Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?
"Bado Badi Hoye Hoye".. ಈ ಹಾಡಿನ ಹಿಂದೆ ಇರುವುದು ಯಾರು..? ಯಾಕೆ ಹಾಡು ಇಷ್ಟು ವೈರಲ್
ಸುಹಾನ್ ಶೇಕ್, May 11, 2024, 6:55 PM IST
ಇಂದಿನ ಕಾಲದಲ್ಲಿ ಜನಪ್ರಿಯತೆ ಎನ್ನುವುದು ರಾತ್ರಿ ಬೆಳಗಾಗುವುದರಲ್ಲಿ ಪ್ರಾಪ್ತಿಯಾಗುತ್ತದೆ. ಇಂಟರ್ ನೆಟ್ ಯುಗದಲ್ಲಿ ರಾತ್ರೋ ರಾತ್ರೋ ಫೇಮಸ್ ಆಗಿರುವವರ ಉದಾಹರಣೆ ನೂರಾರು ಇದೆ.
ನೀವು ಪ್ರತಿನಿತ್ಯ ಇನ್ಸ್ಟಾಗ್ರಾಮ್ ರೀಲ್ಸ್ ಗಳನ್ನು ನೋಡುತ್ತೀರಾ ಎನ್ನುವುದಾದರೆ ನಿಮ್ಮ ರೀಲ್ಸ್ ಸ್ಕ್ರೂಲ್ ಮಾಡುತ್ತಾ ಹೋದರೆ ಅರ್ಧ ತಲೆ ಬೋಳಾಗಿರುವ ಒಬ್ಬ ವ್ಯಕ್ತಿ ಹಾಗೂ ಯುವತಿಯೊಬ್ಬಳು ಆತನೊಂದಿಗೆ ನೃತ್ಯ ಮಾಡುವ ಹಾಡಿನ ರೀಲ್ಸ್ ವೊಂದು ಖಂಡಿತ ನಿಮ್ಮ ಕಣ್ಣಿಗೆ ಕಂಡಿರುತ್ತದೆ. ಆ ರೀಲ್ಸ್ ಹಾಡು ಒಂದೈದು ಸೆಕೆಂಡ್ ಕೇಳಿದರೆ ಸಾಕು ಇದೇನಪ್ಪ ಈ ಥರಾ ಕರಾಬ್ ಆಗಿದೆ ಅಂದುಕೊಳ್ಳುತ್ತೀರಿ. ಆದರೆ ಅದೇ ರೀಲ್ಸ್ ಮತ್ತೆ ಮತ್ತೆ ಬಂದಾಗ ನೀವು ಕೂಡ ಆ ಸಾಹಿತ್ಯವನ್ನು ಹಾಡುತ್ತೀರಿ.!
ಹೌದು ಕಳೆದ ಕೆಲ ದಿನಗಳಿಂದ ಎಲ್ಲಿ ನೋಡಿದರೂ “ಆಯೆ ಹಾಯೆ, ಓಯೆ ಹೋಯೆ, ಬಡೋ ಬಡಿ ಹೋಯೆ ಹೋಯೆ,” ..( “Aaye Haye, Oye Hoye, Bado Badi Hoye Hoye,”..) ಹಾಡಿನದೇ ಹವಾ. ಈ ಹಾಡು ಕೇಳಿ ಕೇಳಿ ಇಂಟರ್ ನೆಟ್ ಬಳಕೆದಾರರು ʼಅಯ್ಯೋ ಅಯ್ಯೋ..ʼ ಎನ್ನುತ್ತಿದ್ದಾರೆ.
ಹಾಡು ಕೆಟ್ಟದಾಗಿದೆ. ಸ್ವರ ಅಂತೂ ಕೇಳೋದೇ ಬೇಡ ಎನ್ನುವವರಿಗೆ ಈ ಹಾಡು ಹಾಡಿದವರ ಹಿಂದಿನವರ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಹಾಗಾದರೆ ಈ ಹಾಡು ಹಾಡಿದವರು ಯಾರು? ಇಷ್ಟು ಟ್ರೋಲ್ ಆದರೂ ಈ ಹಾಡು ಜನಪ್ರಿಯವಾಗಲು ಕಾರಣವೇನು? ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ.
ಈ ಹಾಡನ್ನು ಹಾಡಿದವರು ಇಂದು – ನಿನ್ನೆ ಫೇಮಸ್ ಆಗಿರುವುದಿಲ್ಲ. ಅಥವಾ ಇವರ ಈ ಒಂದೇ ಹಾಡು ಇಷ್ಟು ವೈರಲ್ ಆಗಿರುವುದಿಲ್ಲ.
