ಯುಎಫ್ಒ ಎಂಬ ಕೌತುಕ: ಇಂದು ವಿಶ್ವ UFO ದಿನಾಚರಣೆ
ವಿಶ್ವದಲ್ಲಿ ನಾವು ಏಕಾಂಗಿಯೇ ಅಥವಾ ಅನ್ಯಗ್ರಹ ಜೀವಿಗಳಿದ್ದಾರೆಯೇ?
Team Udayavani, Jul 2, 2022, 9:20 AM IST
UFO ಗಳ ಬಗೆಗೆ ಹೆಚ್ಚಿನ ಅರಿವು ಮೂಡಿಸಲು, ಅವುಗಳನ್ನು ನೋಡಿದ್ದೇವೆಂದು ಹೇಳಿದವರ ವರದಿಗಳನ್ನು ಚರ್ಚಿಸಲು, ವಿಶ್ವದಲ್ಲಿ ನಾವು ಏಕಾಂಗಿಯೇ ಅಥವಾ ಅನ್ಯಗ್ರಹ ಜೀವಿಗಳಿದ್ದಾರೆಯೇ? ನಮ್ಮನ್ನು ಭೇಟಿ ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆಯೇ ಮುಂತಾದ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುವವರನ್ನು ಒಟ್ಟುಗೂಡಿಸುವ ಸಂದರ್ಭವಿದು.
World UFO Day Organisation (WUFODO) ಪ್ರತೀ ವರ್ಷದ ಜುಲೈ 2ರಂದು ವಿಶ್ವ UFO ದಿನವನ್ನು ಆಚರಿಸಬೇಕೆಂದು ನಿರ್ಧರಿಸಿದೆ. UFOಗಳ ಬಗೆಗೆ ಹೆಚ್ಚಿನ ಅರಿವು ಮೂಡಿ ಸಲು, ಅವುಗಳನ್ನು ನೋಡಿದ್ದೇವೆಂದು ಹೇಳಿದವರ ವರದಿಗಳನ್ನು ಚರ್ಚಿಸಲು, ವಿಶ್ವದಲ್ಲಿ ನಾವು ಏಕಾಂಗಿಯೇ ಅಥವಾ ಅನ್ಯಗ್ರಹ ಜೀವಿಗಳಿದ್ದಾರೆಯೇ? ನಮ್ಮನ್ನು ಭೇಟಿ ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆಯೇ ಮುಂತಾದ ವಿಷಯ ಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುವವರನ್ನು ಒಟ್ಟು ಗೂಡಿಸುವ ಸಂದರ್ಭವಿದು. ಸರಕಾರಗಳಿಗೆ ಈ ಬಗ್ಗೆ ತಿಳಿದಿರುವ ವಿಷಯಗಳನ್ನು ಕ್ರೋಡೀಕರಿಸಿದ ಫೈಲ್‌ಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ಬಿಡು ಗಡೆಗೊಳಿಸಿ ಖೀಊOಗಳ ರಹಸ್ಯಗಳನ್ನು ಭೇದಿಸುವ ವೈಜ್ಞಾನಿಕ ಸತ್ಯಗಳನ್ನು ತಿಳಿಸುವ ಕ್ರಮ ತೆಗೆದುಕೊಳ್ಳಲು ಪರೋಕ್ಷವಾಗಿ ಒತ್ತಾಯಿಸುವ ಉದ್ದೇಶ.
UFO ಎಂದರೇನು?
