊಂಡು ಇಲ್ಲಿನ ಭಾಷೆಯಲ್ಲಿ ಹಾಡನ್ನು ಹಾಡಬೇಕೆಂದು ಪ್ರೋತ್ಸಾಹದ ಮಾತುಗಳನ್ನು ಹೇಳಿ, ಚಂದನ್ ರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾರೆ. ದಿನ ಕಳೆದಂತೆ ಚಂದನ್ ಕನ್ನಡ ಕಲಿಯಲು, ಕನ್ನಡದಲ್ಲಿ ಮಾತಾಡಲು, ಜನರೊಂದಿಗೆ ವ್ಯವಹರಿಸಲು ಕಲಿಯುತ್ತಾರೆ. ನಿಧಾನವಾಗಿ ಕನ್ನಡದ ಹಾಡುಗಳು ನಾಲಿಗೆಯ ತುದಿಯಲ್ಲಿ ಇಂಪಾದ ದನಿಯಲ್ಲಿ ಹೊರಹೊಮ್ಮಲು ಶುರುವಾಗುತ್ತದೆ.

ಆತ್ಮವಿಶ್ವಾಸದಿಂದ ಮುಂದುವರೆದ ಚಂದನ್. ಕನ್ನಡದ ರಿಯಾಲಿಟಿ ಶೋಗಳಲ್ಲಿ, ಸ್ಥಳೀಯ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಂದಿಷ್ಟು ಅಭಿಮಾನಿಗಳನ್ನು, ಹೆಸರನ್ನು ಗಳಿಸಿಕೊಳ್ಳುತ್ತಾರೆ. ಅದೇ ಸಮಯದಲ್ಲಿ ಕನ್ನಡದ ಕೆಲ ಸಿನಿಮಾಗಳಲ್ಲಿ ಹಿನ್ನಲೆ ಗಾಯಕರಾಗಿ ಅವಕಾಶವನ್ನು ಪಡೆದುಕೊಳ್ಳುತ್ತಾರೆ.

ಕೆಲ ಸಮಯ ಚೆನ್ನೈನಲ್ಲಿದ್ದ ಚಂದನ್, ಅಲ್ಲಿಯೂ ತಮಿಳು ಭಾಷೆಯನ್ನು ಕಲಿತು, ಅಲ್ಲಿನ ಖಾಸಗಿ ಟಿವಿಯ ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೈ ಎನ್ನಿಸಿಕೊಳ್ಳುತ್ತಾರೆ. ಅವಕಾಶಗಳು ಚಂದನ್ ರನ್ನು ಹುಡುಕುತ್ತಲೇ ಬಂದಿವೆ.

ಇತ್ತೀಚೆಗೆ ಸ್ನೇಹಿತನೊಬ್ಬನ ಮದುವೆಯ ಕಾರಣದಿಂದ ಚಂದನ್ ಊರಿಗೆ ಬರುತ್ತಾರೆ. ಲಾಕ್ ಡೌನ್ ನೆಪದಿಂದ ಊರಿನಲ್ಲೇ ನೆಲೆಯಾಗುತ್ತಾರೆ. ಅಲ್ಲಿ ಸ್ನೇಹಿತರ ಒತ್ತಾಯದಿಂದ ಚಂದನ್ ಹಾಡಲು ಒಪ್ಪುತ್ತಾರೆ.ಅದೇ ಸಮಯದಲ್ಲಿ ಹಾಡಿದ ಹಾಡು ಬಾಹುಬಲಿ ಚಿತ್ರದ ‘ಕೌನ್ ಹೇ ಹೋ ಕೌನ್ ಹೇ’ ಇದನ್ನು ಸ್ನೇಹಿತನೊಬ್ಬ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುತ್ತಾನೆ. ಮೇ 17 ರಂದು ಪೋಸ್ಟ್ ಮಾಡಿದ್ದ ಆ ಹಾಡು ಕೆಲವೇ ಗಂಟೆಗಳಲ್ಲಿ ಜಗತ್ತಿನಾದ್ಯಂತ ವೈರಲ್ ಆಗುತ್ತದೆ. ಕೈಲಾಸ್ ಖೇರ್ ಕಂಠದಂತೆಯೇ ಈ ಹುಡುಗನ ಹಾಡು ಇದೆ ಎಂದು ಜನ ಇದನ್ನು ಇಷ್ಟಪಡುತ್ತಾರೆ. ಇದುವರೆಗೆ ಚಂದನ್ ಹಾಡಿರುವ ಈ ಹಾಡು ಪೇಸ್ ಬುಕ್ ,ಇನ್ಸ್ಟಾ ಗ್ರಾಮ್ ಸೇರಿದಂತೆ ಎಲ್ಲೆಡೆ ಸುಮಾರು 2 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.

