Hathras stampede; ಸ್ವಯಂ ಘೋಷಿತ ದೇವಮಾನವ ‘ಭೋಲೆ ಬಾಬಾ’ ಯಾರು?
ಗುಪ್ತಚರ ಇಲಾಖೆಯಲ್ಲಿದ್ದ... ಈಗ ಪೊಲೀಸರಿಂದ ವ್ಯಾಪಕ ಹುಡುಕಾಟ!!
ವಿಷ್ಣುದಾಸ್ ಪಾಟೀಲ್, Jul 3, 2024, 8:44 AM IST
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸತ್ಸಂಗ ಕಾರ್ಯಕ್ರಮದ ನಡೆದ ದುರಂತ ಕಾಲ್ತುಳಿತದಲ್ಲಿ 116 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಅನೇಕರು ಗಾಯಗೊಂಡಿದ್ದಾರೆ. ಸಾಕಾರ ವಿಶ್ವ ಹರಿ ಅಥವಾ ಭೋಲೆ ಬಾಬಾ ಎಂದೂ ಕರೆಯಲ್ಪಡುವ ನಾರಾಯಣ ಸಾಕಾರ ಹರಿ ನಡೆಸಿದ ಸತ್ಸಂಗ ಮುಕ್ತಾಯದ ಬಳಿಕ ಈ ದುರ್ಘಟನೆ ಸಂಭವಿಸಿದೆ. ಕಾಲ್ತುಳಿತ ಘಟನೆಯ ನಂತರ ನಾಪತ್ತೆಯಾಗಿರುವ ಭೋಲೆ ಬಾಬಾಗಾಗಿ ಪೊಲೀಸರು ಸದ್ಯ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಗುಪ್ತಚರ ಇಲಾಖೆಯಲ್ಲಿದ್ದ ಬಾಬಾ!
ಸತ್ಸಂಗವನ್ನು ‘ಭೋಲೆ ಬಾಬಾ’ ಎಂಬ ಖ್ಯಾತಿಯ ನಾರಾಯಣ್ ಸಾಕಾರ್ ಹರಿ ನಡೆಸುತ್ತಿದ್ದ. ಇಟಾಹ್ ಜಿಲ್ಲೆಯ ಪಟಿಯಾಲಿ ತೆಹಸಿಲ್‌ನ ಬಹದ್ದೂರ್ ಗ್ರಾಮದ ಮೂಲದ ಈತ ಈ ಹಿಂದೆ ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದಾಗಿ ಹೇಳಿಕೊಂಡಿದ್ದಾನೆ. 26 ವರ್ಷಗಳ ಹಿಂದೆ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ, ಸತ್ಸಂಗ ಆರಂಭಿಸಿದ್ದ ಎನ್ನಲಾಗಿದೆ. ಪ್ರತಿ ಮಂಗಳವಾರ ಅಲಿಗಢದಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ, ಕೋವಿಡ್ ನಿರ್ಬಂಧಗಳ ನಡುವೆಯೂ ಈತ ಜನರನ್ನು ಸೇರಿಸಿ ಸಭೆ ನಡೆಸಿದ್ದ ಕಾರಣಕ್ಕೆ ಈತನ ಹೆಸರು ಸಾಕಷ್ಟು ಮುನ್ನೆಲೆಗೆ ಬಂದಿತ್ತು.ಕೇವಲ 50 ಜನರು ಭಾಗವಹಿಸಿ ಸತ್ಸಂಗವನ್ನು ನಡೆಸಲು ಅನುಮತಿ ಕೋರಿ ಸಭೆಯಲ್ಲಿ 50,000 ಕ್ಕಿಂತ ಹೆಚ್ಚು ಜನರನ್ನು ಸೇರಿಸಿ ಸ್ಥಳೀಯ ಆಡಳಿತಕ್ಕೆ ತೀವ್ರ ತಲೆನೋವು ತಂದೊಡ್ಡಿದ್ದ.
ಸತ್ಸಂಗ ಮತ್ತು ಧಾರ್ಮಿಕ ಸಂಘಟನೆಯ ಮೂಲಕ ಅಪಾರ ಹೆಸರು ಮಾಡಿ ಪಶ್ಚಿಮ ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ ಮತ್ತು ದೆಹಲಿ ಸೇರಿದಂತೆ ಭಾರತದಾದ್ಯಂತ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದ.
ಗಮನಾರ್ಹ ವಿಚಾರವೆಂದರೆ ಸದ್ಯ ಅನೇಕ ಆಧುನಿಕ ಧಾರ್ಮಿಕ ನಾಯಕರು ಸಾಮಾಜಿಕ ತಾಣಗಳಲ್ಲಿ ಖಾತೆಗಳನ್ನು ಹೊಂದಿ ಆ ಮೂಲಕವೂ ಅಪಾರ ಅನುಯಾಯಿಗಳನ್ನು ಸಂಪಾದಿಸಿಕೊಳ್ಳುತ್ತಿದ್ದಾರೆ. ಆದರೆ ಭೋಲೆ ಬಾಬಾ ಸಾಮಾಜಿಕ ಮಾಧ್ಯಮದಿಂದ ಬಲು ದೂರವಿರುದ್ದು ಯಾವುದೇ ವೇದಿಕೆಯಲ್ಲಿ ಅಧಿಕೃತ ಖಾತೆಗಳನ್ನು ಹೊಂದಿಲ್ಲ. ತಳಮಟ್ಟದಲ್ಲೇ ನಮ್ಮ ಬಾಬಾ ಪ್ರಭಾವ ಗಣನೀಯವಾಗಿದೆ ಎಂದು ಅವರ ಅನುಯಾಯಿಗಳು ಹೇಳಿಕೊಳ್ಳುತ್ತಾರೆ. ಹದಿ ಹರೆಯದ ಮಕ್ಕಳಿಂದ ಹಿಡಿದು ವಯೋ ವೃದ್ಧರ ವರೆಗೆ ಜನರು ಸಂತ್ಸಂಗದಲ್ಲಿ ಭಾಗಿಯಾಗುವುದು ವಿಶೇಷ.
ಉತ್ತರ ಪ್ರದೇಶದ ಅಲಿಗಢದಲ್ಲಿ ಪ್ರತಿ ಮಂಗಳವಾರ ಭೋಲೆ ಬಾಬಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ, ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.
ಹತ್ರಾಸ್‌ನ ಮುಘಲ್‌ಘರ್ಹಿ ಪ್ರದೇಶದಲ್ಲಿ ನೆಲೆಗೊಂಡಿರುವ ಫುಲ್ರೈ ಗ್ರಾಮದಲ್ಲಿ ‘ಭೋಲೆ ಬಾಬಾ’ ಧರ್ಮೋಪದೇಶ ಕಾರ್ಯಕ್ರಮವನ್ನು ಆಯೋಜಿಸಿದ ವೇಳೆ ದುರಂತ ಸಂಭವಿಸಿದೆ.
#WATCH | Uttar Pradesh: Visuals from Ram Kutir Charitable Trust in Mainpuri district.
A search operation was underway for ‘Bhole Baba’, who conducted a Satsang in Hathras where a stampede took place yesterday claiming the lives of 116 people. pic.twitter.com/6J2tAHyxrF
— ANI (@ANI) July 3, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.