1947ರಲ್ಲಿ ನ್ಯೂ ಮೆಕ್ಸಿಕೋದ ರೋಸ್ ವೆಲ್‌ನಲ್ಲಿ ತಟ್ಟೆಯಾಕಾರದ ಅಪರಿ ಚಿತ ವಸ್ತುವೊಂದು ಅಪಘಾತ ಕ್ಕೀಡಾಗಿ ಬಿದ್ದಿತು. ಏನಿದು ಎಂದು ತಿಳಿಯದ್ದರಿಂದ ಇದನ್ನು Unidentified Flying Object (UFO)ನ ಅಪಘಾತ ಎಂದು ಪ್ರಚಾರ ಮಾಡಲಾಯಿತು. ಅನಂತರ ಸರಕಾರವು, ಇವು ಹವಾಮಾನ ಪರೀಕ್ಷೆಗಾಗಿ ಹಾರಿಬಿಟ್ಟ ಬಲೂನು ಮತ್ತು ಅದರೊಂದಿಗಿದ್ದ ಉಪಕರಣ ಎಂದು ಹೇಳಿತು. ಆದರೂ ಬೇರೆ ಬೇರೆ ದೇಶಗಳಿಂದ ಇಂತಹ ಹಾರುವ ತಟ್ಟೆಗಳನ್ನು ನೋಡಿದ್ದೇವೆ. ಇವು ಹೊರ ಜಗತ್ತಿನಿಂದ ಬರುವ ಏಲಿಯನ್ಸ್ ಎಂದು ಪ್ರಚಾರ ಪಡೆದು, ಬಹುತೇಕ ಜನರು ಹೀಗೂ ಇರಬಹುದೇ ಎಂದು ಅನುಮಾನ ಪಡುವಂತಾಯಿತು. ವಿಜ್ಞಾನಿಗಳು ಇದರ ಸತ್ಯಾಸತ್ಯತೆಯನ್ನು ತಿಳಿಯಲು ಯೋಜನೆಗಳನ್ನು ಹಾಕಿಕೊಂಡು ನಮ್ಮನ್ನು ಸಂಪರ್ಕಿಸಬಯಸುವ ನಾಗರಿಕತೆಗಳಿವೆಯೇ? UFOಗಳು ಅವರ ವಾಹನಗಳೇ ಎಂದು ತಿಳಿಯಲು ಪ್ರಯತ್ನಿಸಿದರು. ಅನ್ಯಗ್ರಹ ಜೀವಿಗಳ ಬಗ್ಗೆ ಈ ಮಧ್ಯೆ ಚಲನಚಿತ್ರಗಳು, ಸೀರಿಯಲ್‌ಗಳು (X-files) ಸಾಕಷ್ಟು ಬಂದವು. ಖಗೋಳ ಶಾಸಜ್ಞ ಕಾರ್ಲ್ ಸಗನ್ Search for Extraterrestrial Intelligence (SET1) ಎಂಬ ಯೋಜನೆಯನ್ನೇ ಹಾಕಿಕೊಂಡು ಪ್ರಯತ್ನಗಳನ್ನು ಮುಂದುವರಿಸಿದ್ದರು. Nಅಖಅ ತನ್ನ ವಾಯೇಜರ್ ಐ ಮತ್ತು ಐಐರ ಉಪಗ್ರಹಗಳಲ್ಲಿ ಚಿತ್ರ ಮತ್ತು ಸಂದೇಶಗಳ ಮೂಲಕ ನಾವಿಲ್ಲಿದ್ದೇವೆ ಎನ್ನುವ ಸಂದೇಶ ಕಳುಹಿಸಿ ಸೌರಮಂಡಲದ ಹೊರಗಿನ ಅನ್ವೇಷಣೆಗೆ ಮುಂದಾಗಿದ್ದರು.
UFOಗಳ ಈ ಪ್ರಸಿದ್ಧಿ ಎಷ್ಟರ ಮಟ್ಟಿಗೆ ಬೆಳೆಯಿ ತೆಂದರೆ, ಎಲ್ಲ ಮಾಹಿತಿ ಹಾಗೂ ಆಕರಗಳ ಸಾಹಿತ್ಯವನ್ನು ufology ಎಂದೇ ಕರೆಯಲಾಯಿತು. ಈ ನಡುವೆ ಹೊರಜಗತ್ತಿನ ಏಲಿಯನ್ಸ್ ನಮ್ಮಲ್ಲಿಗೆ ಬರುತ್ತಾರೆ, ನಮ್ಮನ್ನು ಆಗಾಗ ಭೇಟಿ ಮಾಡುತ್ತಿರುತ್ತಾರೆ ಎನ್ನುವವರ ಸಂಖ್ಯೆ ಹೆಚ್ಚಿದಂತೆ ನಮ್ಮ ವಿಜ್ಞಾನದ ನಿಯಮಗಳಂತೆ ಈ ತಟ್ಟೆಗಳು ಒಮ್ಮೆಲೇ ಇಳಿಯು ವುದು, ಏರುವುದು, ತಿರುಗುವುದು, ಕಾಣುವುದು, ಅದೃಶ್ಯವಾಗಿ ಬಿಡುವುದು, ಬಣ್ಣ ಬಣ್ಣದ ಬೆಳಕನ್ನು ಬೀರುವುದು ಇತ್ಯಾದಿಗಳನ್ನು ವಿವರಿಸಲು ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟು, ಇವು ವಾತಾವರಣಕ್ಕೆ ಸಂಬಂಧ ಪಟ್ಟವುಗಳಾದ್ದರಿಂದ ಮತ್ತು ನಮಗೆ ತಿಳಿಯದ ವಿದ್ಯಮಾನಗಳಾದ್ದರಿಂದ ಇವುಗಳನ್ನು Unidentified Aerial Phenomena (UAP) ಎಂದು ಕರೆಯಬೇಕೆಂದು ಸಲಹೆ ನೀಡಿದ್ದಾರೆ. ಆದರೂ UFO ಎನ್ನುವ ಹೆಸರು ಉಳಿದುಕೊಂಡಿದೆ. UAPಗಳನ್ನು ಅಧ್ಯಯನ ಮಾಡಿ ನಿಜ ತಿಳಿಯುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು. ಏಲಿಯನ್ಸ್ ಪ್ರತ್ಯಕ್ಷದರ್ಶಿಗಳ, ಆಕಾಶದಲ್ಲಿ ನಡೆಯುತ್ತಿತ್ತೆನ್ನಲಾದ ಘಟನೆಗಳ ಸತ್ಯಾಸತ್ಯತೆಯನ್ನು ಅರಿಯಬೇಕೆನ್ನುವುದು ಇದರ ಉದ್ದೇಶ.
