“ಪ್ರೋಟೀನ್ ಯುಕ್ತ ಆಹಾರ ಸೇವನೆ : ಪಥ್ಯೆಯಿಲ್ಲದೆ ಬೊಜ್ಜು ಕರಗಲು ಸಾಧ್ಯ”
ಹೆಚ್ಚು ಪ್ರೋಟೀನ್ ಯುಕ್ತ ಪಥ್ಯಾನ್ನ ಸೇವನೆಯಿಂದ ದೇಹದಲ್ಲಿನ ಬೊಜ್ಜು ಅಥವಾ ಕೊಬ್ಬು ಕರಗುತ್ತದೆ
Team Udayavani, Jan 21, 2021, 12:43 PM IST
ಹೆಚ್ಚು ಪ್ರೋಟೀನ್ ಯುಕ್ತ ಪಥ್ಯಾನ್ನ ಸೇವನೆಯಿಂದ ದೇಹದಲ್ಲಿನ ಬೊಜ್ಜು ಅಥವಾ ಕೊಬ್ಬು ಕರಗುತ್ತದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ. ದಿನನಿತ್ಯದ ಪ್ರೋಟೀನ್ ಯುಕ್ತ ಆಹಾರ ಸೇವನೆಯಿಂದ ದೇಹದ ತೂಕವನ್ನು ಇಳಿಸಬಹುದಾಗಿದೆ.
ಹೆಚ್ಚುಪಥ್ಯೆಮಾಡುತ್ತಿದ್ದವರು ತಮ್ಮಆಹಾರ ಕ್ರಮವನ್ನು ಬದಲಾಯಿಸಿಕೊಂಡು ಪ್ರೋಟೀನ್ ಯುಕ್ತ ಆಹಾರವನ್ನು ಸೇವನೆ ಮಾಡುವುದರಿಂದಾಗಿ ತಮ್ಮ ತೂಕವನ್ನು ಇಳಿಸಿಕೊಂಡಿದ್ದಾರೆ ಎಂದು ದ ಅಮೇರಿಕನ್ ಜರ್ನಲ್ ಸಂಶೋಧಕರ ಅಧ್ಯಯನವನ್ನು ವರದಿ ಮಾಡಿದೆ.
ಇದನ್ನೂ ಓದಿ : ತಪ್ಪು ಗ್ರಹಿಕೆಯ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ : ವಾಟ್ಸಾಪ್
ಅಲ್ಬರ್ಟಾ ಯೂನಿವರ್ಸಿಟಿಯ ಸಂಶೋಧಕರು ಎರಡು ಹಂತಗಳಲ್ಲಿ ಈ ಅಧ್ಯಯನವನ್ನು ಮಾಡಿದ್ದಾರೆ. ಈ ಅಧ್ಯಯನಕ್ಕಾಗಿ 43 ಮಂದಿ ಬೊಜ್ಜುಕಾಯವಲ್ಲದ ವಯಸ್ಕರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ಮೊದಲ ಹಂತದ ಅಧ್ಯಯನದಲ್ಲಿ ದಿನನಿತ್ಯ ಪ್ರೋಟೀನ್ಯುಕ್ತ ಆಹಾರ ಸೇವನೆಯಿಂದಾಗಿ 30% ಜೀವಸತ್ವ, 40% ಪ್ರೋಟೀನ್, 25% ಫ್ಯಾಟ್, ಎರಡನೇ ಹಂತದ ಅಧ್ಯಯನದಲ್ಲಿ ಹಣ್ಣುಗಳು, ಕರಿದ ಆಹಾರ ಸೇವನೆಯಿಂದಾಗಿ 55% ಕ್ಯಾಲೋರಿ ಕಾರ್ಬ್ಸ್, 15% ಪ್ರೋಟೀನ್, 30% ಫ್ಯಾಟ್ ದೇಹದೊಳಗೆ ಉತ್ಪತ್ತಿಯಾಗುತ್ತದೆ ಎಂದು ಅಧ್ಯಯನ ಹೇಳಿದೆ.
ಪ್ರೋಟೀನ್ ಯುಕ್ತ ಆಹಾರ ಪದ್ಧತಿಯನ್ನು ಯಾವುದೇ ಪಥ್ಯೆ ಮಾಡದೇ ಸೇವಿಸುವುದರಿಂದ ದಿನಕ್ಕೆ ಸುಮಾರು 80 ಕ್ಯಾಲೋರಿಗಳನ್ನು ಕರಗಿಸಬಹುದಾಗಿದೆ ಹಾಗೂ ದೇಹದ ತೂಕ ಇಳಿಸಬಹುದಾಗಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಉದ್ಯೋಗ ಖಾತ್ರಿಯಿಂದ ಜೀವನ ಹಸನು
ಬೊಜ್ಜು ಇಳಿಸುವುದಕ್ಕೆ ಪ್ರೋಟೀನ್ ಯುಕ್ತ ಆಹಾರ ಗಳು ಸಹಾಯ ಮಾಡುತ್ತವೆ..?
ಪ್ರೋಟೀನ್ ಯುಕ್ತ ಆಹಾರಗಳ ಸೇವನೆಯಿಂದಾಗಿ ಆಹಾರದ ಉಷ್ಣಪರಿಣಾಮ ಅಥವಾ ಆಹಾರ ಪ್ರೇರಿತ ಥರ್ಮೋಜೆನಿಸಿಸ್ ಎಂದೂ ಕರೆಯಲ್ಪಡುವ ನಿರ್ದಿಷ್ಟ ಕ್ರಿಯಾತ್ಮಕ ಕ್ರಿಯೆಯಿಂದಾಗಿ ದೇಹದಲ್ಲಿನ ಬೊಜ್ಜು ಕರಗಲು ಸಾಧ್ಯ.
ಮೊಟ್ಟೆ, ಕೋಳಿಮಾಂಸ, ಮಸೂರ, ಬೇಳೆಗಳು,ಸೋಯಾ ಉತ್ಪನ್ನಗಳು, ಹಾಲು ಪ್ರೋಟೀನ್ ಯುಕ್ತ ಆಹಾರವೆಂದು ಸಂಶೋಧಕರ ತಂಡ ಹೇಳಿದೆ.
ಇದನ್ನೂ ಓದಿ : ಅನುಭವಿಲ್ಲದ ವೈದ್ಯಕೀಯ ಶಿಕ್ಷಣ ಖಾತೆ ಸಿಕ್ಕಿದೆ..ನೋಡೋಣ: ಮಾಧುಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…
Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?
UV Fusion: ಮಾನವನ ಸ್ವಾರ್ಥ ವಿನಾಶಕ್ಕೆ ಕಾರಣವಾಗುತ್ತಿದೆಯೇ?
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.