ಗಾಯಕ ಯಾರು?
ಚಾಹತ್ ಫತೇ ಅಲಿ ಖಾನ್ ಮಾರ್ಚ್ 1965 ರಲ್ಲಿ ಪಾಕಿಸ್ತಾನದ ಶೇಖುಪುರ ಹುಟ್ಟಿದರು. ಇವರ ಮೂಲ ಹೆಸರು ಕಾಶಿಫ್ ರಾಣಾ. ಹಾಡುಗಳಿಂದ ಖ್ಯಾತಿಯಾಗಿ ವೇದಿಕೆಯ ಹೆಸರನ್ನು ಚಾಹತ್ ಫತೇ ಅಲಿ ಖಾನ್ ಎಂದು ಇಟ್ಟುಕೊಂಡಿದ್ದಾರೆ. ಇವರು ಜನಪ್ರಿಯ ಗಾಯಕ ರಾಹತ್ ಫತೇ ಅಲಿಖಾನ್ ಅವರ ಸಂಬಂಧಿಕರಲ್ಲ.
ಆರಂಭಿಕ ಜೀವನ:
ಚಾಹತ್ ವೃತ್ತಿ ಬದುಕು ಆರಂಭವಾದದ್ದು ಕ್ರಿಕೆಟರ್ ಆಗಿ. ಪ್ರಥಮ ದರ್ಜೆಯ ಟೆಸ್ಟ್ ಕ್ರಿಕೆಟರ್ ಆಗಿ ಲಾಹೋರ್ ಪರ ಆಡಿದ ಇವರು, 1983 -84 ರ ಕ್ವೈಡ್-ಐ-ಅಜಮ್ ಟ್ರೋಫಿಯಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಮೂರು ಇನ್ನಿಂಗ್ಸ್‌ಗಳಲ್ಲಿ ಒಟ್ಟು 16 ರನ್ ಗಳಿಸಿದ್ದಾರೆ. ಆರಂಭಿಕ ಕ್ರಿಕೆಟ್ ವರ್ಷಗಳಲ್ಲಿ ಶೇಖಪುರದ ಸರ್ಕಾರಿ ಶಾಲಾ ಕ್ರಿಕೆಟ್ ತಂಡಕ್ಕೆ ಆಕಿಬ್ ಜಾವೇದ್ ಅವರನ್ನು ಆಯ್ಕೆ ಮಾಡುವಲ್ಲಿ ತೊಡಗಿಸಿಕೊಂಡಿದ್ದರು. ಜಾವೇದ್ ಅವರ ನಾಯಕತ್ವದಲ್ಲಿ ಆಡಿದ್ದರು ಎಂದು ಸಂದರ್ಶನವೊಂದರಲ್ಲಿ ಚಾಹತ್ ಹೇಳಿದ್ದಾರೆ.
ಆ ಬಳಿಕ ಯುನೈಟೆಡ್ ಕಿಂಗ್‌ಡಮ್(ಲಂಡನ್) ಗೆ ಹೋದ ಚಾಹತ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿ, ಅಲ್ಲಿನ ಕ್ಲಬ್ ಕ್ರಿಕೆಟ್ ನಲ್ಲಿ 12 ವರ್ಷ ಆಡಿದ್ದರು. ಆ ಬಳಿಕ ನಿವೃತ್ತಿಯಾಗಿ ಟ್ಯಾಕ್ಸಿ ಡ್ರೈವರ್ ಆಗಿ ದುಡಿಯಲು ಆರಂಭಿಸಿದ್ದರು ಎಂದು ವರದಿಗಳು ತಿಳಿಸಿವೆ.
ಗಾಯನದ ಬಗ್ಗೆ ಹುಟ್ಟಿದ ಆಸಕ್ತಿ: ಬಾಲ್ಯದಿಂದಲೇ ಚಾಹತ್ ಅವರಿಗೆ ಹಾಡಿನ ಬಗ್ಗೆ ಆಸಕ್ತಿ ಇತ್ತು. ಪಾಕಿಸ್ತಾನದ ದಿಗ್ಗಜ ಗಾಯಕ ರಾಹತ್ ಫತೇ ಅಲಿ ಖಾನ್ ಅವರ ಹಾಡು, ಕವಾಲಿಗಳನ್ನು ಕೇಳುತ್ತಿದ್ದರು.