ಈ ಕ್ಷೇತ್ರದ ಬೆಳವಣಿಗೆಯಲ್ಲಿ ವಿವಿಧ ಆಯಾಮಗಳೂ ಹುಟ್ಟಿಕೊಂಡವು. ರೇಡಿಯೋ ತರಂಗಗಳ ಮೂಲಕ ನಮ್ಮನ್ನು ಯಾರಾದರೂ ಸಂಪರ್ಕಿಸುತ್ತಿದ್ದಾರೆಯೇ? ಜೀವಿಗಳ ಉಗಮ, ವಿಕಾಸ ಹೇಗೆ, ಎಲ್ಲಿ ನಡೆಯಲು ಸಾಧ್ಯ, ಭೂಮಿಯ ಹೊರಗಿರುವ ಇಂತಹ ಅವಕಾಶಗಳು ಎಲ್ಲೆಲ್ಲಿ ಲಭ್ಯ ಎಂಬುದರ ಬಗ್ಗೆ ಅಧ್ಯಯನಗಳು ಆರಂಭವಾದುವು. (ತೀರಾ ಇತ್ತೀಚೆಗೆ ಚೀನವಂತೂ ಬಾಹ್ಯ ಸಂದೇಶ ಸಿಕ್ಕಿದೆ ಎಂದು ಹೇಳಿ ಅನಂತರ ಇಲ್ಲ ಎಂದಿತು). ಖೀಅಕ ಬಗ್ಗೆ ದತ್ತಾಂಶ ಸಂಗ್ರಹಣೆ, ಪರೀಕ್ಷೆಗಳನ್ನು ಕೈಗೊಳ್ಳಲಾಯಿತು.
ಇಂತಹ ವಾತಾವರಣದಲ್ಲೇ ಸಾರ್ವಜನಿಕರು, ಸಂಘ ಸಂಸ್ಥೆಗಳು ವಿಶೇಷವಾಗಿ ಅಮೆರಿಕದಲ್ಲಿ ಈ ವರದಿಗಳ ಬಗ್ಗೆ ಸರಕಾರ ಹೊಂದಿರುವ ರಹಸ್ಯ ಮಾಹಿತಿಗಳನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸ ಲಾರಂಭಿಸಿದವು ಹಾಗೂ ಅಮೆರಿಕದ ಅಧ್ಯಕ್ಷರಿಗೆ ಪ್ರಶ್ನೆಗಳನ್ನೂ ಕೇಳಲಾರಂಭಿಸಿದವು. ದೇಶದ ಭದ್ರತೆ ದೃಷ್ಟಿಯಿಂದ ಸಂಭಾವ್ಯ ವೈರಿಗಳು ಬೇಕಾದ ಮಾಹಿತಿ ಪಡೆದುಕೊಳ್ಳುವ ಮಾರ್ಗೋಪಾಯಗಳನ್ನು ಅರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾದ್ದರಿಂದ UFOಗಳ ಚಿತ್ರಗಳು, ವೀಡಿಯೋಗಳ ಪರೀಕ್ಷೆ ಅಗತ್ಯ ಎನ್ನುವ ಅಭಿಪ್ರಾಯ ನೀಡಿದರು. ಅಮೆರಿಕದ ಕಾಂಗ್ರೆಸ್‌ನ ಸದಸ್ಯರೂ ವಿಶೇಷ ಗಮನ ಹರಿಸುವ ಅಗತ್ಯ ಇದೆ ಎಂದರು. ವಿಶೇಷವಾಗಿ ಅಮೆರಿಕದ ಸೇನಾ ಪಡೆಯ ಪೈಲಟ್‌ಗಳು ತೆಗೆದ ವೀಡಿಯೋಗಳ ಬಗ್ಗೆ ಗಮನಹರಿಸಿ ಪೆಂಟಗನ್ ಫೈಲ್ಸ್ ಏನು ಹೇಳುತ್ತದೆ ಎಂದು ತಿಳಿಯ ಬೇಕೆಂದರು. ನಾಸಾ ಕೂಡ ತನ್ನ ವ್ಯಾಪ್ತಿಯಲ್ಲಿ ಕೈಗೊಳ್ಳುತ್ತಿರುವ ಯೋಜನೆಗಳಲ್ಲಿ ಇದಕ್ಕಾಗಿ ವಿಶೇಷ ತಂಡವೊಂದನ್ನು ರಚಿಸಿ ವರದಿ ನೀಡಬೇಕೆಂದು ಸೂಚಿಸಲಾಯಿತು.