ಚಂದನ್ ರಿಗೆ ಹಾಡು ಹೊಸತಲ್ಲ. ಅವಕಾಶಗಳಿಗಾಗಿ ಎಲ್ಲೆಡೆ ಅಲೆದಾಟ ನಡೆಸಿದ್ದಾರೆ. ಚಂದನ್ ಕನ್ನಡ, ತಮಿಳು,ತೆಲುಗು, ಪಂಜಾಬಿ,ಭೋಜ್‌ಪುರಿ, ಬಂಗಾಳಿ ಸೇರಿದಂತೆ ಒಟ್ಟು ಒಂಬತ್ತು ಭಾಷೆಯಲ್ಲಿ ಸರಾಗವಾಗಿ ಹಾಡನ್ನು, ಹಾಡಿನ ಭಾವವನ್ನು ವ್ಯಕ್ತಪಡಿಸುತ್ತಾರೆ.

ವೈರಲ್ ಆದ ಹಾಡಿನ ಬಳಿಕ ಚಂದನ್ ಅವರಿಗೆ ಅವಕಾಶಗಳು ಹುಡುಕುತ್ತಾ ಬರುತ್ತಿವೆ. ಹಿಂದಿಯ ಜನಪ್ರಿಯ ಹಾಡಿನ ರಿಯಾಲಿಟಿ ಶೋ ‘ಇಂಡಿಯನ್ ಐಡಲ್‌’ ನ ಆಡಿಷನ್ ಗಾಗಿ ಇವರಿಗೆ ಕರೆ ಬಂದಿದೆ. ಅವಕಾಶಗಳು ಹೇಗೆ ಬೇಕಾದರೂ ಬರಬಹುದು. ಮುನ್ನಡೆಯುವ ಒಂದು ಆತ್ಮವಿಶ್ವಾಸದ ಪ್ರಯತ್ನ ಬೇಕಷ್ಟೇ..

 

– ಸುಹಾನ್ ಶೇಕ್

ಟಾಪ್ ನ್ಯೂಸ್

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

15-crime

Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ

CT Ravi ಭದ್ರತೆ ವ್ಯವಸ್ಥೆ,ನ್ಯಾಯಾಂಗ ತನಿಖೆಗೆ ರಾಜ್ಯಪಾಲರಿಗೆ ಬಿಜೆಪಿ ಮನವಿ: ಆರ್.ಅಶೋಕ್

CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು

Khel Ratna Award: ನನ್ನಿಂದಲೇ ತಪ್ಪಾಗಿರಬಹುದು: ಮನು ಭಾಕರ್‌

Khel Ratna Award: ನನ್ನಿಂದಲೇ ತಪ್ಪಾಗಿರಬಹುದು: ಮನು ಭಾಕರ್‌

13-

Holehonnur: ಎರಡು ಪ್ರತ್ಯೇಕ ರಸ್ತೆ ಅಪಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

15-crime

Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ

CT Ravi ಭದ್ರತೆ ವ್ಯವಸ್ಥೆ,ನ್ಯಾಯಾಂಗ ತನಿಖೆಗೆ ರಾಜ್ಯಪಾಲರಿಗೆ ಬಿಜೆಪಿ ಮನವಿ: ಆರ್.ಅಶೋಕ್

CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.