ಕರ್ಕಶ ಧ್ವನಿ , ಆದರೂ ವೈರಲ್ ಆದ ಹಾಡು.. ಅದು ಕೋವಿಡ್ ಸಮಯ. ಚಾಹತ್ ಹಾಡುಗಳು ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ದಿನಗಳದು. ಫೇಸ್ ಬುಕ್ ಲೈವ್ ನಲ್ಲಿ ಬಂದು ಹಾಡುಗಳನ್ನು ಹಾಡಿ, ಅದನ್ನು ಪೋಸ್ಟ್ ಮಾಡುತ್ತಿದ್ದ ಚಾಹತ್ ನಿಧಾನವಾಗಿ ಸೋಶಿಯಲ್ ಮೀಡಿಯಾದಲ್ಲಿ ಗುರುತಿಸಿಕೊಳ್ಳಲು ಪ್ರಾರಂಭವಾಗುತ್ತಾರೆ. ಅವರ ಹಾಡುಗಳಲ್ಲಿ ಇಂಪಾದ ಸ್ವರ ಇರಲಿಲ್ಲ. ಸಾಹಿತ್ಯಕ್ಕಂತೂ ಅರ್ಥವೇ ಇರಲಿಲ್ಲ. ಹಾಡಿಗೆ ಮೆಚ್ಚುಗೆ ಸಿಗುವುದಕ್ಕಿಂತ ಹೆಚ್ಚಾಗಿ ಟ್ರೋಲ್ ಆಗುತ್ತಿತ್ತು.
ಇವರ ಜನಪ್ರಿಯತೆ ಎಲ್ಲಿಯವರೆಗೆ ಹೆಚ್ಚಾಯಿತು ಎಂದರೆ. ಪಾಕಿಸ್ತಾನದಲ್ಲಿ ಸ್ಥಳೀಯರು ಇವರನ್ನು ಮದುವೆಯಲ್ಲಿ ಹಾಡಲು ಹಾಗೂ ಇತರೆ ಶುಭ ಕಾರ್ಯಕ್ರಮದಲ್ಲಿ ಹಾಡಲು ಅತಿಥಿಯಾಗಿ ಆಹ್ವಾನ ನೀಡಲು ಶುರು ಮಾಡುತ್ತಾರೆ.
ಹೀಗಿದ್ದ ಚಾಹತ್ ಅವರು ರಾತ್ರೋ ರಾತ್ರಿ ವೈರಲ್ ಆಗುವುದು ಪಾಕಿಸ್ತಾನ್ ಪ್ರಿಮಿಯರ್ ಲೀಗ್ ಸೀಸನ್ -8 ನ ಗೀತೆಯಾದ (ಆಂಥಮ್) “ಯೇ ಜೋ ಪ್ಯಾರಾ ಪಿಎಸ್ಎಲ್ ಹೈ” ಮೂಲಕ. ತಮ್ಮದೇ ಸಾಹಿತ್ಯವನ್ನು ಹಾಕಿ ಈ ಹಾಡನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದು ಬಿಟ್ಟ ಅವರಿಗೆ ಮತ್ತೆ ಪ್ರಶಂಸೆಯ ಬದಲಿಗೆ ಟ್ರೋಲ್ ಗಳೇ ಹೆಚ್ಚಾಗಿ ಕಾಡಲಾರಂಭಿಸಿತ್ತು.
“ಪ್ಯಾರಾ PSL”, “ಲೋಟ ಲೋಟ”, “ಗೋಲ್ ಕತ್ತಾರ”, ಮತ್ತು “ತು ಚೋರ್ ಚೋರ್ ಚೋರ್” ಹಾಡುಗಳು ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತದೆ.
ಕೋವಿಡ್ ಸಮಯದಲ್ಲಿ ನಾನು ದಿನಕ್ಕೆ ಎಂಟು ಗಂಟೆ ಹಾಡುಗಳನ್ನು ಅಭ್ಯಾಸ ಮಾಡುತ್ತಿದ್ದೆ. ಗಾಯಕನಾಗಿ ಏಳು ವರ್ಷದಿಂದ ಗುರುತಿಸಿಕೊಂಡಿದ್ದೇನೆ ಎಂದು ರಾಹತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
2022 ರಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು “ಯೇ ಜೋ ಝಂಡಾ ಹೈ, ಯೇ ಜೋ ಪ್ಯಾರಾ ಝಂಡಾ ಹೈʼ ರಾಹತ್ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚುವಂತೆ ಮಾಡಿತ್ತು.