ಖಭೌತಶಾಸ್ತ್ರಜ್ಞ ಡೇವಿಡ್ ಸ್ಪರ್ಜೆಲ್ ಇದರ ಮುಖ್ಯಸ್ಥರಾಗಿದ್ದಾರೆ. ಸೈಮನ್ ಫೌಂಡೇಶನ್, ನ್ಯೂಯಾರ್ಕ್‌ನ ಮುಖ್ಯಸ್ಥರು ಮತ್ತು ಹಿಂದೆ ಪ್ರಿನ್ಸ್ ಟನ್ ವಿಶ್ವವಿದ್ಯಾನಿಲಯದಲ್ಲಿ ಆಸ್ಟೋಫಿಸಿಕ್ಸ್ ವಿಭಾಗದ ಮುಖ್ಯಸ್ಥರಾಗಿದ್ದ ಇವರ ತಂಡ ಇವುಗಳ ಬಗ್ಗೆ ತನ್ನ ವರದಿಯನ್ನು ನೀಡಬೇಕಾಗಿದೆ. ದೇಶದ ಭದ್ರತೆಗೆ ಮತ್ತು ಬಾಹ್ಯಾಕಾಶ ಯಾನಗಳಿಗೆ ಈ ಖೀಅಕಗಳ ಅಧ್ಯಯನ ಅಗತ್ಯ ಎಂದು ಅಭಿಪ್ರಾಯಪಡಲಾಗಿದೆ.
ಮೊದಲು ಹೇಳಿದ ಪೆಂಟಗನ್ ಫೈಲ್ಸ್‌ಗಳಲ್ಲಿ ಪೈಲಟ್‌ಗಳು ತೆಗೆದ ವೀಡಿಯೋಗಳ ಬಗ್ಗೆಯೂ ತಜ್ಞರು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ದತ್ತಾಂಶಗಳ ಸಂಗ್ರಹ, ಉಪಕರಣಗಳು ಯಾವ ರೀತಿ ಕಂಪ್ಯೂಟರ್ ಚಾಲಿತ ಸ್ಥಿತಿಯಲ್ಲಿದ್ದುವು, ಹೇಗೆ ವೀಡಿಯೋ ತೆಗೆಯಲಾಗಿದೆ ಎನ್ನುವುದನ್ನು ಗಮನಿಸ ಬೇಕಾಗಿದೆ ಎಂದು ತಿಳಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ವಿಜ್ಞಾನದ ದೃಷ್ಟಿಯಿಂದ ಸ್ವಾಗತಾರ್ಹ. ಹಬಲ್ ದೂರದರ್ಶಕವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದಾಗ ನಾವು ವಿಸ್ಮಯಕಾರಿ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಈಗ ಜೇಮ್ಸ್ ವೆಬ್ ದೂರದರ್ಶಕ ಇನ್ನೂ ಹೆಚ್ಚಿನ ಊಹನಾತೀತ ವಿಷಯಗಳನ್ನು ತಿಳಿಯಲು ಸಹಾಯ ಮಾಡುವುದೆಂಬ ವಿಶ್ವಾಸ ವಿಜ್ಞಾನಿಗಳಿಗಿದೆ. ಎಲ್ಲ ಪ್ರಯತ್ನಗಳ ಫಲಿತಾಂಶವನ್ನು ಕಾದುನೋಡಬೇಕು. ಕಾಯೋಣ.
ತನ್ಮಧ್ಯೆ, UFO ದಿನಾಚರಣೆಗೆ ಸಿದ್ಧರಾಗಿ, ಚರ್ಚಿಸಿ, ಆಕಾಶದತ್ತ ಮುಖಮಾಡಿ ವಿಶೇಷ ವಿದ್ಯಮಾನ ಗಳೇನಾದರೂ ಸಂಭವಿಸುತ್ತಿವೆಯೇ ಎಂಬುದನ್ನು ಗುಂಪಲ್ಲಿ ಅಥವಾ ಆಸಕ್ತರೊಂದಿಗೆ ವೀಕ್ಷಿಸಿ.
-ಡಾ| ಕೆ.ವಿ. ರಾವ್
ನಿರ್ದೇಶಕರು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.