ಚಾಹತ್ ಯಾವುದೇ ಮ್ಯೂಸಿಕ್ ಲೇಬಲ್‌ನ ಬೆಂಬಲವಿಲ್ಲದೆ ತನ್ನ ಹಾಡುಗಳನ್ನು ಸ್ವತಃ ಬರೆಯುತ್ತಾರೆ, ಸಂಯೋಜಿಸುತ್ತಾರೆ, ರೆಕಾರ್ಡ್ ಮಾಡುತ್ತಾರೆ ಮತ್ತು ಬಿಡುಗಡೆ ಮಾಡುತ್ತಾರೆ ಎಂದು ವರದಿಗಳು ತಿಳಿಸಿವೆ.
ರಾಜಕೀಯ ಅಖಾಡಕ್ಕೆ ಧುಮಿಕ್ಕಿದ್ದ ಅವರು, ಸ್ವತಂತ್ರ ಸ್ಪರ್ಧಿಯಾಗಿ ನಾಮಿನೇಷನ್ ಸಲ್ಲಿಸಿದ್ದರು. ಆದರೆ ಅವರ ನಾಮಪತ್ರ ತಿರಸ್ಕೃತವಾಗಿತ್ತು.
ಈಗ ಯಾಕೆ ವೈರಲ್: ಕಳೆದ ಬಾರಿಗಿಂತ ಈ ಬಾರಿ ಚಾಹತ್ ಫತೇ ಆಲಿಖಾನ್ ಎಲ್ಲೆಡೆ ವೈರಲ್ ಆಗಿದ್ದಾರೆ. ಹೆಚ್ಚಾಗಿ ಭಾರತದ ರೀಲ್ಸ್ ಗಳಲ್ಲಿ ಎಂದರೆ ತಪ್ಪಾಗದು. 1962 ರಲ್ಲಿ ಬಂದ ʼಬನಾರ್ಸಿ ಥಗ್ʼ ಸಿನಿಮಾದ ʼಅಖ್ ಲಾರ್ಹಿ ಬಡೋ ಬಡಿʼ ಹಾಡನ್ನು ನೂರ್ ಜೆಹಾನ್ ಹಾಡಿದ್ದರು. ಈ ಹಾಡು ಅಂದು ಜನಪ್ರಿಯತೆಯನ್ನು ಗಳಿಸಿದಕ್ಕಿಂತ ಹೆಚ್ಚಾಗಿ ಚಾಹತ್ ಫತೇ ಆಲಿಖಾನ್ ಹಾಡಿದ್ದೇ ಸದ್ದು ಮಾಡಿದೆ.
ಯೂಟ್ಯೂಬ್ ನಲ್ಲಿ ಏ.9 ರಂದು ಅಪ್ಲೋಡ್ ಆಗಿರುವ ʼ ಬಡೋ ಬಡಿ ಹೋಯೆ ಹೋಯೆʼ ಹಾಡು ಇದುವರೆಗೆ 9.5 ಮಿಲಿಯನ್ ವೀಕ್ಷಣೆ ಕಂಡಿದೆ.
ಹಾಡಿನಲ್ಲಿರುವ ಯುವತಿ ಯಾರು?
ಈ ಹಾಡಿನಲ್ಲಿ ಯುವತಿಯೊಬ್ಬಳು ಕಾಣಿಸಿಕೊಂಡಿದ್ದು, ಆಕಯ ವಾಜ್ದನ್ ರಾವ್. ಪಾಕಿಸ್ತಾನದ ವಾಜ್ದನ್ ಯೂಟ್ಯೂಬರ್ ಹಾಗೂ ವ್ಲಾಗರ್ ಆಗಿದ್ದಾರೆ.
ವಾಜ್ದನ್ ರಾವ್ ಇನ್ಸ್ಟಾಗ್ರಾಮ್ ನಲ್ಲಿ 91K ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಯೂಟೂಬ್ 6.72K ಚಂದಾದಾರರನ್ನು ಹೊಂದಿದ್ದಾರೆ. ಸದ್ಯ ವಾಜ್ದನ್ ವೈರಲ್ ಆಗಿದ್ದಾಳೆ.
ಇತ್ತ ರಾಹತ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ 81 ಸಾವಿರ ಸಬ್ ಸ್ಕೈಬರ್ಸ್ ಇದ್ದಾರೆ. ಇವರ ಇತರೆ ಹಾಡುಗಳು ಸಾವಿರಾರು ವೀಕ್ಷಣೆಯನ್ನು ಕಂಡಿದೆ.
-ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ
Home made food ನಿಜವಾಗಿಯೂ ಪೋಷಕಾಂಶದಿಂದ ತುಂಬಿದೆಯೇ…?
Health benefits: ನಿಂಬೆಹಣ್ಣಿನಿಂದ ಹಲವು ಆರೋಗ್ಯ ಪ್ರಯೋಜನಗಳು…
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.